ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಎಸಿಬಿಗೆ ಹಿನ್ನಡೆ; ಶ್ಯಾಮ್‌ ಭಟ್‌ ವಿರುದ್ಧ ತನಿಖೆಗೆ ಅನುಮತಿ ನಿರಾಕರಣೆ?

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ತನಿಖೆಗೆ ಗುರಿಯಾಗಬೇಕಿರುವ ಸರ್ಕಾರದ ಹಿರಿಯ ಐಎಎಸ್‌ ಅಧಿಕಾರಿಗಳು ‘ಪೂರ್ವಾನುಮತಿ’ ಅಸ್ತ್ರವನ್ನು ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ತಾಜಾ ನಿದರ್ಶನವೊಂದು ಬೆಳಕಿಗೆ ಬಂದಿದೆ. ಆ ಪ್ರಕರಣದ ವಿವರಗಳು ಇಲ್ಲಿವೆ

ಮಹಾಂತೇಶ್ ಜಿ

ನಾಗರಿಕ ನಿವೇಶನ ಪ್ರಕರಣವೊಂದರಲ್ಲಿ ಬಿಡಿಎ ಹಿಂದಿನ ಆಯುಕ್ತ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಹಾಲಿ ಅಧ್ಯಕ್ಷ ಶ್ಯಾಮ್‌ ಭಟ್‌ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸುವ ಲಕ್ಷಣಗಳು ಕಂಡುಬಂದಿವೆ. ಇದೇ ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಾಲಿ ಆಯುಕ್ತರು ನೀಡಿದ್ದ ಅಭಿಪ್ರಾಯಕ್ಕೆ ನಗರಾಭಿವೃದ್ಧಿ ಇಲಾಖೆ ಮಣೆ ಹಾಕಿದೆ. ಈ ಅಭಿಪ್ರಾಯ, ಬಿಡಿಎನ ಆರ್ಥಿಕ ಸದಸ್ಯರು ನೀಡಿದ್ದ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿದೆ ಎಂದು ತಿಳಿದುಬಂದಿದೆ.

ಶ್ಯಾಮ್‌ ಭಟ್‌ ಅವರ ವಿರುದ್ಧದ ಆರೋಪಗಳನ್ನು ಎಸಿಬಿ ಹಿಂದಿನ ಎಸ್ಪಿ ಲಾಬೂರಾಮ್ ಅವರು ಪ್ರಾಥಮಿಕ ವಿಚಾರಣೆ ವೇಳೆಯಲ್ಲಿ ಸಾಬೀತುಪಡಿಸಿದ್ದರು. ಪ್ರಾಥಮಿಕ ವಿಚಾರಣೆ ವರದಿ ಆಧರಿಸಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಲು ಸರ್ಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳಲು ಎಸಿಬಿ ಯತ್ನಿಸುತ್ತಲೇ ಇದೆ. ಆದರೆ, ಕಳೆದ ೨ ವರ್ಷಗಳಿಂದಲೂ ಪೂರ್ವಾನುಮತಿ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ತನ್ನಲ್ಲೇ ಉಳಿಸಿಕೊಂಡಿರುವ ನಗರಾಭಿವೃದ್ಧಿ ಇಲಾಖೆ, ಇದೀಗ ಶ್ಯಾಮ್‌ ಭಟ್‌ ಅವರ ಪರವಾಗಿರುವಂತಹ ಅಭಿಪ್ರಾಯ ಪಡೆದಿದೆ ಎಂದು ಗೊತ್ತಾಗಿದೆ. ಹೀಗಾಗಿ, ಅವರ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ದೊರೆಯುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.

ನಾಗರಿಕ ನಿವೇಶನ (ಸಿ.ಎ) ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಶ್ಯಾಮ್ ಭಟ್‌ ಅವರು ಕೈಗೊಂಡ ನಿರ್ಣಯದಿಂದ ಸರ್ಕಾರಕ್ಕೆ ೯೦ ಲಕ್ಷ ರು. ನಷ್ಟ ಆಗಿದೆ ಎಂಬ ಬಗ್ಗೆ ಬಿಡಿಎ ಆರ್ಥಿಕ ಸದಸ್ಯರು ಅಭಿಪ್ರಾಯ ನೀಡಿದ್ದರು. ಇದಕ್ಕೆ ತದ್ವಿರುದ್ಧವಾಗಿ, ಶ್ಯಾಮ್ ಭಟ್ ಅವರು ಕೈಗೊಂಡ ನಿರ್ಣಯದಿಂದ ಸರ್ಕಾರಕ್ಕೆ ನಷ್ಟ ಉಂಟಾಗಿಲ್ಲ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅಭಿಪ್ರಾಯ ನೀಡಿರುವುದು ತಿಳಿದುಬಂದಿದೆ. ಈ ಅಭಿಪ್ರಾಯ ಆಧರಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಡಿಪಿಎಆರ್‌ಗೆ ೨೦೧೮ರ ಫೆ.೨ರಂದು ಪತ್ರ ಬರೆದಿದ್ದಾರೆ. ಇದನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಅವರು ಅನುಮೋದಿಸಿರುವುದು ಪತ್ರದಿಂದ ಗೊತ್ತಾಗಿದೆ.

ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಬರೆದಿರುವ ಪತ್ರದ ಪ್ರತಿ

ನಗರಾಭಿವೃದ್ಧಿ ಇಲಾಖೆ ಉತ್ತರದಲ್ಲೇನಿದೆ?: “ಪ್ರಶ್ನಿತ ನಾಗರಿಕ ನಿವೇಶನಕ್ಕೆ ದಂಡ ವಿಧಿಸುವ ಮತ್ತು ದಂಡ ಮನ್ನಾ ಮಾಡಿರುವ ಎರಡೂ ಪ್ರಕ್ರಿಯೆಗಳು ಪ್ರಾಧಿಕಾರದ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ಕೈಗೊಂಡ ನಿರ್ಣಯಗಳಾಗಿವೆ. ಹೀಗಾಗಿ, ಸರ್ಕಾರದ ಸ್ವತ್ತನ್ನು ನಿಯಮಬಾಹಿರವಾಗಿ ಉಪಯೋಗಿಸಿಕೊಳ್ಳಲು ಸಹಕರಿಸಿ ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದಿಲ್ಲ,” ಎಂದು ೨೦೧೭ರ ಡಿ.೨೮ರಂದು ಬಿಡಿಎನ ಆಯುಕ್ತರು ಪತ್ರ ಬರೆದಿದ್ದಾರೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಡಿಪಿಎಆರ್‌ಗೆ ಮಾಹಿತಿ ಒದಗಿಸಿದ್ದಾರೆ.

ಎಸಿಬಿ ವಿಚಾರಣೆ ವರದಿಯಲ್ಲೇನಿತ್ತು?: “ಸಿಟಿಜನ್ಎಜುಕೇಷನ್ ಸೊಸೈಟಿ, ಮಂಜೂರಾಗಿದ್ದ ಜಾಗಕ್ಕಿಂತ 3,627.81 ಚದರ ಅಡಿ ಅತಿಕ್ರಮಿಸಿತ್ತು. ಗುತ್ತಿಗೆ ಶುಲ್ಕ ಮತ್ತು ದಂಡದ ರೂಪದಲ್ಲಿ 99,13,095 ರುಪಾಯಿ ಬಿಡಿಎ ಕಟ್ಟಿಸಿಕೊಳ್ಳಲಿಲ್ಲ. ಹಾಗೆಯೇ, ವಾಣಿ ಎಜುಕೇಷನ್ ಸೊಸೈಟಿ ಗುತ್ತಿಗೆ ಅವಧಿಯನ್ನು ಆಯುಕ್ತರಾಗಿದ್ದ ಶ್ಯಾಮ್ ಭಟ್ ಅವರು ನವೀಕರಿಸಿರಲಿಲ್ಲ. ಈ ಸಂಸ್ಥೆಯಿಂದ 1,55,30,350 ರುಪಾಯಿ ದಂಡವನ್ನು ವಸೂಲಿ ಮಾಡದೆ ಅನಧಿಕೃತವಾಗಿ ಸ್ವತ್ತನ್ನು ಅವರ ವಶದಲ್ಲಿರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ,” ಎಂಬ ಅಂಶವನ್ನು ಎಸಿಬಿ ಎಸ್ಪಿ ಲಾಬೂರಾಮ್ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಹಾಗೆಯೇ, “ಭ್ರಷ್ಟಾಚಾರ ತಡೆ ಕಾಯ್ದೆ 1988 ಕಲಂ 13(1)(ಸಿ), 13(2) ಅಡಿಯಲ್ಲಿ ಶ್ಯಾಮ್‌ ಭಟ್‌ ‌ ಮತ್ತಿತರರು ಅಪರಾಧ ಎಸಗಿರುವುದು ಪ್ರಾಥಮಿಕ ವಿಚಾರಣೆ ಕಾಲದಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ,” ಎಂದು ದಾಖಲಿಸಿದ್ದರು.

ಇದನ್ನಾಧರಿಸಿ “ಟಿ ಶ್ಯಾಮ್ ಭಟ್, ಎಸ್ಟೇಟ್ ಅಧಿಕಾರಿ ಶೈಲಜಾ, ಉಪಕಾರ್ಯದರ್ಶಿ ಎನ್ ಸಿ ಉಷಾರಾಣಿ, ರಾಜೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಪೂರ್ವಾನುಮತಿ ಬೇಕು. ಬಿಡಿಎ, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಪೂರ್ವಾನುಮೋದನೆ ಅವಶ್ಯ,” ಎಂದು ಕೋರಿ ಎಸಿಬಿ ಎಡಿಜಿಪಿ ಗಗನ್ ದೀಪ್ ಅವರು ಸರ್ಕಾರಕ್ಕೆ ಕಡತ ಕಳಿಸಿದ್ದರು. ಎಸಿಬಿಯ ಈ ಪತ್ರ ಅಧರಿಸಿ ಡಿಪಿಎಆರ್‌ ಅಧೀನ ಕಾರ್ಯದರ್ಶಿ ಅವರು ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಗೆ ಡಿಪಿಎಆರ್‌ನ ಅಧೀನ ಕಾರ್ಯದರ್ಶಿ ಡಿ ಸಿ ಮನೋರಮ ಅವರು ೨೦೧೭ರ ಡಿ.೧ರಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

ಇದನ್ನೂ ಓದಿ : ೨೦೦ ನಿವೇಶನ ಒತ್ತೆ ಇಟ್ಟು, ೨೦೦ ಕೋಟಿ ರೂ. ಸಾಲಕ್ಕೆ ಬಿಡಿಎ ಪ್ರಸ್ತಾವನೆ

ಪತ್ರದಲ್ಲೇನಿದೆ?: “ವಾಣಿ ಎಜುಕೇಷನ್‌ ಸೆಂಟರ್‌ ಅವರಿಗೆ ಸೇರಿದ ಜಾಗವನ್ನು ಸಿಟಿಜನ್ ಸಂಸ್ಥೆ ೨೫೬೧.೩೧ ಚದರ ಅಡಿ ಒತ್ತುವರಿ ಮಾಡಿಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ೬೪,೦೩,೨೭೫.೦೦ ರು. ಮತ್ತು ಬಿಡಿಎಗೆ ಸಂಬಂಧಿಸಿದ ೧೦೬೬.೪೯ ಚ.ಅಡಿಯನ್ನು ಒತ್ತುವರಿ ಮಾಡಿದ್ದ ಅದೇ ಸಿಟಿಜನ್‌ ಸಂಸ್ಥೆಗೆ ೨೬,೬೬,೨೫೫.೦೦ ರೂ.ಸೇರಿದಂತೆ ಒಟ್ಟು ೯೦,೬೯,೫೦೦ ರೂ.ದಂಡ ವಿಧಿಸಲಾಗಿತ್ತು. ಆ ನಂತರ ಈ ಎರಡೂ ಶಿಕ್ಷಣ ಸಂಸ್ಥೆಗೆಳು ಪರಸ್ಪರ ರಾಜಿ ಆಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ದಂಡವನ್ನು ಮನ್ನಾ ಮಾಡಲು ತೀರ್ಮಾನಿಸುವ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ಅಕ್ರಮ ಲಾಭ ಮಾಡಿಕೊಡಲು ಅವಕಾಶ ನೀಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ದಂಡ ಮನ್ನಾ ಮಾಡುವ ಸಂಬಂಧ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಕಾನೂನು ತಜ್ಞರ ಅಭಿಪ್ರಾಯದ ಮೇರೆಗೆ ಕೈ ಬಿಡಲಾಗಿದೆ,” ಎಂಬ ಅಂಶ ಪತ್ರದಿಂದ ಗೊತ್ತಾಗಿದೆ.

ಇದಕ್ಕೆ ಸಂಬಂಧಿಸಿದ ಕಡತವನ್ನು ೨೦೧೩ರ ಆಗಸ್ಟ್‌ ೨೪ರಂದು ಆಯುಕ್ತರಾಗಿದ್ದ ಶ್ಯಾಮ್‌ ಭಟ್‌ ಅವರ ಉಪಸ್ಥಿತಿಯಲ್ಲಿ ನಡೆದಿದ್ದ ಪ್ರಾಧಿಕಾರದ ಸಭೆ ತರಿಸಲಾಗಿತ್ತು. ಕಡತದಲ್ಲಿ ಕಾನೂನು ತಜ್ಞರ ಅಭಿಪ್ರಾಯವನ್ನು ೨೦೧೩ರ ಆಗಸ್ಟ್‌ ೨೭ರಂದು ಪಡೆದಿರುವುದು ಕಂಡು ಬಂದಿದೆ. ಮೊದಲೇ ನಿರ್ಧಾರ ಕೈಗೊಂಡು ನಂತರದಲ್ಲಿ ಕಾನೂನು ತಜ್ಞರಿಂದ ಅನುಮೋದಿಸಿಕೊಂಡಿದ್ದಾರೆ. ಅಲ್ಲದೆ, “ಈ ರೀತಿ ದಂಡ ಕೈಬಿಡಲು ಬಿಡಿಎ ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯುವುದು ಸೂಕ್ತ ಎಂದು ಬಿಡಿಎ ಆರ್ಥಿಕ ಸದಸ್ಯರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ,” ಎಂಬ ಅಂಶದ ಬಗ್ಗೆ ಸ್ಪಷ್ಟನೆ ಕೇಳಿರುವುದು ತಿಳಿದುಬಂದಿದೆ.

ಹಾಗೆಯೇ, “ಮಂಜೂರಾಗಿದ್ದ ೫೨,೫೬೦ ಚ.ಅಡಿ ಮತ್ತು ೩೨೭.೮ ಚ.ಅಡಿ ಹೆಚ್ಚಿನ ವಿಸ್ತೀರ್ಣಕ್ಕೆ ಗುತ್ತಿಗೆ ಕರಾರು ಪತ್ರವನ್ನು ನವೀಕರಿಸಿಕೊಳ್ಳಲು ಅನುಮತಿ ನೀಡುವ ಮೂಲಕ ಸರ್ಕಾರಕ್ಕೆ ೯೦,೬೯,೫೦೦ ರೂ.ನಷ್ಟ ಉಂಟಾಗಿತ್ತು,” ಎಂಬ ಅಭಿಪ್ರಾಯ ಕುರಿತೂ ವರದಿ ಕೇಳಿರುವುದು ಗೊತ್ತಾಗಿದೆ. ಬೆಂಗಳೂರಿನ ಸಿಟಿಜನ್
ಎಜುಕೇಷನ್ ಸೊಸೈಟಿ ಮತ್ತು ವಾಣಿ ಎಜುಕೇಷನ್ ಸೊಸೈಟಿಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕುರಿತು ಶ್ಯಾಂ ಭಟ್ ಸೇರಿ ಒಟ್ಟು ಮೂವರ ವಿರುದ್ಧ ಎಸಿಬಿಗೆ ಅಶೋಕ್ ಕುಮಾರ್
ಅಡಿಗ ಎನ್ನುವರು ದೂರು ದಾಖಲಿಸಿದ್ದರು.

ಸಿಎಂ ಸಿದ್ದರಾಮಯ್ಯ CMSiddaramaiah Anti Corruption Bureau ಭ್ರಷ್ಟಾಚಾರ ನಿಗ್ರಹ ದಳ Urban Development Department ನಗರಾಭಿವೃದ್ಧಿ ಇಲಾಖೆ ಬಿಡಿಎ BDA Shyam Bhat ಶ್ಯಾಮ್ ಭಟ್
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು