ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ಡಾಲರ್ ವಿರುದ್ಧ 70ರ ನಿರ್ಣಾಯಕ ಮಟ್ಟಕ್ಕೆ ಕುಸಿದ ರುಪಾಯಿ; ಮುಂದೇನು?

ನಿರೀಕ್ಷಿತ ಅವಧಿಗಿಂತ ಮುನ್ನವೇ ಡಾಲರ್ ವಿರುದ್ಧ ರುಪಾಯಿ 70ರ ಮಟ್ಟಕ್ಕೆ ಕುಸಿದಿದೆ. ರುಪಾಯಿ ಕುಸಿತ ತಡೆಗೆ ಆರ್‌ಬಿಐ ಕೈಗೊಂಡ ಸುರಕ್ಷತಾ ಕ್ರಮಗಳೂ ಕುಸಿತ ತಡೆಯಲು ಸಾಧ್ಯವಾಗಿಲ್ಲ. ರುಪಾಯಿ ಕುಸಿತ ಇಲ್ಲಿಗೇ ನಿಲ್ಲುತ್ತದೆಂದೂ ನಿರೀಕ್ಷಿಸುವಂತಿಲ್ಲ. ರುಪಾಯಿ ಕುಸಿತದ ಮುಂದಿನ ನಿರ್ಣಾಯಕ ಮಟ್ಟ 75

ರೇಣುಕಾಪ್ರಸಾದ್ ಹಾಡ್ಯ

ಸತತ ಕುಸಿತದ ಹಾದಿಯಲ್ಲಿರುವ ರುಪಾಯಿ ನಿರ್ಣಾಯಕ ಮಟ್ಟವಾದ 70ರ ಗಡಿ ದಾಟಿದೆ. ಮಂಗಳವಾರದ (ಆ.14) ದಿನದ ವಹಿವಾಟಿನಲ್ಲಿ 11 ಗಂಟೆಗೆ ರುಪಾಯಿ 70ರ ಗಡಿ ದಾಟಿ 70.10ಕ್ಕೆ ಕುಸಿದಿದೆ. ಮೊದಲೇ ಸಿದ್ಧಗೊಂಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದಾಸ್ತಾನಿನಲ್ಲಿದ್ದ ಡಾಲರ್‌ಗಳನ್ನು ಮಾರಾಟ ಮಾಡಲು ಮುಂದಾದ ಕಾರಣ ರುಪಾಯಿ ಮತ್ತಷ್ಟು ಕುಸಿಯುವುದು ತಪ್ಪಿತು.

ಆದರೆ, 70ರ ನಿರ್ಣಾಯಕ ಮಟ್ಟ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಮಟ್ಟ ದಾಟಿದ ನಂತರ ರುಪಾಯಿ ಮತ್ತಷ್ಟು ತ್ವರಿತವಾಗಿ ಕುಸಿಯಲಿದೆ. ಈ ಕುಸಿತದ ತಡೆ 75ರ ಆಜುಬಾಜಿನಲ್ಲಿ ನಿಲ್ಲಬಹುದು. ಆದರೆ, ಆರ್‌ಬಿಐ ತನ್ನ ದಾಸ್ತಾನಿನಲ್ಲಿರುವ ಡಾಲರ್ ಮಾರಾಟಕ್ಕೆ ಇಳಿದರೆ ವಿದೇಶಿ ವಿನಿಮಯ ಮೀಸಲು ತ್ವರಿತವಾಗಿ ಕರಗಿಹೋಗಲಿದೆ. ಆ ಅಪಾಯವು ನಮ್ಮ ಮುಂದೆ ಇದೆ. ಆದರೆ, ರುಪಾಯಿ ಮೌಲ್ಯ ಕುಸಿತವು ಹಣದುಬ್ಬರಕ್ಕೆ ಕಾರಣವಾಗಲಿದೆ. ಇದು ಆರ್‌ಬಿಐ ಅನ್ನು ಚಿಂತೆಗೆ ಈಡುಮಾಡುವ ಸಂಗತಿ.

ಈ ನಡುವೆ, ರುಪಾಯಿ ತ್ವರಿತ ಕುಸಿತಕ್ಕೆ ಟರ್ಕಿ ದೇಶದ ಲಿರಾ ಕುಸಿತವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಟರ್ಕಿ ಲಿರಾ ಕುಸಿಯುವುದಕ್ಕೆ ಮುನ್ನವೇ ರುಪಾಯಿ ಕುಸಿತ ಆರಂಭವಾಗಿತ್ತು. 2018ರಲ್ಲಿ ಡಾಲರ್ ವಿರುದ್ಧ ಶೇ.10ಕ್ಕಿಂತ ಹೆಚ್ಚು ಕುಸಿದಿದೆ. ಆದರೆ, ಟರ್ಕಿ ಲಿರಾ ಕುಸಿತ ಆರಂಭವಾದ ನಂತರ ರುಪಾಯಿ ಕುಸಿತದ ತೀವ್ರತೆ ಹೆಚ್ಚಿದೆ.

ಲಿರಾ ಕುಸಿತಕ್ಕೆ ಹೊರಗಿನ ಶಕ್ತಿಗಳು, ಮುಖ್ಯವಾಗಿ ಅಮೆರಿಕ ಕಾರಣ ಎಂದು ಟರ್ಕಿ ಅಧ್ಯಕ್ಷ ಆರ್ ಟಿ ಎರ್ಡಗಾನ್ ಆರೋಪಿಸಿದ್ದಾರೆ. ಭಾರತ ಸರ್ಕಾರ ಕೂಡ ಅದೇ ಹಾದಿ ಹಿಡಿದಿದೆ. “ರುಪಾಯಿ ತ್ವರಿತ ಕುಸಿತಕ್ಕೆ ಹೊರಗಿನ ಶಕ್ತಿಗಳೇ ಕಾರಣ, ಜಾಗತಿಕ ವಿದ್ಯಮಾನಗಳೂ ಕಾರಣ. ರಿಸರ್ವ್ ಬ್ಯಾಂಕ್ ಡಾಲರ್ ಮಾರಾಟ ಮಾಡಿ ರುಪಾಯಿ ಕುಸಿತ ತಡೆಯಲು ಯತ್ನಿಸಿದ್ದರೂ ಅದರಿಂದ ನಿರೀಕ್ಷಿತ ಫಲಿತಾಂಶ ದಕ್ಕಿಲ್ಲ,” ಎಂದು ಕೇಂದ್ರ ಸರ್ಕಾರ ಹೇಳಿದೆ.

“ರುಪಾಯಿ 80ರ ಮಟ್ಟಕ್ಕೆ ಕುಸಿದರೂ ನಾವು ಆತಂಕ ಪಡಬೇಕಿಲ್ಲ. ಏಕೆಂದರೆ, ಬಹುತೇಕ ಎಲ್ಲ ಕರೆನ್ಸಿಗಳೂ ಅಪಮೌಲ್ಯಗೊಂಡಿವೆ,” ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಹೇಳಿದ್ದಾರೆ. ಈ ಹಂತದಲ್ಲಿ ಆತಂಕ ಪಡುವಂಥದ್ದೇನೂ ಇಲ್ಲ ಎಂಬುದು ಅವರ ಅಭಿಪ್ರಾಯ.

“ಡಾಲರ್ ವಿರುದ್ಧ ಬಹುತೇಕ ಎಲ್ಲ ಕರೆನ್ಸಿಗಳೂ ಅಮೌಲ್ಯಗೊಂಡಿವೆ. ಆದರೆ, ಇತರ ಕರೆನ್ಸಿಗಳು ಅಪಮೌಲ್ಯಗೊಂಡಿರುವ ಪ್ರಮಾಣಕ್ಕೆ ಹೋಲಿಸಿದರೆ ಭಾರತೀಯ ರುಪಾಯಿ ಕುಸಿತವು ಅತ್ಯಲ್ಪ,” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನಿಶ್ ಕುಮಾರ್ ಹೇಳಿದ್ದಾರೆ. “ರುಪಾಯಿ 69-70ರ ಆಜುಬಾಜಿನಲ್ಲಿ ಸ್ಥಿರಗೊಳ್ಳುತ್ತದೆಂದು ನನಗನಿಸುತ್ತದೆ. ಭಾರತಕ್ಕೆ ಹರಿದುಬರುತ್ತಿರುವ ಈಕ್ವಿಟಿ, ಬಾಂಡ್ ಮೇಲಿನ ಹೂಡಿಕೆ ಗಮನಿಸಿದರೆ 69-70ರ ಮಟ್ಟವು ವಿದೇಶಿ ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ,” ಎಂದು ಹೇಳಿದ್ದಾರೆ.

ಸಾರ್ವಕಾಲಿಕ ಕನಿಷ್ಠ ಮಟ್ಟವಾದ 70.10ಕ್ಕೆ ಹೋಲಿಸಿದಾಗ, 2018ರ ಜನವರಿಯಿಂದೀಚೆಗೆ ರುಪಾಯಿ ಶೇ.10ರಷ್ಟು ಕುಸಿದಿದೆ. ಬರುವ ದಿನಗಳಲ್ಲಿ ರುಪಾಯಿ ಮೌಲ್ಯವು ಹೆಚ್ಚು ಏರಿಳಿತದಿಂದ ಕೂಡಿರುತ್ತದೆಂದು ಬಹುತೇಕ ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ.

“ಟರ್ಕಿಯ ಲಿರಾ ಕುಸಿತದ ಪರಿಣಾಮ ಉದಯಿಸುತ್ತಿರುವ ಮಾರುಕಟ್ಟೆಗಳ ಮೇಲೆ ಬೀರಿದ ವ್ಯತಿರಿಕ್ತ ಪರಿಣಾಮದ ಸೋಂಕಿಗೆ ಭಾರತದ ರುಪಾಯಿಯೂ ಬಲಿಯಾಗಿದೆ. 69ರ ಮಟ್ಟಕ್ಕೆ ಕುಸಿಯಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಹಿಂಪಡೆದದ್ದೇ ಮುಖ್ಯ ಕಾರಣ,” ಎಂದು ಐಸಿಐಸಿಐ ಬ್ಯಾಂಕ್ ಗ್ಲೋಬಲ್ ಮಾರ್ಕೆಟ್ ಮುಖ್ಯಸ್ಥರಾದ ಬಿ ಪ್ರಸನ್ನ ಹೇಳಿದ್ದಾರೆ. “ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಎಲ್ಲಿವರೆಗೆ ಈಗಿನ ದರದಲ್ಲೇ ಸ್ಥಿರವಾಗಿರುತ್ತದೋ ಅಲ್ಲಿವರೆಗೂ ರುಪಾಯಿಯು ಡಾಲರ್ ವಿರುದ್ಧ 69.50-70.25ರ ನಡುವೆ ಜೀಕುತ್ತಿರುತ್ತದೆ,” ಎಂದು ಎಸ್ಸೆಲ್ ಫೈನಾನ್ಸ್ ವಿಕೆಸಿ ಫಾರೆಕ್ಸ್ ಸಿಇಒ ಸಲಿಲ್ ದಾತರ್ ಹೇಳಿದ್ದಾರೆ.

ಇದನ್ನೂ ಓದಿ : ರುಪಾಯಿ ಮೌಲ್ಯ ಕುಸಿತದಿಂದ ಆರ್ಥಿಕತೆ ಮೇಲಾಗುವ ಪರಿಣಾಮಗಳೇನು ಗೊತ್ತೇ?

ಡಾಲರ್ ವಿರುದ್ಧ ರುಪಾಯಿ ಕುಸಿತಕ್ಕೆ ಹೊರಗಿನ ಶಕ್ತಿಗಳೇ ಕಾರಣ ಎಂದು ಕೇಂದ್ರ ಸರ್ಕಾರ ದೂರಿದೆ. ಆದರೆ, ರುಪಾಯಿ ಮೌಲ್ಯ ಕುಸಿತಕ್ಕೆ ದೇಶದ ಚಾಲ್ತಿ ಖಾತೆ ಕೊರತೆ ಮತ್ತು ಆಮದು-ರಫ್ತು ನಡುವಿನ ಅಸಮತೋಲನವೂ ಪ್ರಮುಖ ಕಾರಣ. ಚಾಲ್ತಿ ಖಾತೆ ಕೊರತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿರುವುದು ಕಾರಣವಾದರೆ, ಆಮದು ಮತ್ತು ರಫ್ತು ನಡುವಿನ ಅಸಮತೋಲನಕ್ಕೆ ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳೇ ಕಾರಣ.

ದೇಶದ ಆರ್ಥಿಕತೆಯು ಇನ್ನೂ ಅಪನಗದೀಕರಣದ ಕರಿನೆರಳಿನಿಂದ ಪಾರಾಗಿಲ್ಲ. ಸರಕು ಮತ್ತು ಸೇವಾ ತೆರಿಗೆ ಜಾರಿಯಲ್ಲಾದ ಲೋಪಗಳು ಇನ್ನೂ ನಿವಾರಣೆ ಆಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಚಾಲ್ತಿ ಖಾತೆ ಕೊರತೆ ಜೊತೆಗೆ ವಿತ್ತೀಯ ಕೊರತೆಯು ಹಿಗ್ಗುತ್ತಿದೆ. ದೀರ್ಘಕಾಲದಲ್ಲಿ ಮಾತ್ರವೇ ಈ ಸಮಸ್ಯೆಗಳಿಗೆ ಪರಿಹಾರ ದಕ್ಕಬಹುದು. ಆದರೆ, ಈಗ ಉದ್ಭವಿಸಿರುವ ಪರಿಸ್ಥಿತಿಯು ಹಣದುಬ್ಬರಕ್ಕೆ ಕಾರಣವಾಗಲಿದೆ. ತತ್ಪರಿಣಾಮ, ಬೆಲೆ ಏರಿಕೆಯಿಂದ ಜನರು ಸಂಕಷ್ಟ ಎದುರಿಸಲಿಕ್ಕೆ ಸಿದ್ಧವಾಗುವುದು ಅನಿವಾರ್ಯ.

Inflation ಹಣದುಬ್ಬರ Turkey RBI ಆರ್ಬಿಐ ಟರ್ಕಿ Dollar ಡಾಲರ್ Rupee ರುಪಾಯಿ Lira ಲಿರಾ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?