ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ
ನಿಷ್ಕ್ರಿಯ ಸಾಲ ಸಮಸ್ಯೆ; ದೇನಾ, ವಿಜಯ, ಬರೋಡ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ
ಕೇಂದ್ರದ ಮಧ್ಯಪ್ರವೇಶದಿಂದಲೂ ಸ್ಥಿರಗೊಳ್ಳದ ರುಪಾಯಿ; ಪೇಟೆಯಲ್ಲಿ ರಕ್ತದೋಕುಳಿ

ರುಪಾಯಿ ಕೊಂಚ ಚೇತರಿಕೆ; ಷೇರುಪೇಟೆಯಲ್ಲಿ ಮುಂದುವರೆದ ಅಸ್ಥಿರತೆ, ಚಿನ್ನಏರಿಕೆ

ಜಾಗತಿಕ ವ್ಯಾಪಾರ ಸಮರ ಭುಗಿಲೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶೀಯ ಷೇರುಪೇಟೆಯಲ್ಲಿ ಅಸ್ಥಿರತೆ ಮುಂದುವರೆದಿದೆ. ಬುಧವಾರ ಇಡೀ ದಿನ ಏರಿಳಿತದ ವಹಿವಾಟು ನಡೆಸಿದ ಷೇರುಪೇಟೆ ಅಂತ್ಯದಲ್ಲಿ ಕುಸಿಯಿತು. ರುಪಾಯಿ ಕೊಂಚ ಚೇತರಿಸಿಕೊಂಡಿದೆ. ಆದರೆ 72-73ರ ಆಜುಬಾಜಿನಲ್ಲೇ ವಹಿವಾಟು ನಡೆಸಿದೆ

ರೇಣುಕಾಪ್ರಸಾದ್ ಹಾಡ್ಯ

ಅಮೆರಿಕ ಚೀನಾದ ಸರಕುಗಳ ಮೇಲೆ 200 ಬಿಲಿಯನ್ ಡಾಲರ್ ಸುಂಕ ಹೇರಿದ್ದಕ್ಕೆ ಪ್ರತಿಕಾರವಾಗಿ ಚೀನಾವು ಅಮೆರಿಕದ ಸರಕುಗಳ ಮೇಲೆ 60 ಬಿಲಿಯನ್ ಡಾಲರ್ ಸುಂಕ ಹೇರಿದೆ. ಇದರ ಬೆನ್ನಲ್ಲೇ ಜಾಗತಿಕ ವ್ಯಾಪಾರ ಸಮರ ಭುಗಿಲೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಬಹುತೇಕ ಬಂಡವಾಳ ಪೇಟೆ ಮತ್ತು ಷೇರುಪೇಟೆಯಲ್ಲಿ ಅಸ್ಥಿರತೆ ತಲೆದೋರಿತ್ತು. ದೇಶೀಯ ಷೇರುಪೇಟೆಯೂ ಇದಕ್ಕೆ ಹೊರತಾಗಿರಲಿಲ್ಲ.

ದಿನವಿಡೀ ಏರಿಳಿತದ ವಹಿವಾಟು ನಡೆಸಿದ ಷೇರುಪೇಟೆ ಕುಸಿತದೊಂದಿಗೆ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್ 170 ಅಂಶ ಕುಸಿದರೆ, ನಿಫ್ಟಿ 44 ಅಂಶ ಕುಸಿದಿದೆ. ಇದರೊಂದಿಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಮತ್ತೊಂದು ನಿರ್ಣಾಯಕವಾಗಿದ್ದ 37250 ಮತ್ತು 11250ರ ಮಟ್ಟದಿಂದ ಕುಸಿದಿವೆ. ಇದು ಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಮುನ್ಸೂಚನೆಯಾಗಿದೆ. ಮಾಸಾಂತ್ಯಕ್ಕೆ ಸೆನ್ಸೆಕ್ಸ್ 36500 ಮತ್ತು ನಿಫ್ಟಿ 11000 ಮಟ್ಟಕ್ಕೆ ಇಳಿಯಬಹುದು ಎಂದು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ.

ಮಂಗಳವಾರದ ವಹಿವಾಟಿನಲ್ಲಿ ಡಾಲರ್ ವಿರುದ್ಧ ದಾಖಲೆ ಮಟ್ಟದಲ್ಲಿ ಕುಸಿದು 72.97ರಲ್ಲಿ ವಹಿವಾಟು ಮುಗಿಸಿದ್ದ ರುಪಾಯಿ ಬುಧವಾರದ ವಹಿವಾಟನ್ನು 72.71ರೊಂದಿಗೆ ಆರಂಭಿಸಿತು. ದಿನದ ವಹಿವಾಟಿನಲ್ಲಿ ಗರಿಷ್ಠ ಮಟ್ಟ 72.87ಮುಟ್ಟಿತು. ಆದರೆ, 73ರ ನಿರ್ಣಾಯಕ ಮಟ್ಟಕ್ಕೆ ಇಳಿಯುವುದು ಆರ್‌ಬಿಐ ಮಧ್ಯಪ್ರವೇಶದಿಂದಾಗಿ ತಪ್ಪಿತು. ಆರ್‌ಬಿಐ ಹೆಚ್ಚಿನ ಪ್ರಮಾಣದಲ್ಲಿ ಡಾಲರ್ ಪೂರೈಕೆ ಮಾಡಿದ ಪರಿಣಾಮ ರುಪಾಯಿ ದಿನದ ಅಂತ್ಯಕ್ಕೆ 60 ಪೈಸೆಗಳಷ್ಟು ಚೇತರಿಸಿಕೊಂಡಿತು. 72.37ಕ್ಕೇರಿ ವಹಿವಾಟು ಅಂತ್ಯಗೊಳಿಸಿದೆ. ಆದರೆ, ಬುಧವಾರದ ಚೇತರಿಕೆಯು ತಾತ್ಕಾಲಿಕವಾಗಿದ್ದು, ಈ ವಾರಾಂತ್ಯದಲ್ಲಿ ರುಪಾಯಿ 73ರ ಗಡಿದಾಟಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.

73ರ ಗಡಿದಾಟುವ ಹಂತದಲ್ಲಿ ಆರ್‌ಬಿಐ ಮಧ್ಯಪ್ರವೇಶದಿಂದಾಗಿ ರುಪಾಯಿ ಚೇತರಿಸಿಕೊಂಡಿದೆ. ಆದರೆ ಆರ್‌ಬಿಐ ನಿತ್ಯವೂ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯಿಂದ ಡಾಲರ್ ಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಅದು ನಿರ್ಣಾಯಕ ಹಂತದಲ್ಲಿ ಮಾತ್ರ ಪ್ರವೇಶಿಸಿ ಗರಿಷ್ಠ ಕುಸಿತ ತಡೆಯಬಹುದಷ್ಟೇ. ಹೀಗಾಗಿ ವಾರಾಂತ್ಯದಲ್ಲಿ 73ರ ಗಡಿದಾಟುವ ಸಾಧ್ಯತೆ ನಿಚ್ಛಳವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಏರುಹಾದಿಯಲ್ಲೇ ಸಾಗಿದೆ. ಕಚ್ಚಾ ತೈಲ ಏರಿಕೆಯಿಂದ ಡಾಲರ್ ಗೆ ಹೆಚ್ಚಿನ ಬೇಡಿಕೆ ಬರುವುದರಿಂದ ರುಪಾಯಿ ಕುಸಿತ ಮುಂದುವರೆಯಲಿದೆ. ಈಗಾಗಲೇ ಆರ್ಬಿಐ ರುಪಾಯಿ ಕುಸಿತ ತಡೆಯಲು ತನ್ನ ವಿದೇಶಿ ಮೀಸಲು ನಿಧಿಯಿಂದ ಸುಮಾರು 26 ಬಿಲಿಯನ್ ಡಾಲರ್ ಗಳನ್ನು ಮಾರಾಟ ಮಾಡಿದೆ.

ಇದನ್ನೂ ಓದಿ : ರುಪಾಯಿ ಕುಸಿತ ಪರಿಣಾಮ; ಬೊಕ್ಕಸಕ್ಕಾಗುವ ಹೆಚ್ಚುವರಿ ಹೊರೆ ₹1 ಲಕ್ಷ ಕೋಟಿ

ದಿನದ ಅಂತ್ಯಕ್ಕೆ ಬ್ಯಾಂಕ್, ಆಟೋಮೊಬೈಲ್, ಎಫ್ಎಂಸಿಜಿ ವಲಯದ ಷೇರುಗಳ ಮಾರಾಟ ಒತ್ತಡ ತೀವ್ರವಾಗಿತ್ತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳ ಷೇರುಗಳ ಮಾರಾಟ ಒತ್ತಡವೂ ಹೆಚ್ಚಿತ್ತು. ಉಭಯ ಸೂಚ್ಯಂಕಗಳು ಶೇ.1ರಷ್ಟು ಕುಸಿತ ದಾಖಲಿಸಿವೆ. ಸೂಚ್ಯಂಕ ದೈತ್ಯ ಕಂಪನಿಗಳಾದ ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಮತ್ತು ಬಜಾಜ್ ಫಿನ್ ಸರ್ವೀಸ್ ಕುಸಿತದಿಂದ ಸೂಚ್ಯಂಕ ಮತ್ತಷ್ಟು ಕುಸಿಯಲು ಕಾರಣವಾಯಿತು. ಏರಿಳಿತ ವಹಿವಾಟಿನ ನಡುವೆ ಕೋಲ್ ಇಂಡಿಯಾ, ಒಎನ್ಜಿಸಿ, ಬಿಪಿಸಿಎಲ್ ಏರಿಕೆ ಕಂಡವು.

ರುಪಾಯಿ ಕುಸಿತದಿಂದಾಗಿ ಷೇರುಪೇಟೆಯಲ್ಲಿನ ಅಸ್ಥಿರತೆಯು ಹೂಡಿಕೆದಾರರು ಪರ್ಯಾಯ ಮಾರ್ಗಗಳತ್ತ ಗಮನ ಹರಿಸುವಂತೆಮಾಡಿದೆ. ಸದ್ಯಕ್ಕೆ ಹೂಡಿಕೆದಾರರು ಚಿನ್ನದತ್ತ ವಾಲುತ್ತಿದ್ದಾರೆ. ಆಗಸ್ಟ್ 15ರಿಂದೀಚೆಗೆ ಚಿನ್ನದ ದರ ಶೇ.6ರಷ್ಟು ಏರಿದೆ. ಆಗಸ್ಟ್ 14ರಲ್ಲಿ 29500 ರುಪಾಯಿ ಇದ್ದ ಚಿನ್ನದ ದರ ನಿತ್ಯವು ಏರುಹಾದಿಯಲ್ಲಿ ಸಾಗಿ ಈಗ 31000 ಮಟ್ಟ ಮುಟ್ಟಿದೆ.. ದಿನದ ವಹಿವಾಟಿನಲ್ಲಿ 120 ರುಪಾಯಿ ಏರಿಕೆ ದಾಖಲಿಸಿದೆ. ರುಪಾಯಿ ಕುಸಿತ ಮುಂದುವರೆದಂತೆ ಚಿನ್ನದ ದರವೂ ಸತತ ಏರುಹಾದಿಯಲ್ಲಿ ಸಾಗಲಿದೆ. ದೀಪಾವಳಿ ಹಬ್ಬದ ಹೊತ್ತಿಗೆ 32000ದ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.

Sensex Nifty ಸೆನ್ಸೆಕ್ಸ್ ನಿಫ್ಟಿ Dollar ಡಾಲರ್ Rupee ರುಪಾಯಿ Trade War ವ್ಯಾಪಾರ ಸಮರ
ಏರಿದ ಕಚ್ಚಾ ತೈಲ ದರ, ಮತ್ತಷ್ಟು ಕುಸಿದ ರುಪಾಯಿ; ಷೇರುಪೇಟೆಯಲ್ಲಿ ಅಸ್ಥಿರತೆ
ನಿಷ್ಕ್ರಿಯ ಸಾಲ ಸಮಸ್ಯೆ; ದೇನಾ, ವಿಜಯ, ಬರೋಡ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ
ಕೇಂದ್ರದ ಮಧ್ಯಪ್ರವೇಶದಿಂದಲೂ ಸ್ಥಿರಗೊಳ್ಳದ ರುಪಾಯಿ; ಪೇಟೆಯಲ್ಲಿ ರಕ್ತದೋಕುಳಿ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?