ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು
ಕೋರ್ಟ್‌ನಿಂದ ಬಿ ರಿಪೋರ್ಟ್ ವಜಾ; ತೇಜಸ್ವಿನಿ ಅನಂತಕುಮಾರ್‌, ಚರಂತಿಮಠಗೆ ಸಂಕಷ್ಟ?
ಮೋದಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದಕ್ಕೆ ಇಲ್ಲಿದೆ ಪುರಾವೆ!

ಎಟಿಎಂ ಡ್ರಾ ಮಿತಿ; ಗ್ರಾಹಕರ ಸಂಘಟಿತ ಲೂಟಿಗೆ ಸಜ್ಜಾಯಿತೇ ಕೇಂದ್ರ ಸರ್ಕಾರ?

ನಗದು ಕೊರತೆ ಸಮಸ್ಯೆಯೋ, ಡಿಜಿಟಲೀಕರಣದ ಹುನ್ನಾರವೋ ಅಂತೂ ಮತ್ತೆ ಎಟಿಎಂಗಳಲ್ಲಿ ನಗದು ಮಿತಿ ಹೇರಿಕೆ ಮಾಡಲಾಗಿದೆ. ಅತ್ತ ಗ್ರಾಹಕರು ಕಾರ್ಡ್ ಮೂಲಕ ಪಾವತಿ ಮಾಡಿದರೆ ಶೇ.1.50-3ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತದೆ. ಒಟ್ಟಾರೆ, ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆಯೇ?

ರೇಣುಕಾಪ್ರಸಾದ್ ಹಾಡ್ಯ

ನಗದು ಕೊರತೆ ಸಮಸ್ಯೆಯನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಡಿಜಿಟಲೀಕರಣದ ಹೆಸರಿನಲ್ಲಿ ಎಟಿಎಂಗಳಲ್ಲಿ ನಗದು ಡ್ರಾ ಮಾಡಲು ಮಿತಿ ಹೇರಿದೆ. ಪರೋಕ್ಷವಾಗಿ ಕಾರ್ಡ್ ಬಳಕೆ ಮಾಡುವಂತೆ ತಾಕೀತು ಮಾಡುತ್ತಿದೆ. ಕಾರ್ಡ್ ಬಳಕೆ ಮಾಡುವಂತೆ ತಾಕೀತು ಮಾಡುವ ಮೂಲಕ ಅಮಾಯಕ ಗ್ರಾಹಕರನ್ನು ಪರೋಕ್ಷವಾಗಿ ಲೂಟಿ ಮಾಡುತ್ತಿದೆ.

ಮೇಲ್ನೋಟಕ್ಕೆ ಇದು ವಿನಾಕಾರಣ ಆರೋಪ ಎಂದೆನಿಸುತ್ತದೆ. ಆದರೆ, ವಸ್ತುಸ್ಥಿತಿ ಏನೆಂಬುದನ್ನು ನೋಡಿ. ಕಳೆದೊಂದು ವಾರದಿಂದ ಬಹುತೇಕ ಎಟಿಎಂಗಳಲ್ಲಿ ನಗದು ಡ್ರಾ ಮಾಡಲು ಮಿತಿ ಹೇರಲಾಗಿದೆ. ಸಾಮಾನ್ಯ ಶೇ.90ರಷ್ಟು ಇರುವ ಡೆಬಿಟ್ ಕಾರ್ಡುದಾರರು ಒಂದು ಬಾರಿಗೆ ಕೇವಲ ₹10,000 ಮಾತ್ರ ಡ್ರಾ ಮಾಡಬಹುದು. ಒಂದೇ ದಿನ ಗರಿಷ್ಠ ಡ್ರಾ ಮಾಡುವ ಮಿತಿ ₹20,000 ಮಾತ್ರ.

ಈ ಮಿತಿಯಿಂದ ಬ್ಯಾಂಕುಗಳಿಗೆ ಕೊಂಚ ಲಾಭ ಇದೆ. ಖಾಸಗಿ ಬ್ಯಾಂಕುಗಳಿಗೆ ಹೆಚ್ಚಿನ ಲಾಭ ಇದೆ. ಒಬ್ಬ ಗ್ರಾಹಕ ತನ್ನದೇ ಖಾತೆಯಲ್ಲಿರುವ ತನ್ನದೇ ದುಡಿಮೆಯ ಹಣವನ್ನು ವಾಪಸು ಪಡೆಯಲು ಎಷ್ಟೆಲ್ಲ ಕಷ್ಟಪಡಬೇಕು ಎಂಬುದನ್ನು ಗಮನಿಸಿ.

ಗ್ರಾಹಕರೊಬ್ಬರ ಸಂಬಂಧಿ ಅಚಾನಕ್ಕಾಗಿ ಅನಾರೋಗ್ಯಕ್ಕೀಡಾದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಬಿಲ್ 1 ಲಕ್ಷ ರುಪಾಯಿ ದಾಟಿತು ಎಂದಿಟ್ಟುಕೊಳ್ಳಿ. ಬಿಲ್ ಪಾವತಿ ಮಾಡುವಾಗ ಕ್ಯಾಶ್ ಕೌಂಟರ್‌ನಲ್ಲಿರುವ ವ್ಯಕ್ತಿ "ಕ್ಯಾಶ್ ಪಾವತಿ ಮಾಡುತ್ತಿರೋ, ಕಾರ್ಡ್ ಮೂಲಕ ಪಾವತಿ ಮಾಡುತ್ತಿರೋ?” ಎಂದು ಕೇಳುತ್ತಾನೆ. ಕಾರ್ಡ್ ಮೂಲಕ ಪಾವತಿ ಮಾಡುತ್ತೇವೆ ಎಂದು ಗ್ರಾಹಕ ಹೇಳಿದರೆ, ಶೇ.2ರಷ್ಟು ಸರ್ವೀಸ್ ಚಾರ್ಚ್ ಆಗುತ್ತದೆ ಎನ್ನುತ್ತಾನೆ. ಗ್ರಾಹಕರು ವಿನಾಕಾರಣ 2000 ರುಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ.

ಇಲ್ಲೇ ಎಟಿಎಂನಲ್ಲಿ ಕ್ಯಾಶ್ ಡ್ರಾ ಮಾಡಿಕೊಂಡು ತಂದು ನೀಡುತ್ತೇನೆ ಎಂದು ಹೇಳಿ ಗ್ರಾಹಕ ಎಂಟಿಎಂಗೆ ತೆರಳುತ್ತಾರೆ. ಅಲ್ಲಿ ಡ್ರಾ ಮಾಡಲು ₹50,000 ಮೊತ್ತ ನಮೂದಿಸಿದರೆ ಬರುವುದಿಲ್ಲ. ₹40,000, ₹30,000 ನಮೂದಿಸಿದರೂ ನಗದು ಬರುವುದಿಲ್ಲ. ₹20,000 ನಮೂದಿಸಿದಾಗ ನಿಮ್ಮ ಡ್ರಾ ಮೊತ್ತವು ಮಿತಿ ಮೀರಿದೆ ಎಂದು ಎಟಿಎಂ ಪರದೆ ಮೇಲೆ ಮಾಹಿತಿ ನೀಡುತ್ತದೆ.

ಗ್ರಾಹಕ ನಂತರ 10,000 ರುಪಾಯಿ ಮೊತ್ತ ನಮೂದಿಸಿ ಡ್ರಾ ಮಾಡುತ್ತಾರೆ. ಮತ್ತೆ 10,000 ಮೊತ್ತ ಡ್ರಾ ಮಾಡುತ್ತಾರೆ. ಅಲ್ಲಿಗೆ ದಿನದ ಗರಿಷ್ಠ ಮೊತ್ತ ಮುಗಿಯಿತು. ಆದರೆ, ಈ ಹಂತದಲ್ಲಿ ನಡೆಸಿದ್ದು ಒಟ್ಟು ಆರು ಎಟಿಎಂ ವಹಿವಾಟುಗಳು; ಅದರಲ್ಲಿ ಮೊದಲ ನಾಲ್ಕು ವಹಿವಾಟುಗಳು ಉಚಿತ. ನಂತರ ಎರಡು ವಹಿವಾಟುಗಳಿಗೆ ಸರ್ಕಾರಿ ಬ್ಯಾಂಕುಗಳು ಪ್ರತಿ ವಹಿವಾಟಿಗೆ 20 ರುಪಾಯಿಗಳಂತೆ 40 ರುಪಾಯಿ ಶುಲ್ಕ ವಿಧಿಸುತ್ತವೆ. ಗ್ರಾಹಕರ ಬಳಿ ಖಾಸಗಿ ಬ್ಯಾಂಕ್ ಎಟಿಎಂ ಇದ್ದರೆ, ಪ್ರತಿ ವಹಿವಾಟಿಗೆ 30 ರುಪಾಯಿಗಳಂತೆ 60 ರುಪಾಯಿ ಶುಲ್ಕ ವಿಧಿಸಲಾಗುತ್ತದೆ.

ಗ್ರಾಹಕರು ಮತ್ತೆ ಆಸ್ಪತ್ರೆ ನಗದು ಕೌಂಟರ್‌ಗೆ ಬರುತ್ತಾರೆ. 80,000 ರುಪಾಯಿಗಳನ್ನು ಕಾರ್ಡ್ ಮೂಲಕವೇ ಪಾವತಿಸುತ್ತಾರೆ. ಆಗ ಅವರು ಪಾವತಿಸುವ ಹೆಚ್ಚುವರಿ ಶುಲ್ಕ 1,600 ರುಪಾಯಿ. ಅಂದರೆ, ಕೇಂದ್ರ ಸರ್ಕಾರ ಡಿಜಿಟಲೀಕರಣದ ಉಮೇದಿಗೆ ಅಮಾಯಕ ಗ್ರಾಹಕ 1,640 ರುಪಾಯಿ ನಷ್ಟ ಮಾಡಿಕೊಳ್ಳುತ್ತಾನೆ. ಇದು ಒಬ್ಬ ಗ್ರಾಹಕನ ಸಂಕಷ್ಟ. ಇನ್ನು, 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಶೇ.40ರಷ್ಟು ಮಂದಿ ಬ್ಯಾಂಕಿಂಗ್ ವಹಿವಾಟು ನಡೆಸುತ್ತಾರೆ ಎಂದರೂ, 52 ಕೋಟಿ ಜನರು ಕಾರ್ಡ್ ಮೂಲಕ ಪಾವತಿಸಿ ಎಷ್ಟೆಲ್ಲ ನಷ್ಟ ಮಾಡಿಕೊಳ್ಳಬಹುದು?

ಇಲ್ಲಿ ಮುಖ್ಯ ವಿಷಯ ಎಂದರೆ, ನಗದು ಬಳಕೆ ಕಡಮೆ ಮಾಡುವ ಮತ್ತು ಡಿಜಿಟಲ್ ಪಾವತಿ ಪ್ರೋತ್ಸಾಹಿಸುವ ಸಲುವಾಗಿ ನಗದು ಕೊರತೆ ಮೇಲೆ ಮಿತಿ ಹೇರಿಕೆ ಮಾಡಲಾಗಿದೆ, ನಿಜ. ಹಾಗಂತ ಗ್ರಾಹಕರು ತಾವು ಬೆವರು ಸುರಿಸಿ ದುಡಿದು ಸಂಪಾದಿಸಿ ಬ್ಯಾಂಕಿನಲ್ಲಿಟ್ಟ ದುಡ್ಡನ್ನು ತಾವೇ ಬಳಕೆ ಮಾಡಿಕೊಳ್ಳಲು ಶೇ.2ರಷ್ಟು ಶುಲ್ಕ ಪಾವತಿಸುವುದು ಎಂದರೆ ಇದು ಯಾವ ನ್ಯಾಯ? ಇದನ್ನು ಗ್ರಾಹಕರ ಸೇವೆ ಎನ್ನಲಾದೀತೇ? ಇದು ಕೇಂದ್ರ ಸರ್ಕಾರವೇ ಮಾಡುತ್ತಿರುವ ಸಂಘಟಿತ ದರೋಡೆ ಅಲ್ಲವೇ?

ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟಾಂಡರ್ಡ್ ಬೋರ್ಡ್ಸ್ ಆಫ್ ಇಂಡಿಯಾ (ಬಿಸಿಎಸ್ಬಿಐ) ಮಾರ್ಗಸೂಚಿಗಳ ಪ್ರಕಾರ, ಯಾವುದೇ ಬ್ಯಾಂಕು ತನ್ನ ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಯಾವುದೇ ಬದಲಾವಣೆ ಮಾಡುವುದಾದರೂ 30 ದಿನಗಳ ಮುಂಚಿತವಾಗಿ ಮಾಹಿತಿ ನೀಡಬೇಕು. ಆದರೆ, ಕಳೆದೊಂದು ವಾರದಿಂದ ಖಾಸಗಿ ಬ್ಯಾಂಕುಗಳು ಸೇರಿದಂತೆ ಬಹುತೇಕ ಬ್ಯಾಂಕುಗಳು ಎಟಿಎಂ ಡ್ರಾ ಮೇಲೆ ಮಿತಿ ಹೇರಿವೆ.

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತವಾಗಿ ಮಾಹಿತಿ ನೀಡಿದೆ. ಎಲ್ಲ ಶಾಖೆಗಳ ವ್ಯವಸ್ಥಾಪಕರಿಗೆ ಮಿತಿ ಹೇರಿಕೆ ಕುರಿತಂತೆ ಸೂಚನೆ ನೀಡಿದೆ. ಸಾಮಾನ್ಯವಾಗಿ ಬಡ್ಡಿ ಏರಿಕೆ, ಇಳಿಕೆ ಮತ್ತಿತರ ಬದಲಾವಣೆಗಳನ್ನು ಯಾವಾಗಲೂ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತರುತ್ತದೆ. ನಂತರ ಇತರ ಬ್ಯಾಂಕುಗಳು ಅನುಸರಿಸುತ್ತವೆ.

ಡಿಜಿಟಲ್ ವಹಿವಾಟು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು 2,000 ರುಪಾಯಿವರೆಗಿನ ವಹಿವಾಟಿಗೆ ಎಂಡಿಆರ್ ಶುಲ್ಕ ವಿನಾಯಿತಿ ನೀಡಿದೆ. 2,000 ಮೀರಿದ ವಹಿವಾಟಿಗೆ ಗ್ರಾಹಕರು ಎಂಡಿಆರ್ (ಮರ್ಚೆಂಟ್ಸ್ ಡಿಸ್ಕೌಂಟ್ ರೇಟ್) ಶುಲ್ಕ ಪಾವತಿಸುವುದು ಕಡ್ಡಾಯ. ಈ ಶುಲ್ಕವು ಶೇ.1.50ರಿಂದ ಶೇ.3ರಷ್ಟು ಇರುತ್ತದೆ.

ಕೇಂದ್ರ ಸರ್ಕಾರ ಡಿಜಿಟಲೀಕರಣದ ಹೆಸರಿನಲ್ಲಿ ಗ್ರಾಹಕರು ಕಾರ್ಡ್ ಬಳಕೆ ಮಾಡುವಂತೆ ಪರೋಕ್ಷ ಒತ್ತಡ ಹೇರುತ್ತಿದೆ. ಮತ್ತೊಂದು ಕಡೆ, ಗ್ರಾಹಕರಿಂದ ದುಬಾರಿ ಎಂಡಿಆರ್ ಶುಲ್ಕ ವಸೂಲು ಮಾಡುತ್ತಿದೆ. ಈಗ ಗ್ರಾಹಕರು ನಗದು ಮೂಲಕ ಪಾವತಿ ಮಾಡುವ ಹಕ್ಕನ್ನು ಪರೋಕ್ಷವಾಗಿ ಕಸಿದುಕೊಂಡಿದೆ.

ನಮ್ಮ ಮುಂದಿರುವ ಎರಡು ಪ್ರಶ್ನೆ ಎಂದರೆ; ಕೇಂದ್ರ ಸರ್ಕಾರ ಗ್ರಾಹಕರ ಮೇಲೆ ಆರ್ಥಿಕ ನಿರ್ಬಂಧ ಹೇರುತ್ತಿದೆಯೇ? ನಿಧಾನವಾಗಿ ಆರ್ಥಿಕ ತುರ್ತು ಪರಿಸ್ಥಿತಿಯತ್ತ ದೇಶ ಹೊರಳುತ್ತಿದೆಯೇ?

Central Government ಕೇಂದ್ರ ಸರ್ಕಾರ SBI ಎಸ್ಬಿಐ ATM ಎಟಿಎಂ Cash Crunch ನಗದು ಕೊರತೆ Draw Limit ಹಿಂಪಡೆ ಮಿತಿ
ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು
ಕೋರ್ಟ್‌ನಿಂದ ಬಿ ರಿಪೋರ್ಟ್ ವಜಾ; ತೇಜಸ್ವಿನಿ ಅನಂತಕುಮಾರ್‌, ಚರಂತಿಮಠಗೆ ಸಂಕಷ್ಟ?
ಮೋದಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದಕ್ಕೆ ಇಲ್ಲಿದೆ ಪುರಾವೆ!
Editor’s Pick More

ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು

ಕೇಂದ್ರ ಸರ್ಕಾರ ಅವಮಾನಿಸಿದ ಎಚ್‌ಎಎಲ್‌ಗೆ ಉಂಟು 7 ದಶಕಗಳ ಅಮೋಘ ಇತಿಹಾಸ

ಟ್ವಿಟರ್ ಸ್ಟೇಟ್| ಋತುಸ್ರಾವದ ಮಾನಸಿಕ ತಲ್ಲಣದತ್ತ ಗಮನ ಸೆಳೆದ ಶೆಹ್ಲಾ ರಶೀದ್

ಅಧ್ಯಾತ್ಮದ ಬೇಡಿಕೆಯ ಬ್ರ್ಯಾಂಡ್‌ ‘ಗಾಸಿಪ್‌’ ಗುರು ಜಗ್ಗಿ ವಾಸುದೇವ್‌

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು

ದೇಶದ ಆರ್ಥಿಕ ಬಿಕ್ಕಟ್ಟಿನ ಹೊತ್ತಿನಲ್ಲಿ ಮನಮೋಹನ್ ಸಿಂಗ್ ನೆನಪಾಗುತ್ತಾರೇಕೆ?

ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಕೆಂಬಸ್‌ ಕಲ್ಯಾ | ರಸ್ತೆ ಗುಂಡಿಗಳಲ್ಲಿ ಉಪ್ಪಿ ಪಾರ್ಟಿಯ ಎಂಪಿ ಸೀಟು ಕೂತದ!