ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಮತದಾರರ ಖಾಸಗಿತನ ರಕ್ಷಿಸಲು ಕರ್ನಾಟಕದ ಪ್ರಸ್ತಾವನೆಯೇ ಮಾದರಿ

ಆನ್‌ಲೈನ್‌ನಲ್ಲಿ ವೈಯಕ್ತಿಕ ವಿವರಗಳ ಗೌಪ್ಯತೆ ಮತ್ತು ಸುರಕ್ಷತೆ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿದ್ದು ಕೇಂಬ್ರಿಡ್ಜ್‌ ಅನಾಲಿಟಿಕಾ ಪ್ರಕರಣ. ಈಗ ಎಲ್ಲ ಸಂಸ್ಥೆಗಳೂ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದು, ಕೇಂದ್ರ ಚುನಾವಣಾ ಆಯೋಗವೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ

ಮಹಾಂತೇಶ್ ಜಿ

ಮತದಾರರ ವೈಯಕ್ತಿಕ ಮಾಹಿತಿ, ವಿವರ, ದತ್ತಾಂಶಗಳು ಮತ್ತು ಗೌಪ್ಯ ವಿಚಾರಗಳನ್ನು ಮಾಹಿತಿ ತಂತ್ರಜ್ಞಾನದ ನೆರವಿನಿಂದ ತಮ್ಮದಾಗಿಸಿಕೊಂಡು ವಾಣಿಜ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಖಾಸಗಿ ಸೇವಾ ಸಂಸ್ಥೆಗಳಿಗೆ ಕೇಂದ್ರ ಚುನಾವಣಾ ಆಯೋಗ ಲಗಾಮು ಹಾಕಿದೆ.

ಮತದಾರರ ವೈಯಕ್ತಿಕ ವಿವರಗಳನ್ನು ಹೊರತೆಗೆಯಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ವಿಧಿಸಿದ್ದ ನಿರ್ಬಂಧವನ್ನು ತೆಗೆಯಬೇಕು ಎಂದು ಬೆಂಗಳೂರು ಮೂಲದ ‘ಬಿ ಪ್ಯಾಕ್‌’ ಮತ್ತು ಸಂಸದ ರಾಜೀವ್‌ ಚಂದ್ರಶೇಖರ್‌ ಬೆಂಬಲಿತ ಯುನೈಟೆಡ್‌ ಬೆಂಗಳೂರು ಸೇರಿದಂತೆ ಇನ್ನಿತರ ನಾಗರಿಕ ಸೇವಾ ಸಂಸ್ಥೆಗಳ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ತಳ್ಳಿಹಾಕಿದೆ.

ಈ ಸಂಬಂಧ ಇದೇ ಮೊದಲ ಬಾರಿಗೆ ನಿರ್ದಿಷ್ಟ ಕೋಡ್ (CAPTCHA) ಅಳವಡಿಸುವ ಮೂಲಕ ಮತದಾರರ ಖಾಸಗಿತನವನ್ನು ರಕ್ಷಿಸಲು ಚುನಾವಣಾ ಆಯೋಗ ಬಿಗಿ ಕ್ರಮ ಕೈಗೊಂಡಿದೆ. ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಈ ಬಿಗಿ ಕ್ರಮಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಯೇ ಮಾದರಿ ಆಗಿರುವುದು ವಿಶೇಷ. ಇದರಿಂದ ಮತದಾರರ ವೈಯಕ್ತಿಕ ವಿವರ, ಮಾಹಿತಿಯನ್ನು ಯಾವ ವ್ಯವಸ್ಥೆ ಮೂಲಕವೂ ಹೊರತೆಗೆಯಲು ಸಾಧ್ಯವಿಲ್ಲ.

ಇದನ್ನೂ ಓದಿ : ರಾಜ್ಯದ ಮತದಾರರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಲು ಇನ್ನು ಸಾಧ್ಯವಿಲ್ಲ

ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಒಪ್ಪಿಕೊಂಡಿರುವ ಕೇಂದ್ರ ಚುನಾವಣಾ ಆಯೋಗ, ದೇಶದ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ನಿರ್ದಿಷ್ಟ ಕೋಡ್‌ ಅನ್ನು (CAPTCHA) ವೆಬ್‌ಸೈಟ್‌ನಲ್ಲಿ ಕಟ್ಟುನಿಟ್ಟಾಗಿ ಅಳವಡಿಸಿ, ಅದನ್ನು ಪಾಲಿಸಬೇಕೆಂದು ೨೦೧೮ರ ಜ.೪ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ನೋಂದಾಯಿತ ಮತದಾರರ ವೈಯಕ್ತಿಕ ವಿವರ, ಮಾಹಿತಿ, ದತ್ತಾಂಶಗಳನ್ನು ರಾಜ್ಯ ಚುನಾವಣಾ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿತ್ತು. ಅಲ್ಲದೆ, ಈ ಎಲ್ಲವೂ ಪಿಡಿಎಫ್ ಇಮೇಜ್ ಸ್ವರೂಪದಲ್ಲಿದ್ದವು. ಇದನ್ನು ಯಾರು ಬೇಕಾದರೂ ಡೌನ್‌ಲೋಡ್‌ ಮಾಡಿಕೊಂಡು ಹೊರತೆಗೆಯಬಹುದಾಗಿತ್ತು. ಹಾಗೆಯೇ ಕೆಲ ಖಾಸಗಿ ಸೇವಾಸಂಸ್ಥೆಗಳು ವಾಣಿಜ್ಯ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುತ್ತಿವೆ ಎಂಬ ದೂರುಗಳು ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದವು.

ಮತದಾರರ ಮಾಹಿತಿಗಳನ್ನು ನಾಗರಿಕ ಸೇವಾಸಂಸ್ಥೆಗಳು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕೃತ ವೆಬ್‌ಸೈಟ್‌ನಿಂದಲೇ ಹೊರತೆಗೆದು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದವು. ಇದರಿಂದ ಖಾಸಗಿತನ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂಬ ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದವು. ಈ ಬಗ್ಗೆ ‘ದಿ ಸ್ಟೇಟ್‌’ ೨೦೧೭ರ ನ.೨೮ರಂದು ವರದಿ ಪ್ರಕಟಿಸಿತ್ತು.

ಈ ದೂರು ಆಧರಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರು, ಸುಧಾರಿತ ತಂತ್ರಜ್ಞಾನ ಅಳವಡಿಸುವ ಮೂಲಕ ಮತದಾರರ ವೈಯಕ್ತಿಕ ವಿವರ, ಮಾಹಿತಿ, ದತ್ತಾಂಶಗಳನ್ನು ಹೇಗೆ ರಕ್ಷಿಸಬಹುದು ಎಂಬ ಬಗ್ಗೆ ಪ್ರಸ್ತಾವನೆಯನ್ನು ಕಳೆದ ನವೆಂಬರ್‌ನಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

“ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಪಿಡಿಎಫ್‌ಗೆ ಪರಿವರ್ತಿಸಿದ ನಂತರ ಅಕ್ಷರ, ಸಂಖ್ಯೆ ಮತ್ತು ವಿಶೇಷ ಅಕ್ಷರಗಳನ್ನು ಒಳಗೊಂಡಿರುವ CAPTCHA ಕೋಡ್‌ ಅನ್ನು ಕಡ್ಡಾಯವಾಗಿ ತಕ್ಷಣವೇ ಅಳವಡಿಸಬೇಕು. ಈ ರೂಪದಲ್ಲಿಯೇ ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಇದನ್ನು ಹೊರತುಪಡಿಸಿ, ಬೇರೆ ಯಾವ ಮಾದರಿಯಲ್ಲೂ ಮತದಾರರ ವಿವರಗಳು ಸಾರ್ವಜನಿಕವಾಗಿ ಲಭ್ಯವಾಗದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು,” ಎಂದು ಕೇಂದ್ರ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಅಮಿತ್‌ ಕುಮಾರ್‌ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

“ಮತದಾರರ ವಿವರಗಳನ್ನು ಸುಲಭವಾಗಿ ಪಡೆಯಲು ಅನುಮತಿ ನೀಡಬೇಕು. ಆ ಎಲ್ಲ ವಿವರಗಳೂ ಪಠ್ಯರೂಪದಲ್ಲಿ ಲಭ್ಯವಾಗಿಸಬೇಕು. ಕ್ಯಾಪ್ಚಾ ಕೋಡ್‌ ಅನ್ನು ತೆಗೆದು ಹಾಕಬೇಕಲ್ಲದೆ, ಪಿಡಿಎಫ್‌ ರೂಪದಲ್ಲಿಯೇ ಪ್ರಕಟಿಸಲು ಅನುಕೂಲವಾಗುವಂತೆ ರೋಲ್ ಮ್ಯಾನುಯಲ್‌ ನಿಯಮವನ್ನು ರೂಪಿಸಬೇಕು,” ಎಂದು ನಾಗರಿಕ ಸೇವಾಸಂಸ್ಥೆಗಳು ಮನವಿ ಮಾಡಿದ್ದವು.

ಮತದಾರರ ಮಾಹಿತಿ ಖಾಸಗಿತನ Privacy Chief Election Commissioner ಮುಖ್ಯ ಚುನಾವಣಾ ಅಧಿಕಾರಿ Chief Electoral Officer ಮುಖ್ಯ ಚುನಾವಣಾ ಆಯುಕ್ತ Voter ID ಕರ್ನಾಟಕ ಚುನಾವಣಾ ಆಯೋಗ Karnataka State Election Commission
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು