ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ರುಪಾಯಿ ಕುಸಿತ ಪರಿಣಾಮ; ಬೊಕ್ಕಸಕ್ಕಾಗುವ ಹೆಚ್ಚುವರಿ ಹೊರೆ ₹1 ಲಕ್ಷ ಕೋಟಿ

ರುಪಾಯಿ ಕುಸಿತದಿಂದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ವಿದೇಶಿ ಸಾಲ ಪಾವತಿ ಮತ್ತು ಕಚ್ಚಾ ತೈಲ ಬಿಲ್ ಪಾವತಿಯಲ್ಲೇ ಒಂದು ಲಕ್ಷ ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬೀಳುತ್ತಿದೆ. ದೀರ್ಘಕಾಲದಲ್ಲಿ ಈ ಹೊರೆ ದುಪ್ಪಟ್ಟಾಗುತ್ತದೆ!

ರೇಣುಕಾಪ್ರಸಾದ್ ಹಾಡ್ಯ

ರುಪಾಯಿ ಕುಸಿತಕ್ಕೆ ಜಾಗತಿಕ ವಿದ್ಯಮಾನಗಳು ಕಾರಣ, ದೇಶೀಯ ಕಾರಣಗಳೇನೂ ಇಲ್ಲ. ಹೀಗಾಗಿ ದೇಶದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ರುಪಾಯಿ ಮೌಲ್ಯ ಕುಸಿತ ತಡೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಏನು ಮಾಡಬೇಕೋ ಅದನ್ನು ಮಾಡಲಿದೆ ಎಂದೂ ಅರುಣ್ ಜೇಟ್ಲಿ ಹೇಳಿದ್ದಾರೆ.

ರುಪಾಯಿ ಡಾಲರ್ ವಿರುದ್ಧ 68ರ ಗಡಿ ದಾಟಿದಾಗಿನಿಂದಲೂ ವಿತ್ತ ಸಚಿವಾಲಯ, ನೀತಿ ಆಯೋಗದ ಉನ್ನತಾಧಿಕಾರಿಗಳು ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರುಪಾಯಿ ಕುಸಿತ ತಡೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದ್ದು ಕಾಣುತ್ತಿಲ್ಲ.

ರುಪಾಯಿ ಕುಸಿತದಿಂದ ಹೆಚ್ಚಿನ ಹಾನಿಯೇನೂ ಆಗದು, ಬೇರೆ ಕರೆನ್ಸಿಗಳು ಕುಸಿಯುವವರೆಗೂ ರುಪಾಯಿ 80ರ ಮಟ್ಟಕ್ಕೆ ಕುಸಿದರೂ ಏನೂ ತೊಂದರೆಯಿಲ್ಲ ಎಂದೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದು ಉಂಟು. ವಿದೇಶಿ ಸಾಲ ಪಾವತಿ ಮತ್ತು ಕಚ್ಚಾ ತೈಲ ಬಿಲ್ ಪಾವತಿಯ ಅರಿವಿಲ್ಲದೇ ಗರ್ಗ್ ಆ ಹೇಳಿಕೆ ನೀಡಿರಬಹುದು. ಆದರೆ, ವಾಸ್ತವಿಕವಾಗಿ ಈಗಾಗಲೇ ಆಗಿರುವ ಕುಸಿತದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕಾಗುವ ಹೆಚ್ಚುವರಿ ಹೊರೆ 1 ಲಕ್ಷ ಕೋಟಿ ರುಪಾಯಿಗಳನ್ನು ಮೀರಲಿದೆ.

ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ರಿಸರ್ಚ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ರುಪಾಯಿ ಕುಸಿತದಿಂದ ನಾವೆಲ್ಲರೂ ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ. ಎಸ್ಬಿಐ ಮುಖ್ಯ ಆರ್ಥಿಕ ತಜ್ಞ ಸೌಮ್ಯಕಾಂತಿ ಘೋಷ್, ರುಪಾಯಿ ಕುಸಿತದಿಂದ ದೇಶದ ಆರ್ಥಿಕತೆ ಮೇಲೆ ಹಾನಿ ಆಗಬಹುದಾದ ಪ್ರಮುಖ ಪರಿಣಾಮಗಳನ್ನು ಅಂಕಿಅಂಶಗಳ ಮೂಲಕ ವಿವರಿಸಿದ್ದಾರೆ.

ಭಾರತದ ಅಲ್ಪಾವಧಿ ಸಾಲದ ಬಾಧ್ಯತೆ ಡಿಸೆಂಬರ್ 17ರ ವೇಳೆಗೆ 217.6 ಬಿಲಿಯನ್ ಡಾಲರ್ ಇತ್ತು. ಈ ಪೈಕಿ ಅರ್ಧದಷ್ಟು ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ ಅಥವಾ ಮುಂದಿನ ವಿತ್ತೀಯ ವರ್ಷಕ್ಕೆ ಪಾವತಿಸಲು ಮುಂದೂಡಲಾಗಿದೆ ಎಂದು ಅಂದಾಜಿಸಿದರೂ ಡಾಲರ್ ಮೌಲ್ಯ ಸರಾಸರಿ 65.1 ರುಪಾಯಿ ಇದ್ದಂತೆ ಭಾರತ ಪಾವತಿಸಲೇಬೇಕಾದ ಸಾಲದ ಮೊತ್ತವು 7.1 ಲಕ್ಷ ಕೋಟಿ ರುಪಾಯಿಗಳು. ವರ್ಷದ ಉತ್ತರಾರ್ಧದಲ್ಲಿ ರುಪಾಯಿ ಮೌಲ್ಯವು ಡಾಲರ್ ವಿರುದ್ಧ 71.4ಕ್ಕೆ ಕುಸಿದಿತ್ತೆಂದು ಭಾವಿಸಿದರೆ ಪಾವತಿಸಬೇಕಾದ ಸಾಲದ ಮೊತ್ತವು 7.8 ಲಕ್ಷ ಕೋಟಿ ರುಪಾಯಿಗಳು. ಅಂದರೆ ರುಪಾಯಿ ಕುಸಿತದಿಂದಾಗಿರುವ ಹೆಚ್ಚುವರಿ ಹೊರೆ 67000 ಕೋಟಿ ರುಪಾಯಿಗಳು.

ಶೇ.85ಕ್ಕಿಂತ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಭಾರತಕ್ಕೆ ರುಪಾಯಿ ಮೌಲ್ಯ ಕುಸಿದರೆ ತೈಲ ಬೆಲೆಯ ಬಿಲ್ ದುಬಾರಿಯಾಗುತ್ತದೆ. ಪ್ರತಿವರ್ಷವು ಕಚ್ಚಾ ತೈಲ ಆಮದು ಪ್ರಮಾಣವು ಸರಾಸರಿ ಶೇ.3.6ರಷ್ಟು ಹೆಚ್ಚಳವಾಗುತ್ತಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಆಮದು ಮಾಡಿಕೊಂಡಿರುವ ಪ್ರಮಾಣವನ್ನು ಕಡಿತ ಮಾಡಿದರೂ ನಾವು ಆಮದು ಮಾಡಿಕೊಳ್ಳಲಿರುವ ಬಾಕಿ ಪ್ರಮಾಣವು 0.76ಬಿಲಿಯನ್ ಬ್ಯಾರೆಲ್. ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸರಾಸರಿ 74.24 ಡಾಲರ್ ಎಂದು ಅಂದಾಜಿಸಿದರೂ 2018ರಲ್ಲಿ ಈ ಮೊತ್ತವು 57 ಬಿಲಿಯನ್ ಡಾಲರ್ ಗಳಷ್ಟಾಗುತ್ತದೆ. ಒಂದು ವೇಳೆ ಡಾಲರ್ ಮೌಲ್ಯ 65.1 ರುಪಾಯಿಗಳಾಗಿದ್ದರೆ ,3643 ಬಿಲಿಯನ್ ಡಾಲರ್ ಗಳಾಗುತ್ತದೆ. ಆದರೆ, 2018ರ ಉತ್ತರಾರ್ಧದಲ್ಲಿ ಪ್ರತಿ ಡಾಲರ್‌ಗೆ ರುಪಾಯಿ ಮೌಲ್ಯವು 71.4ಕ್ಕೆ ಕುಸಿದಾಗ ಆಮದು ಬಿಲ್ 4036 ಬಿಲಿಯನ್ ಡಾಲರ್ ಗೆ ಏರುತ್ತದೆ ಅಂದರೆ, ಹೆಚ್ಚುವರಿ ಹೊರೆ 35,300 ಕೋಟಿ ರುಪಾಯಿಗಳಾಗುತ್ತದೆ. ಆದರೆ, ಈಗ ಕಚ್ಚಾ ತೈಲವು ಪ್ರತಿ ಬ್ಯಾರೆಲ್ ಗೆ ಸರಾಸರಿ 76 ಡಾಲರ್ ಇದ್ದು ರುಪಾಯಿ ಮೌಲ್ಯ 73ಕ್ಕೆ ಇರುತ್ತದೆಂದು ಅಂದಾಜಿಸಿದರೆ, ಹೆಚ್ಚುವರಿ ಹೊರೆಯು 45,700 ಕೋಟಿ ರುಪಾಯಿಗಳಾಗುತ್ತದೆ.

ಹಣದುಬ್ಬರದ ಮೇಲೆ ರುಪಾಯಿ ಕುಸಿತದ ಪರಿಣಾಮ ನಿಚ್ಚಳವಾಗಿರುತ್ತದೆ. ರುಪಾಯಿ ಶೇ.5ರಷ್ಟು ಕುಸಿಯಿತೆಂದರೆ 20 ಅಂಶಗಳಷ್ಟು ಹಣದುಬ್ಬರ ಏರುತ್ತದೆ. ಆರ್ಬಿಐ ಅಂಕಿ ಅಂಶಗಳ ಪ್ರಕಾರ ರುಪಾಯಿ ವರ್ಷಾಂತ್ಯಕ್ಕೆ ಶೇ.14ರಷ್ಟು ಕುಸಿಯುತ್ತದೆಂಬ ಅಂದಾಜಿದ್ದು, ರುಪಾಯಿ ಕುಸಿತದಿಂದಾಗುವ ಒಟ್ಟಾರೆ ಹಣದುಬ್ಬರ 56 ಅಂಶಗಳಷ್ಟಾಗುತ್ತದೆ.

ಇದನ್ನೂ ಓದಿ : ಮೋದಿ ಪ್ರಧಾನಿ ಗದ್ದುಗೇರಿದ ನಂತರ ಶೇ.21.03ರಷ್ಟು ರುಪಾಯಿ ಅಪಮೌಲ್ಯ!

ರುಪಾಯಿ ಸತತ ಕುಸಿತ ಮುಂದುವರಿದರೆ, ಭಾರತೀಯ ರಿಸರ್ವ್ ಬ್ಯಾಂಕ್ ಅನಿವಾರ್ಯವಾಗಿ ಬಡ್ಡಿದರ ಏರಿಸಬೇಕಾಗುತ್ತದೆ. ಈಗಾಗಲೇ ಎರಡು ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ತಲಾ 25 ಅಂಶಗಳಷ್ಟು ಏರಿಕೆ ಮಾಡಲಾಗಿದೆ. ಅಕ್ಟೋಬರ್ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶಿಸುವಾಗಲೂ 25 ಅಂಶ ಬಡ್ಡಿದರ ಏರಿಸುವ ಸಾಧ್ಯತೆ ಇದೆ. ಇದು ಗ್ರಾಹಕರ ಅನುಭೋಗದ ಮೇಲಿನ ವಿನಿಯೋಗವನ್ನು ತಗ್ಗಿಸುತ್ತದೆ. ಉದಾಹರಣೆಗೆ 2014ರಲ್ಲಿ ಸತತ ಮೂರು ಬಾರಿ ಬಡ್ಡಿದರ ಏರಿಕೆ ಮಾಡಿದಾಗ ಖಾಸಗಿ ಅನುಭೋಗ ಪ್ರಮಾಣವು ಗಣನೀಯವಾಗಿ ತಗ್ಗಿ ಶೇ.2ಕ್ಕೆ ಕುಸಿದಿತ್ತು.

ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅನುಭೋಗ ವೆಚ್ಚವು ಶೇ.8.6ರಷ್ಟು ಹೆಚ್ಚಿದೆ. ಆದರೆ, ಆರ್ಬಿಐ ಈಗಾಗಲೇ ಸತತ ಎರಡು ಬಾರಿ ಬಡ್ಡಿದರ ಏರಿಕೆ ಮಾಡಿದೆ. ರುಪಾಯಿ ಕುಸಿತ ಮುಂದುವರೆದಿರುವ ಕಾರಣ ಮಧ್ಯಪ್ರವೇಶದಿಂದಾಗಿರುವ ವೆಚ್ಚವನ್ನು ಸರಿದೂಗಿಸಲು ಆರ್ಬಿಐ ಬಡ್ಡಿದರ ಏರಿಸುವುದು ಅನಿವಾರ್ಯವಾಗುತ್ತದೆ. ಬಾಂಡ್ ಗಳ ಗಳಿಕೆಯು ಶೇ.8ರ ಗಡಿದಾಟುತ್ತಿರುವುದರಿಂದ ಸರ್ಕಾರದ ಮೇಲೆ ವಿತ್ತೀಯ ವೆಚ್ಚವು ಏರುತ್ತಲೇ ಇದೆ. ಪ್ರಸಕ್ತ ವರ್ಷದಲ್ಲಿ ಈ ಮೊತ್ತವು 6000-7000 ಕೋಟಿಗಳಷ್ಟಾಗುವ ಅಂದಾಜಿದೆ.

ನರೇಂದ್ರ ಮೋದಿ Narendra Modi Dollar ಡಾಲರ್ Crude Oil ಕಚ್ಚಾ ತೈಲ Rupee ರುಪಾಯಿ Arun Jaitely ಅರುಣ್ ಜೈಟ್ಲಿ ಅಪಮೌಲ್ಯ Depreciation
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?