ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ನೂರು ದಿನ ವಿಶ್ರಾಂತಿ ನಂತರ ನಾರ್ತ್ ಬ್ಲಾಕ್‌ಗೆ ಬಂದ ಸಚಿವ ಅರುಣ್ ಜೇಟ್ಲಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಟ್ರಬಲ್ ಷೂಟರ್ ಎಂದೇ ಹೆಸರಾಗಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅನಾರೋಗ್ಯ ನಿಮಿತ್ತ 100 ದಿನ ವಿಶ್ರಾಂತಿ ಮುಗಿಸಿ ನಾರ್ತ್ ಬ್ಲಾಕ್‌ಗೆ ವಾಪಸಾಗಿದ್ದಾರೆ. ಅವರ ಗೈರುಹಾಜರಿಯಲ್ಲಿ ದೇಶದ ಆರ್ಥಿಕತೆಯಲ್ಲಿ ಆಗಿರುವ ಬದಲಾವಣೆಗಳೇನು?

ರೇಣುಕಾಪ್ರಸಾದ್ ಹಾಡ್ಯ

ನೂರು ದಿನಗಳ ವಿಶ್ರಾಂತಿ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಗೆ ವಾಪಸಾಗಿದ್ದಾರೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೇಟ್ಲಿ ಹಿಂದಿನಂತೆಯೇ ಲವಲವಿಕೆಯಿಂದಿದ್ದಾರೆ. ಪ್ರಧಾನಿ ಮೋದಿ ಸಂಪುಟದ ಪ್ರಮುಖ ಟ್ರಬಲ್ ಷೂಟರ್ ಎಂದೇ ಹೆಸರಾಗಿರುವ ಅರುಣ್ ಜೇಟ್ಲಿ ಅವರ ಗೈರುಹಾಜರಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹಲವು ‘ಟ್ರಬಲ್’ಗಳನ್ನು ಎದುರಿಸಿದೆ. ವಿವಿಧ ಕಾರಣಗಳಿಗಾಗಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.

ಅರುಣ್ ಜೇಟ್ಲಿ ಅವರ ಗೈರುಹಾಜರಿಯಲ್ಲಿ ಹಂಗಾಮಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ ಪರಮಾಪ್ತ ಪಿಯುಷ್ ಗೋಯಲ್ ಸಮರ್ಥವಾಗಿ ಕಾರ್ಯನಿರ್ವಹಿಸಲಿಲ್ಲ ಎಂಬ ಟೀಕೆಗಳೂ ಕೇಳಿಬಂದಿವೆ. ಹೀಗಾಗಿ, ಜೇಟ್ಲಿ ಅವರು ನಿಭಾಯಿಸಬೇಕಾದ ಹಲವು ಸವಾಲುಗಳಿವೆ.

ಜೇಟ್ಲಿ ಅವರು ತಕ್ಷಣಕ್ಕೆ ನಿಭಾಯಿಸಬೇಕಾದ ಸವಾಲು ಎಂದರೆ, ರಾಷ್ಟ್ರೀಯ ಸಾಂಖ್ಯಿಕ ಆಯೋಗ ರಚಿಸಿದ್ದ ಸುದೀಪ್ತೊ ಮಂಡಲ್ ಸಮಿತಿ ನೀಡಿದ ವರದಿಯಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಜಿಡಿಪಿ ಶೇ.8.2ರಷ್ಟಿತ್ತು ಮತ್ತು ಮೋದಿ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ಜಿಡಿಪಿ ಶೇ.7.35ರಷ್ಟಿತ್ತು ಎಂಬ ಅಂಕಿ-ಅಂಶಗಳಿಂದ ಉದ್ಭವಿಸಿರುವ ವಿವಾದ. ಈ ಅಂಕಿ-ಅಂಶಗಳು ಸತತವಾಗಿ ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಟೀಕಿಸುತ್ತಿದ್ದ ಪ್ರಧಾನಿ ಮೋದಿ ಮತ್ತವರ ತಂಡದ ಬಾಯಿ ಮುಚ್ಚಿಸುವಂತೆ ಮಾಡಿವೆ.

ಅಂಕಿ-ಅಂಶಗಳು ಹೊರಬಿದ್ದ ನಂತರ ಕೇಂದ್ರ ಸಾಂಖ್ಯಿಕ ಆಯೋಗ, ಕೇಂದ್ರ ಕಾರ್ಯಕ್ರಮ ಅನುಷ್ಠಾನ ಮತ್ತು ಸಾಂಖ್ಯಿಕ ಸಚಿವಾಲಯಗಳು ಸ್ಪಷ್ಟನೆ ನೀಡಿ, “ಪ್ರಕಟಿತ ಅಂಕಿ-ಅಂಶಗಳು ಅಧಿಕೃತವಲ್ಲ, ಅಧಿಕೃತ ಅಂಕಿ-ಅಂಶಗಳು ಇನ್ನೂ ಹೊರಬರಬೇಕಿದೆ,” ಎಂದು ವಿವಾದ ತಣಿಸಲು ವಿಫಲ ಯತ್ನ ನಡೆಸಿವೆ.

ಆದರೆ, ಕಾಂಗ್ರೆಸ್ ಪಕ್ಷ, ಮುಖ್ಯವಾಗಿ ಹಿಂದಿನ ವಿತ್ತ ಸಚಿವ ಪಿ ಚಿದಂಬರಂ ಸರಣಿ ಟ್ವೀಟ್ ಮೂಲಕ ಮೋದಿ ಸರ್ಕಾರದ ಮೇಲೆ ಅಂಕಿ-ಸಂಖ್ಯೆಗಳೊಂದಿಗೆ ದಾಳಿ ಮಾಡಿದ್ದಾರೆ. “ಪ್ರಧಾನಿ ಮೋದಿ ಇನ್ನೊಂದು ವರ್ಷದ ಅವಧಿಯಲ್ಲಾದರೂ ಚೆನ್ನಾಗಿ ಕೆಲಸ ಮಾಡಲಿ,” ಎಂದು ವ್ಯಂಗ್ಯಭರಿತ ಸಲಹೆ ನೀಡಿದ್ದಾರೆ. ಜೇಟ್ಲಿ ಅವರಿಗೆ ಈ ಅಂಕಿ-ಅಂಶಗಳಿಂದ ಎದ್ದಿರುವ ವಿವಾದವನ್ನು ತ್ವರಿತವಾಗಿ ಬಗೆಹರಿಸಬೇಕಿದೆ, ಅಷ್ಟೇ ಅಲ್ಲ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ನರೇಂದ್ರ ಮೋದಿ ಅವರ ಅವಧಿಗಿಂತ ಜಿಡಿಪಿ ಹೆಚ್ಚು ಅಭಿವೃದ್ಧಿಯಾಗಿಲ್ಲ ಎಂಬುದನ್ನು ಸಾಬೀತು ಮಾಡಬೇಕಿದೆ.

ಜೇಟ್ಲಿ ಅವರ ಗೈರುಹಾಜರಿದ್ದ ನೂರು ದಿನಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮುಖ್ಯವಾಗಿ, ಅಮೆರಿಕ ಡಾಲರ್ ವಿರುದ್ಧ ರುಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದು 70.40ಕ್ಕೆ ಮುಟ್ಟಿದೆ. ಈಗ 70ರ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಬಹುತೇಕ 70-72ರ ನಡುವೆ ಸ್ಥಿರವಾಗುವ ಸೂಚನೆಗಳಿವೆ. ಏಷ್ಯಾದ ಕರೆನ್ಸಿಗಳ ಪೈಕಿ ಭಾರತದ ಕರೆನ್ಸಿ ರುಪಾಯಿಯು ಡಾಲರ್ ವಿರುದ್ಧ ಅತಿ ಹೆಚ್ಚು ಮೌಲ್ಯ ಕಳೆದುಕೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸತತ ಎರಡನೇ ಬಾರಿ ಬಡ್ಡಿದರ ಏರಿಸಿದೆ. ಜೇಟ್ಲಿ ವಿಶ್ರಾಂತಿಗೆ ಹೋಗುವ ಮುನ್ನ ಶೇ.6ರಷ್ಟಿದ್ದ ರೆಪೊ ದರ ಈಗ ಶೇ.6.50ಕ್ಕೆ ಏರಿದೆ. ಸಹಜವಾಗಿಯೇ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ಸಾಲಗಳ ಬಡ್ಡಿದರಗಳೂ ಏರಿವೆ. ದೇಶದಲ್ಲಿ ಹಣದುಬ್ಬರ ಏರುಹಾದಿಯಲ್ಲಿದ್ದು, ಜೂನ್ ತಿಂಗಳ ಚಿಲ್ಲರೆದರ ಹಣದುಬ್ಬರ ಶೇ.5ರ ಗಡಿ ದಾಟಿದೆ. ಮಧ್ಯಮಾವಧಿ ಹಣದುಬ್ಬರವು ಶೇ.4.8ರ ಆಜುಬಾಜಿನಲ್ಲಿರುತ್ತದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದೆ. ಅಂದರೆ, ಜೇಟ್ಲಿ ಗೈರಿನಲ್ಲಿ ಹಣದುಬ್ಬರವೂ ಹೆಚ್ಚಿದೆ. ಬಡ್ಡಿದರ ಏರಿಕೆ ಮಾಡುವುದು ಹಣಕಾಸು ನಿರ್ವಹಣೆಯಲ್ಲಿನ ಲೋಪದ ಸಂಕೇತ; ಅದು ಹಣದುಬ್ಬರ ಆಗಿರಬಹುದು, ವ್ಯಾಪಾರ ಕೊರತೆ ಅಂದರೆ, ರಫ್ತು ಮತ್ತು ಆಮದು ನಡುವಿನ ಅಸಮತೋಲನ ಇರಬಹುದು.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿದ್ದು, ಇಳಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್‌ಗೆ 80 ಡಾಲರ್ ಮುಟ್ಟಿದ್ದ ಕಚ್ಚಾತೈಲ ಈಗ 74-76 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಇದರಿಂದ ಭಾರತದ ತೈಲ ಆಮದು ಬಿಲ್ 22 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಳವಾಗಲಿದೆ. ಇದು ಚಾಲ್ತಿ ಖಾತೆ ಕೊರತೆ ಹಿಗ್ಗಲು ಮತ್ತು ವಿತ್ತೀಯ ಕೊರತೆ ಹೆಚ್ಚಲು ಕಾರಣವಾಗಿದೆ.

ಜೇಟ್ಲಿ ಅವರ ಗೈರುಹಾಜರಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ನಷ್ಟದ ಪ್ರಮಾಣ ಏರಿದೆ. ಮೊದಲ ತ್ರೈಮಾಸಿಕದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ನಷ್ಟ 50 ಪಟ್ಟು ಹೆಚ್ಚಿದೆ. ಕಳೆದ ವರ್ಷ ಮೊದಲ ತ್ರೈಮಾಸಿದಲ್ಲಿ 307 ಕೋಟಿ ನಷ್ಟ ಘೋಷಿಸಿದ್ದ ಬ್ಯಾಂಕುಗಳು, ಈ ವರ್ಷ ಮೊದಲ ತ್ರೈಮಾಸಿಕದಲ್ಲಿ 16,600 ಕೋಟಿ ರುಪಾಯಿ ನಷ್ಟ ಘೋಷಿಸಿವೆ.

ಸಮಾಧಾನಪಡಬಹುದಾದ ಒಂದೇ ಅಂಶ ಎಂದರೆ, ಜೇಟ್ಲಿ ಅವರ ಗೈರುಹಾಜರಿಯಲ್ಲಿ ಷೇರುಪೇಟೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ. ನಿತ್ಯವೂ ಹೊಸ-ಹೊಸ ದಾಖಲೆ ಮಾಡುತ್ತ ಸಾಗಿದೆ. ದೇಶದ ಕರೆನ್ಸಿ ಕುಸಿಯುತ್ತಿದೆ, ಹಣದುಬ್ಬರ ಏರುತ್ತಿದೆ, ವಿತ್ತೀಯ ಖಾತೆ, ಚಾಲ್ತಿ ಖಾತೆ ಹೆಚ್ಚುತ್ತಿದೆ. ಇಷ್ಟರ ನಡುವೆಯೂ ಷೇರುಪೇಟೆ ಮಾತ್ರ ನಾಗಲೋಟದಲ್ಲಿ ಓಡುತ್ತಿರುವುದು ಅಚ್ಚರಿ ಮೂಡಿಸಿದೆ.

Inflation ಅರುಣ್ ಜೇಟ್ಲಿ ಜಿಡಿಪಿ GDP ಹಣದುಬ್ಬರ RBI ಆರ್ಬಿಐ Finance Minister Arun Jaitley ವಿತ್ತ ಸಚಿವ Rupee Piyush Goyal ಪಿಯುಶ್ ಗೋಯಲ್
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?