ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ

ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್, ಆವೆನ್ ದರ ಶೇ.7ರಿಂದ 10ರಷ್ಟು ದರ ಇಳಿಕೆ

ಸರಕು ಮತ್ತು ಸೇವಾ ತೆರಿಗೆ ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಶೇ.28ರಷ್ಟು ತೆರಿಗೆ ವ್ಯಾಪ್ತಿಯಲ್ಲಿದ್ದ ಗೃಹೋಪಯೋಗಿ ವಸ್ತುಗಳ ಶೇ.18ರ ವ್ಯಾಪ್ತಿಗೆ ಬಂದಿವೆ. ಪರಿಷ್ಕೃತ ತೆರಿಗೆ ದರವು ಜುಲೈ 27ರಿಂದ ಜಾರಿಯಾಗಿದೆ. ಕಂಪನಿಗಳು ಜುಲೈ 28ರಿಂದಲೇ ದರ ಕಡಿತ ಮಾಡಿವೆ. ಈಗ ಗೃಹೋಪಯೋಗಿ ವಸ್ತುಗಳ ಕೊಳ್ಳಲು ಸಕಾಲ!

ರೇಣುಕಾಪ್ರಸಾದ್ ಹಾಡ್ಯ

ಸರಕು ಮತ್ತು ಸೇವಾ ತೆರಿಗೆ ಮಂಡಳಿ ಇತ್ತೀಚೆಗೆ ನೂರಕ್ಕೂ ಹೆಚ್ಚು ಸರಕು ಮತ್ತು ಸೇವೆಗಳ ತೆರಿಗೆಯನ್ನು ಪರಿಷ್ಕರಿಸಿದೆ. ಈ ಪೈಕಿ ಗೃಹೋಪಯೋಗಿ ವಸ್ತುಗಳು ಪ್ರಮುಖವಾದುವು. ಜಿಎಸ್ಟಿ ಜಾರಿಯಾದ ಸಂದರ್ಭದಲ್ಲಿ ಬಹುತೇಕ ಗೃಹೋಪಯೋಗಿ ವಸ್ತುಗಳನ್ನು ಗರಿಷ್ಠ ತೆರಿಗೆ ಅಂದರೆ, ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ ಇಡಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಜುಲೈ 21ರಂದು ನಡೆದ ಜಿಎಸ್ಟಿ ಮಂಡಳಿ 28ನೇ ಸಭೆಯಲ್ಲಿ ತೆರಿಗೆ ದರವನ್ನು ಪರಿಷ್ಕರಿಸಲಾಗಿದೆ. ಗೃಹೋಪಯೊಗಿ ವಸ್ತುಗಳ ತೆರಿಗೆಯನ್ನು ತಗ್ಗಿಸಲಾಗಿದೆ. ಶೇ.28ರಷ್ಟು ತೆರಿಗೆ ದರ ವಿಧಿಸಿದ್ದ ಟಿವಿ, ಫ್ರಿಡ್ಜ್, ಐರನ್ ಬಾಕ್ಸ್, ಆವೆನ್, ವಾಷಿಂಗ್ ಮಷೀನ್, ಕಾಫಿ ಮೇಕರ್, ಟೋಸ್ಟ್ ಮೇಕರ್, ವಾಕ್ಯುಮ್ ಕ್ಲೀನರ್‌ಗಳನ್ನು ಶೇ.18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ.

ಪರಿಷ್ಕೃತ ತೆರಿಗೆ ದರವು ಜುಲೈ 27ರಿಂದ ಅನ್ವಯವಾಗಿದೆ. ಕಂಪನಿಗಳು ಜುಲೈ 28ರಿಂದಲೇ ಪರಿಷ್ಕೃತ ದರದಲ್ಲಿ ಮಾರಾಟ ಮಾಡಲಾರಂಭಿಸಿವೆ. ತೆರಿಗೆ ಪರಿಷ್ಕರಿಸಿದ ನಂತರ ಬಹುತೇಕ ಗೃಹೋಪಯೋಗಿ ವಸ್ತುಗಳು ಶೇ.8-10ರಷ್ಟು ಅಗ್ಗವಾಗಿವೆ. ಅಂದರೆ, ಈ ವಸ್ತುಗಳ ಮೇಲೆ ವಿಧಿಸುತ್ತಿದ್ದ ಶೇ.28ರ ತೆರಿಗೆ ಬದಲಿಗೆ ಶೇ.18ರ ತೆರಿಗೆ ವಿಧಿಸಲಾಗುತ್ತಿದೆ. ಕಡಿತವಾದ ಶೇ.10ರ ತೆರಿಗೆಯ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಈ ಬೆಳವಣಿಗೆಯಿಂದ ಇನ್ನೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸದ ಕೆಳ ಮಧ್ಯಮವರ್ಗದ ಕುಟುಂಬಗಳಿಗೆ ಅನುಕೂಲವಾಗಲಿದೆ. ಮುಖ್ಯವಾಗಿ, ಅರೆನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳಿಂದ ಈ ವಸ್ತುಗಳಿಗೆ ಬೇಡಿಕೆ ಹೆಚ್ಚಲಿದೆ. ಜಿಎಸ್ಟಿ ತೆರಿಗೆ ಕಡಿತ ಮಾಡಿದ ಕೂಡಲೇ ಗೃಹೋಪಯೋಗಿ ವಸ್ತುಗಳ ತಯಾರಕ ಕಂಪನಿಗಳ ಷೇರುಗಳ ದರ ಜಿಗಿದಿದೆ. ಮುಂಬರುವ ವರ್ಷಗಳಲ್ಲಿ ಮಾರಾಟ ಹೆಚ್ಚಳವಾಗಿ ಲಾಭಾಂಶವು ಹೆಚ್ಚಳವಾಗುವ ನಿರೀಕ್ಷೆ ಹೂಡಿಕೆದಾರರಲ್ಲಿದೆ.

ಕೆಳಮಧ್ಯಮ ವರ್ಗದ ಕುಟುಂಬಗಳಲ್ಲಿ ಇನ್ನೂ ಹಳೆಯ ಕಾಲದ ದೊಡ್ಡ ಗಾತ್ರದ ಟಿವಿಗಳೇ ಬಳಕೆಯಲ್ಲಿವೆ. ತೆರಿಗೆ ದರ ಕಡಿತ ಮಾಡಿದ ನಂತರ ಎಲ್ಸಿಡಿ ಟಿವಿಗಳಿಗೆ ಬೇಡಿಕೆ ಬರುತ್ತದೆ. ಸದ್ಯಕ್ಕೆ 64 ಸೆಂಮೀವರೆಗಿನ ಟಿವಿಗಳಿಗೆ ತೆರಿಗೆದರ ಕಡಿತ ಮಾಡಲಾಗಿದೆ. 32 ಇಂಚು ಮೇಲ್ಪಟ್ಟ ಟೀವಿಗಳ ದರ ಯಥಾಸ್ಥಿತಿ ಇದೆ.

ವಿಶ್ರಾಂತಿಯಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದು ಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನವೇ ಸಾಕಾರವಾಗಲಿದೆ. ಜೇಟ್ಲಿ ಅವರ ಪ್ರಕಾರ ಕೇಂದ್ರ ಸರ್ಕಾರವು, ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತುಗಳನ್ನು ಹೊರತು ಪಡಿಸಿ ಉಳಿದೆಲ್ಲ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿರುವ ವಸ್ತುಗಳನ್ನು ಶೇ.18ರ ವ್ಯಾಪ್ತಿಗೆ ತರಲಿದೆ.

ಅಂದರೆ, ಬರುವ ದಿನಗಳಲ್ಲಿ ಮತ್ತಷ್ಟು ತೆರಿಗೆ ಕಡಿತ ಆಗಲಿದೆ. ಆಗ ಬೃಹತ್ ಟಿವಿಗಳ ಮೇಲಿನ ತೆರಿಗೆಯೂ ತಗ್ಗಲಿಗೆ. ಗೃಹೋಪಯೋಗಿ ವಸ್ತುಗಳ ದರ ಎಷ್ಟೇ ಇದ್ದರೂ ಅವುಗಳ ಮೇಲಿನ ತೆರಿಗೆಯು ಶೇ.18ರ ವ್ಯಾಪ್ತಿಗೆ ಬರಲಿದೆ. ಪ್ರಸ್ತುತ ಶೇ.28ರ ವ್ಯಾಪ್ತಿಯಲ್ಲಿರುವ ವಸ್ತುಗಳ ಸಂಖ್ಯೆ 39ಕ್ಕೆ ಇಳಿದಿದೆ. ಮುಂಬರುವ ದಿನಗಳಲ್ಲಿ ಕನಿಷ್ಠ 29 ವಸ್ತುಗಳನ್ನು ಶೇ.18ರ ವ್ಯಾಪ್ತಿಗೆ ತರುವ ನಿರೀಕ್ಷೆ ಇದೆ. ಉಳಿದ ಹತ್ತು ವಸ್ತುಗಳು ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರವಾಗಿದ್ದು, ಅವುಗಳ ಶೇ.28ರ ವ್ಯಾಪ್ತಿಯಲ್ಲೇ ಇರುತ್ತವೆ.

ಇದನ್ನೂ ಓದಿ : ಜಿಎಸ್ಟಿ ವ್ಯವಸ್ಥೆ ತೆರಿಗೆ ಸ್ನೇಹಿ ವ್ಯವಸ್ಥೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದೇಕೆ?

ಇದು ಭಾರತದ ಜಿಎಸ್ಟಿ ಹೆಚ್ಚಿನ ತೆರಿಗೆ ಹಂತಗಳನ್ನು ನಿಧಾನವಾಗಿ ಕಡಿತ ಮಾಡುವ ಪ್ರಯತ್ನ. ಶೇ.28ರ ವ್ಯಾಪ್ತಿಯಲ್ಲಿನ ಬಹುತೇಕ ವಸ್ತುಗಳನ್ನು ಶೇ.18ರ ವ್ಯಾಪ್ತಿಗೆ ತಂದಾಗ ಒಂದು ಹಂತ ಕಡಿತವಾಗುತ್ತದೆ. ಈಗಾಗಲೇ ಶೂನ್ಯ ತೆರಿಗೆ ದರದ ವ್ಯಾಪ್ತಿಗೆ ಶೇ.5ರ ವ್ಯಾಪ್ತಿಯಲ್ಲಿರುವ ಸರಕುಗಳನ್ನು ಸೇರಿಸಲು ಚಿಂತಿಸಲಾಗಿದೆ.

ಇದು ಸಾಧ್ಯವಾದಾಗ ಶೂನ್ಯ ತೆರಿಗೆ, ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳನ್ನು ಹೊರತು ಪಡಿಸಿದರೆ ಬಹುತೇಕ ವಸ್ತುಗಳು ಶೇ.12 ಮತ್ತು ಶೇ.18ರ ವ್ಯಾಪ್ತಿಯಲ್ಲಿ ಬರುತ್ತವೆ. ಆಗ ತೆರಿಗೆ ವ್ಯವಸ್ಥೆ ಮತ್ತಷ್ಟು ಸುಧಾರಿಸುತ್ತದೆ. ತೆರಿಗೆ ವ್ಯಾಪ್ತಿಯು ವಿಸ್ತಾರಗೊಳ್ಳುತ್ತದೆ. ತೆರಿಗೆ ಸಂಗ್ರಹವೂ ಹೆಚ್ಚುತ್ತದೆ.

GST ಜಿಎಸ್ಟಿ TV ಟಿವಿ Tax Rate Cut Washing Machines Refrigerators ತೆರಿಗೆ ದರ ಕಡಿತ ವಾಷಿಂಗ್ ಮಿಷನ್ ರೆಫ್ರಿಜಿರೇಟರ್ಸ್
ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?