ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಹತ್ತು ದಿನಗಳ ಅಧಿವೇಶನ; ತಾತ್ಕಾಲಿಕ ಶೌಚಾಲಯ ವ್ಯವಸ್ಥೆಗೆ ೧ ಕೋಟಿ ರೂ. ವೆಚ್ಚ!

ಅತ್ಯಾಧುನಿಕ ಸಾರ್ವಜನಿಕ ಶೌಚಾಲಯ ವ್ಯವಸ್ಥೆಗೆ ಹೆಚ್ಚೆಂದರೆ ಎಷ್ಟು ಖರ್ಚಾಗಬಹುದು? ಬೆಳಗಾವಿ ಮಹಾನಗರಪಾಲಿಕೆ ಪ್ರಕಾರ ಗರಿಷ್ಠ ೭ ಲಕ್ಷ ರೂ.ಅಷ್ಟೇ. ಆದರೆ ಬೆಳಗಾವಿಯಲ್ಲಿ ನವೆಂಬರ್‌ ೨೦೧೭ರಲ್ಲಿ ನಡೆದಿದ್ದ ಅಧಿವೇಶನ ವೇಳೆ ತಾತ್ಕಾಲಿಕ ಶೌಚಾಲಯಕ್ಕೆ ಮಾಡಿದ ವೆಚ್ಚವೆಷ್ಟು ಗೊತ್ತೆ?

ಮಹಾಂತೇಶ್ ಜಿ

ಬೆಳಗಾವಿಯಲ್ಲಿ ಕಳೆದ ನವೆಂಬರ್(೨೦೧೭)ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೋಟ್ಯಂತರ ರೂಪಾಯಿ ದುಂದುವೆಚ್ಚವಾಗಿದೆ. ವಿಧಾನಸಭೆ ಸಚಿವಾಲಯದಲ್ಲಿನ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳು ಬಹಿರಂಗಗೊಂಡ ಬೆನ್ನಲ್ಲೇ, ಸುವರ್ಣ ಸೌಧದಲ್ಲಿ ನಡೆದಿದ್ದ ಹತ್ತು ದಿನಗಳ ಅಧಿವೇಶನಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎನ್ನುವ ವಿವರಗಳು ಬಹಿರಂಗಗೊಂಡಿವೆ.

ವಿಶೇಷವೆಂದರೆ ತಾತ್ಕಾಲಿಕ ಕೆಮಿಕಲ್ ಶೌಚಾಲಯ ಮತ್ತು ಕೆಮಿಕಲ್ ರಹಿತ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತ ಖರ್ಚಾಗಿದೆ. ಪೊಲೀಸ್‌ ಸಿಬ್ಬಂದಿ, ವಾಹನ ಚಾಲಕರು ಹಾಗೂ ಕಾರ್ಮಿಕರ ಅನುಕೂಲಕ್ಕಾಗಿ ತಾತ್ಕಾಲಿಕ ಕೆಮಿಕಲ್ ಶೌಚಾಲಯ ವ್ಯವಸ್ಥೆಗೆ ೬೯,೩೮,೪೦೦ ರೂ., ಪೊಲೀಸ್‌ ಸಿಬ್ಬಂದಿ, ರೈತರ ಸಂಘಟನೆ, ಇತರ ಸಂಘ ಸಂಸ್ಥೆಗಳು ನಡೆಸುವ ಧರಣಿ ಸತ್ಯಾಗ್ರಹದ ಸ್ಥಳಗಳಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲು ೫೯,೪೭,೨೦೦ ಸೇರಿದಂತೆ ಒಟ್ಟು ೧,೨೮,೮೫,೬೦೦ ರೂ.ವೆಚ್ಚವಾಗಿದೆ.

ಬೆಳಗಾವಿ ಅಧಿವೇಶನಕ್ಕೆ ಆಗಿರುವ ವೆಚ್ಚದ ವಿವರ

ತಾತ್ಕಾಲಿಕ ಕೆಮಿಕಲ್ ಶೌಚಾಲಯ ಮತ್ತು ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿರುವ ಸಂಬಂಧಿತ ಸಿವಿಲ್‌ ಗುತ್ತಿಗೆದಾರರಿಗೆ ವಿಧಾನಸಭೆ ಸಚಿವಾಲಯ ಜನವರಿ ೨೫,೨೦೧೮ರಂದು ಹಣ ಪಾವತಿಸಿರುವುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

ನವೆಂಬರ್‌ ೧೩,೨೦೧೭ರಿಂದ ೨೪ವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿದ್ದ ಚಳಿಗಾಲ ಅಧಿವೇಶನಕ್ಕೆ ಮಾಡಿರುವ ವೆಚ್ಚಗಳ ವಿವರಗಳು ‘ದಿ ಸ್ಟೇಟ್‌’ಗೆ ಲಭ್ಯವಾಗಿವೆ. ಲಭ್ಯವಿರುವ ಮಾಹಿತಿ,ದಾಖಲೆಗಳ ಪ್ರಕಾರ ಒಟ್ಟು ೧೯,೩೦,೩೫,೨೯೪ ರೂ.ವೆಚ್ಚವಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ : ಸರ್ಕಾರದ ಸುತ್ತೋಲೆ ಉಲ್ಲಂಘಿಸಿ ವಿಧಾನಸಭೆ ಸಚಿವಾಲಯದಿಂದ ಮುಂಬಡ್ತಿ ಆರೋಪ

ತಾತ್ಕಾಲಿಕ ಶೌಚಾಲಯ ವ್ಯವಸ್ಥೆಗೆ ಕೋಟಿ ರೂಪಾಯಿ ವೆಚ್ಚವಾಗಿರುವ ಬಗ್ಗೆ ಸಚಿವಾಲಯದ ಅಧಿಕಾರಿ, ನೌಕರರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈ ಮೊತ್ತದಲ್ಲಿ ಖಾಯಂ ಶೌಚಾಲಯಗಳನ್ನು ನಿರ್ಮಿಸಬಹುದಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿವೆ. ಅಲ್ಲದೆ, ಬೆಳಗಾವಿ ಮಹಾನಗರಪಾಲಿಕೆಯು ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಪರಿಹಾರವಾಗಿ ಮಹಾನಗರ ಪಾಲಿಕೆಯು ಅತ್ಯಾಧುನಿಕ ಇ– ಟಾಯ್ಲೆಟ್‌ ನಿರ್ಮಿಸಿದೆ. ಕೇವಲ ೭ ಲಕ್ಷ ರೂ.ಗಳ ವೆಚ್ಚದಲ್ಲಿ ಒಂದೊಂದು ಘಟಕವನ್ನು ನಿರ್ಮಿಸಿದೆ. ತುಕ್ಕು ಹಿಡಿಯದ ಸ್ಟೀಲ್‌ ಬಳಸಿ, ಕಾಂಪ್ಯಾಕ್ಟ್‌ ಬಾಕ್ಸ್‌ ಮಾದರಿಯ ಶೌಚಾಲಯ ನಿರ್ಮಿಸಿದೆ.ಇದಕ್ಕೆ ನಿರಂತರ ವಿದ್ಯುತ್‌ ಹಾಗೂ ನೀರಿನ ಸಂಪರ್ಕವಲ್ಲದೆ ಜಿಪಿಎಸ್‌ ಕೂಡ ಅಳವಡಿಸಲಾಗಿದೆ. ವಿಮಾನಗಳಲ್ಲಿರುವ ಶೌಚಾಲಯದಂತೆ ಇಲ್ಲಿ ಎಲ್ಲವೂ ಸ್ವಯಂಚಾಲಿತವಾಗಿ ಕಾರ್ಯನಿರ್ವಹಣೆ ನಡೆಯುತ್ತದೆ.

ಬೆಳಗಾವಿ ನಗರದಲ್ಲಿ ಇ-ಟಾಯ್ಲೆಟ್‌ ವ್ಯವಸ್ಥೆ ಕಣ್ಣು ಮುಂದಿದ್ದರೂ ವಿಧಾನಸಭೆ ಸಚಿವಾಲಯ ೧ ಕೋಟಿ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ಕೆಮಿಕಲ್ ಶೌಚಾಲಯ ಮತ್ತು ಕೆಮಿಕಲ್ ರಹಿತ ಶೌಚಾಲಯ ನಿರ್ಮಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಉಳಿದಂತೆ ಮುಖ್ಯಮಂತ್ರಿಯವರ ಸಚಿವಾಲಯ, ಸರ್ಕಾರದ ಸಚಿವಾಲಯದ ಇಲಾಖೆ ಮುಖ್ಯಸ್ಥರು, ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳಿಗೆ ಲಘು ಉಪಾಹಾರ, ಕಾಫಿ, ಟೀ ಗೆ ೨,೬೩,೬೦,೮೦೫ ರೂ.ವೆಚ್ಚವಾಗಿದೆ. ನವೆಂಬರ್‌ ೧೩,೨೦೧೭ರಿಂದ ೨೪ರವರೆಗೆ ಅಧಿವೇಶನ ಕಾರ್ಯಗಳಿಗೆ ನಿಯೋಜಿಸಲಾಗಿದ್ದ ಒಟ್ಟು ೨೫೩ ಸಿಬ್ಬಂದಿಗೆ ಉಪಾಹಾರ ಭತ್ಯೆ ಎಂದು ಒಟ್ಟು ೧೮ ಲಕ್ಷ ರೂ.ವೆಚ್ಚವಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಸುವರ್ಣ ವಿಧಾನಸೌಧದ ಒಳಗೆ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಹಾಕಲಾಗಿದ್ದ ಪೆಂಡಾಲ್‌ ಶಾಮಿಯಾನ ಹಾಗೂ ಪೀಠೋಪಕರಣಗಳ ವ್ಯವಸ್ಥೆಗೆ ೪,೩೨,೧೭,೭೩೬ ರೂ., ಬ್ಯಾಂಕ್ವೆಟ್‌ ಹಾಲ್‌, ಬಫೆಟ್‌ ಹಾಲ್‌ಗಳಲ್ಲಿ ಪಾರ್ಟಿಷನ್‌ ಪೆಂಡಾಲ್‌ ವ್ಯವಸ್ಥೆಗೆ ೨೨,೦೭,೮೯೮ ರೂ., ಅಧಿಕೃತ ಕೆಲಸ ಕಾರ್ಯಗಳಿಗೆ ಹಿರಿಯ ಅಧಿಕಾರಿಗಳು, ಮಾರ್ಷಲ್‌ ಸಿಬ್ಬಂದಿ, ಪತ್ರಕರ್ತರುಗಳಿಗೆ ವಿಶ್ರಾಂತಿ ಪಡೆಯಲು ಪೆಂಡಾಲ್‌ ಪಾರ್ಟಿಷನ್‌ ಪೀಠೋಪಕರಣ ವ್ಯವಸ್ಥೆಗೆ ೧,೨೬,೫೪,೩೨೦ ರೂ., ಪ್ಲವರ್‌ ಡೆಕೋರೇಟ್ಸ್‌ಗೆ ೯,೯೦,೦೦೦ ರೂ., ಕುಡಿಯುವ ನೀರು ಸರಬರಾಜು ಮಾಡಿರುವುದಕ್ಕೆ ೨೦,೭೭,೭೦೦ ರೂ., ಪೀಠೋಪಕರಣಗಳನ್ನು ಸರಬರಾಜು ಮಾಡಿರುವುದಕ್ಕೆ ೪,೫೪,೫೫೦ ರೂ., ಸುವರ್ಣ ವಿಧಾನಸೌಧ ಗಣಕ ಕೇಂದ್ರದಿಂದ ಕೈಗೊಂಡಿದ್ದ ವಿವಿಧ ಕಾಮಗಾರಿಗಳಿಗೆ ಒಟ್ಟು ೯೯,೮೮,೪೨೦ ರೂ. ಕೂಡ ಈ ವೆಚ್ಚದಲ್ಲಿ ಒಳಗೊಂಡಿದೆ.

ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ 31 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ವಿಧಾನಸಭಾ ಸಚಿವಾಲಯ ಹಣಕಾಸು ಇಲಾಖೆಗೆ ಸಲ್ಲಿಸಿತ್ತು. ಈ ಪೈಕಿ 21 ಕೋಟಿ ಮಂಜೂರಾಗಿತ್ತು. ಅಧಿವೇಶನ ಸಂದರ್ಭದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲು ಈ ಹಣ ಸಾಕಾಗದು ಎಂದು ಹಿಂದಿನ ಸ್ಪೀಕರ್‌ ಕೆ ಬಿ ಕೋಳಿವಾಡ ಹೇಳಿದ್ದರು.

ಬೆಳಗಾವಿ ಅಧಿವೇಶನ ವಿಧಾನಸಭೆ ಸಚಿವಾಲಯ Assembly Secretariat ಬೆಳಗಾವಿ ಸುವರ್ಣ ವಿಧಾನಸೌಧ Belgaum Assembly Session ಸ್ಪೀಕರ್‌ ಕೆ.ಬಿ. ಕೋಳಿವಾಡ Speaker K.B.Kolivada ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್‌ ಮೂರ್ತಿ Assembly Secretary S Murthy
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು