ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಡಿಜಿ ಐಜಿಪಿ ನೀಲಮಣಿ ರಾಜು ಸೇರಿ ಹಲವು ಅಧಿಕಾರಿಗಳಿಗೆ ಸ್ಥಿರಾಸ್ತಿಯೇ ಇಲ್ಲ!

ಹಲವು ವರ್ಷಗಳಿಂದಲೂ ಪೊಲೀಸ್‌ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಬಹುತೇಕ ಐಪಿಎಸ್‌ ಅಧಿಕಾರಿಗಳ ಬಳಿ ಸ್ಥಿರಾಸ್ತಿಯೂ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಐಪಿಎಸ್‌ ಅಧಿಕಾರಿಗಳು ಸಲ್ಲಿಸಿರುವ ಸ್ಥಿರಾಸ್ತಿ ವಿವರಗಳು ಈ ವಿಚಾರವನ್ನು ತಿಳಿಸುತ್ತದೆ

ಮಹಾಂತೇಶ್ ಜಿ

ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್ ರಾಜು ಸೇರಿದಂತೆ ಹಲವು ಐಪಿಎಸ್‌ ಅಧಿಕಾರಿಗಳು ತಮ್ಮ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ! ಹಲವು ಐಪಿಎಸ್ ಅಧಿಕಾರಿಗಳಿಗೆ ತಾವು ಹೊಂದಿರುವ ಸ್ಥಿರಾಸ್ತಿಯ ಪ್ರಸಕ್ತ ಮೌಲ್ಯವೂ ಗೊತ್ತಿಲ್ಲ! ಕೆಲ ಅಧಿಕಾರಿಗಳು ಹೊಂದಿರುವ ನಿವೇಶನದ ಪ್ರಸಕ್ತ ಮೌಲ್ಯದಲ್ಲಿಯೂ ಏರಿಕೆಯಾಗಿಲ್ಲ.

ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಗಳು ಜನವರಿ ೩೧ರ ಅಂತ್ಯಕ್ಕೆ ಸಲ್ಲಿಸಿರುವ ಸ್ಥಿರಾಸ್ತಿ ಪ್ರಮಾಣ ಪತ್ರಗಳು ಹಲವು ಅಂಶಗಳನ್ನು ಹೊರಗೆಡವಿದೆ. ಅಖಿಲ ಭಾರತ ಸೇವೆಯ ಅಧಿಕಾರಿಗಳು ಸ್ಥಿರಾಸ್ತಿ ವಿವರಗಳನ್ನು ಪ್ರತಿ ವರ್ಷ ಕೇಂದ್ರಕ್ಕೆ ಸಲ್ಲಿಸಬೇಕು. ಸಿಬ್ಬಂದಿ ತರಬೇತಿ ಇಲಾಖೆ ಗೊತ್ತುಪಡಿಸಿರುವ ನಮೂನೆಯಲ್ಲಿ ಅಧಿಕಾರಿಗಳು ಸ್ಥಿರಾಸ್ತಿ ವಿವರವನ್ನು ಸಲ್ಲಿಸಿದ್ದಾರೆ. ಸ್ಥಿರಾಸ್ತಿ ಬಗೆಗಿನ ವಿವರಗಳನ್ನು ಇಲಾಖೆಯ ವೆಬ್‌ ಸೈಟ್‌ನಲ್ಲಿ ಅಳವಡಿಸಿದೆ.

ಕೇಂದ್ರ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ನಿರ್ದಿಷ್ಟಪಡಿಸಿರುವ ನಮೂನೆಯಲ್ಲಿ ಅಧಿಕಾರಿಗಳು ಸ್ಥಿರಾಸ್ತಿ ವಿವರಗಳನ್ನು ನಮೂದಿಸಬೇಕು. ಸ್ಥಿರಾಸ್ತಿ ವಿವರ, ಸ್ವಾಧೀನಪಡಿಸಿಕೊಂಡ ವರ್ಷ, ಪಿತ್ರಾರ್ಜಿತ, ಒತ್ತೆ ಇರಿಸಿರುವ, ಪ್ರಸಕ್ತ ಮೌಲ್ಯ, ಅದು ತಮ್ಮ ಹೆಸರಿನಲ್ಲಿ ಅಥವಾ ಅವಲಂಬಿತರ ಹೆಸರಿನಲ್ಲಿದ್ದರೆ ಅದರ ವಿವರಗಳನ್ನು ನಮೂದಿಸಬೇಕು. ಅಲ್ಲದೆ, ಸ್ಥಿರಾಸ್ತಿಯಿಂದ ಗಳಿಸುತ್ತಿರುವ ವಾರ್ಷಿಕ ಆದಾಯ ಮತ್ತು ಸ್ಥಿರಾಸ್ತಿ ಖರೀದಿ ಮೂಲವನ್ನು ಘೋಷಿಸಬೇಕು. ಆದರೆ ಬಹುತೇಕ ಅಧಿಕಾರಿಗಳು ನಮೂನೆಯನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡದಿರುವುದು ಪ್ರಮಾಣಪತ್ರಗಳಿಂದ ಗೊತ್ತಾಗಿದೆ.

ವಿಶೇಷವೆಂದರೆ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್ ರಾಜು ಅವರು ಯಾವುದೇ ಸ್ಥಿರಾಸ್ತಿಯನ್ನು ಹೊಂದಿಲ್ಲ ಎಂದು ಘೋಷಿಸಿದ್ದಾರೆ. ಅದೇ ರೀತಿ ವಾರ್ತಾ ಇಲಾಖೆ ಆಯುಕ್ತ ಡಾ ಪಿ ಎಸ್ ಹರ್ಷ, ಡಿಸಿಪಿ ಅಬ್ದುಲ್‌ ಅಹಾದ್‌, ಕಲಾ ಕೃ‍ಷ್ಣಸ್ವಾಮಿ, ಎಂ ಚಂದ್ರಶೇಖರ್‌,ಅನುಪಮ್ ಅಗರ್‌ವಾಲ್‌, ರವಿ ಡಿ ಚನ್ನಣ್ಣನವರ್‌, ಎಸ್‌ ಡಿ ಶರಣಪ್ಪ ಮತ್ತು ವರ್ತಿಕಾ ಕಟಿಯಾರ್‌ ಅವರು ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಘೋಷಿಸಿದ್ದಾರೆ.

ಡಿಜಿ ಐಜಿಪಿ ನೀಲಮಣಿ ರಾಜು ಅವರು ಸಲ್ಲಿಸಿರುವ ಸ್ಥಿರಾಸ್ತಿಯ ವಿವರದ ಪ್ರಮಾಣಪತ್ರದ ಪ್ರತಿ

ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರು ತಮ್ಮ ಪತ್ನಿ ಹೆಸರಿನಲ್ಲಿರುವ ಸ್ಥಿರಾಸ್ತಿ ವಿವರಗಳನ್ನು ನಮೂದಿಸಿಲ್ಲ. ಬೆಂಗಳೂರಿನ ಜಕ್ಕೂರು, ಮಹಾರಾಷ್ಟ್ರ, ಕೊಲ್ಹಾಪುರದಲ್ಲಿ ಹೊಂದಿರುವ ಸ್ಥಿರಾಸ್ತಿ ವಿವರವನ್ನು ನಮೂದಿಸಿದ್ದಾರೆ. ಆದರೆ ಅವರ ಪತ್ನಿ ಅಂಜಲಿ ನಿಂಬಾಳ್ಕರ್(ಖಾನಾಪುರ ಶಾಸಕಿ)‌ಅವರು ಹೊಂದಿರುವ ಸ್ಥಿರಾಸ್ತಿ ವಿವರವನ್ನು ನಮೂದಿಸಿಲ್ಲ. ಅಂಜಲಿ ನಿಂಬಾಳ್ಕರ್‌ ಅವರು ೨೦೦೫ ಮತ್ತು ೨೦೧೭ರಲ್ಲಿ ಖಾನಾಪುರದ ಸರ್ವೆ ನಂಬರ್ ೧೭೩/೩, ೪೩/೩, ೨೫೧, ೨೫೨ರಲ್ಲಿ ಒಟ್ಟು ೬.೩೮ ಎಕರೆ ಕೃ‍ಷಿ ಭೂಮಿ ಖರೀದಿಸಿದ್ದಾರೆ. ಅದೇ ರೀತಿ ೨೦೧೫ರ ಮಾರ್ಚ್‌ ೨೭ರ ಒಂದೇ ದಿನದಂದು ಖಾನಾಪುರದ ಸಚ್ಚಿದಾನಂದ ಕಾಲೋನಿಯಲ್ಲಿ ಒಟ್ಟು ೫,೩೩೦ ಚ.ಅಡಿ ವಿಸ್ತೀರ್ಣ ಜಾಗವನ್ನು ಖರೀದಿಸಿದ್ದಾರೆ. ಈ ಬಗ್ಗೆ ಅಂಜಲಿ ನಿಂಬಾಳ್ಕರ್‌ ಅವರು ೨೦೧೮ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.

ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರು ಸಲ್ಲಿಸಿರುವ ಸ್ಥಿರಾಸ್ತಿ ಪ್ರಮಾಣಪತ್ರದ ಪ್ರತಿ

ಪ್ರಸಕ್ತ ದರ ಗೊತ್ತಿಲ್ಲದ ಐಪಿಎಸ್‌ ಅಧಿಕಾರಿಗಳು;ಎ ಎಂ ಪ್ರಸಾದ್, ಚರಣ್‌ರೆಡ್ಡಿ, ಡಿ ರೂಪ, ಲಾಬೂರಾಮ್‌, ಡಾ. ಅಶ್ವಿನಿ ಎಂ, ಡಿ ಆರ್‌ ಸಿರಿಗೌರಿ, ಬಿ ದಯಾನಂದ, ದೇವ್‌ಜೀತ್‌ ರೇ ಅವರು ಹೊಂದಿರುವ ನಿವೇಶನ ಸೇರಿದಂತೆ ಸ್ಥಿರಾಸ್ತಿಯ ಪ್ರಸಕ್ತ ಮೌಲ್ಯ ಗೊತ್ತಿಲ್ಲ ಎಂದು ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ. ಈ ಪೈಕಿ ಚರಣ್‌ರೆಡ್ಡಿ ಅವರು ಆಂಧ್ರಪ್ರದೇಶದ ವಿವಿಧೆಡೆ ಹೊಂದಿರುವ ವಿವಿಧ ಸ್ಥಿರಾಸ್ತಿಯ ಪ್ರಸಕ್ತ ಮೌಲ್ಯವನ್ನು ನಮೂದಿಸಿದ್ದಾರಾದರೂ ಬೆಂಗಳೂರಿನ ಜಕ್ಕೂರಿನಲ್ಲಿ ೨೦೧೨ರಲ್ಲಿ ಖರೀದಿಸಿರುವ ನಿವೇಶನದ(೪,೩೮೧ ಚ.ಅಡಿ) ಪ್ರಸಕ್ತ ಮೌಲ್ಯ ಗೊತ್ತಿಲ್ಲ ಎಂದು ನಮೂದಿಸಿದ್ದಾರೆ. ಡಿ ರೂಪ ಅವರು ಜಕ್ಕೂರಿನಲ್ಲಿ ಹೊಂದಿರುವ ನಿವೇಶನದ ಪ್ರಸಕ್ತ ಮೌಲ್ಯ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಅದೇ ರೀತಿ ೮ ಮಂದಿ ಐಪಿಎಸ್‌ ಅಧಿಕಾರಿಗಳು ಮೆಟ್ರೋಪಾಲಿಟಿನ್‌ ಹೌಸಿಂಗ್‌ ಸೊಸೈಟಿ ಹಂಚಿಕೆ ಮಾಡಿರುವ ಒಂದೇ ಒಂದು ನಿವೇಶನವನ್ನು ಮಾತ್ರ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ. ಡಿಜಿಪಿ ಶ್ರೇಣಿಯ ಎಚ್‌ ಸಿ ಕಿಶೋರ್‌ಚಂದ್ರ, ಪಿ ಕೆ ಗಾರ್ಗ್, ಎಸ್‌ ಪರಶಿವಮೂರ್ತಿ ಅವರು ಒಂದೇ ಒಂದು ನಿವೇಶನ ಮಾತ್ರ ಇದೆ ಎಂದು ನಮೂದಿಸಿದ್ದಾರೆ. ಮಾಲಿನಿ ಕೃಷ್ಣಮೂರ್ತಿ ಅವರು ದೊಡ್ಡಜಾಲದಲ್ಲಿ ಅವರ ತಂದೆ ಕೃಷ್ಣಮೂರ್ತಿ ಅವರು ಉಡುಗೊರೆಯಾಗಿ ನೀಡಿರುವ ನಿವೇಶನ ಮತ್ತು ಜಕ್ಕೂರಿನಲ್ಲಿ ಎಂಸಿಎಚ್‌ಎಸ್‌ ಸೊಸೈಟಿಯಿಂದ ಖರೀದಿಸಿರುವ ನಿವೇಶನ ಹೊಂದಿರುವುದನ್ನು ನಮೂದಿಸಿದ್ದಾರೆ. ಅದೇ ರೀತಿ ಐಜಿಪಿ ಬಿಜಯ್‌ಕುಮಾರ್‌ಸಿಂಗ್‌ ಅವರು ಜಕ್ಕೂರಿನ ಅರ್ಕಾವತಿ ಬಡಾವಣೆಯಲ್ಲಿ ಒಂದು ನಿವೇಶನ ಹೊಂದಿರುವುದು ಅವರು ಸಲ್ಲಿಸಿರುವ ಪ್ರಮಾಣ ಪತ್ರದಿಂದ ತಿಳಿದು ಬಂದಿದೆ.

೧೯೯೬, ೨೦೦೨, ೨೦೦೬,೨೦೧೨ರಲ್ಲಿ ನಿವೇಶನ ಖರೀದಿಸಿರುವ ಕೆಲ ಐಪಿಎಸ್‌ ಅಧಿಕಾರಿಗಳು, ಪ್ರಸಕ್ತ ಮೌಲ್ಯದಲ್ಲಿ ಆಗಿರುವ ಏರಿಕೆಯನ್ನು ನಮೂದಿಸಿಲ್ಲ. ಡಾ. ಅಬ್ದುಲ್‌ ಸಲೀಂ ಅವರು ೧೯೯೬ರಲ್ಲಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ೬೨ ಲಕ್ಷ ರೂ.ಮೊತ್ತದಲ್ಲಿ ೭೦-೪೦ ಅಳತೆಯ ನಿವೇಶನ ಖರೀದಿಸಿದ್ದು, ೨೦೧೮ರಲ್ಲಿಯೂ ಇದೇ ದರವನ್ನು ನಮೂದಿಸಿದ್ದಾರೆ. ೨೦೧೧ರಲ್ಲಿ ಜಕ್ಕೂರಿನಲ್ಲಿ ೧೬ ಲಕ್ಷ ರೂ.ಮೊತ್ತದಲ್ಲಿ ನಿವೇಶನ ಖರೀದಿಸಿರುವ ಅಮೃತ್‌ ಪೌಲ್‌ ಅವರು ೨೦೧೮ರಲ್ಲಿ ಪ್ರಸಕ್ತ ಮೌಲ್ಯವೆಂದು ೧೭ ಲಕ್ಷ ರೂ.ಎಂದು ನಮೂದಿಸಿದ್ದಾರೆ. ಪ್ರಸಕ್ತ ಮೌಲ್ಯ ೭ ವರ್ಷದಲ್ಲಿ ಒಂದು ಲಕ್ಷ ರೂ.ಮಾತ್ರ ಹೆಚ್ಚಳವಾಗಿದೆ ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿದ್ದಾರೆ. ಹಾಗೆಯೇ ಕೊಡಿಗೆಹಳ್ಳಿಯಲ್ಲಿ ೨೦೧೨ರಲ್ಲಿ ೫೫ ಲಕ್ಷ ರೂ.ಮೊತ್ತದಲ್ಲಿ ಫ್ಲಾಟ್‌ ಖರೀದಿಸಿದ್ದು, ೨೦೧೮ರಲ್ಲಿಯೂ ಪ್ರಸಕ್ತ ಮೌಲ್ಯ ೫೫ ಲಕ್ಷ ರೂ.ಇದೆ ಎಂದು ನಮೂದಿಸಿದ್ದಾರೆ.

ಅದೇ ರೀತಿ ಕೆ ವಿ ಶರತ್‌ಚಂದ್ರ ಅವರು ೨೦೧೨ರಲ್ಲಿ ಜಕ್ಕೂರಿನಲ್ಲಿ ೧೭,೪೨,೯೬೮ ರೂ.ಮೊತ್ತದಲ್ಲಿ ನಿವೇಶನ ಖರೀದಿಸಿದ್ದರೆ, ೨೦೧೮ರಲ್ಲಿಯೂ ಪ್ರಸಕ್ತ ಮೌಲ್ಯವೂ ೧೭ ಲಕ್ಷ ಎಂದು ತಿಳಿಸಿದ್ದಾರೆ. ಎನ್‌ ಶಿವಪ್ರಸಾದ್‌ ಅವರು ಬನಶಂಕರಿಯಲ್ಲಿ ೨೦೦೨ರಲ್ಲಿ ಬಿಡಿಎ ನಿವೇಶನವನ್ನು ೫,೪೩,೮೦೦ ರೂ.ಮೊತ್ತಕ್ಕೆ ಖರೀದಿಸಿದ್ದಾರೆ. ೨೦೧೮ರಲ್ಲಿ ಪ್ರಸಕ್ತ ಮೌಲ್ಯ ೫,೪೩,೮೦೦ ಇದೆ ಎಂದು ನಮೂದಿಸಿದ್ದಾರೆ.

ಇನ್ನು, ಡಾ.ಬಿ ಎ ಮಹೇಶ್‌ ಅವರು ೨೦೦೧ರಲ್ಲಿ ಎಚ್‌ಬಿಆರ್‌ ಬಡಾವಣೆಯಲ್ಲಿ ೬೦-೪೦ ಅಳತೆಯ ನಿವೇಶನವನ್ನು ೩,೫೪,೦೦೦ ರೂ.ಮೊತ್ತದಲ್ಲಿ ನಿವೇಶನ ಖರೀದಿಸಿದ್ದರು. ೨೦೧೮ರಲ್ಲಿ ಪ್ರಸಕ್ತ ಮೌಲ್ಯವೂ ೩,೫೪,೦೦೦ ರೂ. ಎಂದು ಮಾಹಿತಿ ಒದಗಿಸಿದ್ದಾರೆ. ಹಾಗೆಯೇ ೨೦೦೩ರಲ್ಲಿ ಇಂದಿರಾನಗರದಲ್ಲಿ ೬೦-೪೦ ಅಳತೆಯ ನಿವೇಶನವನ್ನು ೪೦ ಲಕ್ಷ ರೂ.ಮೊತ್ತದಲ್ಲಿ ಖರೀದಿಸಿದ್ದರು. ೨೦೧೮ರಲ್ಲಿ ಪ್ರಸಕ್ತ ಮೌಲ್ಯದಲ್ಲಿಯೂ ೪೦ ಲಕ್ಷ ರೂ.ಎಂದು ನಮೂದಿಸಿದ್ದಾರೆ. ಅದೇ ರೀತಿ ವಿಕಾಸ್‌ಕುಮಾರ್‌ ವಿಕಾಸ್‌ ಅವರು ೨೦೧೨ರಲ್ಲಿ ಜಕ್ಕೂರಿನಲ್ಲಿ ೨೮.೬೨ ಲಕ್ಷ ರೂ.ಮೊತ್ತದಲ್ಲಿ ನಿವೇಶನ ಖರೀದಿಸಿದ್ದಾರೆ. ೨೦೧೮ರಲ್ಲಿ ಪ್ರಸಕ್ತ ಮೌಲ್ಯವೂ ೨೮.೬೨ ಲಕ್ಷ ರೂ.ಎಂದು ತಿಳಿಸಿದ್ದಾರೆ.

ಅರುಣ್‌ ಚಕ್ರವರ್ತಿ ಅವರು ೨೦೧೧ರಲ್ಲಿ ಜಕ್ಕೂರಿನಲ್ಲಿ ಖರೀದಿಸಿರುವ ೪,೩೧೧ ಚ ಅಡಿ ನಿವೇಶನದ ಬೆಲೆ ನಮೂದಿಸಿಲ್ಲ. ಆದರೆ ಪ್ರಸಕ್ತ ಮೌಲ್ಯ ಎಂದು ೧೫,೯೮,೮೭೮ ರೂ.ಎಂದು ನಮೂದಿಸಿದ್ದಾರೆ. ಜೆ ಪಿ ನಗರದಲ್ಲಿ ಮನೆ ಖರೀದಿಸಿರುವ ಇವರು, ಖರೀದಿ ವರ್ಷ ನಮೂದಿಸಿಲ್ಲ ಮತ್ತು ಪ್ರಸಕ್ತ ಮೌಲ್ಯ ಗೊತ್ತಿಲ್ಲ ಎಂದು ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ.

ಡಿಜಿಪಿ dgp ಕರ್ನಾಟಕ ಸರ್ಕಾರ Government of Karnataka Karnataka Cadre IPS Officer ಆಸ್ತಿ ಘೋಷಣೆ ಐಪಿಎಸ್ ಅಧಿಕಾರಿಗಳು IPS Officers ಸ್ಥಿರಾಸ್ತಿ Immovable Assets ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು