ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

9 ವರ್ಷದ ಬಾಲಕನಿಗೆ ಸರ್ಕಾರಿ ಗೋಮಾಳ ಮಂಜೂರು; ಎ.ಸಿ ತನಿಖೆಯಿಂದ ಬಹಿರಂಗ

ರಾಜ್ಯದ ಬಹುತೇಕ ತಹಶೀಲ್ದಾರ್‌ ಕಚೇರಿಗಳಲ್ಲಿನ ಅಧಿಕಾರಿ, ಸಿಬ್ಬಂದಿ ಮೂಲ ದಾಖಲಾತಿಗಳನ್ನೇ ತಿದ್ದಿ ಸರ್ಕಾರಿ ಜಮೀನು, ಸರ್ಕಾರಿ ಗೋಮಾಳವನ್ನು ಬಲಾಢ್ಯರಿಗೆ ಮಂಜೂರು ಮಾಡುತ್ತಿರುವ ಪ್ರಕರಣಗಳಿಗೆ ಬರವಿಲ್ಲ. ಆದರೆ ದೊಡ್ಡಬಳ್ಳಾಪುರ ಉಪವಿಭಾಗದ ಈ ಪ್ರಕರಣ ತುಸು ಭಿನ್ನವಾಗಿದೆ

ಮಹಾಂತೇಶ್ ಜಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಇಳಿತೊರೆ ಗ್ರಾಮದಲ್ಲಿ ೯ ವರ್ಷದ ಬಾಲಕನಿಗೆ ೪ ಎಕರೆ ವಿಸ್ತಿರ್ಣದ ಗೋಮಾಳ ಮಂಜೂರಾಗಿತ್ತು ಎಂಬ ಅಚ್ಚರಿಯ ಸಂಗತಿ ಇದೀಗ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಹೇಶ್‌ ಬಾಬು ಅವರ ತನಿಖೆಯಿಂದ ಈ ಪ್ರಕರಣ ಬಹಿರಂಗಗೊಂಡಿದೆ.

ಕಂದಾಯ ದಾಖಲಾತಿ ಮತ್ತು ಜಮೀನು ಮಂಜೂರಾಗಿದ್ದ ಫಲಾನುಭವಿಯ ಜನ್ಮದಿನಾಂಕ ಪ್ರಮಾಣಪತ್ರ ಪರಿಶೀಲನೆ ನಡೆಸುವ ವೇಳೆಯಲ್ಲಿ ಈ ಪ್ರಕರಣ ಪತ್ತೆಯಾಗಿದೆ. ಅಕ್ರಮವಾಗಿ ಗೋಮಾಳ ಮಂಜೂರಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ೪ ಎಕರೆ ಸರ್ಕಾರಿ ಗೋಮಾಳದ ಮಂಜೂರಾತಿ ಆದೇಶವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ತಹಶೀಲ್ದಾರ್‌ಗೆ ನಿರ್ದೇಶಿಸಿರುವ ಉಪ ವಿಭಾಗಾಧಿಕಾರಿ, ಈ ಕುರಿತು ೨೦೧೮ರ ಆಗಸ್ಟ್ ೧೪ರಂದು ಆದೇಶಿಸಿದ್ದಾರೆ. ಇದರ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶದ ಪ್ರತಿ

ದೇವನಹಳ್ಳಿ ತಾಲೂಕಿನ ಸುತ್ತಮುತ್ತಲ ಗ್ರಾಮದ ಜಮೀನುಗಳಿಗೆ ಕೋಟ್ಯಂತರ ರುಪಾಯಿ ಬೆಲೆ ಇದೆ. ಹೀಗಾಗಿಯೇ, ಕಂದಾಯ ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿ ಪಹಣಿ ಸೇರಿದಂತೆ ಕಂದಾಯ ದಾಖಲೆಗಳನ್ನು ತಿದ್ದುತ್ತಿದ್ದಾರೆ. ೧೯೬೫-೬೬, ೧೯೬೭-೬೮, ೧೯೬೮-೬೯ನೇ ಸಾಲಿನಲ್ಲಿ ಮಂಜೂರಾಗಿರುವ ಹಾಗೆ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಅಲ್ಲದೆ, ೧೯೬೦ರ ದಶಕದಲ್ಲಿ ಗೋಮಾಳವನ್ನು ಮಂಜೂರು ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶಗಳೇ ಇರಲಿಲ್ಲ; ಕಾನೂನಿಗೆ ತಿದ್ದುಪಡಿಯನ್ನೂ ತಂದಿರಲಿಲ್ಲ! ಆದರೆ, ಭೂಗಳ್ಳರೊಂದಿಗೆ ಕೈಜೋಡಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು, ೧೯೬೫ರಲ್ಲೇ ಮಂಜೂರಾಗಿದೆ ಎಂಬಂತೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಇಂತಹ ಆರೋಪಗಳಿಗೆ ೯ ವರ್ಷದ ಬಾಲಕನಿಗೆ ಗೋಮಾಳ ಮಂಜೂರಾಗಿದ್ದ ಪ್ರಕರಣ ಪುಷ್ಟಿ ನೀಡಿದೆ.

ಇದನ್ನೂ ಓದಿ : ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

ಪ್ರಕರಣದ ವಿವರ: ದೇವನಹಳ್ಳಿ ತಾಲೂಕಿನ ಕುಂದಣ ಹೋಬಳಿಯ ಇಳಿತೊರೆ ಗ್ರಾಮದ ಮುನಿಯಪ್ಪ ಎಂಬುವರಿಗೆ ಸರ್ವೆ ನಂಬರ್ ೪೬/೨, ೪೬/ಪಿ೨ರಲ್ಲಿ ೪ ಎಕರೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಗೋಮಾಳ ೧೯೬೫ರ ಸೆ.೮ರಂದು ಮಂಜೂರಾಗಿತ್ತು. ಅಲ್ಲದೆ, ೧೯೭೦ರ ಸೆ.೧೦ರಂದು ಸಾಗುವಳಿ ಚೀಟಿ ಕೂಡ ನೀಡಲಾಗಿತ್ತು. ಕಂದಾಯ ದಾಖಲಾತಿಗಳಲ್ಲಿ ಮುನಿಯಪ್ಪ ಹೆಸರು ಸೇರ್ಪಡೆಯಾಗಿತ್ತು.

ಇದೇ ಜಮೀನು ೨೦೦೭ರ ನವೆಂಬರ್‌ ೧೫ರಂದು ಅಂಬುಜ ಎಂಬುವರಿಗೆ ಮಾರಾಟವಾಗಿತ್ತು. ಇದಾದ ೩ ವರ್ಷಗಳ ನಂತರ ಅಂದರೆ, ೨೦೧೦ರ ಅಕ್ಟೋಬರ್‌ ೧೩ರಂದು ನೀರಜ್‌ ಮೌರ್ಯ ಎಂಬುವರಿಗೆ ಮಾರಾಟವಾಗಿ, ಕರಾರು ಪತ್ರ ನೋಂದಣಿ ಆಗಿರುವುದು ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶದಿಂದ ತಿಳಿದುಬಂದಿದೆ. ನೀರಜ್‌ ಮೌರ್ಯ ಎಂಬುವರು ಬೆಂಗಳೂರು ನಗರದ ಒಎಂಬಿಆರ್ ಬಡಾವಣೆ ನಿವಾಸಿಯಾಗಿದ್ದಾರೆ.

ಆದರೆ, ಈ ದಾಖಲಾತಿಗಳ ನೈಜತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಸ್ಥಳೀಯ ತಹಶೀಲ್ದಾರ್‌, ಮಂಜೂರಾತಿಯನ್ನು ರದ್ದುಗೊಳಿಸಲು ಉಪ ವಿಭಾಗಾಧಿಕಾರಿಗೆ ವರದಿ ನೀಡಿದ್ದರು. ಮೊದಲು ಜಮೀನು ಖರೀದಿಸಿದ್ದ ಅಂಬುಜ ಅವರು ಪೋಡಿ ಮತ್ತು ಹದ್ದುಬಸ್ತು ದಾಖಲಾತಿಗೆ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ತಹಶೀಲ್ದಾರ್‌ ಕಚೇರಿಯಲ್ಲಿ ಕಂದಾಯ ದಾಖಲಾತಿಗಳು ಲಭ್ಯ ಇರಲಿಲ್ಲ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

೯ ವರ್ಷದ ಬಾಲಕನಿಗೆ ಮಂಜೂರು!: ದಾಖಲಾತಿಗಳನ್ನು ಮತ್ತಷ್ಟು ಪರಿಶೀಲನೆಗೆ ಒಳಪಡಿಸಿದ್ದ ಅಧಿಕಾರಿಗಳಿಗೆ ಇನ್ನೊಂದು ಅಚ್ಚರಿ ಕಾದಿತ್ತು. ೧೯೬೫ರಲ್ಲಿ ಗೋಮಾಳವನ್ನು ಮಂಜೂರು ಮಾಡಿಸಿಕೊಂಡಿದ್ದ ಮುನಿಯಪ್ಪ ಎಂಬುವರ ಶಾಲಾ ದಾಖಲಾತಿಯನ್ನು ಕಲೆಹಾಕಿದ್ದ ಅಧಿಕಾರಿಗಳು, ಜನ್ಮದಿನಾಂಕವನ್ನು ಪತ್ತೆಹಚ್ಚಿದ್ದರು. ದಾಖಲಾತಿಗಳ ಪ್ರಕಾರ, ೧೯೫೭ರ ಸೆಪ್ಟಂಬರ್‌ ೯ರಂದು ಜನಿಸಿದ್ದ ಮುನಿಯಪ್ಪ ಎಂಬುವರಿಗೆ ೧೯೬೭ರಲ್ಲಿ ಜಮೀನು ಮಂಜೂರಾಗಿತ್ತು. ಅಂದರೆ, ಗೋಮಾಳ ಮಂಜೂರಾಗಿದ್ದಾಗ ಮುನಿಯಪ್ಪ ಅವರ ವಯಸ್ಸು ಕೇವಲ ೯ ವರ್ಷ.

ದಾಖಲೆಗಳನ್ನು ಆಧರಿಸಿ ಉಪ ವಿಭಾಗಾಧಿಕಾರಿಗಳು ಇದೀಗ ೪ ಎಕರೆ ವಿಸ್ತೀರ್ಣದ ಗೋಮಾಳವನ್ನು ರದ್ದುಗೊಳಿಸಿದ್ದಾರಲ್ಲದೆ, ನೀರಜ್ ಮೌರ್ಯ ಎಂಬುವರಿಗೆ ಈ ಜಮೀನಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಿ ಎಸ್ ಯಡಿಯೂರಪ್ಪ ಆರ್ ವಿ ದೇಶಪಾಂಡೆ Chief Secretary ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ T M Vijaya Bhaskar R V Deshpande G Parameshwara ಜಿ ಪರಮೇಶ್ವರ B S Yediyurappa Kota Srinivas Poojary ಕೋಟ ಶ್ರೀನಿವಾಸ್ ಪೂಜಾರಿ Chief Minister H D Kumaraswamy ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ
ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ
ಗೌರಿ ಹತ್ಯೆ ಪ್ರಕರಣ: ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ನಾಲ್ವರ ಅರ್ಜಿ
ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು