ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಎಂಆರ್‌ಐ ಸ್ಕ್ಯಾನ್‌; ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಯತ್ನ?

ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌ ಸೇವೆ ಈಗಾಗಲೇ ಆರಂಭಗೊಂಡಿದೆ. ಆದರೆ, ಈ ಸೇವೆ ಒದಗಿಸುತ್ತಿರುವ ಹೊರರಾಜ್ಯದ ಖಾಸಗಿ ಕಂಪನಿಗೆ ಆರೋಗ್ಯ ಇಲಾಖೆ ಲಾಭ ಮಾಡಿಕೊಟ್ಟಿದೆ. ಈ ಮೂಲಕ, ವಾರ್ಷಿಕ ೧೬ ಕೋಟಿ ಹೊರೆ ಮೈಮೇಲೆ ಎಳೆದುಕೊಂಡಿದೆ

ಮಹಾಂತೇಶ್ ಜಿ

ರಾಜ್ಯದ ಜಿಲ್ಲಾ ಮತ್ತು ಪ್ರಮುಖ ಆಸ್ಪತ್ರೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ರೋಗಿಗಳಿಗೆ ಉಚಿತ ಸಿಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಸೇವೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದ್ದ ದರವನ್ನು ಲೆಕ್ಕಿಸದೆಯೇ ಸಕ್ಷಮ ಪ್ರಾಧಿಕಾರವಾಗಿರುವ ರಾಷ್ಟ್ರೀಯ ಆರೋಗ್ಯ ಮಿಷನ್ (National Health Mission) ಅಧಿಕ ದರವನ್ನು ನಮೂದಿಸಿದೆ. ಇದೇ ದರವನ್ನಾಧರಿಸಿ ಮಹಾರಾಷ್ಟ್ರದ ಖಾಸಗಿ ಕಂಪನಿಗೆ ೧೦ ವರ್ಷಗಳ ಅವಧಿವರೆಗೆ ಗುತ್ತಿಗೆ ನೀಡಿದೆ. ಇದರಿಂದ ಹತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ೧೬೦ ಕೋಟಿ ರು.ಗೂ ಹೆಚ್ಚು ಹೊರೆ ಬೀಳುವ ಸಾಧ್ಯತೆಗಳಿವೆ.

ಮಹಾರಾಷ್ಟ್ರ ಮೂಲದ ಖಾಸಗಿ ಕಂಪನಿಯೊಂದಿಗೆ ಕರಾರು ಮಾಡಿಕೊಂಡಿರುವ ಪ್ರತಿ

ರಾಜ್ಯದ ೧೪ ಜಿಲ್ಲಾಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್ ಮತ್ತು ೬ ಜಿಲ್ಲಾಸ್ಪತ್ರೆಗಳಿಗೆ ಎಂಆರ್‌ಐ ಸ್ಕ್ಯಾನ್‌ ಸೇವೆ ಒದಗಿಸಲು ೨೦೧೭-೧೮ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಲಾಗಿತ್ತು. ರಾಷ್ಟ್ರೀಯ ಆರೋಗ್ಯ ಮಿಷನ್, ಪ್ರತಿ ಸಿಟಿ ಸ್ಕ್ಯಾನ್‌ಗೆ ೧,೧೦೦ ರೂ., ಎಂ ಆರ್‌ ಐ ಸ್ಕ್ಯಾನ್‌ಗೆ ೨,೪೦೦ ರೂ.ಗೆ ‌ಅನುಮೋದನೆ ನೀಡಿತ್ತು. ಇದಕ್ಕೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಸಕ್ಷಮ ಪ್ರಾಧಿಕಾರ ಅನುಮೋದಿಸಿದ್ದ ದರವನ್ನೇ ಕೇಂದ್ರ ಸರ್ಕಾರವೂ ಅನುಮೋದಿಸಿತ್ತು. ಆದರೆ ಆ ನಂತರ ನಡೆದ ಬೆಳವಣಿಗೆಯಲ್ಲಿ ಸಿ ಟಿ ಸ್ಕ್ಯಾನ್‌ಗೆ ೧,೫೫೦ ರೂ., ಎಂ ಆರ್‌ ಐ ಸ್ಕ್ಯಾನ್‌ಗೆ ೩,೦೦೦ ರೂ.ಗಳಂತೆ ರಾಷ್ಟ್ರೀಯ ಆರೋಗ್ಯ ಮಿಷನ್,‌ ದರವನ್ನು ಅಧಿಕಗೊಳಿಸಿ ಅಂತಿಮಗೊಳಿಸಿತ್ತು. ವಿಪರ್ಯಾಸದ ಸಂಗತಿ ಎಂದರೆ ಮಾರ್ಚ್‌ ೩,೨೦೧೮ರಂದು ನಡೆದ ಸಚಿವ ಸಂಪುಟ ಸಭೆಯೂ ಇದೇ ದರವನ್ನು ಅನುಮೋದಿಸಿದೆ.

ಕಂಪನಿಗೆ ನೀಡಿರುವ ಕಾರ್ಯಾದೇಶ ಪ್ರತಿ

ಇದರಿಂದ ಸಿಟಿ ಸ್ಕ್ಯಾನ್‌ವೊಂದಕ್ಕೆ ೫೦೦ ರೂ. ಮತ್ತು ಎಂಆರ್‌ಐಗೆ ತಲಾ ೬೦೦ ರೂ.ಗಳು ಹೆಚ್ಚುವರಿಯಾಗಿ ಖಾಸಗಿ ಕಂಪನಿಗೆ ಸಿಗಲಿದೆ. ಹೀಗಾಗಿ ಪ್ರತಿವರ್ಷ ೧೬ ಕೋಟಿ ರೂಪಾಯಿ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಲಿದೆ. ಅಧಿಕ ದರ ಪಾವತಿಸುವ ಕಾರಣ ರಾಜ್ಯ ಸರ್ಕಾರ ೧೦ ವರ್ಷಗಳವರೆಗೆ ೧೬೦ ಕೋಟಿ ರೂ.ಗಳನ್ನು ಹೊಂದಿಸಿಕೊಳ್ಳಬೇಕು. ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಕಾರ್ಯಾದೇಶ ಹೊರಡಿಸಿದ ಹಲವು ತಿಂಗಳ ಬಳಿಕ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದೆ. ಅಂದಾಜು ಮೊತ್ತವನ್ನು ಬಂಡವಾಳ ವೆಚ್ಚ ಮತ್ತು ಕಾರ್ಯಾಚರಣೆ ವೆಚ್ಚದ ಆಧಾರದ ಮೇಲೆ ನಿಗದಿಪಡಿಸಲು ಸಮಿತಿ ರಚಿಸಲು ಮುಂದಾಗಿದೆ. “ಈ ಸೇವೆಗಳಿಗೆ ಬಿಡ್‌ಗಳನ್ನು ಪಡೆಯುವ ಮೊದಲು ಸೇವೆಗಳ ವೆಚ್ಚದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಂದಾಜಿಸ್ಪಲ್ಪಟಿಲ್ಲ. ಅಂದಾಜು ವೆಚ್ಚದ ಬಗ್ಗೆ ಯಾವುದೇ ಮಾನದಂಡವನ್ನು ಅನುಸರಿಸದೆಯೇ ಬಿಡ್‌ನಲ್ಲಿ ಕಡಿಮೆ ಮೊತ್ತವನ್ನು ದಾಖಲಿಸಿರುವ ಸಂಸ್ಥೆಗೆ ಗುತ್ತಿಗೆ ನೀಡಿದೆ,” ಎಂಬ ಅಂಶ ಜೂನ್ ೧೨,೨೦೧೮ರಂದು ಹೊರಡಿಸಿರುವ ಆದೇಶದಿಂದ ಗೊತ್ತಾಗಿದೆ. ಆದರೆ, ಆ ಸಂಸ್ಥೆ ಬಿಡ್‌ನಲ್ಲಿ ಎಷ್ಟು ಕಡಿಮೆ ಮೊತ್ತವನ್ನು ದಾಖಲಿಸಿತ್ತು ಎಂಬ ಮಾಹಿತಿಯನ್ನು ನಮೂದಿಸಿಲ್ಲ. ಕಾರ್ಯಕಾರಿ ಆದೇಶದಂತೆ ಪ್ರತಿ ಸ್ಕ್ಯಾನ್‌ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಿದೆ. ಇದರಿಂದ ವಾರ್ಷಿಕವಾಗಿ ೨೩.೭ ಕೋಟಿ ರೂ. ಆವರ್ತಕ ವೆಚ್ಚವಾಗಲಿದೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ.

ಕೇಂದ್ರದ ಪತ್ರದಲ್ಲೇನಿತ್ತು?: “ಪ್ರತಿ ಸ್ಕ್ಯಾನ್‌ಗೆ ೧,೦೦೦ ರೂ. ಮತ್ತು ಪ್ರತಿ ಎಂ ಆರ್‌ ಐ ಸ್ಕ್ಯಾನ್‌ಗೆ ೨,೪೦೦ ರೂ.ನಂತೆ ದರವನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಅಲ್ಲದೆ, ಪ್ರತಿ ಸಿಟಿ ಸ್ಕ್ಯಾನ್‌ ಸೇವೆಗೆ ೧,೦೦೦ ರೂ.ನಂತೆಯೇ ಸೇವೆ ನೀಡಬೇಕು.ಎಂ ಆರ್‌ ಐ ಸ್ಕ್ಯಾನ್‌ಗೆ ರಾಷ್ಟ್ರೀಯ ಆರೋಗ್ಯ ಮಿಷನ್ ನಿಗದಿಪಡಿಸಿರುವ ೩,೦೦೦ ರೂ. ದರ ಹೆಚ್ಚಾಗಿದೆ. ಅನುಮೋದಿಸಿದ ದರಕ್ಕಿಂತ ಅಂತಿಮಗೊಳಿಸಿರುವ ಹೆಚ್ಚಿನ ದರವನ್ನು ರಾಜ್ಯ ಸರ್ಕಾರವೇ ಭರಿಸಿಕೊಳ್ಳಬೇಕು,” ಎಂದು ಕೇಂದ್ರ ಸರ್ಕಾರ ಡಿಸೆಂಬರ್‌ ೨೭,೨೦೧೭ರಂದು ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ಸೂಚಿಸಿತ್ತು.

ಸಚಿವ ಸಂಪುಟ ಟಿಪ್ಪಣಿಯಲ್ಲೇನಿತ್ತು?: “ಈ ಉಪಕರಣಗಳು ಹೆಚ್ಚಿನ ದರದಿಂದ ಕೂಡಿರುವ ಕಾರಣ ದಿನದ ೩೬೦ ದಿನದಲ್ಲಿಯೂ ಉಪಯೋಗಿಸಬಹುದು. ಇದರಿಂದ ವಾರ್ಷಿಕ ಅಂದಾಜು ವೆಚ್ಚ ೨೭.೦೬ ಕೋಟಿ ರೂ.ಗಳಾಗಿವೆ. ಈ ಪೈಕಿ ೧೯.೩ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆ ಮೊತ್ತದಲ್ಲಿ (ಶೇ.೬೦:೪೦) ಲಭ್ಯವಾಗುತ್ತಿದೆ. ವಾರ್ಷಿಕವಾಗಿ ರಾಜ್ಯ ಸರ್ಕಾರಕ್ಕೆ ಹೊರೆಯಾಗುವ ೧೬ ಕೋಟಿ ರೂ.ಗಳನ್ನು ಸ್ವಂತ ಸಂಪನ್ಮೂಲಗಳಿಂದ ಭರಿಸಿಕೊಳ್ಳಬೇಕು,” ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ಸಚಿವ ಸಂಪುಟದ ಟಿಪ್ಪಣಿಯ ಪ್ರತಿ

ಕೋಲಾರ, ತುಮಕೂರು, ಚಾಮರಾಜನಗರ, ದಾವಣಗೆರೆ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ಕೊಡಗು, ಉಡುಪಿ, ಯಾದಗಿರಿ, ರಾಮನಗರ ಮತ್ತು ಉತ್ತರ ಕನ್ನಡ ಸೇರಿ ಒಟ್ಟು ೧೪ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್‌; ತುಮಕೂರು, ಕೋಲಾರ, ವಿಜಯಪುರ, ಚಿತ್ರದುರ್ಗ ಮತ್ತು ಉಡುಪಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ಎಂಆರ್‌ಐ ಸೇವೆಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ ಒದಗಿಸಲಾಗುತ್ತಿದೆ. ಈ ಪೈಕಿ, ೫ ಜಿಲ್ಲೆಗಳಲ್ಲಿ ೨೦೧೭ರಲ್ಲಿಯೇ ಈ ಸೇವೆ ಆರಂಭಗೊಂಡಿದ್ದರೆ, ಉಳಿದ ಜಿಲ್ಲೆಗಳಲ್ಲಿ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ ೨೦೧೮ರಲ್ಲಿ ಸೇವೆ ನೀಡಲಾಗುತ್ತಿದೆ. ದಿನವೊಂದಕ್ಕೆ ೨೦ ಸಿಟಿ ಸ್ಕ್ಯಾನ್‌ಗಳು ಮತ್ತು ೧೫ ಎಂ ಆರ್‌ ಐ ಸ್ಕ್ಯಾನ್‌ ಸೇವೆ ನೀಡಲು ಇಲಾಖೆ ಅಂದಾಜಿಸಿದೆ.

ಕರ್ನಾಟಕ ಸರ್ಕಾರ Government of Karnataka ಆರೋಗ್ಯ ಇಲಾಖೆ Health Department Government of India ಭಾರತ ಸರ್ಕಾರ ಜಿ ಪರಮೇಶ್ವರ್ CM H D Kumaraswamy ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ Deputy CM G Parameshwara
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು