ರುಪಾಯಿ ಕೊಂಚ ಚೇತರಿಕೆ; ಷೇರುಪೇಟೆಯಲ್ಲಿ ಮುಂದುವರೆದ ಅಸ್ಥಿರತೆ, ಚಿನ್ನಏರಿಕೆ
ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ
ನಿಷ್ಕ್ರಿಯ ಸಾಲ ಸಮಸ್ಯೆ; ದೇನಾ, ವಿಜಯ, ಬರೋಡ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ

ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟ 69.93ಕ್ಕೆ ಕುಸಿದ ರುಪಾಯಿ

ಅಮೆರಿಕ ಡಾಲರ್ ವಿರುದ್ಧ ಸತತ ಕುಸಿತದ ಹಾದಿಯಲ್ಲಿರುವ ರುಪಾಯಿ, ಸೋಮವಾರದ ವಹಿವಾಟು ಆರಂಭವಾಗುತ್ತಲೇ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಿತು. 69.93ಕ್ಕೆ ಕುಸಿದಿರುವ ರುಪಾಯಿ, 70ರ ಗಡಿ ದಾಟುವ ಸಾಧ್ಯತೆ ಇದೆ. ಟರ್ಕಿ ದೇಶದ ಕರೆನ್ಸಿ ಲಿರಾ ಕುಸಿತದ ಪರಿಣಾಮ ರುಪಾಯಿ ಮೇಲಾಗಿದೆ

ರೇಣುಕಾಪ್ರಸಾದ್ ಹಾಡ್ಯ

ಟರ್ಕಿ ದೇಶದ ಕರೆನ್ಸಿ ಲಿರಾ ಕುಸಿತದ ಪರಿಣಾಮ ಉದಯಿಸುತ್ತಿರುವ ಮಾರುಕಟ್ಟೆ ದೇಶಗಳ ಕರೆನ್ಸಿ ಮೇಲೂ ಪರಿಣಾಮ ಬೀರಿದ್ದು, ಸೋಮವಾರದ ವಹಿವಾಟಿನ ಆರಂಭದಲ್ಲೇ ಅಮೆರಿಕ ಡಾಲರ್ ವಿರುದ್ಧ ಭಾರತದ ಕರೆನ್ಸಿ ರುಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಒಂದೇ ದಿನದಲ್ಲಿ 109 ಪೈಸೆ ಕುಸಿದು ದಾಖಲೆ ಮಾಡಿದೆ. ಈ ಹಿಂದೆ 69.20 ಇದ್ದ ಸರ್ವಕಾಲಿಕ ಕನಿಷ್ಠ ಮಟ್ಟವು ಸೋಮವಾರ 69.62ಕ್ಕೆ ಕುಸಿಯಿತು.

ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಪ್ರಮಾಣದಲ್ಲಿ ಡಾಲರ್ ಪೂರೈಸಿದ ಹಿನ್ನೆಲೆಯಲ್ಲಿ ರುಪಾಯಿ 69.62ರಿಂದ 69.52ಕ್ಕೆ ಏರಿತು. ಆದರೆ, ಆರ್ಬಿಐ ನೀಡಿತ ಚೇತರಿಕೆಯು ಬಹಳ ಹೊತ್ತು ಉಳಿಯಲಿಲ್ಲ. ದಿನದ ಆರಂಭದ ವಹಿವಾಟಿನಲ್ಲಿ 69.60-69.50ರ ನಡುವೆ ಜೀಡಿದ ರುಪಾಯಿ ಮತ್ತೆ ಕುಸಿತದ ಹಾದಿಗೆ ಸರಿಯಿತು. ದಿನದ ವಹಿವಾಟು ಅಂತ್ಯಕೊಂಡಾಗ 69.93ಕ್ಕೆ ಕುಸಿದು ಮತ್ತೊಂದು ಸರ್ವಕಾಲಿಕ ಕನಿಷ್ಠ ಮಟ್ಟದ ದಾಖಲೆ ಮಾಡಿತು. ಡಾಲರ್ ವಿರುದ್ಧ ರುಪಾಯಿ ಕುಸಿತವು ಮತ್ತಷ್ಟು ಮುಂದುವರಿಯಲಿದೆ. ಮಂಗಳವಾರದ ವಹಿವಾಟಿನಲ್ಲಿ 70ರ ಗಡಿ ದಾಟಲಿದೆ.

ಚೀನಾ-ಅಮೆರಿಕ ವ್ಯಾಪಾರ ಸಮರವು ಈಗ ಕರೆನ್ಸಿ ಸಮರವಾಗಿ ಪರಿವರ್ತನೆಗೊಂಡಿದೆ. ಅಮೆರಿಕ ತನ್ನ ಡಾಲರ್ ಗೆ ಕೃತಕ ಬೇಡಿಕೆ ಸೃಷ್ಟಿಮಾಡುತ್ತಿದೆ. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಡಾಲರ್ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬಹುತೇಕ ದೇಶದಲ್ಲಿ ತಮ್ಮ ದೇಶದ ಕರೆನ್ಸಿಯ ಅಪಮೌಲ್ಯಗೊಳಿಸುತ್ತಿವೆ.

ಅಮೆರಿಕ ಡಾಲರ್ ವಿರುದ್ಧ ಟರ್ಕಿ ಕರೆನ್ಸಿ ಲಿರಾ ಎರಡು ವಹಿವಾಟು ದಿನಗಳಲ್ಲೇ ಶೇ.20ರಷ್ಟು ಕುಸಿದು ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ 7.21ಕ್ಕೆ ಇಳಿದಿದೆ. ಶುಕ್ರವಾರದ ಒಂದೇ ದಿನದ ವಹಿವಾಟಿನಲ್ಲಿ ಶೇ.14ರಷ್ಟು ಕುಸಿದಿತ್ತು. 2018 ಜನವರಿಯಿಂದೀಚೆಗೆ ಲಿರಾ ಶೇ.48ರಷ್ಟು ಕುಸಿದಿದ್ದು ಟರ್ಕಿಯಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.

ಲಿರಾ ತೀವ್ರ ಕುಸಿತವು ಅಮೆರಿಕವು ನಡೆಸುತ್ತಿರುವ ಆರ್ಥಿಕ ದಾಳಿಯಾಗಿದೆ ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡಗಾನ್ ದೂರಿದ್ದಾರೆ. ಲಿರಾ ಕುಸಿತದ ತಡೆಗೆ ಎಲ್ಲಾ ಕ್ರಮ ಕೈಗೊಳ್ಳುವುದಾಗಿ, ದೇಶದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಹೇಳಿದ್ದಾರೆಂದು ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿದೆ.

ಸೋಮವಾರ ಏಷ್ಯಾ ಬಹುತೇಕ ಷೇರುಪೇಟೆಗಳು ಇಳಿಜಾರಿನಲ್ಲಿ ವಹಿವಾಟು ಆರಂಭಿಸಿವೆ. ಕಳೆದ ವಾರ ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದ ಸೆನ್ಸೆಕ್ಸ್ ದಿನದ ಆರಂಭದಲ್ಲೇ 250 ಅಂಶ ಕುಸಿದು 37625 ರ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ನಿಫ್ಟಿ 75 ಅಂಶ ಕುಸಿದಿದ್ದು11350ರ ಆಜುಬಾಜಿನಲ್ಲಿದೆ.

ಡಾಲರ್ ವಿರುದ್ಧ ರುಪಾಯಿ ಕುಸಿತದ ಪರಿಣಾಮ ಸಾರ್ವಜನಿಕ ವಲಯದ ಬ್ಯಾಂಕಗಳು, ಖಾಸಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲಾಗಿದೆ. ನಿಫ್ಟಿ ಪಿಎಸ್ಯು ಸೂಚ್ಯಂಕ ಶೇ.2.50, ನಿಫ್ಟಿ ಫಿನ್ ಸರ್ವೀಸ್, ನಿಫ್ಟಿ ಪ್ರೈವೆಟ್ ಬ್ಯಾಂಕ್ ಸೂಚ್ಯಂಕ ಶೇ.1.50-2ರಷ್ಟು ಕುಸಿದಿವೆ. ಐಟಿ ಸೂಚ್ಯಂಕ ಶೇ.1ರಷ್ಟು ಏರಿದೆ.

ಇದನ್ನೂ ಓದಿ : ಡಾಲರ್ ವಿರುದ್ಧ ರುಪಾಯಿ ಕುಸಿತ ಪರಿಣಾಮ; ವಿದೇಶಿ ಕಾರು, ಮೊಬೈಲ್ ದುಬಾರಿ

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಿರುವುದು ದೀರ್ಘ ಕಾಲದಲ್ಲಿ ಭಾರತದ ಬೃಹದಾರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶೇ.85 ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಭಾರತಕ್ಕೆ ಈಗಾಗಲೇ ಕಚ್ಚಾ ತೈಲ ಬೆಲೆ ಏರಿರುವುದು ದೊಡ್ಡ ಹೊರೆಯಾದರೆ, ರುಪಾಯಿ ಮೌಲ್ಯ ಕುಸಿತವು ಮತ್ತೊಂದು ಹೊರೆಯಾಗಲಿದೆ. ಅಂದರೆ ಕಚ್ಚಾ ತೈಲಕ್ಕೆ ಪಾವತಿಸುವ ಮೊತ್ತ ಹೆಚ್ಚಾಗಲಿದೆ. ಇದು ದೇಶದ ಚಾಲ್ತಿ ಖಾತೆ ಕೊರೆತೆಗೆ ಕಾರಣವಾಗಲಿದೆ. ದೇಶದ ಒಟ್ಟಾರೆ ರಫ್ತು ಪ್ರಮಾಣವು ಒಟ್ಟಾರೆ ಆಮದು ಪ್ರಮಾಣಕ್ಕಿಂತ ಕಡಮೆ ಇರುವುದರಿಂದ ರುಪಾಯಿ ಮೌಲ್ಯ ಕುಸಿತವು ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಅಮೆರಿಕದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ ಭಾರತವೇ ಹೆಚ್ಚು ರಫ್ತು ಮಾಡಿ, ಆ ದೇಶದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕಡಮೆ ಇದೆ. ಆದರೆ, ಬಹುತೇಕ ಆಮದು ಮಾಡಿಕೊಂಡ ಸರಕು ಸೇವೆಗಳಿಗೆಲ್ಲ ಅಮೆರಿದ ಡಾಲರ್ ರೂಪದಲ್ಲೇ ಪಾವತಿ ಮಾಡಬೇಕಾಗಿರುವುದು ಪ್ರಮುಖ ಸಮಸ್ಯೆ.

ಅಮೆರಿಕ Turkey ಟರ್ಕಿ US Dollar ಡಾಲರ್ Rupee ರುಪಾಯಿ Lira ಲಿರಾ
ರುಪಾಯಿ ಕೊಂಚ ಚೇತರಿಕೆ; ಷೇರುಪೇಟೆಯಲ್ಲಿ ಮುಂದುವರೆದ ಅಸ್ಥಿರತೆ, ಚಿನ್ನಏರಿಕೆ
ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ
ನಿಷ್ಕ್ರಿಯ ಸಾಲ ಸಮಸ್ಯೆ; ದೇನಾ, ವಿಜಯ, ಬರೋಡ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?