ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಕರ್ನಾಟಕ ಕೇಡರ್ ಐಎಎಸ್‌ ಅಧಿಕಾರಿಗಳ ಸ್ಥಿರಾಸ್ತಿ ಪ್ರಮಾಣ ಏರಿಕೆಯೇ ಆಗಿಲ್ಲ!

ಶಾಸಕರು, ಸಂಸದರು ಹೊಂದಿರುವ ಸ್ಥಿರಾಸ್ತಿಯಲ್ಲಿ ಏರಿಕೆ ಆಗುತ್ತಿರುವುದನ್ನು ಗಮನಿಸಿರುತ್ತೀರಿ. ಐಎಎಸ್‌‌ ಆದರೆ, ಅಧಿಕಾರಿಗಳು ಹೊಂದಿರುವ ಸ್ಥಿರಾಸ್ತಿ ವಿಚಾರ ಮುನ್ನೆಲೆಗೆ ಬಂದಂತಿಲ್ಲ. ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿಗಳ ಬಳಿ ಎಷ್ಟೆಷ್ಟು ಸ್ಥಿರಾಸ್ತಿ ಇದೆ ಎಂಬುದನ್ನು ‘ದಿ ಸ್ಟೇಟ್‌’ ಬಹಿರಂಗಪಡಿಸುತ್ತಿದೆ

ಮಹಾಂತೇಶ್ ಜಿ

ಕರ್ನಾಟಕ ಕೇಡರ್‌ನ ಒಟ್ಟು ೨೧೦ ಐಎಎಸ್‌ ಅಧಿಕಾರಿಗಳ ಸ್ಥಿರಾಸ್ತಿ ಪ್ರಮಾಣ ಕಳೆದ ಹಲವು ವರ್ಷಗಳಿಂದಲೂ ಏರಿಕೆಯಾಗಿಲ್ಲ! ಬಹುತೇಕ ಅಧಿಕಾರಿಗಳು ಮೆಟ್ರೋಪಾಲಿಟಿನ್‌ ಹೌಸಿಂಗ್‌ ಕೋ ಆಪರೇಟೀವ್‌ ಸೊಸೈಟಿ ಮೂಲಕ ಹಂಚಿಕೆಯಾಗಿರುವ ನಿವೇಶನವನ್ನು ಹೊರತುಪಡಿಸಿದರೆ ಬೇರೆ ಯಾವ ಸ್ಥಿರಾಸ್ತಿಯೂ ತಮ್ಮ ಹೆಸರಿನಲ್ಲಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ!

ಹಲವು ಅಧಿಕಾರಿಗಳ ಬಳಿ ವೈಯಕ್ತಿಕ ಹಾಗೂ ಅವಲಂಬಿತ ಕುಟುಂಬ ಸದಸ್ಯರ ಹೆಸರಿನಲ್ಲಿ ಒಂದೇ ಒಂದು ಸ್ಥಿರಾಸ್ತಿಯೂ ಇಲ್ಲ. ಐಎಎಸ್ ಅಧಿಕಾರಿಗಳು ೨೦೧೮ ಜ.೩೧ರ ಅಂತ್ಯಕ್ಕೆ ಸ್ಥಿರಾಸ್ತಿ ಹೊಂದಿರುವ ಬಗ್ಗೆ ಕೇಂದ್ರ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಗೆ ಮಾಹಿತಿ ಒದಗಿಸಿದ್ದಾರೆ. ಈ ಮಾಹಿತಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್‌ ಮಾಡಿದೆ.

ಅಖಿಲ ಭಾರತ ಸೇವೆಯ ಅಧಿಕಾರಿಗಳು ಸ್ಥಿರಾಸ್ತಿ ವಿವರಗಳನ್ನು ಪ್ರತಿವರ್ಷ ಕೇಂದ್ರಕ್ಕೆ ಸಲ್ಲಿಸಬೇಕು. ಸಿಬ್ಬಂದಿ ತರಬೇತಿ ಇಲಾಖೆ ಗೊತ್ತುಪಡಿಸಿರುವ ನಮೂನೆಯಲ್ಲಿ ಅಧಿಕಾರಿಗಳು ಸ್ಥಿರಾಸ್ತಿ ವಿವರವನ್ನು ಸಲ್ಲಿಸುತ್ತಿದ್ದಾರೆ. ಸ್ಥಿರಾಸ್ತಿ ಬಗೆಗಿನ ವಿವರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಈ ಆಸ್ತಿ ವಿವರಗಳ ನೈಜತೆಯನ್ನು ಕೇಂದ್ರ ಸರ್ಕಾರ ಪರಿಶೀಲನೆಗೆ ಒಳಪಡಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌, ಅಜಯ್‌ ಸೇಠ್‌ ಅನಿಲ್ ‌ಕುಮಾರ್‌ ಝಾ, ಎಂ ವಿ ಜಯಂತಿ, ಪಿ ಮಣಿವಣ್ಣನ್‌, ಅರವಿಂದ ಶ್ರೀವಾಸ್ತವ, ಟಿ ಕೆ ಅನಿಲ್‌ಕುಮಾರ್‌, ಮಹೇಶ್ವರ ರಾವ್‌, ರಶ್ಮಿ ವಿ ಮಹೇಶ್, ಏಕ್‌ರೂಪ್‌ ಕೌರ್, ಸುಬೋಧ್‌ ಯಾದವ್‌, ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಸೇರಿದಂತೆ ಒಟ್ಟು ೩೦ ಹಿರಿಯ ಐಎಎಸ್ ಅಧಿಕಾರಿಗಳ ಬಳಿ ಕೇವಲ ಒಂದೇ ಒಂದು ನಿವೇಶನವಿದೆ. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸ್ಥಿರಾಸ್ತಿಯನ್ನೂ ತಮ್ಮ ಹೆಸರಿನಲ್ಲಿ ಹೊಂದಿಲ್ಲ ಎಂಬುದು ಅವರುಗಳು ಸಲ್ಲಿಸಿರುವ ಪ್ರಮಾಣಪತ್ರದಿಂದ ಗೊತ್ತಾಗಿದೆ. ಹಾಗೆಯೇ, ಹಲವು ಅಧಿಕಾರಿಗಳು ಸ್ಥಿರಾಸ್ತಿ ಹೊಂದಿದ್ದರೂ ಅವೆಲ್ಲವೂ ಪಿತ್ರಾರ್ಜಿತ ಎಂದು ನಮೂದಿಸಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರು ಘೋಷಿಸಿರುವ ಸ್ಥಿರಾಸ್ತಿ ವಿವರದ ಪ್ರತಿ
ಇದನ್ನೂ ಓದಿ : ಕರ್ನಾಟಕದ ೫೯ ಐಎಎಸ್‌, ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಯೇ ಇಲ್ಲ!

ಹಾಗೆಯೇ, ಕೋಲಾರ ಜಿಲ್ಲಾಧಿಕಾರಿ ಜಿ ಸತ್ಯವತಿ, ಬೆಳಗಾವಿ ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ, ಮಂಡ್ಯ ಜಿಲ್ಲಾಧಿಕಾರಿ ಎನ್ ಮಂಜುಶ್ರೀ, ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಶಂಕರ್‌, ತುಮಕೂರು ಜಿಲ್ಲಾಧಿಕಾರಿ ಪ್ರೀತಿ ಗೆಹ್ಲೋಟ್‌, ಎಚ್‌ ಆರ್‌ ಮಹದೇವ್‌, ಶ್ರೀದೇವಿ, ಅಕ್ಷಯ್ ಶ್ರೀಧರ್, ಸೇರಿದಂತೆ ಒಟ್ಟು ೧೪ ಮಂದಿ ಅಧಿಕಾರಿಗಳು ಸ್ಥಿರಾಸ್ತಿಯನ್ನೇ ಹೊಂದಿಲ್ಲ ಎಂದು ಘೋಷಿಸಿದ್ದಾರೆ.

ಪ್ರಸಕ್ತ ದರ ಗೊತ್ತಿಲ್ಲದ ಅಧಿಕಾರಿಗಳು: ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಲ್ ಕೆ ಅತೀಕ್, ಪರಮೇಶ್‌ ಪಾಂಡೆ, ಶ್ರೀವತ್ಸ ಕೃಷ್ಣ, ರಜನೀಶ್‌ ಗೋಯಲ್‌, ಸಂಜೀವ್‌ ಕುಮಾರ್‌, ಸುಭಾಷ್‌ಚಂದ್ರ, ಅತುಲ್‌ ಕುಮಾರ್‌ ತಿವಾರಿ, ಕುಮಾರ್ ನಾಯಕ್, ಟಿ ಕೆ ಅನಿಲ್‌ ಕುಮಾರ್‌, ಗೌರವ್‌ ಗುಪ್ತಾ, ಸಂದೀಪ್‌ ದವೆ, ಯೋಗೇಂದ್ರ ತ್ರಿಪಾಠಿ, ತುಳಸಿ ಮದ್ದಿನೇನಿ, ಪಿ ಸಿ ಜಾಫರ್, ಸಲ್ಮಾ ಕೆ ಫಾಯಿಮ್ ಸೇರಿದಂತೆ ಒಟ್ಟು ೧೫ ಮಂದಿ ಅಧಿಕಾರಿಗಳು, ಸ್ಥಿರಾಸ್ತಿಯ ಪ್ರಸಕ್ತ ದರ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹೊಂದಿದ ಅಧಿಕಾರಿಗಳು: ಇನ್ನು ವಿವಾದಿತ ಆರ್ಕಾವತಿ ಬಡಾವಣೆಯಲ್ಲಿ ವಾರ್ತಾ ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್‌, ಅರವಿಂದ್ ಶ್ರೀವಾಸ್ತವ್, ಮಹೇಶ್ವರರಾವ್, ಆಮ್ಲಾನ್ ಆದಿತ್ಯ ಬಿಸ್ವಾಸ್, ನವೀನ್ ರಾಜ್ ಸಿಂಗ್, ಹರ್ಷಗುಪ್ತ, ಪಂಕಜಕುಮಾರ್ ಪಾಂಡೆ, ಏಕರೂಪ್ ಕೌರ್, ರಾಜೇಂದರ್ ಕುಮಾರ್‌ ಕಟಾರಿಯಾ,ಡಾ.ಎಂ.ಎನ್.ಅಜಯ್ ನಾಗಭೂಷಣ್‌ , ಡಾ.ರವಿಶಂಕರ್, ವಿ ಅನ್ಬುಕುಮಾರ್, ಡಾ.ಎನ್ ವಿ ಪ್ರಸಾದ್, ಮನೋಜ್ ಜೈನ್, ಡಿ ರಣದೀಪ್, ಕಲ್ಪನಾ ಸೇರಿ ಒಟ್ಟು ೩೨ ಐಎಎಸ್‌ ಅಧಿಕಾರಿಗಳು ನಿವೇಶನ ಹೊಂದಿದ್ದಾರೆ.

ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ತುಷಾರ್‌ ಗಿರಿನಾಥ್‌ ಅವರು ೨೦೧೭ರಲ್ಲಿ ಬೆಂಗಳೂರಿನ ಪ್ರೆಸ್ಟೀಜ್‌ ಸೌತ್‌ ಸಿಟಿ ಹೋಲ್ಡಿಂಗ್ಸ್‌ ನಿಂದ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ. ಇದರ ಮೊತ್ತ ೧ ಕೋಟಿ ೩ ಲಕ್ಷ ೭ ಸಾವಿರ ಎಂದು ನಮೂದಿಸಿದ್ದಾರೆ. ಆದರೆ, ಪ್ರಸಕ್ತ ದರ ಕೂಡ ೧ ಕೋಟಿ ೩ ಲಕ್ಷ ೭ ಸಾವಿರ ಎಂದು ನಮೂದಿಸಿದ್ದಾರೆ. ಅಷ್ಟೇ ಅಲ್ಲ, ೨೦೧೧ರಲ್ಲಿ ಜಕ್ಕೂರಿನಲ್ಲಿ ಅರ್ಕಾವತಿ ಬಡಾವಣೆಯಲ್ಲಿ ೨೮,೭೩,೨೪೪ ರು.ಗೆ ೫೦-೮೦ ಅಳತೆಯ ನಿವೇಶನ ಖರೀದಿಸಿದ್ದಾರೆ. ೨೦೧೮ರಲ್ಲೂ ಪ್ರಸಕ್ತ ದರವೂ 28,73,244 ರು. ಇದೆ ಎಂದು ನಮೂದಿಸಿದ್ದಾರೆ.

ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ೨೦೧೭ರಲ್ಲಿ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ. ಇದರ ಮೊತ್ತ ೧,೩೭ ಕೋಟಿ ರು. ಎಂದು ಮಾಹಿತಿ ಒದಗಿಸಿದ್ದಾರೆ. ಎಂ ಟಿ ರೇಜು, ಪೊನ್ನುರಾಜ್, ಸಮೀರ್‌ ಶುಕ್ಲಾ, ಕೆ ಜಿ ಜಗದೀಶ್‌, ವಿಪುಲ್‌ ಬನ್ಸಾಲ್‌, ಅನೂಪ್‌ ಕುಮಾರ್‌, ವಿಶಾಲ್‌, ಪಿ ಸಿ ಜಾಫರ್‌ ಅವರು ಜಂಟಿಯಾಗಿ ಯಲಹಂಕ ಹೋಬಳಿಯ ಸಂಪಿಗೆಹಳ್ಳಿಯಲ್ಲಿ ಒಟ್ಟು ೧೬,೯೨೮ ಚ.ಅಡಿ ವಿಸ್ತೀರ್ಣದ ಜಾಗ ಹೊಂದಿದ್ದಾರೆ. ಇದರಲ್ಲಿ ತಲಾ ೧/೮ರಷ್ಟು ಪಾಲಿದೆ ಎಂಬ ವಿವರ ಒದಗಿಸಿದ್ದಾರೆ.

ಅದೇ ರೀತಿ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಕಪಿಲ್‌ ಮೋಹನ್‌ ಅವರ ಬಳಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ನಿವೇಶನ, ೨೦೦೧, ೨೦೦೫ ಮತ್ತು ೨೦೧೦ರಲ್ಲಿ ಗ್ರೇಟರ್‌ ನೋಯ್ಡಾದಲ್ಲಿ ಕೃಷಿ ಭೂಮಿ, ನಿವೇಶನವಿದೆ ಎಂದು ತಿಳಿಸಿದ್ದಾರೆ. ಇನ್ನು, ಎಂಎಂಎಲ್‌ ಪ್ರಕರಣದಲ್ಲಿ ಸಿಲುಕಿರುವ ಮಹೇಂದ್ರ ಜೈನ್‌ ಅವರು ಫ್ಲಾಟ್‌ ಮತ್ತು ನಿವೇಶನ ಮಾತ್ರ ಹೊಂದಿರುವುದು ತಿಳಿದುಬಂದಿದೆ. ಹಾಗೆಯೇ, ಭೂದಾಖಲೆಗಳ ಇಲಾಖೆ ಆಯುಕ್ತ ಮನೀಶ್‌ ಮೌದ್ಗಿಲ್ ಅವರು ತಮ್ಮ ಪತ್ನಿ ಐಪಿಎಸ್‌ ಅಧಿಕಾರಿ ಡಿ ರೂಪ ಅವರು ಹೊಂದಿರುವ ಸ್ಥಿರಾಸ್ತಿ ವಿವರಗಳನ್ನು ನಮೂದಿಸದಿರುವುದು ಪ್ರಮಾಣಪತ್ರದಿಂದ ಗೊತ್ತಾಗಿದೆ.

ಚಿತ್ರ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್

ಕರ್ನಾಟಕ ಸರ್ಕಾರ Karnataka Government ಆಸ್ತಿ ಘೋಷಣೆ Assets Declaration ಐಎಎಸ್‌ ಅಧಿಕಾರಿ IAS Officers ಸ್ಥಿರಾಸ್ತಿ Immovable Assets Karnataka Cadre ಕರ್ನಾಟಕ ಕೇಡರ್
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು