ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ

ವೊಡಾ-ಐಡಿಯಾ ವಿಲೀನಕ್ಕೆ ಅಸ್ತು; ಮೊಬೈಲ್ ಉದ್ಯಮದಲ್ಲಿ ಏನೆಲ್ಲ ಬದಲಾಗಲಿದೆ?

ದೂರಸಂಪರ್ಕ ವಲಯದ ಅತಿದೊಡ್ಡ ವಿಲೀನ ಪ್ರಸ್ತಾಪಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆ ಅನುಮತಿ ನೀಡಿದೆ. ವೊಡಾಫೋನ್- ಐಡಿಯಾ ಸೆಲ್ಯುಲಾರ್ ಒಂದಾದ ನಂತರ ಭಾರತದ ಅತಿದೊಡ್ಡ ಮೊಬೈಲ್ ಸೇವಾ ಕಂಪನಿಯಾಗಿ ಹೊರ ಹೊಮ್ಮಲಿವೆ. ದೂರಸಂಪರ್ಕ ವಲಯದಲ್ಲಿ ಅಚ್ಚರಿಯ ಬೆಳವಣಿಗೆಗಳು ಕಾದಿವೆ

ರೇಣುಕಾಪ್ರಸಾದ್ ಹಾಡ್ಯ

ಭಾರತದ ದೂರ ಸಂಪರ್ಕ ಇತಿಹಾಸದಲ್ಲೇ ಅತಿದೊಡ್ಡ ವಿಲೀನ ಪ್ರಕ್ರಿಯೆಗೆ ಕೇಂದ್ರದ ದೂರ ಸಂಪರ್ಕ ಇಲಾಖೆ ಅನುಮೋದನೆ ನೀಡಿದ್ದು, ಉದ್ಯಮದಲ್ಲಿ ಹೊಸ, ಅಚ್ಚರಿಯ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ. ವೋಡಾಫೋನ್- ಐಡಿಯಾ ಸೆಲ್ಯುಲಾರ್ ವಿಲೀನ ಪ್ರಕ್ರಿಯೆಗೆ ಗುರುವಾರ ಸರ್ಕಾರ ಔಪಚಾರಿಕವಾಗಿ ಅನುಮತಿ ನೀಡಿದೆ. ಇದರೊಂದಿಗೆ ಉದ್ದೇಶಿತ ವಿಲೀನ ಪ್ರಕ್ರಿಯೆ ನಿರ್ಣಾಯಕ ಘಟ್ಟಕ್ಕ ಬಂದಂತಾಗಿದೆ.

ವಿಲೀನ ಪ್ರಕ್ರಿಯೆ ಮುಗಿದ ನಂತರ ಐಡಿಯಾ ವೋಡಾಫೋನ್ ಕಂಪನಿಯು ಭಾರತದ ಅತಿದೊಡ್ಡ ಮೊಬೈಲ್ ಸೇವೆ ಒದಗಿಸುವ ಕಂಪನಿಯಾಗಿ ಉದಯಿಸಲಿದೆ. ಗ್ರಾಹಕರ ಸಂಖ್ಯೆ ಮತ್ತು ಮಾರುಕಟ್ಟೆ ಪಾಲಿನಿಂದಲೂ ಇದು ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ವಿಲೀನದ ನಂತರ ಗ್ರಾಹಕರ ಸಂಖ್ಯೆ43 ಕೋಟಿಗೆ ಏರಲಿದೆ. ಇದು ಇಡೀ ದೇಶದ ಮೊಬೈಲ್ ಮಾರುಕಟ್ಟೆಗೆ ಹೋಲಿಸಿದರೆ ಶೇ.35ರಷ್ಟಾಗುತ್ತದೆ.

ವೋಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ಕಂಪನಿಗಳು ಜಂಟಿಯಾಗಿ 7,268.78 ಕೋಟಿ ಪಾವತಿ ಮಾಡಿದ ನಂತರ ಅನುಮೋದನೆ ನೀಡಿದೆ. ವಿಲೀನ ಪ್ರಕ್ರಿಯೆಗೆ ಅನುಮೋದನೆ ನೀಡಿರುವುದಾಗಿ ದೂರಸಂಪರ್ಕ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆಂದು ಮನಿಕಂಟ್ರೋಲ್ ಡಾಟ್ಕಾಮ್ ವರದಿ ಮಾಡಿದೆ. ಜುಲೈ 9 ರಂದು ದೂರಸಂಪರ್ಕ ಇಲಾಖೆಯು ವಿಲೀನಕ್ಕೆ ಷರತ್ತುಬದ್ಧ ಅನುಮತಿ ನೀಡಿತ್ತು. ಈಗ ಜಂಟಿ ಪಾವತಿಯೊಂದಿಗೆ ಪೂರ್ಣಪ್ರಮಾಣದಲ್ಲಿ ಅನುಮತಿ ನೀಡಿದೆ.

ಎರಡು ಕಂಪನಿಗಳು ಇನ್ನು ಮುಂದೆ ರಿಜಿಸ್ಟ್ರಾರ್ ಆಫ್ ಕಂಪನಿಸ್ (ಆರ್ಒಸಿ) ನಲ್ಲಿ ಅಗತ್ಯ ಅನುಮೋದನೆಗಳನ್ನು ಪಡೆದರೆ ಬಹುತೇಕ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಂತಾಗುತ್ತದೆ.

ಐಡಿಯಾ ಸೆಲ್ಯುಲಾರ್- ವೋಡಾಫೋನ್ ಕಂಪನಿ ವಿಲೀನ ಪ್ರಕ್ರಿಯೆ ನಂತರ ಭಾರತೀಯ ದೂರಸಂಪರ್ಕ ವಲಯದಲ್ಲಿ ಕ್ರೋಢೀಕರಣವಾಗಲಿದೆ. ಅಂದರೆ, ಅಂತಿಮವಾಗಿ ಸರ್ಕಾರಿ ಸ್ವಾಮ್ಯದ ಎಂಟಿಎನ್ಎಲ್, ಬಿಎಸ್ಎನ್ಎಲ್ ಹೊರತಾಗಿ ಮೂರು ಕಂಪನಿಗಳು ಮಾತ್ರ ಸ್ಪರ್ಧೆಯಲ್ಲಿ ಉಳಿಯಲಿವೆ.

ಪ್ರಸ್ತುತ ಭಾರತಿ ಏರ್ಟೆಲ್ ಶೇ.27.44 ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಅಗ್ರಸ್ಥಾನದಲ್ಲಿದೆ. ವೊಡಾಫೋನ್ ಶೇ.19.74, ಐಡಿಯಾ ಶೇ.19.22ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿರುವ ರಿಲಯನ್ಸ್ ಜಿಯೋ ಶೇ.17.44ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ನಾಲ್ಕನೇ ಸ್ಥಾನದಲ್ಲಿ. ಬಿಎಸ್ಎನ್ಎಲ್ ಶೇ.9.99ರಷ್ಟು ಪಾಲು ಹೊಂದಿಗೆ ಉಳಿದಂತೆ ಟಾಟಾ ಟೆಲಿ ಸರ್ವೀಸ್, ಟೆಲಿನಾರ್, ರಿಲಯನ್ಸ್ ಮೊಬೈಲ್ ಮತ್ತು ಎಂಟಿಎನ್ಎಲ್ ಪಾಲು ಶೇ.3ಕ್ಕಿಂತಲೂ ಕಡಮೆ ಇದೆ.

ಈ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ವಿಲೀನಕ್ಕೆ ಕಾರಣವಾಗಬಹುದು. ಹಾಗೆಯೇ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಮೊಬೈಸ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಜತೆ ವಿಲೀನವಾಗುವ ಸಾಧ್ಯತೆ ಇದೆ.

ಇಷ್ಟಾದ ನಂತರ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಹೊರತು ಪಡಿಸಿದರೆ ಉಳಿಯುವುದು ಮೂರೇ ಕಂಪನಿಗಳು- ಭಾರತಿ ಏರ್ಟೆಲ್, ರಿಯಲನ್ಸ್ ಜಿಯೋ ಮತ್ತು ಐಡಿಯಾ ವೋಡಾಫೋನ್. ಇದು ತೀವ್ರ ಸ್ಪರ್ಧೆಗೆ ಕಾರಣವಾಗಿ ಗ್ರಾಹಕರಿಗೆ ಕಡಮೆ ದರದಲ್ಲಿ ಹೆಚ್ಚೆಚ್ಚು ಮೊಬೈಲ್ ಸೇವೆಗಳು ದಕ್ಕಬಹುದು.

ಇದನ್ನೂ ಓದಿ : ರಿಲಯನ್ಸ್ ಜಿಯೋ ತಂತ್ರಕ್ಕೆ ಏರ್ಟೆಲ್, ಐಡಿಯಾ ತೀವ್ರ ಕುಸಿತ; ಸೆನ್ಸೆಕ್ಸ್ ಜಿಗಿತ

ಆದರೆ ದೀರ್ಘಕಾಲದಲ್ಲಿ ಕಡಮೆ ದರದ ಸೇವೆಗಳನ್ನು ನಿರೀಕ್ಷಿಸುವಂತಿಲ್ಲ. ಮೊಬೈಲ್ ಸಂಪರ್ಕ ಸೇವೆಯು ನಗರ ಪ್ರದೇಶದಲ್ಲಿ ಗರಿಷ್ಠ ಮಟ್ಟಕ್ಕೇರಿದೆ. ಗ್ರಾಮೀಣ ಪ್ರದೇಶದಲ್ಲೂ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಿಂದ ಬಹಳ ದೂರ ಇರುವ ಗ್ರಾಮಗಳ ಹೊರತಾಗಿ ಬಹುತೇಕ ಗ್ರಾಮೀಣ ಪ್ರದೇಶದಲ್ಲೂ ಮೊಬೈಲ್ ಸಂಪರ್ಕ ದಕ್ಕಿದೆ.

ಒಂದು ಹಂತ ದಾಟಿದ ನಂತರ ಹೊಸ ಗ್ರಾಹಕರನ್ನು ಸೆಳೆಯುವುದು ಸಾಧ್ಯವಾಗದು. ಆಗ ಇರುವ ನಾಲ್ಕು ಕಂಪನಿಗಳೇ ಗ್ರಾಹಕರನ್ನು ಉಳಿಸಿಕೊಂಡು ಸೇವೆಗಳ ದರವನ್ನು ಹೆಚ್ಚಿಸಬಹುದು. ಆಗ ಮಾತ್ರವೇ ದೂರಸಂಪರ್ಕ ವಲಯದ ಬೃಹತ್ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶಿಸಿದ ನಂತರ ಉಚಿತ ಕರೆಗಳು, ಅತ್ಯಂತ ಕಡಮೆ ದರದ ಡೇಟಾ ಲಭ್ಯವಾಗುತ್ತಿದೆ. ಈಗ ಸ್ಪರ್ಧೆ ಅತ್ಯಂತ ಗರಿಷ್ಠಮಟ್ಟಕ್ಕೆ ಮುಟ್ಟಿದೆ. ಈಗ ಲಭ್ಯವಾಗುತ್ತಿರುವ ಸೇವೆಗಳು ದರ ಕಡಿತ ಮಾಡುವುದು ಮೊಬೈಲ್ ಕಂಪನಿಗಳಿಗೆ ಸಾಧ್ಯವಿಲ್ಲ. ಬರುವ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ದರ ಪಾವತಿ ಮಾಡಲು ಸಿದ್ಧವಾಗುವುದು ಅನಿವಾರ್ಯವಾಗುತ್ತದೆ.

Airtel ಏರ್ಟೆಲ್ ರಿಲಯನ್ಸ್ ಜಿಯೋ Reliance Jio Idea Cellular ಐಡಿಯಾ ಸೆಲ್ಯುಲಾರ್ Vodafone BSNL Price War ವೋಢಾಫೋನ್ ಬಿಎಸ್ಎನ್ಎಲ್ ದರ ಸಮರ
ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?