ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ

ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ಆಗಸ್ಟ್ 31ರವರೆಗೆ ವಿಸ್ತರಣೆ

ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ವಿವರ ಸಲ್ಲಿಕೆಗೆ ಜು.31ರ ಗಡುವು ವಿಧಿಸಲಾಗಿತ್ತು. ಈಗ ಆ.31ಕ್ಕೆ ವಿಸ್ತರಿಸಲಾಗಿದೆ. ಈ ಮೊದಲು ವರ್ಷವಿಡೀ ಆದಾಯ ತೆರಿಗೆ ಸಲ್ಲಿಸಲು ಅವಕಾಶ ವಿತ್ತು. ಇ-ಐಟಿಆರ್ ಸಲ್ಲಿಕೆಯಲ್ಲಿನ ತಾಂತ್ರಿಕ ಅಡಚಣೆಯು ವಿಸ್ತರಣೆಗೆ ಕಾರಣ

ಆದಾಯ ತೆರಿಗೆ ವಿವರ ಸಲ್ಲಿಕೆಗೆ ವಿಧಿಸಿದ್ದ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಈಗ ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ. ವಿವರ ಸಲ್ಲಿಕೆಗೆ ಜುಲೈ 31ರ ಗಡುವು ವಿಧಿಸಲಾಗಿತ್ತು.

ಆದಾಯ ತೆರಿಗೆ ಸಲ್ಲಿಕೆ ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಆದಾಯ ತೆರಿಗೆ ಕಾಯ್ದೆ 139(1) ಸೆಕ್ಷನ್‌ಗೆ ಹೊಸ ಸೆಕ್ಷನ್ 234ಎಫ್ ಸೇರಿಸಲಾಗಿದ್ದು ಅವಧಿಯೊಳಗೆ ತೆರಿಗೆ ವಿವರ ಸಲ್ಲಿಸದೆ ಇದ್ದವರಿಗೆ 5,000 ರುಪಾಯಿ ದಂಡ ವಿಧಿಸಲಾಗುತ್ತದೆ. ಡಿಸೆಂಬರ್ ನಂತರವೂ ವಿವರ ಸಲ್ಲಿಸದಿದ್ದರೆ ದಂಡದ ಪ್ರಮಾಣ 10,000 ರುಪಾಯಿಗೆ ಏರಲಿದೆ. ಮೊದಲು ವರ್ಷವಿಡೀ ಆದಾಯ ತೆರಿಗೆ ಸಲ್ಲಿಸಲು ಅವಕಾಶ ವಿತ್ತು. ಇ-ಐಟಿಆರ್ ಸಲ್ಲಿಕೆಯಲ್ಲಿನ ತಾಂತ್ರಿಕ ಅಡಚಣೆಯು ವಿಸ್ತರಣೆಗೆ ಕಾರಣ ಎನ್ನಲಾಗಿದೆ.

ನಿಗದಿತ ಅವಧಿಯೊಳಗೆ ತೆರಿಗೆ ವಿವರ ಸಲ್ಲಿಕೆಯಾದರೆ ಆಯಾ ವಿತ್ತೀಯ ವರ್ಷದಲ್ಲಿ ಸಂಗ್ರಹವಾಗಬಹುದಾದ ನಿರೀಕ್ಷಿತ ಆದಾಯ ತೆರಿಗೆ ಅಂದಾಜು ಸರ್ಕಾರಕ್ಕೆ ದಕ್ಕುತ್ತದೆ. ಇದರಿಂದ ತೆರಿಗೆ ಸಂಗ್ರಹಕ್ಕೆ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ತೆರಿಗೆ ವಿವರ ಸಲ್ಲಿಕೆ ಗಡುವನ್ನು ಜುಲೈ 31ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಿದೆ ಎಂದು ಹಣಕಾಸು ಸಚಿವಾಲಯವು ಟ್ವೀಟ್ ಮಾಡಿದೆ.

ಇದನ್ನೂ ಓದಿ : ಗುತ್ತಿಗೆದಾರರಿಗೆ ಪಾವತಿಸಿರುವ ಮೊತ್ತದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು
Penalty ದಂಡ ಸಿಬಿಡಿಟಿ CBDT ವಿತ್ತ ಸಚಿವಾಲಯ Ministry of Finance ITR Extends ಆದಾಯ ವಿವರ ವಿಸ್ತರಣೆ
ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?