ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಯುಪಿಎ ಮೇಲೆ ರಫೇಲ್ ಹಗರಣ ಹೇರಲು ಪ್ರಯತ್ನಿಸಿ ಪೇಚಿಗೀಡಾದ ಸಚಿವ ಪ್ರಸಾದ್

ಹೊಲಾಂದ್ ವಿವಾದಾತ್ಮಕ ಹೇಳಿಕೆಯಿಂದ ಮುಜುಗರಕ್ಕೊಳಗಾದ ಕೇಂದ್ರ ಸರ್ಕಾರ, ವಿವಾದವನ್ನು ತಗ್ಗಿಸುವ ಯತ್ನದಲ್ಲಿದೆ. ಪ್ರಧಾನಿ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದಂತೆ ಹೇಳಿಕೆ ನೀಡಿದ್ದ ಸಚಿವ ರವಿ ಶಂಕರ್ ಪ್ರಸಾದ್, ಪ್ರಕರಣ ತಿರುಚಲು ಪ್ರಯತ್ನಿಸಿ ತಾವೇ ಮುಜುಗರಕ್ಕೆ ಈಡಾಗಿದ್ದಾರೆ

ಸಂಧ್ಯಾ ಜೈನ್

ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ವಿಚಾರವಾಗಿ ಕೇಂದ್ರ ರಕ್ಷಣಾ ಸಚಿವಾಲಯ ಕೊನೆಗೂ ಹೇಳಿಕೆ ಬಿಡುಗಡೆ ಮಾಡಿದೆ. ಶನಿವಾರ ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, “ರಫೇಲ್ ಯುದ್ಧವಿಮಾನ ವಿಚಾರವಾಗಿ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕ್ವಾ ಹೊಲಾಂದ್ ಅವರು ಹೇಳಿರುವ ವಿಚಾರವನ್ನುಸಂಪೂರ್ಣ ಸನ್ನಿವೇಶದೊಂದಿಗೆ ನೋಡಬೇಕಿದೆಯೇ ಹೊರತು ಕೆಲವು ವಿಚಾರಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾತನಾಡುವುದು ಸರಿಯಲ್ಲ,” ಎಂದಿದೆ.

ಹೊಲಾಂದ್ ವಿವಾದಾತ್ಮಕ ಹೇಳಿಕೆಯಿಂದ ಮುಜುಗರಕ್ಕೊಳಗಾದ ಕೇಂದ್ರ ಸರ್ಕಾರ ವಿವಾದವನ್ನು ತಗ್ಗಿಸುವ ಯತ್ನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲಾರಂಭಿಸುತ್ತಿದ್ದಂತೆ ಹೇಳಿಕೆ ನೀಡಿದ್ದ ಬಿಜೆಪಿ ಹಿರಿಯ ಸಚಿವ ರವಿ ಶಂಕರ್ ಪ್ರಸಾದ್, “ರಫೇಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಕಂಪನಿ ಜತೆಗೆ ರಿಲಯನ್ಸ್‌ ಇಂಡಸ್ಟ್ರೀಸ್ 2013ರ ಫೆಬ್ರವರಿ 13ರಂದೇ ಒಪ್ಪಂದ ಮಾಡಿಕೊಂಡಿತ್ತು. ನಾವು ಅಧಿಕಾರಕ್ಕೆ ಬರುವುದಕ್ಕೂ ಒಂದು ವರ್ಷ ನಾಲ್ಕು ತಿಂಗಳು ಮೊದಲೇ ಈ ಒಪ್ಪಂದ ಏರ್ಪಟ್ಟಿತ್ತು,” ಎಂದು ಟ್ವೀಟ್ ಮಾಡಿದ್ದರು. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಮಾಡಿರುವ ಟ್ವೀಟ್‌ನಲ್ಲಿ, “2012ರ ಫೆಬ್ರವರಿ 13ರಂದು ಪ್ರಕಟಿಸಿರುವ ವರದಿ ಪ್ರಕಾರ, ಡಸಾಲ್ಟ್ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್ ನಡುವೆ ರಕ್ಷಣಾ ಒಪ್ಪಂದಕ್ಕೆ 2012ರಲ್ಲೇ ಸಹಿ ಹಾಕಲಾಗಿದೆ,” ಎನ್ನುವ ವಿವರವಿತ್ತು. ಈ ಸುದ್ದಿಯ ಲಿಂಕ್ ಅನ್ನು ಕೂಡ ರವಿ ಶಂಕರ್ ಪ್ರಸಾದ್ ಶೇರ್ ಮಾಡಿದ್ದಾರೆ.

