ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಮುಸ್ಲಿಂ ಮಹಿಳೆಯರ ಉಡುಗೆ ವಿಷಯದಲ್ಲಿ ಟರ್ಕಿ, ಟ್ಯುನೀಷಿಯಾ ಮಾದರಿ ಆಗಬಾರದೇ?

ಕ್ರೀಡೆಗಳಲ್ಲಿ ಭಾಗವಹಿಸುವವ ಮುಸ್ಲಿಂ ಹೆಣ್ಣುಮಕ್ಕಳಿಗೆಂದೇ ತಯಾರಾದ ಸ್ಲಿಮ್ ಫಿಟ್‌ ಬುರ್ಖಾ, ಹಿಜಾಬ್‌ಗೆ ಭಾರತದಲ್ಲಿ ವಿರೋಧ ಎದುರಾಗಿದೆ. ಈ ಉಡುಪು ಧರಿಸುವುದು ಧರ್ಮಕ್ಕೆ ವಿರುದ್ಧ ಎಂಬುದು ಉ.ಪ್ರದೇಶದ ದಾರೂಲ್ ಉಲೂಮ್ ದಿಯೋಬಂದ್ ಇಸ್ಲಾಂ ಸಂಸ್ಥೆಯ ಪ್ರತಿಪಾದನೆ

ಸುಷ್ಮಾ ಉಪ್ಪಿನ್ ಇಸಳೂರ

ಮುಸ್ಲಿಮ್ ಹೆಣ್ಣುಮಕ್ಕಳಿಗೆ ಮತ್ತೊಂದು ಅಡ್ಡಿ ಎದುರಾಗಿದೆ. ಆಧುನಿಕ ಉಡುಪುಗಳನ್ನು ಅವರಿಚ್ಛೆಯಂತೆ ಧರಿಸಲು ಭಾರತದಲ್ಲಿ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಲಖನೌದ ದಾರೂಲ್ ಉಲೂಮ್ ದಿಯೋಬಂದ್ ಇಸ್ಲಾಮಿಕ್‌ ಸಂಸ್ಥೆಯು ಸ್ಲಿಮ್ ಫಿಟ್ ಹಿಜಾಬ್ ಬುರ್ಖಾ ಧರಿಸದಂತೆ ಸಮುದಾಯದ ಹೆಣ್ಣುಮಕ್ಕಳಿಗೆ ಫತ್ವಾ ಹೊರಡಿಸಿದೆ. ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಸ್ಲಿಮ್‌ ಫಿಟ್ ಬುರ್ಖಾ ಹಾಗೂ ಹಿಜಾಬ್‌ಗಳನ್ನು ಯಾರೂ ಧರಿಸಬಾರದು ಎಂದು ಹೇಳಿದೆ.

ಹಿಜಾಬ್‌ ಹಾಗೂ ಬುರ್ಖಾ ಧರಿಸುವುದು ಮುಸ್ಲಿಂ ಸಮುದಾಯದಲ್ಲಿ ಕಡ್ಡಾಯ. ಹಾಗಿರುವಾಗ ಬುರ್ಖಾ ಹಾಗೂ ಹಿಜಾಬ್ ತಯಾರಿಕೆಗೆ ಇಂದಿನ ಕೆಲ ಕಂಪನಿಗಳು ಹೊಸ ರೂಪವನ್ನು ಕೊಟ್ಟಿವೆ. ಸ್ಲಿಮ್ ಫಿಟ್ ಹಿಜಾಬ್ ಹಾಗೂ ಬಣ್ಣ ಬಣ್ಣದ ಬುರ್ಖಾಗಳು ಖರೀದಿಸಲು ಮಾರುಕಟ್ಟೆಯಲ್ಲಿ ಲಭ್ಯ. ಅಂತಾರಾಷ್ಟ್ರೀಯ ಸ್ಟೋರ್ಟ್ ಸಾಮಗ್ರಿಗಳನ್ನು ಪರಿಚಯಿಸುತ್ತಿರುವ ನೈಕ್ ಕಂಪನಿಯು ಮೊದಲ ಬಾರಿಗೆ ಸ್ಲಿಮ್ ಫಿಟ್ ಮಹಿಳಾ ಮುಸ್ಲಿಂ ಉಡುಪುಗಳನ್ನು ಉತ್ಪಾದಿಸಿದೆ. ಈ ಕಂಪೆನಿಯ ವಿರುದ್ಧ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾಯಿತು. #boycottNike ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯಿತು. ಆದರೆ ಮುಸ್ಲಿಂ ಮಹಿಳೆಯರೆಲ್ಲಾ ಸಮಾನತೆ, ವೈವಿಧ್ಯತೆ, ಮತ್ತು ಸ್ವೀಕಾರದ ಕಾರಣಕ್ಕೆ ಒಂದು ಚಲನೆಗೆ ಈ ಬ್ರ್ಯಾಂಡ್ ಸಹಾಯಕವಾಗಿದೆ ಎಂದು ಶ್ಲಾಘಿಸಿದ್ದಾರೆ.

ಕಂಪೆನಿ ತಯಾರಿಸಿದ್ದು ಕ್ರೀಡಾ ಮಹಿಳೆಯರಿಗೆ ಸಹಾಯವಾಗಲಿ ಎಂದು. ಪ್ರಮುಖವಾಗಿ ಕ್ರೀಡೆಯಲ್ಲಿ ಧರಿಸುವ ಬಟ್ಟೆಗಳು ಹೇಗಿರಬೇಕು ಎಂದು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಹಿಂದೆ ಬ್ಯಾಸ್ಕೆಟ್ ಬಾಲ್ ಆಡುವಾಗ ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆಯರಿಗೆ ಹಾಕಿದ್ದ ನಿಷೇಧವನ್ನು ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಒಕ್ಕೂಟ (ಎಫ್ಐಬಿಎ) ರದ್ದುಗೊಳಿಸಿದೆ. ಮುಸ್ಲಿಂ ರಾಷ್ಟ್ರಗಳಾದ ಇರಾಕ್ ಟರ್ಕಿ, ಟುನಿಷಿಯಾ, ಕಜಕಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ಪಶ್ಚಿಮ ಆಫ್ರಿಕಾ ರಾಷ್ಟ್ರಗಳಾದ ಸೆನೆಗಲ್, ಗೇಬೊನ್, ಸಿಯೆರಾ ಲಿಯೋನ್‌ ದೇಶಗಳು ಹೆಣ್ಣುಮಕ್ಕಳ ವಿಷಯದಲ್ಲಿ ಉದಾರವಾಗಿವೆ. ಅಂದರೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದು ಎಂದರೆ ಬಟ್ಟೆ ಧರಿಸುವ ವಿಷಯದಲ್ಲಿ ಮಾತ್ರ ಅಲ್ಲ ಎಲ್ಲ ವಿಷಯಗಳಲ್ಲೂ ಕೂಡ ಉದಾರತೆ ತೋರಿಸಿವೆ.

ಹಿಜಾಬ್ ಧರಿಸಲು ವಿರೋಧಿಸುವವರೂ ಹಾಗೂ ಹಿಜಾಬ್ ಒಂದು ನಿರ್ಬಂಧ ಎಂದು ಪರಿಗಣಿಸದೇ ಇರುವವರೂ ಇದ್ದಾರೆ. ಅಂತಾರಾಷ್ಟ್ರೀಯ ಸ್ಕೇಟರ್ ‘ಝಹ್ರಾ ಲಹ್ರಿ’ ಹೇಳುವಂತೆ ಹಿಜಾಬ್ ಧರಿಸಿ ಆಡಲು ಯಾವುದೇ ತೊಂದರೆ ಇಲ್ಲ. ಅದೇನು ನಮ್ಮ ಕನಸನ್ನು ಸಾಧಿಸಲು ತೊಂದರೆಯಾಗಿಲ್ಲ, ಆದರೆ ಅದೊಂದು ಗೌರವವನ್ನು ತಂದು ಕೊಡುತ್ತದೆ. ಕ್ರೀಡಾ ಒಕ್ಕೂಟಗಳು ಮುಸ್ಲಿಂ ಮಹಿಳಾ ಕ್ರೀಡಾಪಟುಗಳ ವಿಷಯದಲ್ಲಿ ಸುಲಭದ ಹಾಗೂ ಒಪ್ಪುವಂತಹ ಮಾರ್ಗಸೂಚಿಗಳನ್ನು ತರಬೇಕೆಂದು ಹೊರಟಿರುವುದನ್ನು ನಾವು ಆಧುನಿಕವಾಗಿ ಒಪ್ಪಿಕೊಳ್ಳಬೇಕು. ಅಲ್ಲದೇ ಇಂದಿನ ಜಾಗತಿಕ ತಾಪಮಾನ ಹೆಚ್ಚಿರುವಾಗ ಹಿಜಾಬ್ ಧರಿಸುವುದು ಕಷ್ಟ ಎಂದೂ ಹೇಳಿದ್ದಾರೆ. ಜಾಗತಿಕ ಕ್ರೀಡಾ ಒಕ್ಕೂಟಗಳು ಎಲ್ಲರಿಗೂ ಒಂದೇ ಮಾರ್ಗಸೂಚಿಗಳನ್ನು ತರಹೊರಟಿರುವುದು ಉತ್ತಮ ಬದಲಾವಣೆ. ಕ್ರೀಡಾ ಸಮಯದಲ್ಲಿ ಯಾವುದೇ ಧರ್ಮ ಸೂಚಕ ಉಡುಪುಗಳನ್ನು ಹಾಗೂ ದೈಹಿಕ ಚಲನವಲನಗಳಿಗೆ ಕಮ್‌ಫರ್ಟ್‌ ಆಗಿರುವಂತಹ ಉಡುಪುಗಳನ್ನು ಒಕ್ಕೂಟಗಳು ಉದ್ದೇಶಿಸುತ್ತವೆ.

ಇಂಗ್ಲೆಂಡ್‌ನಲ್ಲಿ ಮುಸ್ಲಿಂ ಈಜುಗಾರ್ತಿಯರು ಸಾಮಾನ್ಯ ಈಜುಡುಗೆ ಧರಿಸದೇ ಮೈಮುಚ್ಚುವಂತಹ ಸಡಿಲ ಉಡುಗೆ, ಬೇಕಿದ್ದಲ್ಲಿ ಬುರ್ಖಾ ಹೋಲುವ ಈಜುಡುಗೆಯನ್ನು ಧರಿಸಬಹುದು ಎಂಬ ಸಡಿಲಿಕೆಯನ್ನು ಅಲ್ಲಿನ ಬುರ್ಖಾಧಾರಿ ಕ್ರೀಡಾಪಟುಗಳಿಗೆ ಇಂಗ್ಲೆಂಡ್ ಕ್ರೀಡಾ ಒಕ್ಕೂಟ ತಂದಿದೆ. ಇಂಗ್ಲೆಂಡ್‌ನ ಹವ್ಯಾಸಿ ಈಜು ಸಂಸ್ಥೆ (ಎಎಸ್ಎ) ಗೆ ಮುಸ್ಲಿಂ ಮಹಿಳಾ ಕ್ರೀಡಾ ಸಂಸ್ಥೆ ಈ ಬಗ್ಗೆ ಮನವಿ ಮಾಡಿತ್ತು. ಇದನ್ನು ಎಎಸ್ಎ (Allen Sports Association) ಕೂಡ ಪುರಸ್ಕರಿಸಿದೆ. ಇದುವರೆಗೆ ಒಲಿಂಪಿಯನ್‌ಗಳು ಧರಿಸುವಂತಹ ಮೈಮುಚ್ಚುವ ಈಜುಡುಗೆ ಧರಿಸಲು ಅವಕಾಶ ನಿರಾಕರಿಸಲಾಗಿತ್ತು. ಈ ಬದಲಾವಣೆ ಹವ್ಯಾಸಿ ಈಜು ಸ್ಪರ್ಧೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದೆ.

ಅವರಿಚ್ಚೆಯಂತೆ ಆಡಲು ಬಯಸುವ ಮಹಿಳೆಯರಿಗೂ ಕೂಡ ಕೆಲ ಕ್ರೀಡಾ ಒಕ್ಕೂಟಗಳು ಅವಕಾಶ ಕಲ್ಪಿಸಿವೆ. ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಶನ್ (FIBA) ಮುಸ್ಲಿಂ ಮಹಿಳಾ ಕ್ರೀಡಾಪಟುಗಳು ಹಿಜಾಬ್ ಧರಿಸುವುದನ್ನು ನಿಷೇದಿಸಿದೆ. ಆಯಾ ದೇಶದ ಒಕ್ಕೂಟಗಳು ತಮ್ಮ ದೇಶದ ಸಾಂಸ್ಕೃತಿಕ ನಿಲುವಿನ ಮೇಲೆ ಕ್ರೀಡಾ ಮಾರ್ಗಸೂಚಿಗಳನ್ನು ರೂಪಿಸಿಕೊಂಡಿವೆ.

ಕೆಲ ಮಹಿಳಾ ಕ್ರೀಡಾಪಟುಗಳು ಅಭಿಪ್ರಾಯಪಡುವಂತೆ ಸಾಂಸ್ಕೃತಿಕ ಅಡೆತಡೆಗಳು ಪ್ರಾಯೋಗಿಕ ಅಡೆತಡೆಗಳೂ ಆಗಿವೆ. ಅಂತಾರಾ‍ಷ್ಟ್ರೀಯ ತಂಡಗಳೊಂದಿಗೆ ಸಮಾನವಾಗಿ ಸ್ಪರ್ಧಿಸಲು ಹಿಂಜರಿಕೆಯಾಗಬಹುದು ಎನ್ನುತ್ತಾರೆ.

ಮುಸ್ಲಿಂ-ಅಮೆರಿಕನ್ ಮಹಿಳೆಯ ಶೆರಿನ್ ಸುಲ್ತಾನ ಹೇಳುವಂತೆ "ಅಂತಹ ಒಂದು ದೊಡ್ಡ ಕಂಪೆನಿಯು [ಮುಸ್ಲಿಂ ಮಹಿಳಾ] ಕ್ರೀಡಾಪಟುಗಳಿಗೆ ಹೆಚ್ಚು ಆರಾಮದಾಯಕವಾದ ತಲೆ-ಕವಚದ ಅಗತ್ಯವನ್ನು ಅಂತಿಮವಾಗಿ ಗುರುತಿಸಿದೆ ಎಂದು ನಾನು ಭಾವಿಸುತ್ತೇನೆ, ಆದರೆ ಇದು ಸ್ವಲ್ಪ ತಡವಾಯಿತು" ಎಂದು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ : ಸಂಪ್ರದಾಯಶೀಲ ಮುಸ್ಲಿಂ ಕುಟುಂಬದ ತಾಕಲಾಟ ಅನಾವರಣ ಮಾಡುವ ಮಿಠಾಯಿ!

ಭಾರತದಲ್ಲಿಯೂ ಕೂಡ ಯಾವುದೇ ನಿರ್ಬಂಧಗಳಿಲ್ಲ. ಆದರೆ ಕೆಲ ಇಸ್ಲಾಂ ಸಂಸ್ಥೆಗಳು ಸಾಂದರ್ಭಿಕವಾಗಿ ವಿರೋಧವನ್ನು ವ್ಯಕ್ತಪಡಿಸಿವೆ. ಇಸ್ಲಾಮಿಕ್ ಸಂಸ್ಥೆಯು ತಮ್ಮ ಧರ್ಮದ ಕಟ್ಟುಪಾಡುಗಳಿಗೆ ವಿರುದ್ಧವೆಂದು ಈ ಸ್ಲಿಮ್ ಫಿಟ್‌ಗಳನ್ನು ವಿರೋಧಿಸುತ್ತಿದೆ. ಅವರ ನಂಬಿಕೆಯಂತೆ ಹೆಣ್ಣುಮಕ್ಕಳು ಬುರ್ಖಾ ಧರಿಸುವುದು ಕಡ್ಡಾಯ. ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಬುರ್ಖಾಗಳಿಗೆ ಹೊಸರೂಪ ಕೊಟ್ಟಿರುವುದಕ್ಕೆ ವಿರೋಧಿಸಲು ಕಾರಣ ಆ ಉಡುಪು ದೇಹರಚನೆಯನ್ನು ತೋರಿಸುತ್ತದೆ ಎಂದು. ಮಹಿಳೆಯರು ಹೇಳುವಂತೆ ಕಮ್‌ಫರ್ಟ್ ಆದ ಸ್ಲಿಮ್‌ ಫಿಟ್ ಬುರ್ಖಾ ಹಾಗೂ ಹಿಜಾಬ್ ಉತ್ತಮವಾಗಿದೆ. ಮಹಿಳೆಯರ ವಾದವನ್ನು ಇಸ್ಲಾಂ ಮೌಲ್ವಿಗಳೇ ಸಮಗ್ರವಾಗಿ ಕೂತು ಬಗೆಹರಿಸುವ ಪ್ರಯತ್ನ ಮಾಡಬೇಕು. ಕಾರಣ ಮಹಿಳೆಯರ ವಿಚಾರದಲ್ಲಿ ಮುಸ್ಲಿಂ ದೇಶಗಳು ಹತ್ತು ಹಲವು ರೀತಿಯ ನಿರ್ಬಂಧಗಳನ್ನು ಹೇರಿದ್ದರೂ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಬಗ್ಗೆ ಕೆಲ ದೇಶಗಳು ಮನಸ್ಥಿತಿಯನ್ನು ಬದಲಾಯಿಸಿಕೊಂಡಿವೆ. ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಇತ್ತೀಚೆಗಷ್ಟೇ ಸೌದಿ ಅರೇಬಿಯಾ ಕಾರು ಚಾಲನೆ ಮಾಡಲು ಮಹಿಳೆಯರಿಗೆ ಅವಕಾಶ ನೀಡಿದೆ. ತಲೆಯ ಮೇಲೆ ಹಿಜಾಬ್ ಹಾಕಿಕೊಳ್ಳದ ಮಹಿಳೆಯರನ್ನು ಬಂಧಿಸುವುದಿಲ್ಲ ಎಂದು ಇರಾನ್ ಪೊಲೀಸರು ಈಗಾಗಲೇ ಪ್ರಕಟಿಸಿದ್ದಾರೆ.

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಆಯೋಜಿಸಿದ್ದ ಭಗವದ್ಗೀತೆ ಪಠಣ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಭಾಗವಹಿಸಿ ಭಗವದ್ಗೀತೆ ಪಠಿಸಿದ್ದಕ್ಕೆ ಇದೇ ದಾರೂಲ್ ಉಲೂಮ್ ಫತ್ವಾ ಹೊರಡಿಸಿತ್ತು. ಮುಸ್ಲಿಮ್ ದೇಶಗಳೂ ಮಹಿಳೆಯರ ಬಗೆಗಿನ ಸಾಂಪ್ರದಾಯಿಕ ದೃಷ್ಟಿಕೋನದಿಂದ ಹೊಬರುತ್ತಿರುವಾಗ ಭಾರತದಲ್ಲಿ ಇಸ್ಲಾಮ್ ಧರ್ಮ ಸಂಸ್ಥೆಗಳಿಗೂ ಮಾದರಿಯಾಗಬಾರದೇಕೆ? ಈ ಬಗ್ಗೆ ಸಮುದಾಯದೊಳಗೆ ಮತ್ತು ಹೊರಗೆ ರಚನಾತ್ಮಕ ಚರ್ಚೆ ಆಗಬೇಕಿದೆ.

America ಮುಸ್ಲಿಂ Muslim ಅಮೆರಿಕಾ ಬುರ್ಕಾ ನಿಷೇಧ ಸಂಪ್ರದಾಯವಾದ Burka Prohibion Traditional ದಾರೂಲ್ ಉಲೂಮ್ ದಿಯೋಬಂದ್ Darul Uloom Deoband
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?