ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ಬೆಂಗಳೂರಿನಲ್ಲಿ ಪೆಟ್ರೋಲ್ ₹80.58, ಡಿಸೇಲ್ ₹71.84 ಸಾರ್ವಕಾಲಿಕ ಗರಿಷ್ಠ ದರ

ಡಾಲರ್ ವಿರುದ್ಧ ರುಪಾಯಿ ಗರಿಷ್ಠ ಮಟ್ಟಕ್ಕೇರಿದ್ದು, ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ, ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿವೆ. ಈ ಮಧ್ಯೆ, ಪೆಟ್ರೋಲ್ ಮತ್ತು ಡಿಸೇಲ್ ಸಹ ಅದೇ ಹಾದಿಯಲ್ಲಿ ದಾಪುಗಾಲು ಹಾಕಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ 80ರ ಗಡಿ, ಡಿಸೇಲ್ 71ರ ಗಡಿ ದಾಟಿವೆ!

ರೇಣುಕಾಪ್ರಸಾದ್ ಹಾಡ್ಯ

ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು, ನಿತ್ಯವೂ ಹೊಸ ದಾಖಲೆ ಮಾಡುತ್ತಲೇ ಇದೆ. ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ತೆರಿಗೆ ಹೆಚ್ಚಿಸಿದ್ದು ಒಂದು ಕಾರಣವಾದರೆ, ಕೇಂದ್ರ ಸರ್ಕಾರ ತಗ್ಗಿಸಬಹುದಾದ ಎಕ್ಸೈಜ್ ಸುಂಕವನ್ನು ತಗ್ಗಿಸದೆ ಇರುವುದು ಇದಕ್ಕೆ ಮತ್ತೊಂದು ಕಾರಣ.

ಮಂಗಳವಾರ (ಆ.28) ಪೆಟ್ರೋಲ್ 80.58 ರುಪಾಯಿ ಮತ್ತು ಡಿಸೇಲ್ 71.84 ರುಪಾಯಿಗೆ ಏರಿದೆ. ಜು.5ರಂದು ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಪೆಟ್ರೋಲ್ ಮೇಲೆ 1.12 ರುಪಾಯಿ ಮತ್ತು ಡಿಸೇಲ್ ಮೇಲೆ 1.14 ರುಪಾಯಿ ಹೆಚ್ಚುವರಿ ಸುಂಕ ಹೇರಿದ್ದರು. ಆ ಲೆಕ್ಕದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಂಕ ಹೇರದೆ ಇದ್ದಿದ್ದರೆ ಬೆಂಗಳೂರಿನಲ್ಲಿ ಸದ್ಯಕ್ಕೆ ಪೆಟ್ರೋಲ್ 80ರ ಗಡಿ ದಾಟುತ್ತಿರಲಿಲ್ಲ, ಡಿಸೇಲ್ 71ರ ಗಡಿ ದಾಟುತ್ತಿರಲಿಲ್ಲ.

ಆ.2ರಂದು 69.84 ರುಪಾಯಿ ಇದ್ದ ಡಿಸೇಲ್ ದರ ಒಂದೇ ತಿಂಗಳಲ್ಲಿ ಶೇ.3ರಷ್ಟು ಏರಿಕೆಯಾಗಿದೆ. 78.69 ರುಪಾಯಿ ಇದ್ದ ಪೆಟ್ರೋಲ್ 80.58ಕ್ಕೆ ಏರಿದೆ. ಈ ಅವಧಿಯಲ್ಲಿನ ಏರಿಕೆಯು ಶೇ.3.5ರಷ್ಟಾಗಿದೆ.

ನಿತ್ಯವೂ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಸುವುದಾಗಿ ತೈಲ ಮಾರುಾಟ ಕಂಪನಿಗಳು ಹೇಳಿಕೊಳ್ಳುತ್ತವೆ. ಆದರೆ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಕುಸಿದಾಗಲೂ ದೇಶೀಯ ಮಾರುಕಟ್ಟೆ ದರ ಇಳಿಯುವುದೇ ಇಲ್ಲ. ಆ.2ರಂದು ಬ್ರೆಂಟ್ ಕ್ರೂಡ್ ದರ ಪ್ರತಿ ಬ್ಯಾರೆಲ್‌ಗೆ 73.45 ಡಾಲರ್ ಇತ್ತು. ಆ.15ರಂದು 70.76 ಡಾಲರ್‌ಗೆ ಕುಸಿಯಿತು. ಅಂದರೆ, ಶೇ.4ರಷ್ಟು ಇಳಿದಿತ್ತು. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಆ.15ರಂದು 79.65 ರುಪಾಯಿಗೆ ಏರಿತ್ತು. ಅಂತಾರಾಷ್ಟ್ರೀಯ ತೈಲ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆ ದರ ನಿಗದಿಯಾಗಿದ್ದರೆ ಪೆಟ್ರೋಲ್ ದರ 75.50ಕ್ಕೆ ಇಳಿಯಬೇಕಿತ್ತು.

ಆ.15ರ ನಂತರ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ತ್ವರಿತಗತಿಯಲ್ಲಿ ಜಿಗಿದು, ಮಂಗಳವಾರ (ಆ.28) ಪ್ರತಿ ಬ್ಯಾರೆಲ್‌ಗೆ 78 ಡಾಲರ್‌ಗೆ ಏರಿದೆ. 13 ದಿನಗಳ ಅವಧಿಯಲ್ಲಿ ಶೇ.11.50ರಷ್ಟು ಜಿಗಿದಿದೆ. ಇದರ ಮುನ್ಸೂಚನೆ ಏನೆಂದರೆ, ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಮತ್ತಷ್ಟು ತ್ವರಿತವಾಗಿ ಏರಿಕೆ ಆಗಲಿದೆ.

ನಾಲ್ಕು ಮೆಟ್ರೋ ನಗರಗಳ ಪೈಕಿ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಅತಿ ಕಡಿಮೆ ಇದೆ. ಪೆಟ್ರೋಲ್ 73.90 ಇದ್ದರೆ, ಡೀಸೆಲ್ 69.61ರಷ್ಟಿದೆ. ಆದರೆ, ಮುಂಬೈನಲ್ಲಿ ದೆಹಲಿಯ ಪೆಟ್ರೋಲ್ ದರದಷ್ಟೇ ಡೀಸೆಲ್ ದರ ಮುಟ್ಟಿದೆ. ಅಂದರೆ, ಡೀಸೆಲ್ ದರ 73.90ಕ್ಕೇರಿದ್ದರೆ ಪೆಟ್ರೋಲ್ ದರ 85.47 ರುಪಾಯಿಗೆ ಏರಿದೆ. ಇದು ಮೆಟ್ರೋಗಳ ಪೈಕಿ ಅತಿ ಗರಿಷ್ಠ ದರವಾಗಿದೆ. ಡಿಸೇಲ್ ದರ ಚನ್ನೈನಲ್ಲಿ 73.54, ಕೊಲ್ಕೊತ್ತಾದಲ್ಲಿ 72.46 ರುಪಾಯಿ ಇದೆ. ಪೆಟ್ರೋಲ್ ದರ ಕೊಲ್ಕೊತ್ತಾದಲ್ಲಿ 80.98, ಚೆನ್ನೈನಲ್ಲಿ 81.09 ರುಪಾಯಿಗೆ ಏರಿದೆ.

ಪೆಟ್ರೋಲ್ ಮೇಲೆ ಎಕ್ಸೈಜ್ ಸುಂಕ 19.48 ರುಪಾಯಿ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) 17.68 ರುಪಾಯಿ ಮತ್ತು ಡೀಲರ್‌ಗಳ ಕಮಿಷನ್ 3.61 ರುಪಾಯಿ ಸೇರಿ ಪೆಟ್ರೋಲ್ ದರ ಬೆಂಗಳೂರಿನಲ್ಲಿ 80.58 ರುಪಾಯಿಗೆ ಏರಿದೆ. ವಾಸ್ತವಿಕವಾಗಿ ಪೆಟ್ರೋಲ್ ದರ 38.26 ರುಪಾಯಿ. ಆದರೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ತೆರಿಗೆ, ಡಿಲರ್ ಗಳ ಕಮಿಷನ್ 42.30 ರುಪಾಯಿಗಳಷ್ಟಿದೆ. ಅಂದರೆ, ಪೆಟ್ರೋಲ್ ದರಕ್ಕಿಂತ ತೆರಿಗೆ ಮತ್ತು ಕಮಿಷನ್‌ಗಳೇ ಗ್ರಾಹಕರಿಗೆ ಹೆಚ್ಚು ಹೊರೆಯಾಗಿವೆ.

ಇದನ್ನೂ ಓದಿ : ಶೇ.5ರಷ್ಟು ಇಳಿದ ಕಚ್ಚಾ ತೈಲ; ಪೆಟ್ರೋಲ್, ಡಿಸೇಲ್ ದರ ಮಾತ್ರ ಏರಿಕೆ 

ಒಂದು ವೇಳೆ, ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತಂದರೆ ಗಣನೀಯ ಪ್ರಮಾಣದಲ್ಲಿ ದರ ಇಳಿಯುತ್ತದೆ. ಈಗಿನ ತೆರಿಗೆಪೂರ್ವ ವಾಸ್ತವಿಕ ಪೆಟ್ರೋಲ್ ದರ 38.26 ರುಪಾಯಿ ಎಂದುಕೊಂಡರೂ ಜಿಎಸ್ಟಿ ಗರಿಷ್ಠ ಪ್ರಮಾಣದ ತೆರಿಗೆ 28ರಷ್ಟಿದೆ. ಗರಿಷ್ಠ ತೆರಿಗೆ ಏರಿದರೂ ಹೆಚ್ಚೂಕಮ್ಮಿ 11.50ರಷ್ಟು ಜಿಎಸ್ಟಿ ತೆರಿಗೆ ಬೀಳುತ್ತದೆ. ಆಗ ಪೆಟ್ರೋಲ್ ದರ 49.76 ರುಪಾಯಿಗಳಾಗುತ್ತದೆ. ಡೀಲರ್‌ಗಳ ಕಮಿಷನ್ ಸೇರಿಸಿದರೆ 52 ರುಪಾಯಿಗಳಾಗುತ್ತದೆ.

ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಜಿಎಸ್ಟಿ ವ್ಯಾಪ್ತಿಗೆ ತರುವುದಿಲ್ಲ. ಅದಕ್ಕಾಗಿ ಗ್ರಾಹಕರೇ ಆಂದೋಲನ ಪ್ರಾರಂಭಿಸಬೇಕು. ಏಕೆಂದರೆ, ಜಿಎಸ್ಟಿ ವ್ಯಾಪ್ತಿಗೆ ಬಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೆರಿಗೆ ನಷ್ಟವಾಗುತ್ತದೆ, ಗ್ರಾಹಕರಿಗೆ ಲಾಭವಾಗುತ್ತದೆ.

Petrol Diesel VAT ಡಿಸೇಲ್ ಮೌಲ್ಯವರ್ಧಿತ ತೆರಿಗೆ ಪೆಟ್ರೋಲ್ Crude Oil ಕಚ್ಚಾ ತೈಲ Excise Duty ಎಕ್ಸೈಜ್ ಸುಂಕ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?