ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಮೋದಿ ಮ್ಯಾಜಿಕ್: ಈ ವರ್ಷ ಡಿಸೇಲ್ ₹15.15, ಪೆಟ್ರೋಲ್ ₹13.24 ದರ ಏರಿಕೆ

ಪೆಟ್ರೋಲ್, ಡಿಸೇಲ್ ದರ ಎಷ್ಟೇ ಏರಿದರೂ ಸುಂಕ ಕಡಿತ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿದೆ. ಆಘಾತದ ಸಂಗತಿ ಎಂದರೆ, ಸೆಪ್ಟೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿದಾಗಲೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಇಳಿದಿಲ್ಲ!

ರೇಣುಕಾಪ್ರಸಾದ್ ಹಾಡ್ಯ

ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ನಿತ್ಯವೂ ಏರಿಕೆ ಮಾಡುತ್ತಿರುವುದಿಂದ ಗ್ರಾಹಕರಿಗೆ ವಾಸ್ತವಿಕ ದರ ಏರಿಕೆಯ ಪ್ರಮಾಣ ಗೊತ್ತಾಗುವುದೇ ಇಲ್ಲ. ನಿತ್ಯವೂ ಬೆಲೆ ಏರಿಳಿಕೆ ಮಾಡುವ ತಂತ್ರ ಪರೋಕ್ಷವಾಗಿ ಗ್ರಾಹಕರನ್ನು ವಂಚಿಸುವ ಕ್ರಮವೂ ಹೌದು.

ಸೆಪ್ಟೆಂಬರ್ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಡಿಸೇಲ್ ಬೆಲೆ 3.74 ರುಪಾಯಿ ಏರಿಕೆಯಾಗಿದೆ. ಪೆಟ್ರೋಲ್ 3.23 ರುಪಾಯಿ ಏರಿಕೆಯಾಗಿದೆ. ಆಗಸ್ಟ್ 31ರಂದು 72.17 ರುಪಾಯಿ ಇದ್ದ ಡಿಸೇಲ್ ಸೆಪ್ಟೆಂಬರ್ 15ರಂದು 75.91 ರುಪಾಯಿಗೆ ಏರಿದೆ. ಈ ಅವಧಿಯಲ್ಲಿನ ಏರಿಕೆ ಪ್ರಮಾಣ ಶೇ.5. ಪೆಟ್ರೋಲ್ ದರ ಆಗಸ್ಟ್ 31ರಂದು 81.07 ರುಪಾಯಿ ಇದ್ದದ್ದು, ಸೆಪ್ಟೆಂಬರ್ 15ರಂದು 84.30 ರುಪಾಯಿಗೆ ಜಿಗಿದಿದೆ. ಈ ಅವಧಿಯಲ್ಲಿನ ಏರಿಕೆ 3.23 ರುಪಾಯಿ. ಅಂದರೆ, ಏರಿಕೆ ಪ್ರಮಾಣ ಶೇ.4ರಷ್ಟು.

ಇತ್ತೀಚಿನ ವರ್ಷಗಳಲ್ಲಿ ಇಷ್ಟು ತ್ವರಿತಗತಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಎಂದೂ ಏರಿಕೆಯಾಗಿಲ್ಲ. ಸರ್ಕಾರ ಸುಂಕ ಕಡಿತ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಇರುವುದರಿಂದ ಮತ್ತಷ್ಟು ತ್ವರಿತವಾಗಿ ದರ ಏರಲಿದೆ. ಆದರೆ, ಏರಿಕೆ ಯಾವಾಗ ನಿಲ್ಲುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಖುದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಪೆಟ್ರೋಲ್ ಮತ್ತು ಡಿಸೇಲ್ ದರ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆ ದರ ನಿಗದಿ ಮಾಡುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ಹೇಳಿಕೊಂಡರೂ ವಾಸ್ತವವಾಗಿ ಹಾಗೆ ಮಾಡುತ್ತಿಲ್ಲ. ಉದಾಹರಣೆಗೆ, ಆಗಸ್ಟ್ 30ರಂದು ಡಬ್ಲ್ಯೂಟಿಐ ಕ್ರೂಡ್ 70.25 ಡಾಲರ್ ಇತ್ತು. ಸೆಪ್ಟೆಂಬರ್ 10ರಂದು 67.54 ಡಾಲರ್‌ಗೆ ಇಳಿಯಿತು. ಅಂದರೆ, 2.71ಡಾಲರ್ ಇಳಿಯಿತು. ಅಂದರೆ, ಇಳಿಕೆ ಪ್ರಮಾಣ ಶೇ.3.5ರಷ್ಟು.

ಬ್ರೆಂಟ್ ಕ್ರೂಡ್ ಆಗಸ್ಟ್ 30ರಂದು 78.02 ಡಾಲರ್ ಇದ್ದದ್ದು ಸೆಪ್ಟೆಂಬರ್ 6ರಂದು 76.50 ಡಾಲರ್‌ಗೆ ಕುಸಿದಿತ್ತು. ಇಳಿದದ್ದು 1.52 ಡಾಲರ್ ಅಂದರೆ, ಶೇ.2ರಷ್ಟು. ಆದರೆ, ಇದೇ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಶೇ.3-4ರಷ್ಟು ಏರಿಕೆಯಾಗಿದೆ.

ನಿತ್ಯವೂ ಪೆಟ್ರೋಲ್ ದರ ಏರಿಕೆ ಆಗುವುದರಿಂದ ಒಂದು ನಿಗದಿತ ಅವಧಿಯಲ್ಲಿ ಎಷ್ಟೆಲ್ಲ ಏರಿಕೆ ಆಗಿದೆ ಎಂಬುದು ಗ್ರಾಹಕರಿಗೆ ಗೊತ್ತಾಗುವುದೇ ಇಲ್ಲ. ಇಲ್ಲಿ ಗಮನಿಸಿ, 2018 ಜನವರಿಯಿಂದ ಈಚೆಗೆ ಡಿಸೇಲ್ ದರ 15.15 ರುಪಾಯಿ ಏರಿಕೆಯಾಗಿದೆ. ಅಂದರೆ, ಏರಿಕೆ ಪ್ರಮಾಣ ಶೇ.25ರಷ್ಟು. ಇತಿಹಾಸದಲ್ಲಿ ಹಿಂದೆಂದೂ ಎಂಟೂವರೆ ತಿಂಗಳಲ್ಲಿ ಶೇ.25ರಷ್ಟು ದರ ಏರಿಕೆ ಆದ ಉದಾಹರಣೆಗಳಿಲ್ಲ. ಜನವರಿ 2ರಂದು 60.76 ರುಪಾಯಿ ಇದ್ದ ಡಿಸೇಲ್ ದರ, ಸೆಪ್ಟೆಂಬರ್ 15ರಂದು 75.91 ರುಪಾಯಿಗೆ ಏರಿದೆ. ಅಂದರೆ, ಈ ಅವಧಿಯಲ್ಲಿನ ಏರಿಕೆ 15.15 ರುಪಾಯಿ. ಶೇಕಡವಾರು ಲೆಕ್ಕ ಹಾಕಿದರೆ 24.93ರಷ್ಟು ಏರಿಕೆ ದಾಖಲಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್ ದರ 13.24 ರುಪಾಯಿ ಏರಿದೆ. ಜನವರಿ 2ರಂದು 71.06 ರುಪಾಯಿ ಇದ್ದ ಪೆಟ್ರೋಲ್, ಸೆಪ್ಟೆಂಬರ್ 15ರಂದು 84.30ಕ್ಕೆ ಏರಿದೆ; ಅಂದರೆ, 13.24 ರುಪಾಯಿ ಏರಿದೆ. ಶೇಕಡವಾರು ಏರಿಕೆ 18.63ರಷ್ಟಿದೆ.

ಇದನ್ನೂ ಓದಿ : ಪೆಟ್ರೋಲ್, ಡಿಸೇಲ್ ದರ ಇಳಿಸಲು ಪ್ರಧಾನಿ ಮೋದಿ ‘ದೊಡ್ಡಮನಸ್ಸು’ ಮಾಡಬೇಕಷ್ಟೇ!

ಪ್ರತಿಪಕ್ಷಗಳ ನಾಯಕರು, ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಪಿ ಚಿದಂಬರಂ ಅವರು ಪೆಟ್ರೋಲ್ ಮತ್ತು ಡಿಸೇಲ್ ದರ ಕಡಿತ ಮಾಡಬೇಕು ಎಂದು ಆಗ್ರಹಿಸಿದ್ದಾರೆ. “ಸರ್ಕಾರ ಕಚ್ಚಾ ತೈಲ ದರ ಕಡಿಮೆ ಇದ್ದಾಗ ಹೇರಿರುವ ಸುಂಕವನ್ನು ಕಚ್ಚಾ ದರ ಏರಿದಾಗ ಕಡಿತ ಮಾಡುವುದು ನ್ಯಾಯಸಮ್ಮತ,” ಎಂಬುದು ಪಿ.ಚಿದಂಬರಂ ಅವರ ವಾದ.

ಸರ್ಕಾರ ಮಾತ್ರ ವಿತ್ತೀಯ ವಿವೇಕ ಪಾಲನೆ ಹೆಸರಿನಲ್ಲಿ ತೈಲದರ ಕಡಿತ ಮಾಡುವುದಿಲ್ಲ ಎಂದು ಹೇಳುತ್ತಿದೆ. ವಿತ್ತೀಯ ವಿವೇಕ ಪಾಲನೆ ಎಂದರೆ, ಸರ್ಕಾರವು ಬಜೆಟ್‌ನಲ್ಲಿ ನಿಗದಿ ಮಾಡಿಕೊಂಡಿರುವ ಚಾಲ್ತಿ ಖಾತೆ ಕೊರತೆ ಮಿತಿ ಮತ್ತು ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುವುದಾಗಿದೆ.

ಈಗ ಮುಖ್ಯ ಪ್ರಶ್ನೆ ಎಂದರೆ, ನೂರಾರು ಕೋಟಿ ಜನರ ಸಂಕಷ್ಟ ನಿವಾರಣೆ ಆಗುವುದು ಮುಖ್ಯವೋ? ನೂರಾರು ಕೋಟಿ ಜನರನ್ನು ಸಂಕಷ್ಟಕ್ಕೆ ದೂಡಿ ವಿತ್ತೀಯ ವಿವೇಕ ಪಾಲನೆ ಮಾಡುವುದು ಮುಖ್ಯವೋ?

ನರೇಂದ್ರ ಮೋದಿ Narendra Modi Petrol Diesel ಡಿಸೇಲ್ ಪೆಟ್ರೋಲ್ Crude Oil ಕಚ್ಚಾ ತೈಲ ದರ ಏರಿಕೆ Price Hike
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?