ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ವಿಧಾನಸೌಧದಲ್ಲೇ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ

ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳು ಈಗ ಭಯದ ವಾತಾವರಣದಲ್ಲಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳಾ ಅಧಿಕಾರಿಯೊಬ್ಬರು ದೂರು ಸಲ್ಲಿಸಿದ್ದು, ಕಚೇರಿಯಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸಲು ಕೇಳಿಕೊಂಡಿದ್ದಾರೆ

ಮಹಾಂತೇಶ್ ಜಿ

ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಮಹಿಳಾ ಹಿರಿಯ ಅಧಿಕಾರಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಹಿರಿಯ ಅಧಿಕಾರಿ ತಮ್ಮನ್ನು ಅವರ ಕಚೇರಿಗೆ ಕರೆಸಿಕೊಂಡು, ಲೈಂಗಿಕ ಕಿರುಕುಳ ನೀಡಿ ಮಾನಸಿಕವಾಗಿ ಜರ್ಜರಿತಗೊಳ್ಳುವಂತೆ ಮಾಡಿದ್ದಾರೆಂದು ಆ ಅಧಿಕಾರಿ ಸಕ್ಷಮ ಪ್ರಾಧಿಕಾರವೊಂದಕ್ಕೆ ದೂರು ಸಲ್ಲಿಸಿದ್ದಾರೆ.

ದೂರು ಸಲ್ಲಿಸಿರುವ ಮಹಿಳಾ ಅಧಿಕಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ತಿಳಿದುಬಂದಿದೆ. 1999ರಿಂದ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು 2001ರಲ್ಲಿ ಮುಂಬಡ್ತಿ ಪಡೆದಿದ್ದಾರೆ.

ಬೆಳಗಾವಿ ಅಧಿವೇಶನ ಆರಂಭವಾದ ದಿನದಂದೇ ಸಕ್ಷಮ ಪ್ರಾಧಿಕಾರವೊಂದಕ್ಕೆ ಆ ಮಹಿಳಾ ಅಧಿಕಾರಿ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಪ್ರಾಧಿಕಾರ, ದೂರಿನಲ್ಲಿ ವಿವರಿಸಿರುವ ಅಂಶಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಾಧಾರ ಕಲೆಹಾಕಲು ದೂರು ನೀಡಿರುವ ಮಹಿಳಾ ಹಿರಿಯ ಅಧಿಕಾರಿಗೆ ಸೂಚಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ದೂರು ಸಲ್ಲಿಸಿರುವ ಬಗ್ಗೆ ‘ದಿ ಸ್ಟೇಟ್’ ಖಚಿತಪಡಿಸಿಕೊಂಡಿದ್ದು, ದೂರಿನಲ್ಲಿ ವಿವರಿಸಿರುವ ಅಂಶಗಳ ನೈಜತೆ ಕುರಿತು ಖಾತ್ರಿಪಡಿಸಿಕೊಂಡಿಲ್ಲ. ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ, ದೂರು ಸಲ್ಲಿಸಿರುವ ಮಹಿಳಾ ಅಧಿಕಾರಿಯ ಹೆಸರು ಮತ್ತು ಆರೋಪಕ್ಕೆ ಗುರಿಯಾಗಿರುವ ಹಿರಿಯ ಅಧಿಕಾರಿಯ ಹೆಸರನ್ನು ಬಹಿರಂಗಪಡಿಸುತ್ತಿಲ್ಲ.

"ವಾರ್ಷಿಕ ಕಾರ್ಯನಿರ್ವಹಣೆಯ ಕುರಿತು ತೆರೆಯಲಾಗಿರುವ ಕಡತ ಕುರಿತು ಚರ್ಚಿಸಲು ಅಕ್ಟೋಬರ್‌ನಲ್ಲಿ ಹಿರಿಯ ಅಧಿಕಾರಿ ಕೊಠಡಿಗೆ ತೆರಳಿದ್ದೆ. ಆ ವೇಳೆ ಅನುಚಿತ ಮಾತುಗಳನ್ನಾಡಿದ ಹಿರಿಯ ಅಧಿಕಾರಿಯಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ," ಎಂದು ಮಹಿಳಾ ಅಧಿಕಾರಿ ನವೆಂಬರ್ 13ರಂದು ದೂರಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ತಮ್ಮ ಖುದ್ದು ಹಾಜರಿ ಅಗತ್ಯವಿಲ್ಲ ಎಂದು ಹಿರಿಯ ಅಧಿಕಾರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿ ಬೇಡಿಕೊಂಡ ನಂತರ ಮಹಿಳಾ ಅಧಿಕಾರಿ ಬೆಂಗಳೂರಿಗೆ ಮರಳಿರುವ ವಿಚಾರ ದೂರಿನಿಂದ ಗೊತ್ತಾಗಿದೆ. “ನಾನು ಬೆಳಗಾಂಗೆ ಹಾಕ್ತೀನಿ, ನೀನು ಬರಲೇಬೇಕು ಎಂದರು. ನಾನು ಬರುವುದಿಲ್ಲ ಎಂದರೂ ನಿನ್ನ ಖಂಡಿತ ಹಾಕ್ತೀನಿ ಬರಲೇಬೇಕು,” ಎಂದು ಹಿರಿಯ ಅಧಿಕಾರಿ ಮೌಖಿಕವಾಗಿ ಆದೇಶಿಸಿದ್ದಾರೆ. ಇದರಿಂದ ಮಾನಸಿಕ ಹಿಂಸೆಗೆ ಒಳಗಾಗಿದ್ದು, ಭಯದಿಂದಲೇ ಕಚೇರಿಗೆ ಬರುತ್ತಿದ್ದೇನೆ,” ಎಂದು ಮಹಿಳಾ ಹಿರಿಯ ಅಧಿಕಾರಿ ದೂರಿನಲ್ಲಿ ವಿವರಿಸಿದ್ದಾರೆ.

ಮಹಿಳಾ ಅಧಿಕಾರಿ ಸಲ್ಲಿಸಿದ ದೂರಿನ ಪ್ರತಿ

"ವಿಧಾನಸೌಧದಲ್ಲಿ ಮಹಿಳಾ ದೌರ್ಜನ್ಯ ತಡೆಯುವ ಸಂಬಂಧ ರಚಿಸಿರುವ ಸಮಿತಿಯಲ್ಲಿಯೂ ಅದೇ ಹಿರಿಯ ಅಧಿಕಾರಿ ನೇಮಿಸಿರುವ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ಅಧಿಕಾರಿಯಿಂದಲೇ ದೌರ್ಜನ್ಯಕ್ಕೆ ಒಳಗಾಗಿರುವುದರಿಂದ ದೌರ್ಜನ್ಯ ತಡೆ ಸಮಿತಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಅನುಮಾನವಿದೆ. ಆ ಸಮಿತಿಯಿಂದ ನ್ಯಾಯ ದೊರೆಯುವ ವಿಶ್ವಾಸವಿರುವುದಿಲ್ಲ. ಈ ಕಾರಣಕ್ಕಾಗಿ ಆ ಸಮಿತಿಗೆ ದೂರು ಸಲ್ಲಿಸಿಲ್ಲ,” ಎಂದು, ಪ್ರಾಧಿಕಾರಕ್ಕೆ ಸಲ್ಲಿಸಿರುವ ದೂರಿನಲ್ಲಿ ಮಹಿಳಾ ಅಧಿಕಾರಿ ತಿಳಿಸಿದ್ದಾರೆ.

ಸಂಬಂಧಿಸಿದ ಹಿರಿಯ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಮಹಿಳಾ ಅಧಿಕಾರಿ, ನೌಕರರ ಮೇಲೆ ಲೈಂಗಿಕ ದೌರ್ಜನ್ಯ ಆಗದಂತೆ ಸುರಕ್ಷಿತ ವಾತಾವರಣ ಕಲ್ಪಿಸಿ ಎಂದು ತಮ್ಮ ದೂರಿನಲ್ಲಿ ಕೋರಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿದ ಹಿರಿಯ ಅಧಿಕಾರಿಯ ಮಾತುಗಳು

  • ನಾನು ಎಲ್ಲರಿಗಿಂತ ನಿನ್ನನ್ನೇ ಇಷ್ಟಪಡೋದು
  • ಬೆಳಗಾಂಗೆ ನಾವೆಲ್ಲ ಹೋಗಿ, ಗೋವಾಕ್ಕೆ ಹೋಗಿ ಮರಳಿನಲ್ಲಿ ಉರುಳಾಡೋಣ
  • ನೀನು ತಲೆಗೆ ಹೇರ್ ಡೈ ಮಾಡಿಕೊಂಡು ಬಾ. ಸ್ಮಾರ್ಟ್ ಆಗಿ ಬಾ. ನನಗೆ ಎನರ್ಜಿ ಬರಬೇಕು
  • ನಿನ್ನ ಮಗಳಿಗೆ ಮದುವೆ ಯಾಕೆ ಮಾಡುತ್ತೀಯಾ, ನಿನ್ನ ಬಾಳು ಹಾಳಾದ ಹಾಗೆ ಆಗುತ್ತೆ. ಅವಳಿಗೆ ಮದುವೆ ಮಾಡಬೇಡ.
  • ನೀನು ಎರಡನೆ ಮದುವೆ ಯಾಕೆ ಮಾಡಿಕೊಂಡೆ. 10 ವರ್ಷದ ಹಿಂದೆ ನನಗೆ ಗೊತ್ತಿದ್ದರೆ ನಾನುನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ.
  • ನೀನು ಚೆನ್ನಾಗಿದ್ದೀಯ ಅಂತ ನಿನಗೆ ಕೊಬ್ಬಾ
  • ನಾನು 10 ವರ್ಷ ಇರುತ್ತೀನಿ. ಈ 10 ವರ್ಷದಲ್ಲಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ

ಇದಲ್ಲದೆ, ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಮಂದಿ ಇತರ ಮಹಿಳಾ ಅಧಿಕಾರಿಗಳು, ನೌಕರರು ಇದೇ ಹಿರಿಯ ಅಧಿಕಾರಿ ವಿರುದ್ಧ ಸಕ್ಷಮ ಪ್ರಾಧಿಕಾರವೊಂದಕ್ಕೆ ದೂರು ಸಲ್ಲಿಸಿದ್ದಾರೆ. “ಕಳೆದ ಒಂದು ವರ್ಷದಿಂದ ಕಚೇರಿಯಲ್ಲಿ ಮುಕ್ತ ವಾತಾವರಣವಿಲ್ಲ. ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದ್ದು, ಅಧಿಕಾರಿ, ನೌಕರರಿಗೆ ಕಾರ್ಯ ಹಂಚಿಕೆ ಮಾಡಿಲ್ಲ. ಆಡಳಿತದಲ್ಲಿ ಯಾವುದೇ ನಿಯಮಗಳನ್ನು ಅಳವಡಿಸಿಕೊಳ್ಳದೆ ಮಹಿಳಾ ಅಧಿಕಾರಿ, ನೌಕರರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ,” ಎಂದೂ, ನ.14ರಂದು ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ : ಕಾರ್ಯದರ್ಶಿ ಕಣ್ಣು ಹೊಡೆಯುತ್ತಾರೆ, ಹುಬ್ಬು ಹಾರಿಸುತ್ತಾರೆ; ಸಂತ್ರಸ್ತೆ ದೂರು
ಲೈಂಗಿಕ ದೌರ್ಜನ್ಯ Bangalore ಬೆಳಗಾವಿ ಅಧಿವೇಶನ ಬೆಂಗಳೂರು Sexual Harrasment Vidhana Soudha ವಿಧಾನಸೌಧ Senior Officer ಹಿರಿಯ ಅಧಿಕಾರಿ Belagavi Session
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು