ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ರಾಜ್ಯದಲ್ಲಿನ ಕೃಷಿ ಸಾಲ ೫೩ ಸಾವಿರ ಕೋಟಿಯಲ್ಲ, ೧,೨೧,೦೦೦ ಕೋಟಿ ರುಪಾಯಿ!

ರೈತರ ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಈವರೆಗೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಇದರ ಬೆನ್ನಲ್ಲೇ ರಾಷ್ಟ್ರೀಕೃತ, ಗ್ರಾಮೀಣ, ಖಾಸಗಿ, ಸಹಕಾರ ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ಹೊರ ಬಾಕಿ ಇರುವ ಸಾಲ ಮೊತ್ತದ ವಿವರ ಮುನ್ನೆಲೆಗೆ ಬಂದಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ

ಮಹಾಂತೇಶ್ ಜಿ

ರೈತರ ಬೆಳೆ ಸಾಲ ಮನ್ನಾ ಮಾಡುವ ವಿಚಾರ ಸಮ್ಮಿಶ್ರ ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ. ಸಾಲ ಮನ್ನಾ ಹೇಗೆ ಮಾಡಬೇಕು, ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂಬುದರ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಮುಂದುವರಿದಿವೆ. ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದು ಸುತ್ತಿನ ಸಮಾಲೋಚನೆ ಪೂರ್ಣಗೊಳಿಸಿದ್ದಾರೆ.

ಈ ಬೆಳವಣಿಗೆ ನಡುವೆಯೇ ರಾಷ್ಟ್ರೀಕೃತ, ಗ್ರಾಮೀಣ, ಖಾಸಗಿ ಮತ್ತು ಸಹಕಾರಿ ಬ್ಯಾಂಕ್, ಸಹಕಾರಿ ಸಂಘ‌ಗಳಲ್ಲಿನ ಹೊರ ಬಾಕಿ ಇರುವ ಬೆಳೆ ಸಾಲ ಮತ್ತು ಅವಧಿ ಸಾಲ ಮೊತ್ತದ ವಿವರ ಬಹಿರಂಗವಾಗಿದೆ. ರಾಜ್ಯದ ಒಟ್ಟು ೪೫ ಬ್ಯಾಂಕ್‌ಗಳಲ್ಲಿ ಡಿಸೆಂಬರ್‌ ೨೦೧೭ರ ಅಂತ್ಯಕ್ಕೆ ೧ ಲಕ್ಷದ ೨೧ ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ಬಾಕಿ ಇದೆ. ಇದರಲ್ಲಿ ಬೆಳೆ ಸಾಲದ ಮೊತ್ತವೇ ೫೯,೬೫೩ ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಎಂದು ತಿಳಿದುಬಂದಿದೆ. ೨೦೧೮ರ ಜನವರಿಯಿಂದ ಮೇ ಅಂತ್ಯದವರೆಗಿನ ಒಟ್ಟು ಮೊತ್ತದಲ್ಲಿಯೂ ಏರಿಕೆಯಾಗಿರುವ ಸಾಧ್ಯತೆ ಇದೆ ಎಂದು ರಾಜ್ಯ ಮಟ್ಟದ ಬ್ಯಾಂಕರ್‌ಗಳ (ಎಸ್‌ಎಲ್‌ಬಿಸಿ) ಸಮಿತಿಯ ವಿಶ್ವಸನೀಯ ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ, "ರೈತರು ಬ್ಯಾಂಕ್‌ಗಳಲ್ಲಿ ಮಾಡಿರುವ ೫೩,೦೦೦ ಕೋಟಿ ರು. ಸಾಲವನ್ನು ಮನ್ನಾ ಮಾಡಲಾಗುವುದು," ಎಂದು ಘೋಷಿಸಿದ್ದರು. ಈ ಅಂಕಿ-ಅಂಶಗಳ ಪ್ರಕಾರ, ೫೩,೦೦೦ ಕೋಟಿ ರು. ಸಾಲ ಮನ್ನಾ ಮಾಡಿದರೂ ಎಸ್‌ಎಲ್‌ಬಿಸಿ ಅಂಕಿ-ಅಂಶಗಳ ಪ್ರಕಾರ, ಇನ್ನೂ ೧೩,೦೦೦ ಕೋಟಿ ರು. ಬಾಕಿ ಉಳಿಯಲಿದೆ. ಹಾಗೆಯೇ, ಸಹಕಾರ ಸಂಘಗಳಲ್ಲಿ ೩ ಲಕ್ಷ ರು. ಮೇಲ್ಪಟ್ಟು ಸಾಲವನ್ನು ಮನ್ನಾ ಮಾಡಿದರೆ ಸಹಜವಾಗಿಯೇ ೪೧,೭೩೧ ಕೋಟಿ ರು. ಹೊರೆ ಬೀಳಲಿದೆ ಎಂದು ಸಹಕಾರ ಇಲಾಖೆ ಅಂದಾಜಿಸಿದೆ. ಇದು ೨೦೧೮ರ ಮಾರ್ಚ್‌ ೩೧ಕ್ಕೆ ಅಂತ್ಯಕ್ಕೆ ಕೊನೆಗೊಂಡ ಅಂಕಿ-ಅಂಶಗಳು ಎಂದು ಇಲಾಖೆ ಮೂಲಗಳು ತಿಳಿಸಿವೆ. ಬ್ಯಾಂಕ್‌ಗಳಲ್ಲಿಯೂ ಇದೇ ಹಂತಗಳ ಪ್ರಕಾರ ಲೆಕ್ಕಾಚಾರ ಮಾಡಿದರೆ, ಅದರ ಮೊತ್ತವೂ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ.

ಇದನ್ನೂ ಓದಿ : ರೈತರ ಸಾಲ ಮನ್ನಾ ಬ್ಲೂಪ್ರಿಂಟ್‌ ಸಿದ್ಧವಾಗಿದೆ ಎಂದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಳೆ ಸಾಲವನ್ನು ವಿವಿಧ ಹಂತಗಳಲ್ಲಿ ಮನ್ನಾ ಮಾಡಿದರೆ ಬೊಕ್ಕಸಕ್ಕೆ ಸಹಜವಾಗಿ ಆಗುವ ಹೊರೆ ಮತ್ತು ಹೆಚ್ಚುವರಿ ಹೊರೆ ಕುರಿತಾದ ಅಂಕಿ-ಅಂಶಗಳನ್ನೊಳಗೊಂಡ ಮಾಹಿತಿಯನ್ನು ಆರ್ಥಿಕ ಇಲಾಖೆಗೆ ತಲುಪಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ೫೦,೦೦೦ ರು.ವರೆಗೆ, ೨ನೇ ಹಂತದಲ್ಲಿ ೫೦,೦೦೦ರಿಂದ ೧ ಲಕ್ಷ ರು., ೩ನೇ ಹಂತದಲ್ಲಿ ೧ ಲಕ್ಷ ರು.ನಿಂದ ೨ ಲಕ್ಷ ರು., ೪ನೇ ಹಂತದಲ್ಲಿ ೨ ಲಕ್ಷ ರು.ನಿಂದ ೩ ಲಕ್ಷ, ೫ನೇ ಹಂತದಲ್ಲಿ ೩ ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದ ಮೊತ್ತದ ವಿವರವನ್ನು ಒದಗಿಸಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಒಟ್ಟು ೨೦,೩೯,೮೫೮ ಸಂಘಗಳಲ್ಲಿ ೫ ಹಂತಗಳಲ್ಲಿ ೧೦,೯೩೮ ಕೋಟಿ ರು. ಬೆಳೆ ಸಾಲದ ಅಸಲಿ ಬಾಕಿ ಇದೆ. ೧ ಲಕ್ಷ ರೂ. ವರೆಗೆ ಮನ್ನಾ ಮಾಡಿದರೆ ೯,೩೩೪ ಕೋಟಿ ರೂ., ೨ ಲಕ್ಷ ರವರೆಗೆ ಮನ್ನಾ ಮಾಡಿದರೆ ೧೦,೫೫೩ ಕೋಟಿ, ೩ ಲಕ್ಷವರೆಗೆ ಮನ್ನಾ ಮಾಡಿದರೆ ೧೦,೯೦೪ ಕೋಟಿ, ೩ ಲಕ್ಷಕ್ಕಿಂತ ಹೆಚ್ಚು ಮನ್ನಾ ಮಾಡಿದರೆ ೧೦,೯೩೮ ಕೋಟಿ ರೂ ಸೇರಿ ಒಟ್ಟು ೪೧,೭೩೧ ಕೋಟಿ ರೂ. ಸಹಜ ಹೊರೆ ಬೀಳಲಿದೆ ಎಂದು ಸಹಕಾರ ಇಲಾಖೆ ಮೂಲಗಳು ತಿಳಿಸಿವೆ.

೨೦ ಲಕ್ಷ ಸಂಘಗಳಲ್ಲಿರುವ ೫೦,೦೦೦ ರು.ವರೆಗಿನ ಸಾಲವನ್ನು ಮನ್ನಾ ಮಾಡಿದರೆ ೭,೬೯೭.೫೩ ಕೋಟಿ ರು. ಹೊರೆ ಆಗಲಿದೆ. ಇದರಿಂದ ಹೆಚ್ಚುವರಿ ಹೊರೆ ಸಂಭವಿಸುವುದಿಲ್ಲ. ೧ ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡಿದರೆ ೯,೩೩೩.೨೮ ಕೋಟಿ ರು. ಸಹಜ ಹೊರೆ ಸಂಭವಿಸಲಿದೆ. ಈಗಾಗಲೇ ೫೦,೦೦೦ ರು. ಗೆ ಒಳಪಟ್ಟಿರುವ ಸಾಲ ಮನ್ನಾ ಮಾಡಿರುವ ಕಾರಣ ಉಳಿದ ಹೆಚ್ಚುವರಿಯಾಗಿ ಹೆಚ್ಚುವರಿಯಾಗಿ ೧,೬೩೬ ಕೋಟಿ ರು. ಹೊರೆ ಬೀಳಲಿದೆ.

ಅದೇ ರೀತಿ, ೨ ಲಕ್ಷ ರು.ವರೆಗೆ ಸಾಲ ಮನ್ನಾ ಮಾಡಿದರೆ ೨,೮೫೬ ಕೋಟಿ ರು., ೩ ಲಕ್ಷದವರೆಗೆ ಮನ್ನಾ ಮಾಡಿದರೆ ೩,೨೦೬ ಕೋಟಿ ರು., ೩ ಲಕ್ಷಕ್ಕಿಂತ ಹೆಚ್ಚು ಸಾಲ ಮನ್ನಾ ಮಾಡಿದರೆ ೩,೨೪೧ ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. "ಈ ಅಂಕಿ-ಅಂಶ ಕೇವಲ ೨೦೧೮ರ ಮಾರ್ಚ್‌ ೩೧ರ ಅಂತ್ಯಕ್ಕೆ ಸೀಮಿತವಾಗಿವೆ. ಏಪ್ರಿಲ್‌ ಮತ್ತು ಮೇ ತಿಂಗಳ ಅವಧಿಯನ್ನೂ ಪರಿಗಣಿಸಿದರೆ ಒಟ್ಟು ಮೊತ್ತದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ," ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತ ಸದಸ್ಯರು ನಿಧನ ಹೊಂದಿದಲ್ಲಿ ಅವರ ಒಂದು ಲಕ್ಷ ರುಪಾಯಿವರೆಗೆ ಸಾಲ ಮನ್ನಾ ಮಾಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ಸಹಕಾರ ಸಂಘಗಳಲ್ಲಿ ಸಾಲ ಪಡೆದ 2017ರ ಜೂನ್‌ವರೆಗೆ ಬಾಕಿ ಉಳಿಸಿಕೊಂಡಿದ್ದ ಅಲ್ಪಾವಧಿ ಕೃಷಿ ಸಾಲದಲ್ಲಿ 50 ಸಾವಿರ ರುಪಾಯಿವರೆಗಿನ ಸಾಲ ಮನ್ನಾ ಮಾಡಿದ್ದರಿಂದ 22.27 ಲಕ್ಷ ರೈತರಿಗೆ ನೆರವಾಗಿತ್ತು.

Loan waiver JDS ಜೆಡಿಎಸ್ Congress Party ಕಾಂಗ್ರೆಸ್ ಪಕ್ಷ ಕೃಷಿ ಸಾಲ Agricultural Debt Finance Secretary ಹಣಕಾಸು ಕಾರ್ಯದರ್ಶಿ ಜಿ ಪರಮೇಶ್ವರ ರಾಷ್ಟ್ರೀಕೃತ ಬ್ಯಾಂಕ್‌ಗಳು CM H D Kumaraswamy ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ Deputy CM G Parameshwara ರೈತರ ಸಾಲ ಮನ್ನಾ Cooperative Bank
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು