ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲ ೭೧,೬೫೦ ಕೋಟಿ ರುಪಾಯಿ!

ರಾಜ್ಯದ ರೈತರು ಪಡೆದಿರುವ ೧,೨೧,೬೧೭ ಕೋಟಿ ರು. ಕೃಷಿ ಸಾಲ ವಿವರವನ್ನು ಗುರುವಾರ ಪ್ರಕಟಿಸಿದ್ದೆವು. ಇದೀಗ ರಾಷ್ಟ್ರೀಕೃತ, ಖಾಸಗಿ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಬೆಳೆ, ಚಿನ್ನಾಭರಣ ಸಾಲ ಮತ್ತು ಮಧ್ಯಮಾವಧಿ, ದೀರ್ಘಾವಧಿ ರೂಪದಲ್ಲಿ ನೀಡಿರುವ ಸಾಲ ವಿವರ ಇಲ್ಲಿದೆ

ಮಹಾಂತೇಶ್ ಜಿ

ರೈತರು ಚಿನ್ನಾಭರಣ ಸಾಲ ಮತ್ತಿತರ ಕೃಷಿ ಸಂಬಂಧ ಪಡೆದಿರುವ ಸಾಲದ ಬಗ್ಗೆ ಸರ್ಕಾರ ಪಟ್ಟಿ ತಯಾರಿಸುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ ಅವರೊಂದಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚರ್ಚೆ ಮುಂದುವರಿಸಿದ್ದಾರೆ. ಅಲ್ಲದೆ, ಯಾವ್ಯಾವ ಹಂತದಲ್ಲಿ ಮತ್ತು ಯಾವ ಪ್ರಮಾಣದಲ್ಲಿ ರಾಷ್ಟ್ರೀಕೃತ, ಖಾಸಗಿ, ಪ್ರಾದೇಶಿಕ ವಲಯದಲ್ಲಿರುವ ಗ್ರಾಮೀಣ ಬ್ಯಾಂಕ್‌ಗಳು ಸಾಲ ನೀಡಿವೆ ಎಂಬ ಬಗ್ಗೆ ಅಧಿಕಾರಿಗಳು ಲೆಕ್ಕಚಾರ ಮಾಡುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ರಾಷ್ಟ್ರೀಕೃತ, ಗ್ರಾಮೀಣ, ಖಾಸಗಿ ಮತ್ತು ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಡಿಸೆಂಬರ್ ೨೦೧೭ರ ಅಂತ್ಯಕ್ಕೆ ನೀಡಿರುವ ಕೃಷಿ ಸಾಲದ ಒಟ್ಟು ಮೊತ್ತ ಬಹಿರಂಗವಾಗಿದೆ. ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಈ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರೈತರು ಪಡೆದಿರುವ ವೈಯಕ್ತಿಕ ಸಾಲದ ಪ್ರಮಾಣ ೧೦ ಕೋಟಿ ರು.ವರೆಗೂ ಇದೆ. ಕೃಷಿ ಭೂಮಿ ಆಧರಿಸಿ ಕೊಟ್ಟಿರುವ ಸಾಲವೂ ಇದರಲ್ಲಿದೆ. ಹಾಗೆಯೇ ಕಾಫಿ ಬೆಳೆಗಾರರು ಕನಿಷ್ಠ ೩ ಕೋಟಿ ರೂ.ವರೆಗೂ ಸಾಲ ಪಡೆದ ನಿದರ್ಶನಗಳಿವೆ.

ಕೃಷಿ ಸಾಲ ನೀಡಿರುವ ೨೧ ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್‌ ಮೊದಲ ಸ್ಥಾನದಲ್ಲಿದ್ದರೆ, ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ‌ ೨ನೇ ಸ್ಥಾನ, ಸಿಂಡಿಕೇಟ್‌‌ ಬ್ಯಾಂಕ್‌ ಮೂರನೇ ಸ್ಥಾನದಲ್ಲಿದೆ. ೨೧ ಬ್ಯಾಂಕ್‌ಗಳ ಪೈಕಿ ೧೭ ಬ್ಯಾಂಕ್‌ಗಳು ಬೆಳೆ ಸಾಲ ಮತ್ತು ಚಿನ್ನಾಭರಣ ಸಾಲ ರೂಪದಲ್ಲಿ ೩೭,೨೦೩ ಕೋಟಿ ರು., ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ರೂಪದಲ್ಲಿ ೩೪,೪೪೬ ಕೋಟಿ ರು. ಇದೆ. ಹಾಗೆಯೇ, ೧೮ ಖಾಸಗಿ ಬ್ಯಾಂಕ್‌ಗಳು ಬೆಳೆ ಸಾಲ, ಚಿನ್ನಾಭರಣ ಸಾಲದ ರೂಪದಲ್ಲಿ ೩೯,೩೯೪ ಕೋಟಿ, ಮಧ್ಯಮಾವಧಿ, ದೀರ್ಘಾವಧಿ ಸಾಲದ ರೂಪದಲ್ಲಿ ೧೧,೩೪೮ ಕೋಟಿ ರು. ಇದ್ದರೆ, ಪ್ರಾದೇಶಿಕ ವಲಯದಲ್ಲಿನ ಗ್ರಾಮೀಣ ಬ್ಯಾಂಕ್‌ಗಳು ಬೆಳೆ ಸಾಲ, ಚಿನ್ನಾಭರಣ ಸಾಲ ರೂಪದಲ್ಲಿ ೧೮,೪೬೪ ಕೋಟಿ ರು., ಮಧ್ಯಾಮವಧಿ, ದೀರ್ಘಾವಧಿ ಸಾಲದ ರೂಪದಲ್ಲಿ ೧೬,೧೬೮ ಕೋಟಿ ರು. ಇದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿರುವ ಬೆಳೆ ಸಾಲದ ವಿವರ

 • ಕೆನರಾ ಬ್ಯಾಂಕ್- ೧೬,೯೬೬ ಕೋಟಿ ರು.
 • ಕಾರ್ಪೋರೇಷನ್‌ ಬ್ಯಾಂಕ್‌- ೩,೧೭೬ ಕೋಟಿ ರು.
 • ಸಿಂಡಿಕೇಟ್‌ ಬ್ಯಾಂಕ್‌- ೪,೦೨೬ ಕೋಟಿ ರು.
 • ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ- ೫,೮೦೦ ಕೋಟಿ ರು.
 • ವಿಜಯಾ ಬ್ಯಾಂಕ್‌- ೨,೯೭೦ ಕೋಟಿ ರು.
 • ಆಂಧ್ರ ಬ್ಯಾಂಕ್- ೨೫೯ ಕೋಟಿ ರು.
 • ಬ್ಯಾಂಕ್‌ ಆಫ್‌ ಬರೋಡ- ೩೩೮ ಕೋಟಿ ರು.
 • ಬ್ಯಾಂಕ್‌ ಆಫ್‌ ಮಹಾರಾಷ್ಟ್ರ- ೨೪೪ ಕೋಟಿ ರು.
 • ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ- ೩೬೨ ಕೋಟಿ ರು.
 • ದೇನಾ ಬ್ಯಾಂಕ್‌- ೧೪೯ ಕೋಟಿ ರು.
 • ಇಂಡಿಯನ್‌ ಬ್ಯಾಂಕ್‌- ೪೩೯ ಕೋಟಿ ರು.
 • ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌- ೪೩೯ ಕೋಟಿ ರು.
 • ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್- ೮೬ ಕೋಟಿ ರು.
 • ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌- ೨೫೩ ಕೋಟಿ ರು.
 • ಯುಕೋ ಬ್ಯಾಂಕ್‌- ೧೫೦ ಕೋಟಿ ರು.
 • ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ- ೧,೬೬೬ ಕೋಟಿ ರು.
 • ಐಡಿಬಿಐ ಬ್ಯಾಂಕ್‌- ೩೪೩ ಕೋಟಿ ರು.
ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗೆ ಬ್ಯಾಂಕ್‌ಗಳು ಸಾಲದ ವಿವರ ಒದಗಿಸಿರುವ ಪ್ರತಿ
ಇದನ್ನೂ ಓದಿ : ರಾಜ್ಯದಲ್ಲಿನ ಕೃಷಿ ಸಾಲ ೫೩ ಸಾವಿರ ಕೋಟಿಯಲ್ಲ, ೧,೨೧,೦೦೦ ಕೋಟಿ ರುಪಾಯಿ!

ಖಾಸಗಿ ಬ್ಯಾಂಕ್‌ಗಳು ನೀಡಿರುವ ಸಾಲದ ವಿವರ

 • ಕರ್ನಾಟಕ ಬ್ಯಾಂಕ್‌- ೨,೧೪೯ ಕೋಟಿ ರು.
 • ರತ್ನಾಕರ ಬ್ಯಾಂಕ್‌- ೨೩೭ ಕೋಟಿ ರು.
 • ಎಚ್‌ಡಿಎಫ್‌ಸಿ ಬ್ಯಾಂಕ್‌- ೧,೧೧೦ ಕೋಟಿ ರು.
 • ಯೆಸ್‌ ಬ್ಯಾಂಕ್‌- ೩೦೨ ಕೋಟಿ ರು.

ಗ್ರಾಮೀಣ ಬ್ಯಾಂಕ್‌ಗಳ ಸಾಲ ವಿವರ

 • ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌- ೩,೩೮೭ ಕೋಟಿ ರು.
 • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌- ೪,೩೩೪ ಕೋಟಿ ರು.
 • ರಾಜ್ಯ ಅಪೆಕ್ಸ್‌ ಬ್ಯಾಂಕ್‌- ೧೦,೭೩೪ ಕೋಟಿ ರು.

ಬೆಳೆ ಮತ್ತು ಚಿನ್ನಾಭರಣ ಸಾಲ ಸೇರಿದಂತೆ ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಮತ್ತು ಪ್ರಾದೇಶಿಕ ವಲಯದಲ್ಲಿರುವ ಗ್ರಾಮೀಣ ಬ್ಯಾಂಕ್‌ಗಳು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ೮,೪೯೮ ಕೋಟಿ ರು. ನೀಡಿ ಮೊದಲ ಸ್ಥಾನದಲ್ಲಿದ್ದರೆ, ೭,೮೨೮ ಕೋಟಿ ರು. ಸಾಲ ನೀಡಿರುವ ಸಿಂಡಿಕೇಟ್‌ ಬ್ಯಾಂಕ್‌ ೨ನೇ ಸ್ಥಾನ, ಕಾರ್ಪೋರೇಷನ್‌ ಬ್ಯಾಂಕ್‌ ೪,೭೦೫ ಕೋಟಿ ರು. ನೀಡುವ ಮೂಲಕ ೩ನೇ ಸ್ಥಾನದಲ್ಲಿದೆ.

ಉಳಿದಂತೆ ಕೆನರಾ ಬ್ಯಾಂಕ್‌ ೭೩೪ ಕೋಟಿ ರು., ವಿಜಯಾ ಬ್ಯಾಂಕ್‌ ೩,೬೨೮ ಕೋಟಿ ರು., ಅಲಹಾಬಾದ್‌ ಬ್ಯಾಂಕ್‌ ೬೬ ಕೋಟಿ ರು., ಆಂಧ್ರ ಬ್ಯಾಂಕ್‌ ೩೨೮ ಕೋಟಿ ರು., ಬ್ಯಾಂಕ್‌ ಆಫ್‌ ಬರೋಡಾ ೩೪೭ ಕೋಟಿ ರು., ಬ್ಯಾಂಕ್‌ ಆಫ್‌ ಇಂಡಿಯಾ ೨,೬೮೦ ಕೋಟಿ ರು., ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ೭೨ ಕೋಟಿ ರು., ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ೧೨೮ ಕೋಟಿ ರು., ದೇನಾ ಬ್ಯಾಂಕ್‌ ೪೬ ಕೋಟಿ, ಇಂಡಿಯನ್ ಬ್ಯಾಂಕ್‌ ೨೯೦ ಕೋಟಿ , ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ೫೨೫ ಕೋಟಿ , ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ೧೧೭ ಕೋಟಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ೧೭೭ ಕೋಟಿ ರು., ಯುಕೋ ಬ್ಯಾಂಕ್‌ ೬೫ ಕೋಟಿ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ೧,೮೬೦ ಕೋಟಿ, ಐಡಿಬಿಐ ೨,೩೦೮ ಕೋಟಿ ರು. ಸಾಲ ನೀಡಿದೆ.

ಖಾಸಗಿ ವಲಯದ ಕರ್ನಾಟಕ ಬ್ಯಾಂಕ್‌ ೧,೧೩೧ ಕೋಟಿ ರು., ರತ್ನಾಕರ್‌ ಬ್ಯಾಂಕ್‌ ೬೧೧ ಕೋಟಿ, ಫೆಡರಲ್‌ ಬ್ಯಾಂಕ್‌ ೭೦೯ ಕೋಟಿ ರು., ಇಂಡಸ್‌ ಇಂಡ್‌ ೬೦೨ ಕೋಟಿ, ಎಚ್‌ಎಫ್‌ಸಿ ೧,೭೬೧ ಕೋಟಿ, ಆಕ್ಸಿಸ್‌ ಬ್ಯಾಂಕ್‌ ೨,೧೩೭ ಕೋಟಿ, ಯೆಸ್‌ ಬ್ಯಾಂಕ್‌ ೮೮೩ ಕೋಟಿ, ಐಸಿಐಸಿಐ ೨,೧೮೨ ಕೋಟಿ ರು. ಸಾಲ ನೀಡಿದೆ. ಇನ್ನು, ಪ್ರಾದೇಶಿಕ ವಲಯದ ಗ್ರಾಮೀಣ ಬ್ಯಾಂಕ್‌ಗಳ ಪೈಕಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ೬,೬೫೫ ಕೋಟಿ ರು., ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ೨,೪೧೭ ಕೋಟಿ ರು., ರಾಜ್ಯ ಅಪೆಕ್ಸ್‌ ಬ್ಯಾಂಕ್‌ ೧,೫೨೭ ಕೋಟಿ, ಕಾವೇರಿ ಗ್ರಾಮೀಣ ಬ್ಯಾಂಕ್‌ ೩,೭೫೫ ಕೋಟಿ, ಕೆಎಸ್‌ಕಾರ್ಡ್‌ ೧,೮೧೦ ಕೋಟಿ ರು. ಸಾಲವನ್ನು ಮಧ್ಯಾಮವಧಿ, ದೀರ್ಘಾವಧಿ ರೂಪದಲ್ಲಿ ನೀಡಿವೆ.

ಕರ್ನಾಟಕ ಸರ್ಕಾರ Karnataka Government ಎಚ್‌ ಡಿ ಕುಮಾರಸ್ವಾಮಿ Private Banks ಕೃಷಿ ಸಾಲ Agricultural Debt ರಾಷ್ಟ್ರೀಕೃತ ಬ್ಯಾಂಕ್‌ಗಳು Nationalised Banks ಖಾಸಗಿ ಬ್ಯಾಂಕ್ CM H D Kumaraswamy Cooperative Bank ಸಹಕಾರಿ ಬ್ಯಾಂಕ್
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು