ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ರುಪಾಯಿ ಮೌಲ್ಯ ಕುಸಿತ ತಡೆಯಲು ರಿಸರ್ವ್ ಬ್ಯಾಂಕ್ ಸಮರ್ಥವಾಗಿದೆಯೇ?

ಡಾಲರ್ ವಿರುದ್ಧ ಸತತ ಕುಸಿಯುತ್ತಿರುವ ರುಪಾಯಿ, ಶುಕ್ರವಾರದ ವಹಿವಾಟಿನಲ್ಲಿ 70.39ಕ್ಕೆ ಕುಸಿದು ಮತ್ತೊಂದು ಸಾರ್ವಕಾಲಿಕ ದಾಖಲೆ ಮಾಡಿತು. ರುಪಾಯಿ ಕುಸಿತ ತಡೆಯಲು ಆರ್‌ಬಿಐ ಸಮರ್ಥವಾಗಿಲ್ಲವೇ? ಐಎಂಎಫ್ ‘ಮೀಸಲು ನಿರ್ವಹಣೆ ಸೂಚ್ಯಂಕ’ದ ಪ್ರಕಾರ ಸಮರ್ಥವಾಗಿದೆ!

ರೇಣುಕಾಪ್ರಸಾದ್ ಹಾಡ್ಯ

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಅಡೆತಡೆಯಿಲ್ಲದೆ ಕುಸಿಯುತ್ತಿದೆ. ನಿರ್ಣಾಯಕ ಮಟ್ಟವಾದ 70ಕ್ಕೆ ಕುಸಿದ ನಂತರ ಚೇತರಿಸಿಕೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಟರ್ಕಿ ದೇಶದ ಕರೆನ್ಸಿ ಲಿರಾ ತೀವ್ರ ಕುಸಿತದ ಕಾರಣಕ್ಕೆ ಉದಯಿಸುತ್ತಿರುವ ಮಾರುಕಟ್ಟೆ ದೇಶಗಳ ಕರೆನ್ಸಿಗಳು ಕುಸಿದವು. ಭಾರತದ ಕರೆನ್ಸಿಯೂ ಕುಸಿಯಿತು. ಆದರೆ, ಟರ್ಕಿ ದೇಶದ ಅಧ್ಯಕ್ಷ ತಯ್ಯಿಪ್ ಎರ್ಡಗಾನ್ ಕೈಗೊಂಡ ತುರ್ತು ಕ್ರಮಗಳಿಂದಾಗಿ ಲಿರಾ ಕುಸಿತ ನಿಂತು ಶೇ.5ರಷ್ಟು ಚೇತರಿಸಿಕೊಂಡಿತು.

ಆದರೆ, ಭಾರತದ ರುಪಾಯಿ ಕುಸಿತ ಮಾತ್ರ ನಿಂತಿಲ್ಲ. ಶುಕ್ರವಾರದ ವಹಿವಾಟಿನಲ್ಲಿ 70.39ರ ಮಟ್ಟಕ್ಕೆ ಕುಸಿದಿತ್ತು. ವಹಿವಾಟಿನ ಅಂತ್ಯಕ್ಕೆ 70.16ಕ್ಕೆ ಕುಸಿದಿದೆ. 70ರ ಗಡಿ ದಾಟಿದರೂ ದಿನದ ವಹಿವಾಟಿನ ಅಂತ್ಯಕ್ಕೆ 69.80- 69.90ರ ಆಜುಬಾಜಿನಲ್ಲಿ ಸ್ಥಿರವಾಗುತ್ತಿದ್ದ ರುಪಾಯಿ ಕಳೆದ ಎರಡು ವಹಿವಾಟು ದಿನಗಳಿಂದ 70ರಿಂದ ಚೇತರಿಸಿಕೊಂಡಿಲ್ಲ. ಬದಲಿಗೆ, ದಿನದಿಂದ ದಿನಕ್ಕೆ ಕುಸಿತ ಹೆಚ್ಚುತ್ತಲೇ ಇದೆ. ಗುರುವಾರದ ವಹಿವಾಟಿನಲ್ಲಿ 70.36 ಕನಿಷ್ಠ ಕುಸಿದಿದ್ದ ರುಪಾಯಿ ಶುಕ್ರವಾರದ ವಹಿವಾಟಿನಲ್ಲಿ 70.39ಕ್ಕೆ ಕನಿಷ್ಠ ಕುಸಿತ ದಾಖಲಿಸಿತು. ಸದ್ಯಕ್ಕೆ ರುಪಾಯಿ ಕುಸಿತ ನಿಲ್ಲುವ ಯಾವ ಲಕ್ಷಣಗಳೂ ಇಲ್ಲ. 72-73ರವರೆಗೆ ಕುಸಿಯುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ.

ರುಪಾಯಿ ಮೌಲ್ಯ ಕುಸಿತ ತಡೆಯುವುದು ಸಾಧ್ಯವಿಲ್ಲವೇ? ಭಾರತೀಯ ರಿಸರ್ವ್ ಬ್ಯಾಂಕ್ ರುಪಾಯಿ ಮೌಲ್ಯ ಕುಸಿತವನ್ನು ತಡೆಯಲು ಸಮರ್ಥವಾಗಿದೆ. ಬ್ರಿಕ್ ದೇಶಗಳ ಪೈಕಿ ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗಿಂತಲೂ ವಿದೇಶಿ ಮೀಸಲು ನಿಧಿ ನಿರ್ವಹಣೆಯಲ್ಲಿ ಆರ್‌ಬಿಐ ಉತ್ತಮ ಸ್ಥಾನದಲ್ಲಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವಿದೇಶಿ ವೀಸಲು ನಿರ್ವಹಣೆ ಸೂಚ್ಯಂಕದ ಪ್ರಕಾರ, ಚೀನಾ ಪೀಪಲ್ಸ್ ಬ್ಯಾಂಕ್‌ಗಿಂತಲೂ ಆರ್‌ಬಿಐ ಇಂತಹ ಬಿಕ್ಕಟ್ಟುಗಳನ್ನು ಎದರಿಸಲು ಹೆಚ್ಚು ಸಮರ್ಥವಾಗಿದೆ. ಐಎಂಎಫ್ ಮೀಸಲು ನಿರ್ವಹಣೆ ಸೂಚ್ಯಂಕವು ಆಯಾ ದೇಶಗಳ ವಿದೇಶಿ ವಿನಿಮಯ ಮೀಸಲು, ಆಮದು, ರಫ್ತು, ವಿದೇಶಿ ಸಾಲ ಮತ್ತಿತರ ಅಂಶಗಳನ್ನು ಒಳಗೊಂಡಿರುತ್ತದೆ.

ಐಎಂಎಫ್ ವಿದೇಶಿ ಮೀಸಲು ಸೂಚ್ಯಂಕದಲ್ಲಿ ಬ್ರಿಕ್ ದೇಶಗಳ ಪೈಕಿ ರಷ್ಯಾ 277.2 ಅಂಶಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬ್ರೆಜಿಲ್ 155.2 ಅಂಶಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 150.7ಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ. ಚೀನಾ (85.9), ದಕ್ಷಿಣ ಆಫ್ರಿಕಾ (64.2) ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಈಗ ಬಿಕ್ಕಟ್ಟು ಎದುರಿಸುತ್ತಿರುವ ಟರ್ಕಿ ದೇಶವು 0.76 ಅಂಶದೊಂದಿಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಇದರರ್ಥ, ರುಪಾಯಿ ಕುಸಿತದ ಬಿಕ್ಕಟ್ಟನ್ನು ಆರ್‌ಬಿಐ ಸಮರ್ಥವಾಗಿ ನಿಭಾಯಿಸಬಲ್ಲದು.

ರುಪಾಯಿ ಕುಸಿತ ಆರಂಭವಾದ ನಂತರ ಆರ್‌ಬಿಐ ಇದುವರೆಗೂ 20 ಬಿಲಿಯನ್ ಡಾಲರ್‌ಗಳನ್ನು ತನ್ನ ವಿದೇಶಿ ವಿನಿಮಯ ಮೀಸಲಿನಿಂದ ಮಾರಾಟ ಮಾಡಿರಬಹುದು ಎಂಬ ಅಂದಾಜಿದೆ. ಈ ರೀತಿ ಮಾರಾಟ ಮಾಡಿದ್ದರಿಂದಾಗಿಯೇ ರುಪಾಯಿ ಮತ್ತಷ್ಟು ಕುಸಿಯುವುದನ್ನು ತಡೆಗಟ್ಟಲು ಸಾಧ್ಯವಾಗಿದೆ. ಏಪ್ರಿಲ್ ತಿಂಗಳಲ್ಲಿ ಆರ್‌ಬಿಐ ಬಳಿ ಇದ್ದ ವಿದೇಶಿ ವಿನಿಮಯ ಮೀಸಲು 426 ಬಿಲಿಯನ್ ಡಾಲರ್. ಆಗಸ್ಟ್ ಮಧ್ಯಭಾಗದಲ್ಲಿ ಇದು 403 ಬಿಲಿಯನ್ ಡಾಲರ್‌ಗೆ ಇಳಿದಿತ್ತು. 3 ಬಿಲಿಯನ್ ಡಾಲರ್ ವಿದೇಶಿ ವ್ಯಾಪಾರ ಅಸಮತೋಲನ ಸರಿದೂಗಿಸಲು ಬಳಸಿದ್ದರೂ, ಉಳಿದ 20 ಬಿಲಿಯನ್ ಡಾಲರ್‌ಗಳನ್ನು ರುಪಾಯಿ ಮೌಲ್ಯ ಕುಸಿತದ ಸಂದರ್ಭದಲ್ಲಿ ಮಾರಾಟ ಮಾಡಲಾಗಿದೆ.

403 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲು ಹೊಂದಿರುವ ಆರ್‌ಬಿಐ ಈ ಹಂತದಲ್ಲಿ ಇನ್ನೂ ಶೇ.10ರಷ್ಟು ಅಂದರೆ, 40 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿ ರುಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು ಸಮರ್ಥವಾಗಿದೆ. ಆದರೆ, ಅಷ್ಟು ಪ್ರಮಾಣದಲ್ಲಿ ಡಾಲರ್ ಮಾರಾಟ ಮಾಡುವಂತಹ ವಿಷಮ ಪರಿಸ್ಥಿತಿ ಇನ್ನೂ ಉದ್ಭವಿಸಿಲ್ಲ.

ಆರ್ಥಿಕತೆ ಮೇಲಾಗುವ ದುಷ್ಪರಿಣಾಮಗಳೇನು?

ರುಪಾಯಿ ಕುಸಿತದ ಪರಿಣಾಮವಾಗಿ ದೇಶದ ಕಚ್ಚಾತೈಲ ಆಮದು ವೆಚ್ಚವು 26 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಳವಾಗಲಿದೆ. ಕಚ್ಚಾತೈಲ ಬಿಲ್ 26 ಬಿಲಿಯನ್ ಡಾಲರ್ (1,82,000 ಕೋಟಿ ರುಪಾಯಿ) ಹೆಚ್ಚಳವಾಗಲಿದೆ. ಇದು ಬೊಕ್ಕಸಕ್ಕೆ ಭಾರಿ ಹೊರೆಯಾಗಲಿದೆ. ಭಾರತವು ಶೇ.80ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. 2017-18ರಲ್ಲಿ ಅಂದಾಜು ವಾರ್ಷಿಕ ವೆಚ್ಚ 87.7 ಬಿಲಿಯನ್ ಡಾಲರ್ ವೆಚ್ಚದಲ್ಲಿ 220.43 ದಶಲಕ್ಷ ಟನ್ ಆಮದು ಮಾಡಿಕೊಂಡಿತ್ತು.

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕಚ್ಚಾತೈಲ ಆಮದು ಪ್ರಮಾಣವು 227 ದಶಲಕ್ಷ ಟನ್‌ಗೆ ಏರಲಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 65 ಡಾಲರ್ ಮತ್ತು ಪ್ರತಿ ಡಾಲರ್‌ಗೆ 65 ರುಪಾಯಿ ಲೆಕ್ಕದಲ್ಲಿ 108 ಬಿಲಿಯನ್ ಡಾಲರ್ (7.02 ಕೋಟಿ ರುಪಾಯಿ) ಎಂಬುದು ಕೇಂದ್ರ ಸರ್ಕಾರದ ಅಂದಾಜಾಗಿತ್ತು. ಆದರೆ, ಕಚ್ಚಾತೈಲ ಏರಿಕೆ ಜೊತೆಗೆ ರುಪಾಯಿ ಮೌಲ್ಯ ಕುಸಿದಿರುವುದರಿಂದ ಪ್ರತಿ ಡಾಲರ್‌ಗೆ ಸರಾಸರಿ 67.6 ರುಪಾಯಿ ಲೆಕ್ಕದಲ್ಲಿ ಕಚ್ಚಾತೈಲ ಆಮದು ವೆಚ್ಚವು 114 ಬಿಲಿಯನ್ ಡಾಲರ್‌ಗೆ ಏರಲಿದೆ.

2018ರಿಂದೀಚೆಗೆ ರುಪಾಯಿ ಶೇ.9ರಷ್ಟು ಕುಸಿದಿದ್ದು ಏಷ್ಯಾ ಕರೆನ್ಸಿಗಳ ಪೈಕಿ ಕಳಪೆ ಸಾಧನೆ ಮಾಡಿದ ಕರೆನ್ಸಿಯಾಗಿದೆ. ಕಚ್ಚಾತೈಲ ಆಮದು ಪ್ರಮಾಣ ಹೆಚ್ಚಿದ್ದರಿಂದಾಗಿ ವ್ಯಾಪಾರ ಕೊರತೆ ಅಂದರೆ ರಫ್ತು-ಆಮದು ನಡುವಿನ ಅಂತರವು 18 ಬಿಲಿಯನ್ ಡಾಲರ್‌ಗೆ ಏರಿದೆ. ಇದು ಐದು ವರ್ಷಗಳಲ್ಲೇ ಗರಿಷ್ಠ ಮಟ್ಟ. ಇದು ಚಾಲ್ತಿ ಖಾತೆ ಕೊರತೆ ಹಿಗ್ಗಲು ಕಾರಣವಾಗಿದೆ.

ಭಾರತದ ಆಮದು ಬರೀ ಕಚ್ಚಾತೈಲಕ್ಕೆ ಮೀಸಲಾಗಿಲ್ಲ. ಚಿನ್ನದಿಂದ ಹಿಡಿದು, ಖಾದ್ಯತೈಲ, ಬಿಡಿಭಾಗಗಳು ಸೇರಿದಂತೆ ನೂರಾರು ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಪ್ರಸಕ್ತ ವಿತ್ತೀಯ ವರ್ಷದ ನಮ್ಮ ಆಮದು ಮೊತ್ತವು 600 ಬಿಲಿಯನ್ ಡಾಲರ್‌ಗಳಿಗೆ ಏರಲಿದೆ. ಕಳೆದ ವರ್ಷ ಈ ಮೊತ್ತವು 565 ಬಿಲಿಯನ್ ಡಾಲರ್‌ಗಳಷ್ಟಿತ್ತು.

ಇದನ್ನೂ ಓದಿ : ಡಾಲರ್ ವಿರುದ್ಧ 69 ಗಡಿ ಮುಟ್ಟಿದ ರುಪಾಯಿ; ಇದು ಕುಸಿತದ ಆರಂಭವೋ? ಅಂತ್ಯವೋ?

ರುಪಾಯಿ ಕುಸಿತದ ಪರಿಣಾಮವಾಗಿ ಈಗಾಗಲೇ ಕಾರುಗಳ ಬೆಲೆ ಏರಿಕೆಯಾಗಿದೆ. ಟಿವಿಗಳು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿದೆ. ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವವರಿಗೆ ರುಪಾಯಿ ಕುಸಿತ ದೊಡ್ಡ ಹೊರೆಯಾಗಿದೆ. ವಿದೇಶಗಳ ಪ್ರವಾಸವೂ ದುಬಾರಿಯಾಗಿದೆ.

ರುಪಾಯಿ ಮೌಲ್ಯ ಕುಸಿತದ ದುಷ್ಪರಿಣಾಮಗಳು ನಿಧಾನವಾಗಿ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸುತ್ತದೆ. ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ದರ ಏರುತ್ತಿದೆ. ಸಾರಿಗೆ ವೆಚ್ಚವೂ ಹೆಚ್ಚಿದೆ. ಸಾರಿಗೆ ಆಧಾರಿತ ಸರಕು ಸೇವೆಗಳ ವೆಚ್ಚವೂ ಹೆಚ್ಚಲಿದ್ದು, ಜನಸಾಮಾನ್ಯರು ನಿತ್ಯದ ವೆಚ್ಚ ಹೆಚ್ಚಲಿದೆ. ಅದೇ ಪ್ರಮಾಣದಲ್ಲಿ ಗಳಿಕೆ ಇರುವುದಿಲ್ಲ.

RBI Currency ಕರೆನ್ಸಿ ಆರ್‌ಬಿಐ IMF Dollar ಐಎಂಎಫ್ ಡಾಲರ್ Urjit Patel ಊರ್ಜಿತ್ ಪಟೇಲ್ Rupee ರುಪಾಯಿ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?