ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!

ರುಪಾಯಿ ಕುಸಿತ; 2 ದಿನದಲ್ಲಿ 1000 ಅಂಶ ಇಳಿದ ಸೆನ್ಸೆಕ್ಸ್, ರಕ್ತದೋಕುಳಿ ಆರಂಭ

ರುಪಾಯಿ ಮಿತಿಮೀರಿ ಕುಸಿದ ಪರಿಣಾಮವು ಈಗ ಪೇಟೆ ಮೇಲಾಗಿದೆ. ವಾರದ ಆರಂಭದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000 ಅಂಶ, ನಿಫ್ಟಿ 300 ಅಂಶ ಕುಸಿದಿದೆ. ಇದು ಕುಸಿತದ ಆರಂಭ ಎಂಬುದು ಆತಂಕಕ್ಕೆ ಕಾರಣ. ತ್ವರಿತವಾಗಿ ಶೇ.5-10ರಷ್ಟು ಕುಸಿತದ ನಿರೀಕ್ಷೆ ಮಾರುಕಟ್ಟೆ ತಜ್ಞರಲ್ಲಿದೆ

ರೇಣುಕಾಪ್ರಸಾದ್ ಹಾಡ್ಯ

ರುಪಾಯಿ ಸತತ ಕುಸಿಯುತ್ತಿದ್ದಾಗ ದೂರದಿಂದಲೇ ವೀಕ್ಷಿಸುತ್ತಿದ್ದ ಷೇರುಪೇಟೆ ಈಗ, ರುಪಾಯಿಯ ಮಿತಿಮೀರಿದ ಕುಸಿತಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದೆ. ಈ ವಾರದ ಮೊದಲ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000 ಅಂಶ ಕುಸಿದಿದೆ. ನಿಫ್ಟಿ 300 ಅಂಶ ಕುಸಿದಿದೆ. ರುಪಾಯಿ ಕುಸಿತದ ಜೊತೆಗೆ ಜಾಗತಿಕ ವ್ಯಾಪಾರ ಸಮರ ಮತ್ತೆ ಭುಗಿಲೇಳುವ ಆತಂಕದಿಂದಾಗಿ ಪೇಟೆಯಲ್ಲಿ ರಕ್ತದೋಕುಳಿ ಆರಂಭವಾಗಿದೆ. ಇದು ಆರಂಭ. ಬರುವ ದಿನಗಳಲ್ಲಿ ಮತ್ತಷ್ಟು ತ್ವರಿತವಾಗಿ ಸೂಚ್ಯಂಕಗಳು ಕುಸಿಯಲಿವೆ.

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದ ಷೇರುಪೇಟೆ ಸೂಚ್ಯಂಕಗಳು ಒಂದು ಹಂತದಲ್ಲಿ ಸ್ಥಿರಗೊಳ್ಳಬೇಕು ಇಲ್ಲವೇ ಇಳಿಯಲೇಬೇಕು. ಅದಕ್ಕೆ ಕಾರಣ ಬೇಕಿತ್ತು. ರುಪಾಯಿ ಕುಸಿತವು ಪೇಟೆ ಕುಸಿತಕ್ಕೆ ಒತ್ತು ನೀಡಿತು. ಆದರೆ, ಎರಡು ದಿನಗಳಲ್ಲಿ ಪೇಟೆ ತ್ವರಿತವಾಗಿ ಕುಸಿದಿದೆ. ನಿರ್ಣಾಯಕ ಮಟ್ಟಗಳನ್ನು ದಾಟಿ ಇಳಿಜಾರಿಗೆ ಸರಿದಿದೆ.

ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 509.4 ಅಂಶಕುಸಿದು 37,413ಕ್ಕೆ ಸ್ಥಿರಗೊಂಡಿದೆ. ನಿಫ್ಟಿ 150.06ರಷ್ಟು ಕುಸಿದು 11287.50ಕ್ಕೆ ಸ್ಥಿರಗೊಂಡಿದೆ. ಪೇಟೆಯಲ್ಲ ಕುಸಿತ ಎಷ್ಟು ತೀವ್ರವಾಗಿತ್ತೆಂದರೆ ಐಟಿ ಸೂಚ್ಯಂಕ ಸೇರಿದಂತೆ ಎಲ್ಲಾ ಸೂಚ್ಯಂಕಗಳು ಕುಸಿದಿವೆ. ನಿಫ್ಟಿ ಎಫ್ಎಂಸಿಜಿ ಸೂಚ್ಯಂಕ ಶೇ.2.4ರಷ್ಟು ಕುಸಿದಿದೆ. ಮಿಡ್ ಕ್ಯಾಪ್ ಸೂಚ್ಯಂಕವು ನಿರ್ಣಾಯಕ 19000 ದಿಂದ ಕೆಳಕ್ಕಿಳಿದಿದೆ.

ಪೇಟೆ ತೀವ್ರ ಕುಸಿತಕ್ಕೆ ಕಾರಣಗಳೇನು?

ರುಪಾಯಿ ಮೌಲ್ಯ ಕುಸಿತ: ದಿನದ ವಹಿವಾಟಿನ ಆರಂಭದಲ್ಲಿ ಸ್ಥಿರಗೊಂಡು ಕೊಂಚ ಚೇತರಿಕೆಯ ಹಾದಿಯಲ್ಲಿದ್ದ ರುಪಾಯಿ ಮತ್ತೆ ತೀವ್ರವಾಗಿ ಕುಸಿಯಿತು. ಮತ್ತೊಂದು ಸಾರ್ವಕಾಲಿಕ ಕನಿಷ್ಠಮಟ್ಟ ದಾಖಲಿಸಿತು. ಕಚ್ಚಾ ತೈಲ ದರ ಏರಿಕೆ ಹಿನ್ನೆಲೆಯಲ್ಲಿ ಡಾಲರ್ ಬೇಡಿಕೆ ಜಿಗಿದ ಕಾರಣ ರುಪಾಯಿ 72.74 ಮಟ್ಟಕ್ಕೆ ಕುಸಿದಾಗ ಪೇಟೆ ತೀವ್ರವಾಗಿ ಪ್ರತಿಕ್ರಿಯಿಸಿತು. ರುಪಾಯಿ ಡಾಲರ್ ವಿರುದ್ಧ 2018ರಲ್ಲಿ ಶೇ.14ರಷ್ಟು ಕುಸಿತ ದಾಖಲಿಸಿದೆ.

ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡುತ್ತಲೇ ಇದೆ. ತತ್ಪರಿಣಾಮ, ಉದಯಿಸುತ್ತಿರುವ ಮಾರುಕಟ್ಟೆಗಳಲ್ಲಿನ ಹೂಡಿಕೆಯನ್ನು ಹಿಂಪಡೆದು ಅಮೆರಿಕ ಮಾರುಕಟ್ಟೆಯತ್ತ ಹೂಡಿಕೆದಾರರು ತೆರಳುತ್ತಿದ್ದಾರೆ. ಇದು, ರುಪಾಯಿ ಸೇರಿದಂತೆ ಬಹುತೇಕ ಕರೆನ್ಸಿಗಳ ಕುಸಿತಕ್ಕೆ ಕಾರಣವಾಗಿದೆ.

ಜಾಗತಿಕ ವಿದ್ಯಮಾನಗಳು: ಜಾಗತಿಕ ವ್ಯಾಪಾರ ಸಮರ ಭುಗಿಲೇಳುವ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಸಾಧ್ಯತೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ತೀವ್ರ ಎಚ್ಚರಿಕೆಯಿಂದ ಇದ್ದಾರೆ. ಅದು ಏಷ್ಯಾದ ಬಹುತೇಕ ಮಾರುಕಟ್ಟೆಗಳಲ್ಲಿ ಪ್ರತಿಫಲಿಸುತ್ತಿದೆ. ಚೀನಾದ ಷಾಂಗೈ ಕಾಂಪೋಸಿಟ್ ಸೂಚ್ಯಂಕವು 31 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಯೂರೋಪಿನ ಮಾರುಕಟ್ಟೆಗಳೂ ಇಳಿಜಾರಿನಲ್ಲಿ ಸಾಗಿವೆ. ಈ ನಡುವೆ, ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಜೊತೆ ಮತ್ತೊಂದು ಸುತ್ತಿನ ಮಾತುಕತೆಗೆ ವೈಟ್‌ಹೌಸ್ ಸಿದ್ಧತೆ ನಡೆಸಿರುವುದು ಜಾಗತಿಕ ವ್ಯಾಪಾರ ಸಮರ ಜಿಗಿಯಲು ಕಾರಣವಾಗಬಹುದು. ಇದು ಒಟ್ಟಾರೆ ಉದಯಿಸುತ್ತಿರುವ ಮಾರುಕಟ್ಟೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಇದನ್ನೂ ಓದಿ : ರುಪಾಯಿ ಕುಸಿತ ಪರಿಣಾಮ; ಬೊಕ್ಕಸಕ್ಕಾಗುವ ಹೆಚ್ಚುವರಿ ಹೊರೆ ₹1 ಲಕ್ಷ ಕೋಟಿ

ವ್ಯಾಪಾರ ಸಮರದ ಆತಂಕ: ಅಮೆರಿಕಾ-ಚೀನಾ ನಡುವೆ ವ್ಯಾಪಾರ ಸಮರದ ಉದ್ವಿಗ್ನತೆ ತಪ್ಪಿಸುವ ಪ್ರಯತ್ನಗಳು ಸಾಗಿರುವಾಗಲೇ, ಚೀನಾವು ಅಮೆರಿಕ ತೆರಿಗೆ ಹೇರುತ್ತಿರುವುದರ ವಿರುದ್ಧ ಜಾಗತಿಕ ವ್ಯಾಪಾರ ಸಂಘಟನೆಗೆ (ಡಬ್ಲ್ಯೂಟಿಒ) ದೂರು ನೀಡಿದೆ. ಚೀನಾ ವ್ಯಾಜ್ಯವಿನ್ನೂ ಇತ್ಯರ್ಥವಾಗಿಲ್ಲ. ಅಮೆರಿಕ ನಿಯಮ ಉಲ್ಲಂಘಿಸಿ ತೆರಿಗೆ ಹೇರಿರುವುದರಿಂದ ನಿರ್ಬಂಧ ಹೇರಬೇಕೆಂಬ ಬೇಡಿಕೆ ಇಟ್ಟಿದೆ. ದೂರು, ಪ್ರತಿದೂರುಗಳ ಇತ್ಯರ್ಥಕ್ಕೆ ವರ್ಷಗಳೇ ಬೇಕಾಗಬಹುದು. ಇದು ಬಂಡವಾಳ ಮಾರುಕಟ್ಟೆಯಲ್ಲಿ ಅಸ್ಥಿರತೆಗೆ ಕಾರಣವಾಗುತ್ತದೆ. ಈ ಅಸ್ಥಿರತೆಯು ಉದಯಿಸುತ್ತಿರುವ ಮಾರುಕಟ್ಟೆಗಳ ಕುಸಿತಕ್ಕೆ ಒತ್ತು ನೀಡುತ್ತದೆ.

ಕಚ್ಚಾ ತೈಲ ದರ ಏರಿಕೆ: ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಇರಾನ್ ಕಚ್ಚಾ ತೈಲ ರಫ್ತು ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದು ಜಾಗತಿಕ ಕಚ್ಚಾ ತೈಲ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ, ತೈಲ ದರ ಏರುತ್ತಲೇ ಇದೆ. ಅಮೆರಿಕಕ್ಕೆ ತೈಲ ದರ ಏರುವುದು ಬೇಕಿಲ್ಲವಾದರೂ, ಇರಾನ್ ಮೇಲೆ ನಿರ್ಬಂಧ ಹೇರಿದ ನಂತರ ಇತರ ತೈಲ ರಾಷ್ಟ್ರಗಳು ಉತ್ಪಾದನೆ ಹೆಚ್ಚಿಸಲು ನಿರಾಕರಿಸಿವೆ. ಈ ನಡುವೆ, ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ 77.83 ಡಾಲರ್‌ಗೆ ಜಿಗಿದಿದೆ. ಈ ಎಲ್ಲ ವಿದ್ಯಮಾನಗಳ ನಡುವೆಯೇ ಜಾಗತಿಕ ತೈಲ ಬೇಡಿಕೆ ಏರುತ್ತಲೇ ಇದೆ. ಒಪೆಕ್ ಸೇರಿದಂತೆ ತೈಲೋತ್ಪನ್ನ ರಾಷ್ಟ್ರಗಳು ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ಏರಿಸುವ ಇರಾದೆ ಹೊಂದಿವೆ. ಇದು ಸಹ ಷೇರುಪೇಟೆ ಕುಸಿತಕ್ಕೆ ಕಾರಣವಾಗುತ್ತಿದೆ.

ಅಮೆರಿಕ China America Dollar ಡಾಲರ್ Crude Oil ಕಚ್ಚಾ ತೈಲ Rupee ರುಪಾಯಿ ಚೀನ Trade War ವ್ಯಾಪಾರ ಸಮರ WTO ಡಬ್ಲ್ಯೂಟಿಒ
ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?