ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ

ಕರ್ನಾಟಕದ ೫೯ ಐಎಎಸ್‌, ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಯೇ ಇಲ್ಲ!

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ನಿಗದಿತ ಕಾಲಾವಧಿಯೊಳಗೆ ಆಸ್ತಿ ವಿವರ ಸಲ್ಲಿಸಬೇಕು ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸೂಚಿಸಿತ್ತು. ಆದರೆ, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸದೆ ಉದಾಸೀನ ಪ್ರದರ್ಶಿಸಿದ್ದಾರೆ

ಮಹಾಂತೇಶ್ ಜಿ

ಪ್ರತಿವರ್ಷ ಜನವರಿ ಅಂತ್ಯದೊಳಗೆ ಐಎಎಸ್‌ ಮತ್ತು ಐಪಿಎಸ್ ಅಧಿಕಾರಿಗಳು ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು. ಆದರೆ, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ ವಿ ಗಗನ್ ದೀಪ್, ಲೋಕಾಯುಕ್ತ ಪೊಲೀಸ್‌ ಹೆಚ್ಚುವರಿ ಮಹಾನಿರ್ದೇಶಕ ಸಂಜಯ್‌ ಸಹಾಯ್‌ ಸೇರಿದಂತೆ ದೇಶದ ಒಟ್ಟು ೫೭೭ ಐಎಎಸ್‌ ಮತ್ತು ೩೫೩ ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕ ಕೇಡರ್‌ನ ಒಟ್ಟು ೩೧ ಮಂದಿ ಐಎಎಸ್ ಮತ್ತು ೨೮ ಮಂದಿ ಐಪಿಎಸ್ ಅಧಿಕಾರಿಗಳು ಈ ಯಾದಿಯಲ್ಲಿದ್ದಾರೆ. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ (ಡಿಒಪಿಟಿ) ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ೨೦೧೮ರ ಜ.೧ರ ಅಂತ್ಯಕ್ಕೆ ಆಸ್ತಿ ವಿವರ ಸಲ್ಲಿಸಿರುವ ಮತ್ತು ಸಲ್ಲಿಸದೆ ಇರುವ ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ಎಸ್ ರತ್ನಪ್ರಭಾ ಅವರ ಹೆಸರೂ ಆಸ್ತಿ ವಿವರ ಸಲ್ಲಿಸದ ಅಧಿಕಾರಿಗಳ ಪಟ್ಟಿಯಲ್ಲಿತ್ತು. ಅವರು ಆಸ್ತಿ ವಿವರ ಸಲ್ಲಿಸಿದ್ದರೂ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಆಗಿರಲಿಲ್ಲ. ಈ ಬಗ್ಗೆ ‘ದಿ ಸ್ಟೇಟ್‌’ ಅವರ ಪ್ರತಿಕ್ರಿಯೆ ಬಯಸಿದಾಗ, ತಕ್ಷಣ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರಕ್ಕೆ ಪುನಃ ಪತ್ರ ಬರೆದು ಗಮನ ಸೆಳೆದಿದ್ದರು. ಆ ನಂತರ ಆಸ್ತಿ ವಿವರ ಸಲ್ಲಿಸಿರುವ ಅಧಿಕಾರಿಗಳ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಗೊಂಡಿತ್ತು.

ಇದನ್ನೂ ಓದಿ : ಕೆಎಎಸ್‌ ಅಧಿಕಾರಿ ಬಸವರಾಜೇಂದ್ರ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿಯಿಂದ ತನಿಖೆ?

೨೦೧೮ರ ಜನವರಿಯೊಳಗೆ ಆಸ್ತಿ ವಿವರ ಸಲ್ಲಿಸಬೇಕು ಎಂದು ಐಎಎಸ್‌ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ನಿಗದಿತ ಕಾಲಾವಧಿಯಲ್ಲಿ ಆಸ್ತಿ ವಿವರ ಸಲ್ಲಿಸದೆ ಇದ್ದಲ್ಲಿ ಬಡ್ತಿ ಹಾಗೂ ವಿದೇಶಾಂಗ ನೇಮಕಾತಿಗಳಿಗೆ ಅಗತ್ಯ ಇರುವ ವಿಚಕ್ಷಣಾ ಕ್ಲಿಯರೆನ್ಸ್‌ ನಿರಾಕರಿಸಲಾಗುವುದು ಎಂದೂ ೨೦೧೧ರ ನಿರ್ದೇಶನಗಳನ್ನು ಉಲ್ಲೇಖಿಸಿ ಎಚ್ಚರಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರಗಳ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು.

ಐಎಎಸ್‌ ಅಧಿಕಾರಿಗಳು ತಮ್ಮ ಸ್ಥಿರಾಸ್ತಿ ವಿವರಗಳನ್ನು ಪ್ರತಿವರ್ಷ ಸರ್ಕಾರಕ್ಕೆ ಜನವರಿ ಅಂತ್ಯದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು. ಆದರೆ, ಈ ಗಡುವು ಮುಗಿದು ಹಲವು ತಿಂಗಳಾದರೂ ಆಸ್ತಿ ವಿವರ ಸಲ್ಲಿಸದಿರುವುದು ಅಧಿಕಾರಿಗಳ ಉದಾಸೀನವನ್ನು ಎತ್ತಿತೋರಿಸಿದೆ.

ಆಸ್ತಿ ವಿವರ ಸಲ್ಲಿಸದ ಐಎಎಸ್ ಮತ್ತು ಐಪಿಸ್ ಅಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ೮೮ ಐಎಎಸ್ ಮತ್ತು ೫೪ ಐಪಿಎಸ್ ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಆಸ್ತಿ ವಿವರ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ತಮಿಳುನಾಡು ಅಧಿಕಾರಿಗಳು (೪೭), ಮಣಿಪುರ-ತ್ರಿಪುರದ ಅಧಿಕಾರಿಗಳು (೪೬) ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಬಿಹಾರದಲ್ಲಿ ೪೪, ಜಮ್ಮು ಕಾಶ್ಮೀರದಲ್ಲಿ ೪೧, ಆಂಧ್ರದಲ್ಲಿ ೪೧, ಅಸ್ಸಾಂ-ಮೇಘಾಲಯ ೪೨, ಹರ್ಯಾಣ ೨೫, ಗುಜರಾತ್ ೧, ಹಿಮಾಚಲ ಪ್ರದೇಶ ೧೮, ಚತ್ತೀಸ್‌ಗಢದಲ್ಲಿ ೧೧, ಜಾರ್ಖಂಡ್‌ನಲ್ಲಿ ೨೨, ಕೇರಳದಲ್ಲಿ ೧೦, ಮಧ್ಯ ಪ್ರದೇಶದಲ್ಲಿ ೯, ಮಹಾರಾಷ್ಟ್ರದಲ್ಲಿ ೨, ನಾಗಾಲ್ಯಾಂಡ್‌ನಲ್ಲಿ ೧೫, ಒಡಿಶಾದಲ್ಲಿ ೨೫, ಪಂಜಾಬಿನಲ್ಲಿ ೧೦, ರಾಜಸ್ಥಾನ್‌ನಲ್ಲಿ ೨೪, ಸಿಕ್ಕಿಂನಲ್ಲಿ ೨, ತೆಲಂಗಾಣದಲ್ಲಿ ೧೨, ಉತ್ತರಾಖಂಡದಲ್ಲಿ ೧೩ ಮತ್ತು ಪಶ್ಚಿಮ ಬಂಗಾಳದಲ್ಲಿ ೨೯ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸದವರ ಪಟ್ಟಿಯಲ್ಲಿದ್ದಾರೆ.

ಆಸ್ತಿ ವಿವರ ಸಲ್ಲಿಸದ ರಾಜ್ಯದ ಐಎಎಸ್ ಅಧಿಕಾರಿಗಳು

 • ಕೆ ಎಸ್‌ ಮಂಜುನಾಥ್‌
 • ಎಸ್‌ ಪಿ ಷಡಕ್ಷರಸ್ವಾಮಿ
 • ಟಿ ಎಂ ವಿಜಯಭಾಸ್ಕರ್‌
 • ಪ್ರದೀಪ್‌ ಸಿಂಗ್ ಖರೋಲಾ
 • ಶಿವಶೈಲಂ
 • ಗಂಗಾರಾಂ ಬಡೇರಿಯಾ
 • ಉಮಾ ಮಹದೇವನ್‌
 • ಸಾವಿತ್ರಿ ಎಂ ವಿ
 • ಎಂ ಕೆ ಅಯ್ಯಪ್ಪ
 • ಶಮ್ಲಾ ಇಕ್ಬಾಲ್‌
 • ಶಂಕರ್‌ ವಿ
 • ಯಶವಂತ್‌
 • ಗುಂಜನ್‌ ಕೃಷ್ಣ
 • ಕೆ ಹೇಮಾಜಿ ನಾಯಕ್‌
 • ಶಿವಯೋಗಿ ಸಿ ಕಳಸದ್‌
 • ಬಿ ಎಸ್‌ ಶೇಖರಪ್ಪ
 • ಉಮೇಶ್‌ ಕುಸುಗಲ್‌
 • ನಗತ್‌ ತಬಸ್ಸಮ್ ಅಮ್ರಾ
 • ಸುಷ್ಮಾ ಗೋಡಬೋಲೆ
 • ಶೈಲಜಾ ಸಿ ಪಿ
 • ಅನಿರುದ್ ಸರವಣನ್‌
 • ಪೊಮ್ಮಲಾ ಸುನೀಲ್‌ಕುಮಾರ್
 • ಅನ್ನೀಸ್‌ ಕಣ್ಮಣಿ ಜಾಯ್‌
 • ವಿಕಾಸ್‌ ಕಿಶೋರ್‌
 • ಚಂದ್ರಶೇಖರ್‌ ನಾಯಕ್‌
 • ಗುರುದತ್ತ ಹೆಗಡೆ
 • ಶಿಲ್ಪಾನಾಗ್‌
 • ಮೋಹನ್ ರೋಷನ್‌

ಆಸ್ತಿ ವಿವರ ಸಲ್ಲಿಸದ ರಾಜ್ಯದ ಐಪಿಎಸ್ ಅಧಿಕಾರಿಗಳು

 • ಎ ಎನ್ ಪ್ರಕಾಶ್‌ ಗೌಡ
 • ಡಿ ದೇವರಾಜು
 • ಜಿ ಸಂಗೀತ
 • ಎಚ್‌ ಡಿ ಆನಂದ್‌ಕುಮಾರ್‌
 • ಜಿನೇಂದ್ರ ಕಣಗಾವಿ
 • ಜೆ ಕೆ ರಶ್ಮಿ
 • ಕಲಾ ಕೃಷ್ಣಸ್ವಾಮಿ
 • ಎಂ ಪುಟ್ಟಮಾದಯ್ಯ
 • ರೇಣುಕಾ ಕೆ ಸುಕುಮಾರ್‌
 • ಎಸ್ ಗಿರೀಶ್‌
 • ಟಿ ಪಿ ಶಿವಕುಮಾರ್‌
 • ಕೆ. ವಿ ಗಗನ್‌ ದೀಪ್‌
 • ಉಪೇಂದ್ರ ಎಸ್‌ ಬಗೇರ್
 • ಸಂಜಯ್‌ ಸಹಾಯ್‌
 • ಎಸ್ ಜೆ ಧರ್ಮಾಧಿಕಾರಿ
 • ಸುರೇಶ್‌ ಕುನ್ಹಿ ಮೊಹ್ಮದ್‌
 • ಪ್ರಣಬ್‌ ಮೊಹಂತಿ
 • ಬಿ ಎನ್ ಎಸ್ ರೆಡ್ಡಿ
 • ಎಂ ನಂಜುಂಡಸ್ವಾಮಿ
 • ಎಚ್ ಎಸ್ ವೆಂಕಟೇಶ್‌
 • ಟಿ ಜಿ ಕೃಷ್ಣಭಟ್ಟ
 • ಕೆ ವಿ ತ್ರಿಲೋಕ್‌ ಚಂದ್ರ
 • ಎಸ್‌ ಎನ್ ಸಿದ್ರಾಮಪ್ಪ
 • ರಾಜಾ ಪಿ
 • ಭೀಮಾಶಂಕರ್‌ ಗುಳೇದ್‌
 • ಮೋಹಿತ್‌ ಗರ್ಗ್‌

ಆಸ್ತಿ ವಿವರ ಸಲ್ಲಿಸದ ಅಧಿಕಾರಿಗಳಲ್ಲಿ ಬಹುತೇಕರು ಸರ್ಕಾರದ ವಿವಿಧ ಇಲಾಖೆಗಳ ಆಯಕಟ್ಟಿನ ಜಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥ ಅಧಿಕಾರಿಗಳೇ ನೀತಿ-ನಿಯಮಗಳನ್ನು ಗಾಳಿಗೆ ತೂರಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈ ಲೋಪ, ಸೇವಾ ವರದಿಯಲ್ಲಿ ದಾಖಲಿಸಲು ಮತ್ತು ವೇತನಬಡ್ತಿ (ಇನ್‌ಕ್ರಿಮೆಂಟ್‌) ಕಡಿತ, ವಾಗ್ದಂಡನೆಯಂಥ ಕ್ರಮಗಳಿಗೆ ನಿಯಮಗಳಲ್ಲಿ ಅವಕಾಶವಿದ್ದರೂ ಇಂತಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಗಳಿಕೆಯನ್ನು ಮುಚ್ಚಿಡುವ ಸಲುವಾಗಿಯೇ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸುತ್ತಿಲ್ಲ ಎಂಬ ಅನುಮಾನಗಳನ್ನು ಇಂತಹ ಅಂಶಗಳು ಬಲಗೊಳಿಸುತ್ತವೆ.

ಚಿತ್ರ: ಆಸ್ತಿ ವಿವರ ಸಲ್ಲಿಸದ ಪಟ್ಟಿಯಲ್ಲಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್

ಕರ್ನಾಟಕ ಸರ್ಕಾರ Karnataka Government ಉತ್ತರ ಪ್ರದೇಶ ಆಸ್ತಿ ಘೋಷಣೆ Assets Declaration UttarPradesh IAS Officers ಐಎಎಸ್ ಅಧಿಕಾರಿಗಳು ಐಪಿಎಸ್ ಅಧಿಕಾರಿಗಳು IPS Officers
ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು