ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಅಬಕಾರಿ ಇಲಾಖೆಗೆ 2,250 ಕೋಟಿ ರೂ. ವರಮಾನ ನಷ್ಟ; ಸಿಎಜಿ ವರದಿ ಲೆಕ್ಕಾಚಾರ

“ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯೇ ಪ್ರಮುಖ ಆದಾಯದ ಮೂಲ. ಆದರೆ ಕಳೆದ ಐದು ವರ್ಷಗಳಲ್ಲಿ ಈ ಇಲಾಖೆ ಗಳಿಸಬೇಕಿದ್ದ ಆದಾಯದಲ್ಲಿ ೨,೨೫೦ ಕೋಟಿ ರೂಪಾಯಿ ಖೋತಾ ಆಗಿದೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳ ವೈಫಲ್ಯವೇ ಕಾರಣ,” ಎಂದು ಸಿಎಜಿ ವರದಿ ಹೇಳಿದೆ

ಮಹಾಂತೇಶ್ ಜಿ

ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾದ ಶುದ್ಧೀಕರಿಸಲ್ಪಟ್ಟ ಮದ್ಯಸಾರ, ಡಿಸ್ಟಲರಿ ಅಧಿಕಾರಿಗಳ ವೈಫಲ್ಯ, ಕಾಕಂಬಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು ಸೇರಿದಂತೆ ಅಬಕಾರಿ ಇಲಾಖೆಯಲ್ಲಿನ ಹಲವು ಲೋಪದೋಷಗಳಿಂದ ಒಟ್ಟು 2,250 ಕೋಟಿ ರೂ. ವರಮಾನ ನಷ್ಟ ಸಂಭವಿಸಿದೆ.

ಅಬಕಾರಿ ಇಲಾಖೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಲೋಪ ದೋಷಗಳು, ವೈಫಲ್ಯಗಳು ಕಂಡು ಬಂದಿವೆ ಎಂದು ಸಿಎಜಿ ವರದಿ ತಿಳಿಸಿದೆ. ಸಕ್ಕರೆ ಕಾರ್ಖಾನೆಗಳು ಕಾಕಂಬಿ ನೀಡಿಕೆಯನ್ನು ನಿಯಂತ್ರಿಸುವ ಸಂಬಂಧ ಯಾವುದೇ ಕಾರ್ಯನೀತಿ ಇರಲಿಲ್ಲ. ಹೀಗಾಗಿಯೇ ಹಲವು ಡಿಸ್ಟಲರಿಗಳು ಕಾಕಂಬಿಯನ್ನು ಲೆಕ್ಕಕ್ಕೆ ಇಟ್ಟಿರಲಿಲ್ಲ. ಇದು ಮದ್ಯಸಾರವನ್ನು ಕಾನೂನುಬಾಹಿರವಾಗಿ ತಯಾರಿಸಲು ಅನುಕೂಲವಾಗಿದೆ. ಡಿಸ್ಟಲರಿಗಳು ಇದನ್ನು ನಿಯಮಬಾಹಿರವಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಸಿಎಜಿ ಪತ್ತೆ ಹಚ್ಚಿದೆ.

ಶುದ್ಧೀಕರೀಸಲ್ಪಟ್ಟ ಮದ್ಯಸಾರದ ಉತ್ಪತ್ತಿ ಕುರಿತು ಪ್ರಮಾಣಕಗಳನ್ನು ಪರಿಷ್ಕರಿಸುವಲ್ಲಿ ಇಲಾಖೆ ವಿಳಂಬ ಧೋರಣೆ ಪ್ರದರ್ಶಿಸಿದೆ. ಅಲ್ಲದೆ ನಿರ್ದಿಷ್ಟಪಡಿಸಿದ್ದ ತಾಂತ್ರಿಕತೆ ಇಲಾಖೆಯ ದಕ್ಷತೆ ಮೇಲೆ ಪ್ರಭಾವ ಬೀರಿಲ್ಲ. ೨೦೧೨ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ ೨೦೧೫ರವರೆಗೆ ೧೨ ಡಿಸ್ಟಲರಿಗಳಿಂದ ಸರ್ಕಾರಕ್ಕೆ ೬೪.೮೪ ಕೋಟಿ ರೂ.ನಷ್ಟ ಸಂಭವಿಸಿರುವುದು ವರದಿಯಿಂದ ತಿಳಿದುಬಂದಿದೆ.

ಹಾಗೆಯೇ, ಡಿಸ್ಟಲರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಇದರಿಂದ ಮದ್ಯಸಾರ ಸಾಕಷ್ಟು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿದೆ. ಇದರ ಪ್ರಮಾಣ ೨.೧೯ ಕೋಟಿಯಿಂದ ೪.೨೩ ಕೋಟಿ ಬೃಹತ್‌ ಲೀಟರ್‌ಗಳಷ್ಟಿದೆ. ಇದನ್ನು ಶುದ್ಧೀಕರಿಸಲ್ಪಟ್ಟ ಮದ್ಯಸಾರವನ್ನಾಗಿ ಕುಡಿಯಲು ಯೋಗ್ಯವಾದಂತಹ ಮದ್ಯಸಾರವನ್ನಾಗಿ ಪರಿವರ್ತಿಸಿದಲ್ಲಿ ೬೩೩.೩೨ ಕೋಟಿ ರೂ. ಹಾಗೂ ೧,೨೨೨.೬೨ ಕೋಟಿ ರೂ.ವರಮಾನ ಬರಲಿದೆ ಎಂದು ಸಿಎಜಿ ವಿಶ್ಲೇಷಿಸಿದೆ. ರಾಜ್ಯದ ೩ ಡಿಸ್ಟಲರಿಗಳು ೨೦೧೨ರ ಮೇ, ಏಪ್ರಿಲ್‌ ೨೦೧೪ರ ಮಧ್ಯೆ ೧೯,೫೫೫ ಮೆಟ್ರಿಕ್‌ ಟನ್‌ನಷ್ಟು ಕಾಕಂಬಿಯನ್ನು ಖರೀದಿಸಿತ್ತು. ಆದರೆ ಲೆಕ್ಕ ಇಟ್ಟಿರಲಿಲ್ಲ. ಇದರಿಂದ ೧೨೪.೯೭ ಕೋಟಿ ರೂ.ನಷ್ಟು ವರಮಾನ ನಷ್ಟವಾಗಲು ಕಾರಣವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ. ಅದೇ ರೀತಿ ೪ ಡಿಸ್ಟಲರಿಗಳು ೨೦೧೨ ಏಪ್ರಿಲ್‌ನಿಂದ ಮಾರ್ಚ್ ೨೦೧೭ರವರೆಗೆ ಕಾಕಂಬಿಯನ್ನು ಅಧಿಕ ಪ್ರಮಾಣದಲ್ಲಿ ಅಂದರೆ ೧,೧೧೯.೨೪೧ ಮೆಟ್ರಿಕ್‌ ಟನ್‌ಗಳಷ್ಟಿತ್ತು. ಇದರ ಮೇಲೆ ೭.೬೦ ಕೋಟಿ ರೂ.ನಷ್ಟು ಇಲಾಖೆ ಅಧಿಕಾರಿಗಳು ದಂಡ ವಿಧಿಸಲಿಲ್ಲ ಎಂದು ಹೇಳಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಹೆಚ್ಚಿದ ಕಾನೂನುಬಾಹಿರ ಕಲ್ಲು ಗಣಿಗಾರಿಕೆ; ಕೈ ತಪ್ಪಿದ ೫೧ ಕೋಟಿ ರೂ. ದಂಡ

ಕಾಕಂಬಿಯಿಂದ ಶುದ್ಧೀಕರಿಸಲ್ಪಟ್ಟ ಮದ್ಯಸಾರ ಉತ್ಪಾದನೆಯ ಪ್ರಮಾಣಕಗಳ ಪರಿಷ್ಕರಣೆಗೆ ೭ ವರ್ಷಗಳ ಹಿಂದೆ ಸ್ಥಾಯಿ ತಾಂತ್ರಿಕ ಸಮಿತಿ ಶಿಫಾರಸುಗಳನ್ನು ಮಾಡಿದ್ದರೂ ಅನುಷ್ಠಾನ ಮಾಡುವಲ್ಲಿ ವಿಳಂಬವಾಗಿದೆ. ಹಾಗೆಯೇ, ಮೆಟ್ರಿಕ್‌ ಟನ್‌ವೊಂದಕ್ಕೆ ೨೪೦ ಬೃಹತ್‌ ಲೀಟರ್‌ಗಳ ಪರಿಷ್ಕೃತ ಕನಿಷ್ಠ ಉತ್ಪತ್ತಿಗೆ ಪ್ರತಿಯಾಗಿ ೨೨.೪೨ ಲಕ್ಷ ಬೃಹತ್‌ ಲೀಟರ್‌ಗಳಷ್ಟು ಮದ್ಯಸಾರ ೧೨ ಡಿಸ್ಟಲರಿಗಳಲ್ಲಿ ಉತ್ಪತ್ತಿಯಾಗಿದೆ. ಇದರಿಂದ ವರಮಾನಕ್ಕೆ ೬೪.೮೪ ಕೋಟಿ ರೂ.ನಷ್ಟವಾಗಿರುವುದು ವರದಿಯಿಂದ ತಿಳಿದು ಬಂದಿದೆ.

“ಕಳೆದ ೫ ವರ್ಷಗಳ ಅವಧಿಯಲ್ಲಿ ೪ ಡಿಸ್ಟಲರಿಗಳು ೧,೩೮೦.೦೯೨ ಮೆಟ್ರಿಕ್ ಟನ್ ನಷ್ಟು ಕಾಕಂಬಿ ದಾಸ್ತಾನು ನಷ್ಟ ಕೋರಿದ್ದವು. ಇದರ ಮೇಲೆ ೭.೬೦ ಕೋಟಿ ಮೊತ್ತದಷ್ಟು ದಂಡ ವಿಧಿಸಿರಲಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವ ಸಂಬಂಧ ಡಿಸ್ಟಲರಿ ಅಧಿಕಾರಿಗಳು ಅಬಕಾರಿ ಆಯುಕ್ತರಿಗೆ ವರದಿ ಸಲ್ಲಿಸಿರಲಿಲ್ಲ,” ಎಂದು ವರದಿಯಲ್ಲಿ ಹೇಳಲಾಗಿದೆ.

“ಪರವಾನಗಿ ಇಲ್ಲದವರಿಂದ ಮದ್ಯ ಮಾರಾಟ ಮುಂದುವರೆಯುತ್ತಿದೆ. ಇಂತಹ ನಿಯಮಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಇಲಾಖೆ ವಿಫಲವಾಗಿದೆ. ಇಲಾಖೆಯಲ್ಲಿ ಅಗತ್ಯ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಗಳ ಕೊರತೆ ಹಾಗೂ ಸಿಬ್ಬಂದಿ ಲೋಪದೋಷದಿಂದಾಗಿ ನಷ್ಟಕ್ಕೆ ಕಾರಣವಾಗುತ್ತಿದೆ,” ಎಂದು ವರದಿ ತಿಳಿಸಿದೆ.

ರಾಜ್ಯ ಸರ್ಕಾರ State Government ಉತ್ಪಾದನೆ Loss Production CAG Report ಸಿಎಜಿ ವರದಿ Excise Department Molasses Distillery ಅಬಕಾರಿ ಇಲಾಖೆ ಕಾಕಂಬಿ ನಷ್ಟ ಡಿಸ್ಟಲರಿ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು