ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ಆರ್ಥಿಕ ಸ್ವಾತಂತ್ರ್ಯಬೇಕೇ? ಉತ್ತಮ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ

ಮತ್ತೆ ಸ್ವಾತಂತ್ರ್ಯೋತ್ಸವ ಬಂದಿದೆ. ಸಂಭ್ರಮದಿಂದ ಎಲ್ಲರೂ ಆಚರಿಸುತ್ತಾರೆ. ಆದರೆ, ವಾಸ್ತವವಾಗಿ ನಮಗೆ ನಿಜವಾದ ಸ್ವಾತಂತ್ರ್ಯ ದಕ್ಕುವುದು ಆರ್ಥಿಕವಾಗಿ ಸ್ವತಂತ್ರರಾದಾಗ ಮಾತ್ರ. ಆರ್ಥಿಕ ಸ್ವಾತಂತ್ರ್ಯ ಪಡೆಯಲು ಹೋರಾಟವನ್ನೇನೂ ಮಾಡಬೇಕಿಲ್ಲ, ಜಾಣತನದಿಂದ ಹೂಡಿಕೆ ಮಾಡಬೇಕು

ರೇಣುಕಾಪ್ರಸಾದ್ ಹಾಡ್ಯ

ನಾವೆಲ್ಲರೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವ ಆಚರಿಸುವ ಸಂಭ್ರಮದಲ್ಲಿ ಇದ್ದೇವೆ. ನಿಜವಾದ ಸ್ವಾತಂತ್ರ್ಯ ದಕ್ಕುವುದು ನಮಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ. ಅಷ್ಟಕ್ಕೂ ಆರ್ಥಿಕ ಸ್ವಾತಂತ್ರ್ಯ ಎಂದರೆ ಏನು? ನಮ್ಮ ಬದುಕಿನ ಎಲ್ಲ ಭೌತಿಕ ಅಗತ್ಯಗಳನ್ನು ಪೂರೈಸುವುದೇ ಹಣ. ಹಣ ಬೇಕೆಂದರೆ ದುಡಿಯಬೇಕು. ದುಡಿಮೆಯು ಕೆಲಸದ ರೂಪದಲ್ಲಿರಬಹುದು, ವ್ಯಾಪಾರ-ವ್ಯವಹಾರ ಮತ್ತಿತರ ಯಾವುದೇ ರೂಪದಲ್ಲಿರಬಹುದು.

ಆದರೆ, ಹಣವಂತೂ ಬೇಕೇ ಬೇಕು. ಎಲ್ಲರಿಗೂ ತಮ್ಮ ಭವಿಷ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವಷ್ಟು ದುಡಿಯಲು ಸಾಧ್ಯವಾಗುವುದಿಲ್ಲ ಅಥವಾ ಎಲ್ಲರೂ ತಮ್ಮ ಅಗತ್ಯಗಳನ್ನು ಪೂರೈಸಿಕೊಂಡ ನಂತರವೂ ಹಣ ಉಳಿಯುವಷ್ಟು ದುಡಿಯಲು ಸಾಧ್ಯವಾಗದೆ ಇರಬಹುದು. ಆದರೆ, ಒಂದಂತೂ ಸತ್ಯ. ಬೀದಿಯಲ್ಲಿ ತರಕಾರಿ, ಕಡ್ಲೆಕಾಯಿ, ಪಾನಿಪೂರಿ ಮಾರಾಟ ಮಾಡುವವರೂ ತಮ್ಮ-ತಮ್ಮ ಅಗತ್ಯಗಳಿಗೆ ತಕ್ಕಷ್ಟು ದುಡಿಯುತ್ತಾರೆ. ದುಡಿದುದರಲ್ಲೇ ಸಂತೃಪ್ತರಾಗುತ್ತಾರೆ. ಹಾಗೆಯೇ ಸಾಫ್ಟ್ ವೇರ್ ಎಂಜಿನಿಯರ್‌ಗಳು, ಪೈಲಟ್‌ಗಳು, ಏರ್ ಹೋಸ್ಟಸ್ ಎಲ್ಲರೂ ದೊಡ್ಡ ಮೊತ್ತದ ಗಳಿಕೆ ಮಾಡುತ್ತಾರೆ. ದುಡಿದುದರಲ್ಲೇ ಸಂತೃಪ್ತರಾಗಿರುತ್ತಾರಾ? ಹೌದು ಅಂತ ಹೇಳಲಾಗದು.

ಆದರೆ, ಬೀದಿ ಬದಿಯ ಮಾರಾಟಗಾರರಾಗಲೀ, ವೈಟ್ ಕಾಲರ್ ಹುದ್ದೆಯಲ್ಲಿರುವವರಾಗಲೀ, ಭವಿಷ್ಯಕ್ಕಾಗಿ ಉಳಿತಾಯ ಮಾಡಲೇಬೇಕು. ಸಮಸ್ಯೆಯ ಮೂಲ ಎಂದರೆ, ಬಹುತೇಕ ಮಂದಿ ಉಲಿತಾಯ ಮಾಡುತ್ತಾರೆ. ಆದರೆ, ಉಳಿತಾಯ ಮಾಡಿದ್ದನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿದಿರುವುದಿಲ್ಲ. ಹೀಗಾಗಿ ಸಾಕಷ್ಟು ಮಂದಿ ಗಳಿಕೆಯೇ ಇಲ್ಲದ ಉಳಿತಾಯ ಖಾತೆಯಲ್ಲೇ ಹಣವನ್ನು ಉಳಿಸಿಟ್ಟಿರುತ್ತಾರೆ. ಇನ್ನೂ ಕೆಲವರು, ಅತಿ ಕಡಮೆ ಬಡ್ಡಿದರ ಬರುವ ನಿಶ್ಛಿತ ಠೇವಣಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಇಪಿಎಫ್, ಎನ್ಪಿಎಸ್‌ನಲ್ಲಿ ಹೂಡಿಕೆ ಮಾಡುವವರು ಅಷ್ಟರ ಮಟ್ಟಿಗೆ ಬುದ್ದಿವಂತರೆಂದೇ ಹೇಳಬೇಕು.

ಆದರೆ, ಬ್ಯಾಂಕ್ ಠೇವಣಿ, ಇಪಿಎಫ್, ಎನ್ಪಿಎಸ್ ಸೇರಿದಂತೆ ವಿವಿಧ ಉಳಿತಾಯ ಮಾರ್ಗಗಳಿಗಿಂತಲೂ ಉತ್ತಮ ಗಳಿಕೆ ತಂದುಕೊಡುವ ಹೂಡಿಕೆ ವಿಧಾನ ಎಂದರೆ ಮ್ಯೂಚುವಲ್ ಫಂಡ್. ಸುರಕ್ಷಿತ ಮತ್ತು ಹೆಚ್ಚಿನ ಗಳಿಕೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಜಾಣತನ.

ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ನೀವು ಉತ್ತಮ ಹೂಡಿಕೆಯ ಮೂಲಕ ಆಚರಿಸಬೇಕೆಂಬುದು ನಮ್ಮ ಆಶಯ. ಅದಕ್ಕಾಗಿ ನಾವಿಲ್ಲಿ ಹೂಡಿಕೆಯ ಮೇಲೆ ಅತಿ ಹೆಚ್ಚು ಗಳಿಕೆ ತಂದುಕೊಟ್ಟಿರುವ ಐದು ಮ್ಯೂಚುವಲ್ ಫಂಡ್‌ಗಳ ಬಗ್ಗೆ ನಿಮಗೆ ವಿವರ ನೀಡುತ್ತಿದ್ದೇವೆ. ಹೂಡಿಕೆಯ ಬಗೆಗಿನ ಅರಿವು ಹೆಚ್ಚಿಸುವುದಷ್ಟೇ ನಮ್ಮ ಉದ್ದೇಶವೇ ಹೊರತು ಇದು ಶಿಫಾರಸು ಅಲ್ಲ. ಅಲ್ಲದೆ, ಮ್ಯೂಚುವಲ್ ಫಂಡ್ ಗಳಿಕೆಯು ಮಾರುಕಟ್ಟೆಯ ಏರಿಳಿತವನ್ನು ಆಧರಿಸಿರುತ್ತದೆ. ಹಿಂದಿನ ಗಳಿಕೆಯೂ ಮುಂದೆಯೂ ಇರುತ್ತದೆಂದು ಭಾವಿಸಬೇಕಿಲ್ಲ.

ಈಗಾಗಲೇ ನಾವು ವಿವರಿಸಿದಂತೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (ಎಸ್ಐಪಿ) ಮೂಲಕ ಹೂಡಿಕೆ ಮಾಡಲು ಆರಂಭಿಸಿ. ಕನಿಷ್ಠ 500 ರುಪಾಯಿಗಳಿಂದ ಗರಿಷ್ಠ ಎಷ್ಟು ಮೊತ್ತವನ್ನಾದರೂ ಹೂಡಿಕೆ ಮಾಡಬಹುದು. ಸಾಮಾನ್ಯವಾಗಿ ಠೇವಣಿ, ಇಪಿಎಫ್, ಎನ್ಪಿಎಸ್ ಮತ್ತಿತರ ಹೂಡಿಕೆ ಯೋಜನೆಗಳಲ್ಲಿ ವಾರ್ಷಿಕ ಗಳಿಕೆಯು ಶೇ.6-8.5ರಷ್ಟಿದೆ. ಆದರೆ, ಮ್ಯೂಚುವಲ್ ಫಂಡ್ ಗಳಲ್ಲಿ ವಾರ್ಷಿಕ ಗಳಿಕೆಯು ಶೇ.15-25ರಷ್ಟು ಇದೆ. ಆದರೆ, ದೀರ್ಘಕಾಲದ ಹೂಡಿಕೆ ಮಾಡಿದರೆ ಮಾತ್ರ ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಮಾಡಬಹುದು.

ಹೀಗಾಗಿ, ಹೂಡಿಕೆ ಮಾಡುವವರು ಭವಿಷ್ಯದಲ್ಲಿ ಮಕ್ಕಳ ಶಿಕ್ಷಣ, ಉನ್ನತ ಶಿಕ್ಷಣ, ಮದುವೆ, ನಿವೇಶನ ಖರೀದಿ, ಮನೆ ನಿರ್ಮಾಣ, ಫ್ಲ್ಯಾಟ್ ಖರೀದಿ ಮತ್ತಿತರ ದೀರ್ಘಾವಧಿ ಗುರಿಗಳನ್ನು ಸಾಧಿಸುವ ಸಲುವಾಗಿ ದೀರ್ಘಕಾಲದ ಹೂಡಿಕೆಯನ್ನು ಈಗಿನಿಂದಲೇ ಆರಂಭಿಸಬೇಕು. ಕನಿಷ್ಠ 5 ವರ್ಷ ಹೂಡಿಕೆ ಮಾಡಿದರೆ ಮ್ಯೂಚುವಲ್ ಫಂಡ್ ಗಳಲ್ಲಿನ ಗರಿಷ್ಠ ಲಾಭ ಪಡೆಯಲು ಸಾಧ್ಯ. 10-15 ವರ್ಷಗಳ ಹೂಡಿಕೆ ಮಾಡಿದವರು ತಾವು ಎಂದೂ ನಿರೀಕ್ಷಿಸಿದಷ್ಟು ದೊಡ್ಡ ಮೊತ್ತವನ್ನು ಗಳಿಸಬಹುದು. ನಿವೃತ್ತಿ ಜೀವನದ ಬಗ್ಗೆ ಯೋಚಿಸುವವರೂ ಸುದೀರ್ಘ ಅವಧಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ.

ಐದು ಉತ್ತಮ ಮ್ಯೂಚುವಲ್ ಫಂಡ್‌ಗಳು

ಯೂನಿಟ್ ದರ, ಗಳಿಕೆ, ಶೇಕಡವಾರು ಸರಾಸರಿ ಗಳಿಕೆ 2018ರ ಆಗಸ್ಟ್ 10ರಂದು ಇದ್ದಂತೆ. ಒಂದು ವರ್ಷ ಮೇಲ್ಪಟ್ಟ ಗಳಿಕೆಯು ಸರಾಸರಿ ಪ್ರತಿ ವಾರ್ಷಿಕ ಗಳಿಕೆ. ಇವೆಲ್ಲವೂ ಕ್ರಿಸಿಲ್ ರೇಟಿಂಗ್ ಏಜೆನ್ಸಿ ಫೈವ್ ಸ್ಟಾರ್ ರೇಟಿಂಗ್ ನೀಡಿರುವ ಫಂಡ್‌ಗಳು.

1. ಅ್ಯಕ್ಸಿಸ್ ಬ್ಲೂಚಿಪ್ ಫಂಡ್- ಡೈರೆಕ್ಟ್ ಪ್ಲಾನ್ (ಗ್ರೋತ್)

ಯೂನಿಟ್ ದರ: 30.45

1 ತಿಂಗಳು: 2.75

3 ತಿಂಗಳು: 9.91

6 ತಿಂಗಳು: 17.01

1 ವರ್ಷ: 25.41

2 ವರ್ಷ: 21.01

3 ವರ್ಷ: 13.74

5 ವರ್ಷ: 20.11

2. ಆ್ಯಕ್ಸಿಸ್ ಮಿಡ್ ಕ್ಯಾಪ್ ಫಂಡ್ - ಡೈರೆಕ್ಟ್ ಪ್ಲಾನ್ (ಗ್ರೋತ್)

ಯೂನಿಟ್ ದರ: 39.32

1 ತಿಂಗಳು: 4.17

3 ತಿಂಗಳು: 5.32

6 ತಿಂಗಳು: 13.81

1 ವರ್ಷ: 26.61

2 ವರ್ಷ: 20.03

3 ವರ್ಷ: 11.01

5 ವರ್ಷ: 28.31

3. ಎಚ್ಡಿಎಫ್ಸಿ ಸ್ಮಾಲ್ ಕ್ಯಾಪ್ ಫಂಡ್ - ಡೈರೆಕ್ಟ್ ಪ್ಲಾನ್ (ಗ್ರೋತ್)

ಯೂನಿಟ್ ದರ: 47.46

1 ತಿಂಗಳು: 1.83

3 ತಿಂಗಳು: 4.01

6 ತಿಂಗಳು: 0.84

1 ವರ್ಷ: 26.01

2 ವರ್ಷ: 25.56

3 ವರ್ಷ: 19.24

5 ವರ್ಷ: 26.81

4. ಇನ್ವೆಸ್ಕೊ ಗ್ರೋತ್ ಅಪಾರ್ಚುನಿಟೀಸ್ ಫಂಡ್- ಡೈರೆಕ್ಟ್ ಪ್ಲಾನ್ (ಗ್ರೋತ್)

ಯೂನಿಟ್ ದರ: 37.62

1 ತಿಂಗಳು: 4.11

3 ತಿಂಗಳು: 4.31

6 ತಿಂಗಳು: 8.52

1 ವರ್ಷ: 20.01

2 ವರ್ಷ: 20.38

3 ವರ್ಷ: 14.46

5 ವರ್ಷ: 23.51

5. ಐಸಿಐಸಿಐ ಪ್ರುಡೆನ್ಷಿಯಲ್ ಬ್ಲೂಚಿಪ್ ಫಂಡ್ - ಡೈರೆಕ್ಟ್ ಪ್ಲಾನ್ (ಗ್ರೋತ್)

ಯೂನಿಟ್ ದರ: 44.23

1 ತಿಂಗಳು: 4.51

3 ತಿಂಗಳು: 4.73

6 ತಿಂಗಳು: 5.34

1 ವರ್ಷ: 15.01

2 ವರ್ಷ: 17.08

3 ವರ್ಷ: 12.65

5 ವರ್ಷ: 20.21

ಇದನ್ನೂ ಓದಿ : ಸಂಪತ್ತು ವೃದ್ಧಿಸುವ ಮ್ಯೂಚುವಲ್ ಫಂಡ್; ಹೂಡಿಕೆಗೆ ಮುನ್ನ ತಿಳಿಯಿರಿ ನಾಲ್ಕಂಶ
Investment ಹೂಡಿಕೆ ಮ್ಯೂಚುವಲ್ ಫಂಡ್ ಗಳಿಕೆ Savings ಉಳಿತಾಯ Mutual Funds Blue Chip Fund Retruns ಬ್ಲೂಚಿಪ್ ಫಂಡ್
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?