ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

೧೩೮೮ ಕೋಟಿ ರೂ. ಅಕ್ರಮವಾಗಿ ಬ್ಯಾಂಕ್‌ನಲ್ಲಿ ಹೂಡಿದ ಆರ್‌ಡಿಪಿಆರ್‌; ಸಿಎಜಿ

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದರ ಬೆನ್ನಲ್ಲೇ, ಇಲಾಖೆಯ ಹಣಕಾಸಿನ ಆಡಳಿತದಲ್ಲಾಗಿರುವ ಲೋಪಗಳೂ ಬೆಳಕಿಗೆ ಬರುತ್ತಿವೆ. ಜಿಪಂಗಳ ಸಿಇಒಗಳ ಲೋಪದೋಷಗಳು ಬಹಿರಂಗವಾಗಿವೆ

ಮಹಾಂತೇಶ್ ಜಿ

ಹದಿನಾಲ್ಕನೆ ಹಣಕಾಸು ಆಯೋಗದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅನರ್ಹಗೊಂಡಿದ್ದ ರಾಜ್ಯದ ೧೦೦ ಗ್ರಾಮ ಪಂಚಾಯ್ತಿಗಳಿಗೆ ಮೂಲ ಅನುದಾನವನ್ನು ಅನಿಯಮಿತವಾಗಿ ಬಿಡುಗಡೆಯಾಗಿದೆ. ಹಾಗೆಯೇ ಹಂಚಿಕೆಯಾಗಿದ್ದ ಅನುದಾನದ ಮೊತ್ತವನ್ನು ಅಕ್ರಮವಾಗಿ ಅಧಿಕ ಬಡ್ಡಿ ಗಳಿಸಲು ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿರುವ ವಿಚಾರ ಸಿಎಜಿ ವರದಿಯಿಂದ ಬಹಿರಂಗವಾಗಿದೆ.

ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಗ್ರಾಮ ಪಂಚಾಯ್ತಿಗಳಿಗೆ ಅನಿಯಮಿತವಾಗಿ ಬಿಡುಗಡೆಯಾಗಿರುವ ಮೊತ್ತ ೧,೩೮೮.೬೨ ಕೋಟಿ ರೂ.ಗಳಾಗಿವೆ. ಅಲ್ಲದೆ, ೨೦೧೬-೧೭ನೇ ಸಾಲಿನಲ್ಲಿ ಹಂಚಿಕೆಯಾಗಿದ್ದ ಮೂಲ ಅನುದಾನವನ್ನು ಅನರ್ಹ ಗ್ರಾಮ ಪಂಚಾಯ್ತಿಗಳಿಗೆ ಹಂಚಿಕೆ ಮಾಡಿರುವುದನ್ನು ಸಿಎಜಿ ಗಂಭೀರವಾಗಿ ಪರಿಗಣಿಸಿದೆ.

ಪಂಚಾಯತ್‌ ರಾಜ್‌ ಸಂಸ್ಥೆಗಳ ಹೊಣೆಗಾರಿಕೆ ಚೌಕಟ್ಟು ಮತ್ತು ಹಣಕಾಸಿನ ವರದಿ ಕುರಿತು ಪರಿಶೀಲನೆ ನಡೆಸಿರುವ ಸಿಎಜಿ ಅಧಿಕಾರಿಗಳು, ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ ಹಣಕಾಸಿನ ಆಡಳಿತದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಸಗಿರುವ ಹಲವು ಲೋಪ ದೋಷಗಳನ್ನು ಪತ್ತೆ ಹಚ್ಚಿದ್ದಾರೆ.

೧೩ ಮತ್ತು ೧೪ನೇ ಹಣಕಾಸು ಆಯೋಗದಿಂದ ಬಿಡುಗಡೆಯಾಗಿದ್ದ ಅನುದಾನವನ್ನು ಅಕ್ರಮವಾಗಿ ಬ್ಯಾಂಕ್‌ಗಳಲ್ಲಿ ಅಧಿಕ ಬಡ್ಡಿ ಗಳಿಸುವ (ಸ್ವೀಪ್ ಇನ್ ) ಹೂಡಿಕೆಗೆ ಬಳಸಿದ್ದನ್ನು ಸಿಎಜಿ ಬೆಳಕಿಗೆ ತಂದಿದೆ. “ಈ ಎರಡೂ ಹಣಕಾಸು ಆಯೋಗದಿಂದ ೧೩.೯೨ ಕೋಟಿ ರೂ.ನಷ್ಟು ಅನುದಾನ ಪಡೆದಿತ್ತು. ಇದಾದ ನಂತರ ರಾಜ್ಯ ಸರ್ಕಾರ ಹಲವು ದಿನಗಳಾದರೂ ಹಂಚಿಕೆ ಮಾಡದೇ ಬ್ಯಾಂಕ್‌ ಖಾತೆಯಲ್ಲಿ ಅನುದಾನದ ಮೊತ್ತವನ್ನು ಉಳಿಸಿಕೊಂಡಿತ್ತು. ಅವಶ್ಯಕತೆ ಇದ್ದ ೬.೨೬ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ವರ್ಗಾವಣೆ ಮಾಡಿರಲಿಲ್ಲ. ಮೂಲ ಖಾತೆಯನ್ನು ಒಳಗೊಂಡಂತಹ ಬ್ಯಾಂಕ್‌ ಶಾಖೆಯು ೪ ಸ್ವೀಪ್‌ ಇನ್‌ ಖಾತೆಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿತ್ತು. ಇದು ೧೩ನೇ ಹಣಕಾಸು ಆಯೋಗದ ವಿರುದ್ಧವಾಗಿತ್ತು,” ಎಂದು ಸಿಎಜಿ ವರದಿ ತಿಳಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಹೆಚ್ಚಿದ ಕಾನೂನುಬಾಹಿರ ಕಲ್ಲು ಗಣಿಗಾರಿಕೆ; ಕೈ ತಪ್ಪಿದ ೫೧ ಕೋಟಿ ರೂ. ದಂಡ

“ಅದೇ ರೀತಿ ೧೪ನೇ ಹಣಕಾಸು ಆಯೋಗದಿಂದ ೫೫.೮೪ ಲಕ್ಷ ರೂ.ಅನುದಾನದ ಮೊತ್ತ ೩ ಸ್ವೀಪ್‌ ಇನ್ ಖಾತೆಗಳಲ್ಲಿ ಅಕ್ರಮವಾಗಿ ಹೂಡಿಕೆಯಾಗಿದೆ. ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ವರ್ಗಾವಣೆ ಮಾಡದಿರುವ ಅನುದಾನ ಮತ್ತು ಗಳಿಸಿದ ಬಡ್ಡಿಯನ್ನು ಒಳಗೊಂಡಂತೆ ಹೆಚ್ಚಿನ ಮೊತ್ತ ಅಂದರೆ ೧೭೩.೫೮ ಕೋಟಿ (ಮಾರ್ಚ್ ೨೦೧೭ ಅಂತ್ಯಕ್ಕೆ) ಖಾತೆಯಲ್ಲೇ ಉಳಿದಿತ್ತು. ರಾಜ್ಯ ಹಣಕಾಸು ಆಯೋಗಕ್ಕೆ ಸಂಬಂಧಿಸಿದ ಹಣ ಮತ್ತು ೧೪ನೇ ಹಣಕಾಸು ಆಯೋಗದಡಿಯಲ್ಲಿ ಸ್ವೀಕರಿಸಿದ್ದ ಅನುದಾನಗಳನ್ನೂ ಎಸ್‌ಬಿಐನ ಜಿ-ಸೇವಾ ಖಾತೆಯ ಮೂಲಕ ನವೆಂಬರ್‌ ೨೦೧೬ರವರೆಗೂ ಕಾರ್ಯಾಚರಣೆ ನಡೆಸಿತ್ತು,” ಎಂದು ವರದಿ ಹೇಳಿದೆ.

ಹಣಕಾಸು ಆಯೋಗ ಬಿಡುಗಡೆ ಮಾಡುತ್ತಿದ್ದ ಅನುದಾನ ವರ್ಗಾವಣೆ ಮಾಡುವ ಸಂಬಂಧ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ೧೪ನೇ ಹಣಕಾಸು ಆಯೋಗದ ನವೆಂಬರ್‌ ೨೦೧೬ರಿಂದ ಬಿಡುಗಡೆ ಮಾಡಿದ್ದ ಅನುದಾನ ಮತ್ತು ವರ್ಗಾವಣೆಗೆ ರಾಜ್ಯ ಸರ್ಕಾರ ಬ್ಯಾಂಕ್‌ ಖಾತೆ ನಿರ್ವಹಿಸುತ್ತಿತ್ತು. ಕೇಂದ್ರ ಸರ್ಕಾರದಿಂದ ಸ್ವೀಕರಿಸಿದ ಅನುದಾನವನ್ನು ಅರ್ಹ ಗ್ರಾಮ ಪಂಚಾಯ್ತಿಗಳಿಗೆ ವರ್ಗಾವಣೆ ಮಾಡಲು ಸರಿಯಾದ ಖಾತೆ ಸಂಖ್ಯೆಗಳನ್ನು ಬ್ಯಾಂಕ್‌ಗೆ ತಿಳಿಸಬೇಕಿತ್ತು. ಆದರೆ ಗ್ರಾಮ ಪಂಚಾಯ್ತಿಗಳ ಖಾತೆ ಸಂಖ್ಯೆಗಳ ದತ್ತಾಂಶವನ್ನು ಇಲಾಖೆ ಸರಿಯಾಗಿ ನಿರ್ವಹಿಸಿರಲಿಲ್ಲ. ಹಾಗಾಗಿ ಬ್ಯಾಂಕ್‌ನಿಂದ ವರ್ಗಾವಣೆಯಾದಂತಹ ಗಣನೀಯ ಹಣವನ್ನು ಪದೇಪದೇ ತಿರಸ್ಕೃತವಾಗುತ್ತಿತ್ತು ಎಂಬುದನ್ನು ಸಿಎಜಿ ಪತ್ತೆ ಹಚ್ಚಿದೆ.

ಬಹುಗ್ರಾಮಗಳ ನೀರು ಸರಬರಾಜು ಯೋಜನೆ ಅನುಷ್ಠಾನದ ಕುರಿತು ಸಿಎಜಿ ಬೆಳಕು ಚೆಲ್ಲಿದೆ. “ಬಾಗಲಕೋಟೆ ಜಿಲ್ಲೆಯ ಮುಧೋಳ್‌ ತಾಲೂಕಿನ ಮೇಟಗುಡ್ಡ ಮತ್ತು ಇತರೆ ಗ್ರಾಮಗಳಿಗೆ ೪.೨೫ ಕೋಟಿ ರೂ.,ಮೊತ್ತದಲ್ಲಿ ನೀರು ಸರಬರಾಜು ಯೋಜನೆ ಜಾರಿಯಾಗಿತ್ತು. ಅನುಮೋದನೆ ದೊರೆತು ೬ವರ್ಷಗಳಾದರೂ ಯೋಜನೆ ಅನುಷ್ಠಾನಗೊಳ್ಳಲಿಲ್ಲ. ಹೀಗಾಗಿ ಒಟ್ಟು ಮೊತ್ತದ ಪೈಕಿ ೩.೯೮ ಕೋಟಿ ರೂ.ನಿಷ್ಫಲವಾಯಿತು,” ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ಅನುದಾನ Grants CAG Report ಸಿಎಜಿ ವರದಿ Rural Revelopment And Panchayat Raj Finance Commission Illegal Investment In Banks ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆ ಹಣಕಾಸು ಆಯೋಗ ಬ್ಯಾಂಕ್‌ಗಳಲ್ಲಿ ಅಕ್ರಮ ಹೂಡಿಕೆ
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು