ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಕರ್ನಾಟಕದ ಬ್ಯಾಂಕ್‌ಗಳಿಂದ ಮೆಹುಲ್ ಚೋಕ್ಸಿ ಪಡೆದಿದ್ದು ೮೬೧ ಕೋಟಿ ಸಾಲ!

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಮೆಹುಲ್ ಚೋಕ್ಸಿ ವ್ಯವಸ್ಥಾಪಕ ನಿರ್ದೇಶಕನಾಗಿರುವ ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ಗೆ ಕರ್ನಾಟಕದ ಬ್ಯಾಂಕ್‌ಗಳು 861 ಕೋಟಿ ಸಾಲ ನೀಡಿವೆ. ಆ ಬ್ಯಾಂಕ್‌ಗಳು ಯಾವುವು, ಕೊಟ್ಟ ಸಾಲ ಎಷ್ಟೆಂಬುದನ್ನು ‘ದಿ ಸ್ಟೇಟ್‌’ ಬಹಿರಂಗಪಡಿಸುತ್ತಿದೆ

ಮಹಾಂತೇಶ್ ಜಿ

ಹಗರಣಗಳ ಸುಳಿಯಲ್ಲಿ ಸಿಲುಕಿರುವ ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ಗೆ‌ ಕೋಟ್ಯಂತರ ರುಪಾಯಿ ಸಾಲ ನೀಡಿರುವ ವಿವರಗಳು ಈಗಾಗಲೇ ಬಹಿರಂಗವಾಗಿವೆ. ದೇಶದ ವಿವಿಧ ಬ್ಯಾಂಕ್‌ಗಳು ೧೯೯೯ರಿಂದ ೨೦೧೬ರವರೆಗೆ ೧೪,೦೦೦ ಕೋಟಿ ರು. ಸಾಲ ನೀಡಿವೆ. ಇದೇ ಅವಧಿಯಲ್ಲಿ ಕರ್ನಾಟಕ ಮೂಲದ ಬ್ಯಾಂಕ್‌ಗಳು ೮೬೧.೫೩ ಕೋಟಿ ರು. ಸಾಲ ನೀಡಿರುವುದು ಬೆಳಕಿಗೆ ಬಂದಿದೆ. ಈ ಕಂಪನಿಯು ಕಳೆದ ೫ ವರ್ಷದ ಅವಧಿಯಲ್ಲಿ ಅಲ್ಪಾವಧಿ ಸಾಲ ಪಡೆದಿದೆಯೇ ಹೊರತು ದೀರ್ಘಾವಧಿ ಸಾಲದ ರೂಪದಲ್ಲಿ ಒಂದೇ ಒಂದು ಪೈಸೆಯನ್ನೂ ಪಡೆದಿಲ್ಲ. ಇದು ಕಂಪನಿಯ ಐದು ವರ್ಷದ ಹಣಕಾಸು ವರದಿಯಿಂದ ತಿಳಿದುಬಂದಿದೆ.

ಸಾಲ ನೀಡಿರುವ ಬ್ಯಾಂಕ್‌ಗಳ ಪೈಕಿ ಕರ್ನಾಟಕ ಮೂಲದ ವಿಜಯಾ ಬ್ಯಾಂಕ್, ಸಿಂಡಿಕೇಟ್‌ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೋರೇಷನ್‌ ಬ್ಯಾಂಕ್‌ನ ಮುಂಬೈ ಶಾಖೆಗಳು ಸೇರಿವೆ. ಈ ಶಾಖೆಗಳು ಒಟ್ಟು ೮೬೧.೫೩ ಕೋಟಿ ರು. ಸಾಲವನ್ನು ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ಗೆ ನೀಡಿವೆ. ಸಿಂಡಿಕೇಟ್ ಬ್ಯಾಂಕ್‌ವೊಂದೇ ೨೦೦೯-೧೦ರ ಡಿಸೆಂಬರ್‌ನಲ್ಲಿ ಒಟ್ಟು ೧೬೦ ಕೋಟಿ ರು. ಸಾಲ ನೀಡಿರುವುದು ದಾಖಲೆಗಳಿಂದ ತಿಳಿದುಬಂದಿದೆ.

ಕರ್ನಾಟಕದ ಬ್ಯಾಂಕ್‌ಗಳು ಗೀತಾಂಜಲಿ ಜೆಮ್ಸ್‌ ಕಂಪನಿಗೆ ನೀಡಿರುವ ಸಾಲ ವಿವರದ ಪ್ರತಿ

ಅದೇ ರೀತಿ, ವಿಜಯಾ ಬ್ಯಾಂಕ್‌ ೫೩.೨೧ ಕೋಟಿ, ಕಾರ್ಪೋರೇಷನ್‌ ಬ್ಯಾಂಕ್‌ ೩೭೦ ಕೋಟಿ, ಕರ್ನಾಟಕ ಬ್ಯಾಂಕ್‌ ೭೧.೨೭ ಕೋಟಿ, ಸಿಂಡಿಕೇಟ್‌ ಬ್ಯಾಂಕ್‌ ೧೮೫.೪೫ ಕೋಟಿ, ಕೆನರಾ ಬ್ಯಾಂಕ್‌ ೧೮೨ ಕೋಟಿ ರು. ಸೇರಿದಂತೆ ಒಟ್ಟು ೮೬೧.೫೩ ಕೋಟಿ ಸಾಲ ನೀಡಿರುವುದು ಗೊತ್ತಾಗಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಸಾಲದ ಮೊತ್ತವನ್ನು ಬ್ಯಾಂಕ್‌ಗಳಿಗೆ ಮರುಪಾವತಿಯಾಗಿದೆ ಅಥವಾ ಬಾಕಿ ಉಳಿಸಿಕೊಂಡಿದೆ ಎಂಬುದನ್ನು ‘ದಿ ಸ್ಟೇಟ್‌’ ಖಚಿತಪಡಿಸಿಕೊಂಡಿಲ್ಲ.

ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ ಪಡೆದಿರುವ ಸಾಲ ಮತ್ತಿತರ ವಿವರಗಳನ್ನು ಬೆಂಗಳೂರು ಮೂಲದ ಕಮಿಟಿ ಆನ್‌ ಜ್ಯುಡಿಯಿಷಿಯಲ್‌ ಅಕೌಂಟಬಿಲಿಟಿ ಸಂಸ್ಥೆ, ಭಾರತೀಯ ಕಂಪನಿಗಳ ವ್ಯವಹಾರಗಳ ಸಚಿವಾಲಯದಿಂದ ವಿವರಗಳನ್ನು ಕಲೆಹಾಕಿದೆ. ಈ ಎಲ್ಲ ವಿವರಗಳು ‘ದಿ ಸ್ಟೇಟ್‌’ಗೆ ಲಭ್ಯವಾಗಿವೆ.

ಇನ್ನು, ೨೦೧೩ರ ಮಾರ್ಚ್‌ನಿಂದ ೨೦೧೭ರ ಮಾರ್ಚ್‌ವರೆಗೆ ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ ಭದ್ರತೆ ಇಲ್ಲದ ಸಾಲ (unsecured) ಪಡೆದುಕೊಂಡಿದೆ. ೨೦೧೭ರ ಮಾರ್ಚ್ ಅಂತ್ಯಕ್ಕೆ ಇದರ ಮೊತ್ತ ೬೦.೦೪ ಕೋಟಿ ರು. ಇದ್ದರೆ, ೨೦೧೩ರ ಮಾರ್ಚ್ ಅಂತ್ಯಕ್ಕೆ ೪೩.೮೧ ಕೋಟಿ, ೨೦೧೪ರಲ್ಲಿ ೪೧.೨೭, ೨೦೧೫ರಲ್ಲಿ ೯೯.೮೬, ೨೦೧೬ರಲ್ಲಿ ೧೩೭.೯೦ ಕೋಟಿ ರು. ಸಾಲ ಪಡೆದಿದೆ.

ಇದನ್ನೂ ಓದಿ : ಸಂಕಲನ | ನೀರವ್‌ ಮೋದಿ ಹಗರಣ ಸುತ್ತ ‘ದಿ ಸ್ಟೇಟ್‌’ ಪ್ರಕಟಿಸಿದ ವಿಶೇಷ ವರದಿಗಳು

ಅದೇ ರೀತಿ, ಭದ್ರತೆ ರೂಪದಲ್ಲಿ (secured) ೨೦೧೭ರ ಮಾರ್ಚ್‌ ಅಂತ್ಯಕ್ಕೆ ೨೧೭.೩೬ ಕೋಟಿ ರು. ಸಾಲ ಪಡೆದಿದೆ. ಹಾಗೆಯೇ, ಗೀತಾಂಜಲಿ ಜೆಮ್ಸ್‌ ಲಿಮಿಟೆಡ್ ೨೦೧೩ರ ಮಾರ್ಚ್‌ನಿಂದ ೨೦೧೭ರ ಮಾರ್ಚ್ ಅಂತ್ಯಕ್ಕೆ ‌ಅಲ್ಪಾವಧಿ ಸಾಲದ ರೂಪದಲ್ಲಿ ೨೦೧೭ರ ಮಾರ್ಚ್‌ ಅಂತ್ಯಕ್ಕೆ ೪,೯೯೩.೩೭ ಕೋಟಿ ರು. ಸಾಲ ಪಡೆದಿದೆ. ೨೦೧೩ರಲ್ಲಿ ೨,೩೮೨ ಕೋಟಿ, ೨೦೧೪ರಲ್ಲಿ ೪,೨೧೫.೧೩ ಕೋಟಿ, ೨೦೧೫ರಲ್ಲಿ ೪,೩೫೭.೪೪ ಕೋಟಿ, ೨೦೧೬ರಲ್ಲಿ ೫,೦೦೮ ಕೋಟಿ ರು. ಸಾಲ ಪಡೆದಿರುವುದು ಕಂಪನಿಯ ೫ ವರ್ಷಗಳ ಹಣಕಾಸು ವರದಿಯಿಂದ ಗೊತ್ತಾಗಿದೆ.

“೧೯೯೯ರಿಂದಲೂ ಸಾಲ ಪಡೆದಿರುವ ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌, ಇಷ್ಟೊಂದು ಮೊತ್ತವನ್ನು ಎಲ್ಲಿ, ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ ಹಾಗೂ ೧೪,೦೦೦ ಕೋಟಿ ರು. ಸಾಲ ಮೊತ್ತದ ಪೈಕಿ ಎಷ್ಟು ಕೋಟಿ ಸಾಲವನ್ನು ಮರುಪಾವತಿಸಿದೆ ಎಂಬ ಬಗ್ಗೆ ಬ್ಯಾಂಕ್‌ಗಳು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿಲ್ಲವೇಕೆ? ಬ್ಯಾಂಕ್‌ಗಳ ಈ ಮೌನ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತವೆ,” ಎನ್ನುತ್ತಾರೆ ಕಮಿಟಿ ಆನ್‌ ಜ್ಯುಡಿಯುಷಿಲ್‌ ಅಕೌಂಟಬಿಲಿಟಿಯ ಶಿವಕುಮಾರ್‌.

ಈಗಾಗಲೇ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆಯಾಗಿರುವ ಮೊತ್ತದಲ್ಲಿಯೂ ಹೆಚ್ಚಳವಾಗಿದ್ದು, ಅದು 12,800 ಕೋಟಿ ರು.ಗಳನ್ನು ದಾಟುತ್ತಿದೆ. “ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ವೊಂದೇ ಪಡೆದಿರುವ ಕೋಟ್ಯಂತರ ರು. ಸಾಲವನ್ನು ಬ್ಯಾಂಕ್‌ಗಳು ಹೇಗೆ ಮರುಪಾವತಿಸಿಕೊಳ್ಳುತ್ತವೆ? ನೀಡಿರುವ ಸಾಲಕ್ಕೆ ಪಡೆದಿರುವ ಖಾತರಿ ಮತ್ತು ಭದ್ರತೆಯಾದರೂ ಏನು? ಇದು ಬ್ಯಾಂಕ್‌ ಅಧಿಕಾರಿಗಳ ಬಹುದೊಡ್ಡ ನಿರ್ಲಕ್ಷ್ಯ,” ಎನ್ನುತ್ತಾರೆ ತೆರಿಗೆ ತಜ್ಞ ಕಿರಣ್‌ ಮೂರ್ತಿ.

ಸಾಲ Canara Bank Karnataka Bank ಕರ್ನಾಟಕ ಬ್ಯಾಂಕ್ Gitanjali Gems Nirav Modi ನೀರವ್ ಮೋದಿ Mehul Choksi ಗೀತಾಂಜಲಿ ಜೆಮ್ಸ್ ಮೆಹುಲ್ ಚೋಕ್ಸಿ Syndicate Bank Vijaya Bank Corporation Bank ಕಾರ್ಪೊರೇಷನ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ವಿಜಯಾ ಬ್ಯಾಂಕ್ Loans
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು