ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಮಾರುಕಟ್ಟೆಯಲ್ಲಿ ಅಸ್ಥಿರತೆ; 4 ದಿನದಲ್ಲಿ 5.66 ಲಕ್ಷ ಕೋಟಿ ಸಂಪತ್ತು ನಾಶ

ಶುಕ್ರವಾರ (ಸೆ.21) ತೀವ್ರ ಏರಿಳಿತದ ವಹಿವಾಟು ಕಂಡ ಷೇರುಪೇಟೆ ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದೆ. ಡಿಎಚ್ಎಫ್ಎಲ್ ಶೇ.45ರಷ್ಟು ಕುಸಿದರೆ, ಯೆಸ್ ಬ್ಯಾಂಕ್ ಶೇ.28ರಷ್ಟು ಕುಸಿದಿದೆ. ಬಹುತೇಕ ಸೂಚ್ಯಂಕಗಳು ಇಳಿಜಾರಿನಲ್ಲಿವೆ. ಅಸ್ಥಿರತೆ ಮುಂದುವರಿದಿದ್ದು, ಮತ್ತಷ್ಟು ಕುಸಿತ ಸಾಧ್ಯತೆ ಇದೆ

ರೇಣುಕಾಪ್ರಸಾದ್ ಹಾಡ್ಯ

ತೀವ್ರ ಏರಿಳಿತದ ವಹಿವಾಟು ನಡೆಸಿದ ಷೇರುಪೇಟೆಯು ಸತತ ನಾಲ್ಕನೇ ದಿನವೂ ಇಳಿಜಾರಿನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ವಹಿವಾಟಿನ ಮಧ್ಯಂತರದಲ್ಲಿ ತೀವ್ರ ಮಾರಾಟ ಒತ್ತಡ ಸೃಷ್ಟಿಯಾಗಿ, ಸೆನ್ಸೆಕ್ಸ್ 1,200 ಅಂಶಗಳಷ್ಟು ಮತ್ತು ನಿಫ್ಟಿ 350 ಅಂಶಗಳಷ್ಟು ಕುಸಿದು ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿ ಮಾಡಿತ್ತು. ಆದರೆ, ನಂತರ ತ್ವರಿತವಾಗಿ ವಿಸ್ತೃತ ಮಾರುಕಟ್ಟೆ ಸೂಚ್ಯಂಕಗಳು ಚೇತರಿಸಿಕೊಂಡವು. ಇಡೀ ಮಾರುಕಟ್ಟೆ ಕುಸಿತಕ್ಕೆ ಕಾರಣವಾದ ಡಿಎಚ್ಎಫ್ಎಲ್ ಮತ್ತು ಯೆಸ್ ಬ್ಯಾಂಕ್ ಮಾತ್ರ ಚೇತರಿಸಿಕೊಳ್ಳಲಿಲ್ಲ. ದಿನದ ಅಂತ್ಯಕ್ಕೆ ಡಿಎಚ್ಎಫ್ಎಲ್ ಶೇ.45 ಮತ್ತು ಯೆಸ್ ಬ್ಯಾಂಕ್ ಶೇ.28ರಷ್ಟು ಕುಸಿತ ದಾಖಲಿಸಿದವು.

ಸಂಕಷ್ಟದಲ್ಲಿರುವ ಐಎಲ್ ಅಂಡ್ ಎಫ್ಎಸ್‌ಗೆ ಹೆಚ್ಚಿನ ಸಾಲ ನೀಡಿರುವ ಡಿಎಚ್ಎಫ್ಎಲ್ ಸದ್ಯಕ್ಕೆ ನಗದು ಕೊರತೆ ಎದುರಿಸುತ್ತಿದ್ದು ಠೇವಣಿದಾರರಿಗೆ ಸಕಾಲದಲ್ಲಿ ಪಾವತಿ ಮಾಡಲಾಗದೆ ಸುಸ್ತಿಯಾಗುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಡಿಎಸ್ಪಿ ಮ್ಯೂಚುವಲ್ ಫಂಡ್ ತನ್ನ ಬಳಿ ಇದ್ದ ಡಿಎಚ್ಎಫ್ಎಲ್ ಹೂಡಿಕೆಯನ್ನು ಶೇ.11ರಷ್ಟು ರಿಯಾಯ್ತಿಯಲ್ಲಿ ವಿಲೇವಾರಿ ಮಾಡಿದ್ದು, ಮಾರುಕಟ್ಟೆಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.

ಐಎಲ್ ಅಂಡ್ ಎಫ್ಎಸ್‌ಗೆ ಇತರ ಬ್ಯಾಂಕೇತರ ಗೃಹ ಸಾಲ ಕಂಪನಿಗಳು ಸಾಲ ನೀಡಿದ್ದು, ಆ ಸಾಲ ಅಪಾಯದಲ್ಲಿವೆ ಎಂಬ ಕಾರಣಕ್ಕೆ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಸೇರಿದಂತೆ ಬಹುತೇಕ ಹೌಸಿಂಗ್ ಫೈನಾನ್ಸ್ ಕಂಪನಿಗಳು ಕುಸಿದವು. ಡಿಎಚ್ಎಫ್ಎಲ್ ಸ್ಪಷ್ಟೀಕರಣ ನೀಡಿದರೂ ಕುಸಿತ ನಿಲ್ಲಲಿಲ್ಲ. ಆದರೆ, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿ ತನ್ನಲ್ಲಿ ಸಾಕಷ್ಟು ನಗದು ಇದ್ದು ಸುಸ್ತಿಯಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ ನಂತರ ಚೇತರಿಕೆ ಕಂಡುಬಂತು. ಶೇ.30ರಷ್ಟು ಕುಸಿತದಿಂದ ಚೇತರಿಸಿಕೊಂಡು ದಿನದ ಅಂತ್ಯಕ್ಕೆ ಶೇ.9ರಷ್ಟು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿತು.

ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 279.62 ಅಂಶ ಕುಸಿತದೊಂದಿಗೆ 36,841.60ರೊಂದಿಗೆ ವಹಿವಾಟು ಮುಗಿಸಿದರೆ, ನಿಫ್ಟಿ 91 ಅಂಶ ಕುಸಿತದೊಂದಿಗೆ 11,143 ಅಂಶಕ್ಕೆ ಸ್ಥಿರಗೊಂಡಿತು. 2,080 ಷೇರುಗಳು ಕುಸಿದರೆ 569 ಷೇರುಗಳು ಏರಿಕೆ ಕಂಡವು. ಕೊಟಕ್ ಮಹಿಂದ್ರ ಬ್ಯಾಂಕ್ ಶೇ.4ರಷ್ಟು ಕುಸಿಯಿತು. ಏರಿಳಿತದ ನಡುವೆಯೂ ಒಎನ್‌ಜಿಸಿ, ವಿಪ್ರೊ, ಭಾರತಿ ಇನ್ಫ್ರಾ ಟೆಲ್ ಮತ್ತು ಬಿಪಿಸಿಎಲ್ ಏರಿಕೆ ದಾಖಲಿಸಿದವು.

ಈ ವಾರವಿಡೀ ಪೇಟೆ ಏರಿಳಿತದ ವಹಿವಾಟು ನಡೆಸುತ್ತ ಇಳಿಜಾರಿನಲ್ಲಿ ಸಾಗಿದೆ. ನಾಲ್ಕು ವಹಿವಾಟು ದಿನದಲ್ಲಿ ಸೆನ್ಸೆಕ್ಸ್ 1,249 ಅಂಶಗಳಷ್ಟು ಅಂದರೆ, ಶೇ.3.8ರಷ್ಟು ಕುಸಿದಿದೆ. ಈ ಕುಸಿತದಿಂದಾಗಿ ಹೂಡಿಕೆದಾರರ 5,66,187 ಕೋಟಿ ರುಪಾಯಿ ಸಂಪತ್ತು ನಶಿಸಿದೆ. ಶುಕ್ರವಾರದ ವಹಿವಾಟಿನಲ್ಲೇ 2,02,433 ಕೋಟಿ ರುಪಾಯಿ ನಶಿಸಿದೆ.

ಮಾರುಕಟ್ಟೆ ಇಳಿಜಾರಿನಲ್ಲಿ ಸಾಗಿ ಸ್ಥಿರಗೊಳ್ಳುವ ಹಂತದಲ್ಲಿದೆ. ಹೀಗಾಗಿ, ಮುಂದಿನ ವಾರವೂ ಮತ್ತಷ್ಟು ಇಳಿಯಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುತ್ತಲೇ ಇರುವುದು ಮತ್ತು ರುಪಾಯಿ ಕುಸಿಯುತ್ತಿರುವುದು ಪೇಟೆ ಕುಸಿತಕ್ಕೆ ಕಾರಣವಾಗಿದ್ದರೂ, ಶುಕ್ರವಾರದ ರಕ್ತದೋಕುಳಿಗೆ ಐಎಲ್ ಅಂಡ್ ಎಫ್ಎಸ್ ಸಂಕಷ್ಟಗಳೇ ಕಾರಣ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಇದನ್ನೂ ಓದಿ : ರುಪಾಯಿ ಕುಸಿತ; 2 ದಿನದಲ್ಲಿ 1000 ಅಂಶ ಇಳಿದ ಸೆನ್ಸೆಕ್ಸ್, ರಕ್ತದೋಕುಳಿ ಆರಂಭ

ರುಪಾಯಿ ಸಹ ಆರಂಭದಲ್ಲಿ ಬಹಳಷ್ಟು ಚೇತರಿಸಿಕೊಂಡು 71.75ರ ಆಜುಬಾಜಿನಲ್ಲಿ ವಹಿವಾಟು ನಡೆಸಿತು. ಆದರೆ, ಮಾರುಕಟ್ಟೆ ಕುಸಿತ ನಂತರ ರುಪಾಯಿ ಸಹ ಕುಸಿಯಿತು. ದಿನದ ಕನಿಷ್ಠ ಮಟ್ಟ72.48ಕ್ಕೆ ಕುಸಿದಿತ್ತು. ಏರಿಳಿತದ ನಂತರ 72.20ಕ್ಕೆ ಸ್ಥಿರಗೊಂಡಿತು. ರುಪಾಯಿ ಸದ್ಯಕ್ಕೆ 72-73ರ ಆಜುಬಾಜಿನಲ್ಲಿ ಸ್ಥಿರತೆ ಕಂಡುಕೊಳ್ಳುತ್ತಿದೆ. ಅಂದರೆ, ಸರ್ಕಾರ ನಿರೀಕ್ಷಿಸಿರುವಂತೆ 70ರ ಮಟ್ಟಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಸದ್ಯಕ್ಕಿಲ್ಲ.

ಈ ನಡುವೆ, ರುಪಾಯಿ ಮತ್ತು ಷೇರುಪೇಟೆ ಕುಸಿತದ ನಡುವೆ ಚಿನ್ನ ಚೇತರಿಸಿಕೊಂಡಿದೆ. ಒಂದು ಹಂತದಲ್ಲಿ 30,900ಕ್ಕೆ ಏರಿತ್ತಾದರೂ, ದಿನದ ಅಂತ್ಯದಲ್ಲಿ ಚಿನಿವಾರ ಪೇಟೆಯಲ್ಲೂ ಮಾರಾಟ ಒತ್ತಡ ಕಂಡುಬಂದು, 30,520ಕ್ಕೆ ಕುಸಿಯಿತು.

Share Market Sensex Nifty ಸೆನ್ಸೆಕ್ಸ್ ನಿಫ್ಟಿ Yes Bank ಯೆಸ್ ಬ್ಯಾಂಕ್ ಷೇರು ಮಾರುಕಟ್ಟೆ DHFL IL&FS ಡಿಎಚ್ಎಫ್ಎಲ್ ಐಎಲ್&ಎಫ್ಎಸ್
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?