ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ

ಪೈಪೋಟಿಗೆ ಇಳಿದ ಫ್ಲಿಪ್‌ಕಾರ್ಟ್, ಅಮೆಜಾನ್; ಖರೀದಿದಾರರಿಗೆ ಸುಗ್ಗಿ

ಮಾರುಕಟ್ಟೆ ವಿಸ್ತರಿಸಲು ಸದಾ ಹಬ್ಬದ ದಿನಗಳಿಗಾಗಿ ಕಾಯುವ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್ ಸ್ವಾತಂತ್ರ್ಯೋತ್ಸವದ ಹಿಂದೆ ಬಿದ್ದಿವೆ. ಬಿಗ್ ಫ್ರೀಡಂ ಸೇಲ್ ಹೆಸರಿನಲ್ಲಿ ಶೇ.30-80ರಷ್ಟು ರಿಯಾಯ್ತಿ ಘೋಷಿಸಿವೆ. ಈ ಜಿದ್ದಾಜಿದ್ದಿಯಲ್ಲಿ ಕೊನೆಗೂ ಗೆಲ್ಲುವುದು ಗ್ರಾಹಕರು ಎಂಬುದೇ ಸಮಾಧಾನ

ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಅಮೆಜಾನ್- ಫ್ಲಿಪ್‌ಕಾರ್ಟ್ ಸದಾ ಜಿದ್ದಾಜಿದ್ದಿ ನಡೆಸುತ್ತಿವೆ. ಗ್ರಾಹಕರಿಗೆ ಸೆಳೆಯಲು ಹಬ್ಬದ ದಿನಗಳಿಗಾಗಿ ಕಾಯುತ್ತವೆ. ಗರಿಷ್ಠ ಶೇ.80ರಷ್ಟು ರಿಯಾಯ್ತಿ ನೀಡುವುದು, ಒಂದೇ ರುಪಾಯಿಗೆ ಆಯ್ದ ಸರಕುಗಳನ್ನು ಮಾರಾಟ ಮಾಡುವುದು ಇ-ಕಾರ್ಮಸ್ ಕಂಪನಿಗಳ ತಂತ್ರ. ಲಾಭ-ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೆಚ್ಚು ಗ್ರಾಹಕರನ್ನು ತಲುಪುವ ಮತ್ತು ಹೆಚ್ಚು ವಹಿವಾಟು ದಾಖಲಿಸುವ ಉಮೇದು ಈ ಕಂಪನಿಗಳಿಗೆ.

ಸ್ವಾತಂತ್ರೋತ್ಸವಕ್ಕೆ ಮುಂಚಿನ ಬಿಗ್ ಫ್ರೀಡಂ ಸೇಲ್ ಈಗ ಆರಂಭವಾಗಿದೆ. ಮೊದಲು ಅಮೆಜಾನ್ ಆಗಸ್ಟ್ 9ರಂದೇ ಫ್ರೀಡಂ ಸೇಲ್ ಆರಂಭಿಸಿತು. ಫ್ಲಿಪ್‌ಕಾರ್ಟ್ ಆಗಸ್ಟ್ 10 ರಂದು ಫ್ರೀಡಂ ಸೇಲ್ ಆರಂಭಿಸಿದೆ. ವಾರಾಂತ್ಯವಿಡೀ ಗ್ರಾಹಕರಿಗೆ ಖರೀದಿ ಸುಗ್ಗಿ!

ಬಿಗ್ ಫ್ರೀಡಂ ಸೇಲ್‌ನಲ್ಲಿ ಹೆಚ್ಚು ಬಿಕರಿಯಾಗುವುದು, ಮೊಬೈಲ್, ಲ್ಯಾಪ್‌ಟಾಪ್, ಟೀವಿ ಮತ್ತು ಎಲೆಕ್ಟ್ರಾನಿಕ್ ಸರಕುಗಳು. ಇವುಗಳ ವಹಿವಾಟು ಪ್ರಮಾಣ ಗರಿಷ್ಠ ಮಟ್ಟದಲ್ಲಿರುತ್ತದೆ. ನಂತರದ್ದು ಗೃಹೋಪಯೋಗಿ ಸರಕುಗಳು. ಮಿಕ್ಸಿ, ಗ್ರೈಂಡರ್, ವಾಷಿಂಗ್ ಮಿಷನ್, ಫ್ರಿಡ್ಜ್ ಗಳು. ಈಗೀಗ ಪೀಠೋಪಕರಣಗಳನ್ನೂ ಮಾರಾಟ ಮಾಡುತ್ತಿವೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ದಿನಸಿ ವಸ್ತುಗಳ ಮಾರಾಟಕ್ಕೂ ಕೈ ಹಾಕಿವೆ.

ತಮ್ಮ ಹಳೆಯ ಟಿವಿಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಲು ಬಯಸುವ ಗ್ರಾಹಕರೇ ಇ-ಕಾಮರ್ಸ್ ಕಂಪನಿಗಳ ಮುಖ್ಯ ಗುರಿ. ಹಿಂದೆಲ್ಲ 32 ಇಂಚುಗಳ ಟೀವಿಗೆ 30,000 ರುಪಾಯಿಗಳಿತ್ತು. ಫ್ಲ್ಯಾಟ್ ಟಿವಿಗಳು ಬಂದ ನಂತರ ದರಗಳು ಇಳಿದಿವೆ. ಇದೀಗ ಸ್ಮಾರ್ಟ್ ಟಿವಿಗಳ ಕಾಲ. 32 ಇಂಚಿನ ಸ್ಮಾರ್ಟ್ ಟಿವಿಗಳು ಈಗ 12-15 ಸಾವಿರ ರುಪಾಯಿಗಳಿಗೆ ಇಳಿದಿದೆ. ಇ-ಕಾಮರ್ಸ್ ಕಂಪನಿಗಳು 32 ಇಂಚಿನ ಟಿವಿಗಳನ್ನು 10,000 ರುಪಾಯಿಗೆ ಮಾರಾಟ ಮಾಡುತ್ತಿವೆ. ಎಲ್ಇಡಿ ಟಿವಿಗಳೂ ತ್ವರಿತವಾಗಿ ಔಟ್‌ಡೇಟ್ ಆದಂತಾಗಿದೆ. ಈಗೇನಿದ್ದರೂ 4ಕೆ ರೆಸಲೂಷನ್ ಇರುವ ಟಿವಿಗಳು ಇಲ್ಲವೇ ಒಎಲ್ಇಡಿ ಟೀವಿಗಳಿಗೆ ಬೇಡಿಕೆ. ಫ್ಲಿಪ್‌ಕಾರ್ಟ್‌ನಲ್ಲಿ 52 ಇಂಚಿನ ಟಿವಿಗಳು 40,000ಕ್ಕೆ ದೊರೆಯುತ್ತವೆ.

ಅಂಗಡಿಗಳ ಮೂಲಕವೇ ಮಾರಾಟ ಮಾಡುತ್ತಿದ್ದ ಎಲ್‌ಜಿ, ಸೋನಿ ಮತ್ತಿತರ ಕಂಪನಿಗಳು ಈಗ ಆನ್‌ಲೈನ್ ಮೂಲಕ ಮಾರಾಟ ಹೆಚ್ಚಳ ಮಾಡಿಕೊಳ್ಳುತ್ತಿವೆ. ಆನ್‌ಲೈನ್ ಮಾರಾಟದಿಂದ ಕಂಪನಿಗೆ ಪ್ರತಿ ಟಿವಿ ಮಾರಾಟದ ವೆಚ್ಚವು ತಗ್ಗುತ್ತಿದೆ. ಇದನ್ನು ಗ್ರಾಹಕರಿಗೆ ವರ್ಗಾಹಿಸುತ್ತಿವೆ. ಹೀಗಾಗಿ, ಆನ್‌ಲೈನ್ ಟಿವಿ ಖರೀದಿಸುವರ ಸಂಖ್ಯೆ ಹೆಚ್ಚಿದೆ. ಹೆಚ್ಚುವರಿ ವೆಚ್ಚವಿಲ್ಲದೆ ಕಂತಿನಲ್ಲಿ ಪಾವತಿಸುವ ಸಾಲ ಸೌಲಭ್ಯ ಒದಗಿಸುವುದು ಗ್ರಾಹಕರನ್ನು ಹೆಚ್ಚು ಆಕರ್ಷಿಸುಸುತ್ತದೆ. ಅಂಗಡಿಗಳಲ್ಲಿ ಕಂತಿನ ಸಾಲ ಪಡೆದರೆ ನಿರ್ವಹಣಾ ವೆಚ್ಚ ದುಬಾರಿಯಾಗಿರುತ್ತದೆ.

ಮೊಬೈಲ್, ಟಿವಿ ಹೊರತುಪಡಿಸಿದರೆ ಲ್ಯಾಪ್‌ಟಾಪ್ ಅತಿ ಹೆಚ್ಚು ಮಾರಾಟವಾಗುತ್ತಿವೆ. ಲೆನೊವೊ, ಡೆಲ್, ಎಚ್‌ಪಿ ಕಂಪನಿಗಳು 25,000 ರು.ಗೆ ಲ್ಯಾಪ್ ನೀಡುತ್ತವೆ. ಬಹುತೇಕ ಲ್ಯಾಪ್‌ಟಾಪ್ ಮೇಲೆ ಶೇ.10ರಿಂದ 30ರಷ್ಟು ರಿಯಾಯ್ತಿ ಸಿಗುತ್ತದೆ.

ನಿತ್ಯವೂ ಮಾರುಕಟ್ಟೆಗೆ ದಾಳಿ ಇಡುವ ಹೊಸ ಮೊಬೈಲ್ ಗಳಿಗೆ ಆನ್‌ಲೈನ್ ಮಾರುಕಟ್ಟೆಯೇ ಜೀವಾಳ. ಆನ್‌ಲೈನ್‌ನಲ್ಲೇ ನೇರ ಬಿಡುಗಡೆ ಆಗುತ್ತವೆ. ಅತಿ ಹೆಚ್ಚು ರಿಯಾಯ್ತಿ ದೊರೆಯುವುದು ಮೊಬೈಲ್‌ಗಳ ಮೇಲೆಯೇ. ಆರು ತಿಂಗಳ ಹಿಂದೆ ಮಾರುಕಟ್ಟೆಗೆ ಬಂದ ಮೊಬೈಲ್ ಕನಿಷ್ಠ 25ರಷ್ಟು ರಿಯಾಯ್ತಿಯಲ್ಲಿ ದೊರೆಯುತ್ತದೆ. ಫ್ಲಿಪ್‌ಕಾರ್ಟ್‌, ಆನರ್ 7 ಮೇಲೆ 3,000 ರು. ರಿಯಾಯ್ತಿ ನೀಡುತ್ತಿದೆ. 9,000 ರುಪಾಯಿ ಇದ್ದ ಗ್ಯಾಲಕ್ಸಿ ಒನ್ 5 ಈಗ 6,000ಕ್ಕೆ ತಗ್ಗಿದೆ. ರೆಡ್ ಮಿ ನೋಟ್5 14,000 ರುಪಾಯಿ. ಎಕ್ಸ್‌ಚೇಂಜ್ ಮಾಡಿದರೆ 1000 ಹೆಚ್ಚು ರಿಯಾಯ್ತಿ.

ಇದನ್ನೂ ಓದಿ : ಒಂದೇ ದಿನ ₹80,000 ಕೋಟಿ ಮೌಲ್ಯದ ಸಂಪತ್ತು ಗಳಿಸಿದ ‘ಅಮೆಜಾನ್’ ಜೆಫ್ ಜಿಜೊಸ್

ಗೂಗಲ್ ಉತ್ಪನ್ನಗಳು ಈಗ ಆನ್‌ಲೈನ್‌ನಲ್ಲೇ ಹೆಚ್ಚು ಜನಪ್ರಿಯ. ಕ್ರೋಮ್ ಕಾಸ್ಟ್, ಗೂಗಲ್ ಹೊಮ್, ಹೋಮ್ ಮಿನಿ ಮತ್ತಿತರ ಉತ್ಪನ್ನಗಳ ಮೇಲೆ ಶೇ.20- 30ರಷ್ಟು ರಿಯಾಯ್ತಿ ಇದೆ. ಫ್ಲಿಪ್‌ಕಾರ್ಟ್‌ನಲ್ಲೇ ವಿಶೇಷವಾಗಿ ಮಾರಾಟ ಮಾಡುವ ಸರಕುಗಳಿಗೆ ಹೆಚ್ಚಿನ ರಿಯಾಯ್ತಿ ಇರುತ್ತದೆ. ಮಾರ್ಕ್ಯೂ ಇನ್ವರ್ಟರ್ ಎಸಿಯನ್ನು ಶೇ.40ರಷ್ಟು ರಿಯಾಯ್ತಿಯಲ್ಲಿ ನೀಡುತ್ತಿದೆ. ಲಿವ್ ಪ್ಯೂರ್ ವಾಟರ್ ಪ್ಯೂರಿಫೈಯರ್, ಐಎಫ್ಬಿ ಮೈಕ್ರೊವೇವ್ 9,000 ರುಪಾಯಿಗಿಂತ ಕಡಿಮೆಗೆ ಮಾರಾಟ ಮಾಡಲಾಗುತ್ತಿದೆ.

ಉಡುಗೆಗಳ ಮೇಲೆ ಗರಿಷ್ಠ ಶೇ.80ರಷ್ಟು ರಿಯಾಯ್ತಿ ಇದೆ. ನೈಕ್, ಅಡಿಡಸ್, ಟೈಟಾನ್, ಫಾಸಿಲ್, ಸ್ಕೈಬ್ಯಾಗ್ ಸೇರಿದಂತೆ ವಿವಿಧ ಪ್ರಮುಖ ಬ್ರಾಂಡ್ ಗಳ ಬ್ಯಾಗುಗಳು, ಕೈಗಡಿಯಾರ, ಸನ್ ಗ್ಲಾಸ್‌ಗಳು ಗರಿಷ್ಠ ರಿಯಾಯ್ತಿಯಲ್ಲಿ ಮಾರಾಟಕ್ಕಿವೆ. ಅಲೆನ್ ಸಾಲಿ, ಯುಎಸ್ ಪೊಲೊ, ಯುಸಿಬಿ, ಫ್ಲೈಯಿಂಗ್ ಮಿಷನ್ ನಂತರ ದುಬಾರಿ ಬ್ರಾಂಡ್ ಗಳ ಉತ್ಪನ್ನಗಳು ಭಾರಿ ರಿಯಾಯ್ತಿಯಲ್ಲಿ ನೀಡಲಾಗುತ್ತಿದೆ.

ಇಷ್ಟೆಲ್ಲ ರಿಯಾಯ್ತಿ ಜೊತೆಗೆ ಆಯ್ದ ಬ್ಯಾಂಕುಗಳ ಕಾರ್ಡ್ ಬಳಸಿ ಪಾವತಿ ಮಾಡಿದರೆ ಶೇ.5ರಿಂದ ಶೇ.10ರಷ್ಟು ಹೆಚ್ಚುವರಿ ರಿಯಾಯ್ತಿಯೂ ಲಭ್ಯವಿದೆ.

Flipkart Amazon ಅಮೆಜಾನ್ ಇ ಕಾಮರ್ಸ್ Discount E commerce Big Sale ಫ್ಲಿಪ್ ಕಾರ್ಟ್ ರಿಯಾಯ್ತಿ ಬಿಗ್ ಸೇಲ್
ಮಲ್ಲಿಕಾ ಘಂಟಿ ಪ್ರತಿಕ್ರಿಯೆ | ಸಾಂಸ್ಕೃತಿಕ ದಾದಾಗಿರಿಗೆ ಹೆದರುವವಳಲ್ಲ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?