ಆದರೆ, “೨೦೧೨ರಲ್ಲಿ ನಡೆದ ಒಪ್ಪಂದ ಹಾಗೂ ಮೋದಿ ಸರ್ಕಾರದಲ್ಲಿ ನಡೆದ ಒಪ್ಪಂದವೆರಡೂ ಭಿನ್ನ. ಯುಪಿಎ ಸರ್ಕಾರದ ಅವಧಿಯಲ್ಲಿ ಡಸಾಲ್ಟ್ ಸಂಸ್ಥೆ ಮುಖೇಶ್ ಅಂಬಾನಿ ನೇತೃತ್ವದ ಕಂಪನಿ ಜೊತೆಗೆ ಮಾತುಕತೆ ನಡೆಸಿತ್ತಾದರೂ, ಅದು ಮುರಿದುಬಿದ್ದಿತ್ತು. ಬಿಜೆಪಿ ಸರ್ಕಾರ ಮಾತುಕತೆ ನಡೆಸಿದ್ದು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ ಜೊತೆಗೆ. ಆದರೆ, ಸುಳ್ಳು ಸಾಕ್ಷ್ಯಗಳ ಮೂಲಕ ವಿವಾದವನ್ನು ತಿರುಚುವ ಉದ್ದೇಶದಿಂದ ಬಿಜೆಪಿಯು ಹಿಂದಿನ ಯುಪಿಎ ಸರ್ಕಾರದ ಅವಧಿಯ ಮಾತುಕತೆಯ ವಿವರಗಳನ್ನು ಈಗ ಬಹಿರಂಗಪಡಿಸುತ್ತಿದೆ,” ಎಂದು ‘ದಿ ವೈರ್‌’ ವೆಬ್‌ಸೈಟ್‌ನ ವರದಿ ಸಾಕ್ಷ್ಯಗಳನ್ನು ಮುಂದಿಟ್ಟಿದೆ.

ರಿಲಯನ್ಸ್ ಸಮೂಹ 2005ರಲ್ಲಿ ವಿಭಜನೆಯಾಗಿ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸಹೋದರರ ನಡುವೆ ಹಂಚಿಹೋಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ ಒಡೆತನ ಉದ್ಯಮಿ ಮುಖೇಶ್‌ ಅಂಬಾನಿ ಅವರದ್ದು. ಆದರೆ, ಈಗ ಮೋದಿ ಸರ್ಕಾರ ರಫೇಲ್ ಒಪ್ಪಂದ ಮಾಡಿಕೊಂಡಿರುವುದು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆ ಜೊತೆಗೆ. 2012ರಲ್ಲಿ ಡಸಾಲ್ಟ್ ಜೊತೆ ಮುಖೇಶ್ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್ ಮಾತುಕತೆ ನಡೆಸಿತ್ತು. ಇದೇ ವಿಚಾರವನ್ನು ಮುಂದಿಟ್ಟು ಪತ್ರಿಕಾಗೋಷ್ಠಿಯಲ್ಲಿ ಒಟ್ಟಾರೆ ಪ್ರಕರಣವನ್ನು ತಿರುಚಿದ ರವಿ ಶಂಕರ್ ಪ್ರಸಾದ್, “೨೦೧೨ರಲ್ಲಿಯೇ ಡಸಾಲ್ಟ್ ಸಂಸ್ಥೆಯು ‘ರಿಲಯನ್ಸ್‌’ ಸಂಸ್ಥೆಯನ್ನು ತನ್ನ ಸಹಯೋಗಿ ಸಂಸ್ಥೆಯಾಗಿ ಆರಿಸಿಕೊಂಡಿದೆ. ಬಿಜೆಪಿ ಸರ್ಕಾರ ನಂತರ ಅಧಿಕಾರಕ್ಕೆ ಬಂದಿದೆ,” ಎಂದು ಹೇಳಿದ್ದಾರೆ. ಆದರೆ, ಯಾವ ‘ರಿಲಯನ್ಸ್‌’ ಸಂಸ್ಥೆಯನ್ನು ಡಸಾಲ್ಟ್ ಸಂಸ್ಥೆ ೨೦೧೨ರಲ್ಲಿ ಆರಿಸಿತ್ತು ಎಂದು ರವಿ ಶಂಕರ್ ಪ್ರಸಾದ್ ಸ್ಪಷ್ಟಪಡಿಸಿಲ್ಲ.

ರವಿಶಂಕರ್ ಪ್ರಸಾದ್ ಮತ್ತು ರಕ್ಷಣಾ ಇಲಾಖೆ ಮುಂದಿಟ್ಟಿರುವುದು ವಾಸ್ತವದಲ್ಲಿ ೨೦೦೮ರಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್ (ಆರ್‌ಎಟಿಎಲ್‌) ನಡೆಸಿದ್ದ ಮಾತುಕತೆಯ ವಿವರಗಳನ್ನು. ಎಚ್‌ಎಎಲ್‌ ಮಾದರಿಯ ರಕ್ಷಣಾ ಸಂಸ್ಥೆಯೊಂದನ್ನು ಹುಟ್ಟುಹಾಕಲು ಹೊಸ ಸಿಬ್ಬಂದಿ ನೇಮಿಸಿಕೊಂಡು ಆರ್‌ಎಟಿಎಲ್‌ ನೀಲನಕ್ಷೆಯನ್ನೂ ರಚಿಸಿರುವ ಬಗ್ಗೆ ಆಗ ಪತ್ರಿಕಾ ವರದಿಗಳೂ ಬಂದಿದ್ದವು. ಆದರೆ, ೨೦೧೪ರಲ್ಲಿ ರಿಲಯನ್ಸ್ ಸಂಸ್ಥೆ ಜೊತೆಗಿನ ಡಸಾಲ್ಟ್ ಮಾತುಕತೆ ಮುರಿದುಬಿದ್ದಿತ್ತು ಮತ್ತು ಮುಂದಿನ ಮಾತುಕತೆಗಳೇನೂ ನಡೆದಿರಲಿಲ್ಲ. ಆದರೆ, ಅದಾಗಲೇ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಎರಡು ಪ್ರತ್ಯೇಕ ಉದ್ಯಮಗಳಾಗಿ ವಿಭಜನೆಗೊಂಡಿದ್ದ ಕಾರಣ ರವಿ ಶಂಕರ್ ಪ್ರಸಾದ್ ಅವರು ಈ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಏಕೆ ಮುಂದಿಟ್ಟಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

ಹಾಗೆ ನೋಡಿದರೆ, ಈಗಾಗಲೇ ಅಸ್ತಿತ್ವದಲ್ಲಿದ್ದ ಒಪ್ಪಂದವನ್ನು ರದ್ದುಗೊಳಿಸಿ 36 ರಫೇಲ್ ಯುದ್ಧವಿಮಾನ ಖರೀದಿಸುವ ಪರಿಷ್ಕೃತ ಒಪ್ಪಂದದಲ್ಲಿ ಡಸಾಲ್ಟ್‌ ಸಹಭಾಗಿತ್ವವಹಿಸುವ ಬಗ್ಗೆ 2015ರ ಮಾರ್ಚ್‌ 28ರಂದು ರಿಲಯನ್ಸ್‌ ಡಿಫೆನ್ಸ್ ಸಹಿ ಹಾಕಿದ್ದಕ್ಕೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿಯೂ ದಾಖಲೆ ಲಭ್ಯವಿದೆ. ಇಷ್ಟಾದರೂ ಕೇಂದ್ರ ಸರ್ಕಾರ, ಯುಪಿಎ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಗಳು ಮತ್ತು ಟ್ವೀಟ್‌ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅನಿಲ್ ಅಂಬಾನಿ ಇಬ್ಬರನ್ನೂ ಟೀಕಿಸಿದ್ದಾರೆ. “ಇವರಿಬ್ಬರೂ ಸೇರಿ ಭಾರತೀಯ ರಕ್ಷಣಾ ದಳದ ಮೇಲೆ 130 ಕೋಟಿ ರು. ಮೌಲ್ಯದ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ,” ಎಂದು ನೇರವಾಗಿ ಆರೋಪ ಹೊರಿಸಿದ್ದರು. ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದ್ದು ಶುಕ್ರವಾರ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ವಿಚಾರವಾಗಿ ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್‌ ನೀಡಿರುವ ಹೇಳಿಕೆ. "ಅನಿಲ್ ಅಂಬಾ ನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ ಇಂಡಸ್ಟ್ರೀಸ್‌ ಹೆಸರನ್ನು ಭಾರತ ಸರಕಾರವೇ ಪ್ರಸ್ತಾಪಿಸಿತ್ತು. ರಫೇಲ್‌ ಯುದ್ಧವಿಮಾನ ತಯಾರಿಸುವ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ಗೆ ಸ್ಥಳೀಯ ಪಾಲುದಾರರನ್ನಾಗಿ ಯಾರನ್ನು ಸೇರಿಸಿಕೊಳ್ಳಬಹುದು ಎಂದು ಯೋಚಿಸುತ್ತಿರುವಾಗ ಭಾರತ ಸರಕಾರವು ರಿಲಯನ್ಸ್‌ ಡಿಫೆನ್ಸ್‌ ಇಂಡಸ್ಟ್ರೀಸ್‌ ಹೆಸರು ಪ್ರಸ್ತಾಪಿಸಿತು. ಆ ಬಳಿಕ ಅದನ್ನು ಬಿಟ್ಟು ಬೇರೆ ಕಂಪನಿಗಳನ್ನು ಪರಿಗಣಿಸಲು ನಮಗೆ ಆಯ್ಕೆಗಳೇ ಇಲ್ಲದಂತಾಯಿತು,” ಎಂದು ಹೊಲಾಂದ್ ಹೇಳಿದ್ದರು.

ರಾಜಕೀಯ ಮೇಲಾಟಕ್ಕೆ ಕಾರಣವಾದ ಈ ಹೇಳಿಕೆಯಿಂದ ಮುಜಗರಕ್ಕೊಳಗಾದ ಕೇಂದ್ರ ರಕ್ಷಣಾ ಸಚಿವಾಲಯ, ಇದೇ ಮೊದಲ ಬಾರಿಗೆ ನೇರವಾಗಿ ರಫೇಲ್ ಒಪ್ಪಂದ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದೆ. “ರಫೇಲ್ ಒಪ್ಪಂದದಲ್ಲಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಆಯ್ಕೆಯಲ್ಲಿ ತನ್ನ ಪಾತ್ರ ಇಲ್ಲ. ಹೊಲಾಂದ್ ಅವರ ಹೇಳಿಕೆಯನ್ನು ತಿರುಚಿ, ಅನಗತ್ಯವಾಗಿ ವಿವಾದ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ,” ಎಂದು ಸಚಿವಾಲಯ ಹೇಳಿಕೊಂಡಿದೆ.

ಬಿಜೆಪಿ BJP ರಾಹುಲ್ ಗಾಂಧಿ ರವಿಶಂಕರ್‌ ಪ್ರಸಾದ್ Ravishankar Prasad Rafale Deal AICC President Rahul Gandhi Controversial Statement Aircraft Defence Minister Nirmala Sitharaman ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಕಾನೂನು ಸಚಿವಾಲಯ
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು
ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು
ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?