ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ರಾಜ್ಯದಲ್ಲಿ ಹೆಚ್ಚಿದ ಕಾನೂನುಬಾಹಿರ ಕಲ್ಲು ಗಣಿಗಾರಿಕೆ; ಕೈ ತಪ್ಪಿದ ೫೧ ಕೋಟಿ ರೂ. ದಂಡ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಈಗಲೂ ಮುಂದುವರೆದಿದೆ. ಅಲ್ಲದೆ ಅದರ ಪ್ರಮಾಣವೂ ಏರಿಕೆಯಾಗಿದೆ.ಕಟ್ಟಡ ಕಲ್ಲು ಸೇರಿದಂತೆ ಇನ್ನಿತರೆ ಖನಿಜಗಳನ್ನು ಪರವಾನಗಿ ಇಲ್ಲದೆ ಸಾಗಿಸಿರುವುದು ಬಹಿರಂಗವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟವಾಗಿದೆ.

ಮಹಾಂತೇಶ್ ಜಿ

ರಾಜ್ಯದಲ್ಲಿ ನಿಯಮಬಾಹಿರವಾಗಿ ಕಲ್ಲು ಗಣಿಗಾರಿಕೆ ಮುಂದುವರೆದಿದೆ. ಅಷ್ಟೇ ಅಲ್ಲ ಇದು ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಗೊಂಡಿದೆ. ಪ್ರಧಾನವಲ್ಲದ ಖನಿಜಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಗದಿಪಡಿಸಿದ್ದ ರಾಜಧನವನ್ನು(ರಾಯಲ್ಟಿ) ಮೂಲದಲ್ಲಿಯೇ ವಸೂಲು ಮಾಡದಿರುವುದು ಸೇರಿದಂತೆ ರಾಜ್ಯದ ವಿವಿಧೆಡೆ ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆದಿರುವುದನ್ನು ಸಿಎಜಿ ಬಹಿರಂಗಪಡಿಸಿದೆ. ಅಲ್ಲದೆ ಸರ್ಕಾರಕ್ಕೆ ಬರಬೇಕಿದ್ದ ೫೧.೪೫ ಕೋಟಿ ರೂ.ನಷ್ಟು ಮೊತ್ತ ಕೈ ತಪ್ಪಿದೆ ಎಂದು ವರದಿಯಲ್ಲಿ ಹೇಳಿದೆ.

ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರು ಅಕ್ರಮ ಗಣಿಗಾರಿಕೆಯಿಂದಾಗಿ ಆಗಿರುವ ಅಪಾರ ಪ್ರಮಾಣ ನಷ್ಟದಿಂದ ಸರ್ಕಾರದ ಬೊಕ್ಕಸ ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆಯೇ ಕಲ್ಲು ಗಣಿಗಾರಿಕೆಯಲ್ಲಿ ನಡೆದಿರುವ ಕಾನೂನುಬಾಹಿರ ಚಟುವಟಿಕೆಗಳ ವಿವರಗಳನ್ನು ಸಿಎಜಿ ಬಹಿರಂಗಪಡಿಸಿರುವುದು ಆಘಾತಕಾರಿಯಾಗಿದೆ.

“ಗಣಿಗಾರಿಕೆ, ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದ ಇಲಾಖೆಗಳು, ಸಂಸ್ಥೆಗಳ ಮೂಲಕ ಸಂಗ್ರಹಿಸಿದ್ದ ರಾಜಧನವು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಸೂಲಾಗಿದ್ದ, ಸಂಗ್ರಹಿಸಿದ್ದ ರಾಜಧನದ ಮೊತ್ತಕ್ಕಿಂತಲೂ ಅಧಿಕ ಪ್ರಮಾಣದಲ್ಲಿತ್ತು. ಇದು ರಾಜ್ಯದಲ್ಲಿ ಕಾನೂನುಬಾಹಿರ ಗಣಿಗಾರಿಕೆ ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಗೊಂಡಿದೆ,” ಎಂದು ಸಿಎಜಿ ತೀರ್ಮಾನಿಸಿದೆ.

ಸಿಎಜಿ ವರದಿ

“ಪರವಾನಗಿ ಇಲ್ಲದೆಯೇ ಖನಿಜಗಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಗಳ ಮೂಲಗಳನ್ನು ಖಚಿತಪಡಿಸಿಕೊಳ್ಳದೆಯೇ ರಾಜಧನವನ್ನು ವಿಧಿಸುತ್ತಿದ್ದವು. ಅಲ್ಲದೆ ಮೂಲದಲ್ಲಿಯೇ ರಾಜಧನ ಕಡಿತಗೊಳ್ಳದ ಕಾರಣ ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿನ ನಿಯಮಬಾಹಿರ ಗಣಿಗಾರಿಕೆ ನಡೆದಿದೆ ಎಂಬುದನ್ನು ಸೂಚಿಸಿತ್ತು. ಇದರ ಬಗ್ಗೆ ಗಣಿ, ಭೂ ವಿಜ್ಞಾನ ಇಲಾಖೆ ತನಿಖೆ ನಡೆಸುವ ಅಗತ್ಯವಿದೆ,” ಎಂದು ಸಿಎಜಿ ತನ್ನ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

“೨೦೧೬-೧೭ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ೧೩ ಕಚೇರಿಗಳ ದಾಖಲೆಗಳನ್ನು ಸಿಎಜಿ ಪರಿಶೋಧನೆಗೆ ಒಳಪಡಿಸಿದೆ. ೧೦೨.೦೩ ಕೋಟಿ ರೂ. ಮೊತ್ತ ಒಳಗೊಂಡಂತೆ ಪರವಾನಗಿ ಇಲ್ಲದೆಯೇ ಖನಿಜಗಳನ್ನು ಸಾಗಾಣಿಕೆ ಮಾಡಿದ್ದರೂ ಯಾವುದೇ ದಂಡವನ್ನು ವಿಧಿಸಿರಲಿಲ್ಲ. ಇದರಿಂದಾಗಿ ನಿಯಮಬಾಹಿರವಾಗಿ ಗಣಿಗಾರಿಕೆ ನಡೆದಿರುವುದು ಬೆಳಕಿಗೆ ಬಂದಿದೆ,” ಎಂದು ಸಿಎಜಿ ವರದಿ ಹೇಳಿದೆ.

ಇದನ್ನೂ ಓದಿ : ಅಕ್ರಮ ಅದಿರು ಸಾಗಾಣಿಕೆ ಪ್ರಕರಣ; ವಸೂಲಾಗದ ದಂಡ 134 ಕೋಟಿ ರು.

೨೦೧೨-೧೬ರ ಅವಧಿಯಲ್ಲಿ ಕಟ್ಟಡ ಕಲ್ಲು ೩೩,೮೭,೨೫೫ ಮೆಟ್ರಿಕ್‌ ಟನ್‌, ಮುರ್ರಂ ೨೭,೮೦೦ ಮೆಟ್ರಿಕ್‌ ಟನ್‌ , ಸಾಮಾನ್ಯ ಮಣ್ಣು ೬೨,೫೨೪ ಮೆಟ್ರಿಕ್‌ ಟನ್‌ನಷ್ಟು ಗುತ್ತಿಗೆದಾರರು ಸಾಗಾಣಿಕೆ ಮಾಡಿದ್ದರು. ಆದರೆ ಕಟ್ಟಡ ಕಲ್ಲು ೧೩,೪೯,೯೦೯ ಮೆಟ್ರಿಕ್‌ ಟನ್‌, ಮುರ್ರಂ ೨,೫೦೦, ಸಾಮಾನ್ಯ ಮಣ್ಣು ೫೦,೩೭೦ ಮೆಟ್ರಿಕ್‌ ಟನ್‌ಗಷ್ಟೇ ಪರವಾನಗಿ ನೀಡಲಾಗಿತ್ತು. ಆದರೆ, ಕಟ್ಟಡ ಕಲ್ಲು ೨೦,೩೭,೩೪೬ ಮೆಟ್ರಿಕ್‌ ಟನ್‌, ೨೫,೩೦೦ ಮೆಟ್ರಿಕ್‌ ಟನ್‌ ಮುರ್ರಂ, ೧೨,೧೫೪ ಮೆಟ್ರಿಕ್‌ ಟನ್‌ನಷ್ಟು ಸಾಮಾನ್ಯ ಮಣ್ಣನ್ನು ಪರವಾನಗಿ ಇಲ್ಲದೆಯೇ ಸಾಗಾಣಿಕೆ ಮಾಡಲಾಗಿದೆ ಎಂಬುದು ಸಿಎಜಿಯ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

ಹಾಗೆಯೇ ಇದಕ್ಕೆಲ್ಲಾ ರಾಜಧನವನ್ನು ವಿಧಿಸಿದ್ದರೂ ಪರವಾನಗಿ ಇಲ್ಲದೆಯೇ ಮಾಡಿದ್ದ ಸಾಗಾಣಿಕೆಗಳಿಗೆ ಗುತ್ತಿಗೆ ಒಡಂಬಡಿಕೆಗಳ ಪ್ರಕಾರ ರಾಜಧನದ ೫ ಪಟ್ಟು ಅಂದರೆ ೫೮.೨೨ ಕೋಟಿ ರೂ.ವಿಧಿಸಬೇಕಿತ್ತು. ಆದರೆ ಬಳ್ಳಾರಿ, ದಾವಣಗೆರೆ, ಕೊಪ್ಪಳ, ರಾಯಚೂರು, ಹೊಸಪೇಟೆ ಹಾಗೂ ಯಾದಗಿರಿ ಜಿಲ್ಲೆಗಳ ಗಣಿ ಉಪನಿರ್ದೇಶಕರು ಯಾವುದೇ ದಂಡವನ್ನು ವಿಧಿಸಿರಲಿಲ್ಲ. ಬಳ್ಳಾರಿ, ಧಾರವಾಡ, ಗದಗ ಜಿಲ್ಲಾ ಉಪನಿರ್ದೇಶಕರು ೨೦೧೫-೧೬ರಲ್ಲಿ ಕೇವಲ ೬.೭೭ ಕೋಟಿಯಷ್ಟು ಮಾತ್ರ ದಂಡ ವಿಧಿಸಿದ್ದರು. ಇದರಿಂದಾಗಿ ೫೧.೪೫ ಕೋಟಿ ರೂ.ಮೊತ್ತದಷ್ಟು ದಂಡ ಕೈ ತಪ್ಪಲು ಕಾರಣವಾಗಿದೆ ಎಂಬುದು ವರದಿಯಿಂದ ಗೊತ್ತಾಗಿದೆ.

“ಚಿತ್ರದುರ್ಗ, ಕಲಬುರಗಿ ಮತ್ತು ಹೊಸಪೇಟೆಯಲ್ಲಿ ೪,೫೨,೫೨೭.೨೦ಮೆಟ್ರಿಕ್ ಟನ್ ಕಟ್ಟಡ ಕಲ್ಲು, ೩೯,೦೦೭ ಚ.ಮೀ.ಗಳಷ್ಟು ಶಹಬಾದ್‌ ಕಲ್ಲುಗಳನ್ನು ೨೦೧೫-೧೬ನೇ ಸಾಲಿನಲ್ಲಿ ಪರವಾನಗಿ ಇಲ್ಲದೆಯೇ ಸಾಗಾಣಿಕೆ ಮಾಡಲಾಗಿತ್ತು. ಇದರ ಮೇಲೆ ೨.೭೭ ಕೋಟಿ ರೂ. ರಾಜಧನ ವಿಧಿಸಿರಲಿಲ್ಲ,” ಎಂದು ವರದಿಯಲ್ಲಿ ಹೇಳಲಾಗಿದೆ.

“ಬಾಗಲಕೋಟೆ, ಬೆಂಗಳೂರು, ಚಿತ್ರದುರ್ಗ, ಧಾರವಾಡ, ಕಲಬುರಗಿ, ಕೊಪ್ಪಳ, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಪ್ರಧಾನ ಖನಿಜಗಳ ಮೇಲೆ ಮೂಲದಲ್ಲಿಯೇ ರಾಜಧನವನ್ನು ಕಡಿತಗೊಳಿಸಿರಲಿಲ್ಲ. ಇದರ ಮೊತ್ತ ೩೯.೫೬ ಕೋಟಿ ರೂ.ಗಳಷ್ಟಿತ್ತು. ಅದೇ ರೀತಿ ಬೆಂಗಳೂರು ಸೇರಿದಂತೆ ಒಟ್ಟು ೭ ಜಿಲ್ಲೆಗಳಲ್ಲಿ ೪೦.೦೬ ಲಕ್ಷ ಘನ ಮೀಟರ್‌ನಷ್ಟು ಮುರ್ರಂ ಅನ್ನು ಹೊರತೆಗೆಯಲಾಗಿತ್ತು. ಹೀಗೆ ಹೊರತೆಗೆಯಲಾದ ಮುರ್ರಂ ಅನ್ನು ಇತರೆ ಕಾಮಗಾರಿಗಳಲ್ಲಿ ಬಳಸಲಾಯಿತೇ ಅಥವಾ ಯಾವುದಾದರೂ ರೀತಿಯಲ್ಲಿ ವಿಲೇವಾರಿ ಮಾಡಲಾಯಿತೇ ಎಂಬುದು ದಾಖಲೆಗಳಿಂದ ಕಂಡು ಬಂದಿಲ್ಲ. ಹೊರತೆಗೆಯಲಾದ ಮುರ್ರಂನ ಬಳಕೆ, ಸಾಗಣೆಯಿಂದ ೧೨.೦೨ ಕೋಟಿ ರೂ. ಮೊತ್ತದಷ್ಟು ಸಂಭಾವ್ಯ ರಾಜಧನ ವಸೂಲಾತಿ ಮಾಡಲು ಸಾಧ್ಯವಿತ್ತು. ಆದರೆ ಗಣಿ ಭೂ ವಿಜ್ಞಾನ ಇಲಾಖೆ ಬಳಿ ಈ ಯಾವ ವಿವರಗಳು ಇರಲಿಲ್ಲ,” ಎಂದು ಸಿಎಜಿ ವರದಿಯಲ್ಲಿ ಹೇಳಿದೆ.

ಗುತ್ತಿಗೆದಾರರು ಖನಿಜ ರವಾನೆ ಪರವಾನಗಿಗಳನ್ನಾಗಲೀ, ಗಣಿ ಗುತ್ತಿಗೆದಾರರಿಂದ ಅಥವಾ ಕಲ್ಲು ಪುಡಿ ಮಾಡುವ ಘಟಕಗಳು, ಇತರೆ ವರ್ತಕರಿಂದ ಪಡೆದ ಇನ್ವಾಯ್ಸ್‌ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಗಣಿ, ಭೂ ವಿಜ್ಞಾನ ಇಲಾಖೆ ಒದಗಿಸುತ್ತಿರಲಿಲ್ಲ. ಗಣಿಗಾರಿಕೆ ನಡೆಸಿದ್ದ ಸಂಸ್ಥೆಗಳು ಕಾಮಗಾರಿಗಳಲ್ಲಿ ಬಳಸಿಕೊಂಡ ಅಪ್ರಧಾನ ಖನಿಜಗಳ ಮೂಲಗಳ ಬಗ್ಗೆ ವಿವರಗಳನ್ನು ಇಟ್ಟಿರಲಿಲ್ಲ. ಹಾಗೆಯೇ ಇಂತಹ ವಿವರಗಳು, ಮಾಹಿತಿಯನ್ನು ಸಂಗ್ರಹಿಸಲು ಇಲಾಖೆ ಯಾವುದೇ ಪ್ರಯತ್ನ ಮಾಡಿರಲಿಲ್ಲ ಎಂಬುದನ್ನೂ ಸಿಎಜಿ ಪತ್ತೆ ಹಚ್ಚಿದೆ.

ಸಿಎಂ ಸಿದ್ದರಾಮಯ್ಯ Department of Mines and Geology CM Siddaramaiah Illegal Stone Mining CAG Report Royalty Shahabad Stone Without Permit Stones Export ಕಾನೂನುಬಾಹಿರ ಕಲ್ಲು ಗಣಿಗಾರಿಕೆ ಸಿಎಜಿ ವರದಿ ರಾಜಧನ ಶಹಬಾದ್‌ ಕಲ್ಲು ಪರವಾನಗಿ ಇಲ್ಲದೆ ಸಾಗಾಣಿಕೆ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು