ವಿಡಿಯೋ | ಉಪೇಂದ್ರರ ಫಸ್ಟ್‌ ಲುಕ್‌ನಲ್ಲೇ ‘ಐ ಲವ್‌ ಯೂ’ ಒನ್‌ಲೈನ್ ಸ್ಟೋರಿ
‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಪೋಸ್ಟರ್‌ ರಿಲೀಸ್‌, ಸೆ.27ಕ್ಕೆ ಟ್ರೈಲರ್
ಸರ್ಕಾರದ ದೇಣಿಗೆ ಇಲ್ಲದೆ ಸರಳವಾಗಿ ಕೇರಳ ಚಿತ್ರೋತ್ಸವ ಆಯೋಜಿಸಲು ನಿರ್ಧಾರ

ಬಾಲಿವುಡ್‌ನಲ್ಲಿ ಮೂವತ್ತು ವರ್ಷಗಳನ್ನು ಪೂರೈಸಿದ ನಟ ಸಲ್ಮಾನ್ ಖಾನ್

‘ಬೀವಿ ಹೊ ತೊ ಐಸಿ’ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ತಮ್ಮ ಸಿನಿಮಾರಂಗದ ಪಯಣ ಆರಂಭಿಸಿದ ಸಲ್ಮಾನ್ ಖಾನ್ ಆರಂಭದಲ್ಲಿ ನಟನೆ ಬಾರದೆ ಇರುವ ನಟರೆಂದು ಕುಖ್ಯಾತಿ ಪಡೆದಿದ್ದರು. ಬಾಲಿವುಡ್‌ನಲ್ಲಿ 30 ವರ್ಷಗಳನ್ನು ಪೂರೈಸಿರುವ ಸಲ್ಮಾನ್ ಖಾನ್ ಅವರ ಸಿನಿಪಯಣದ ಹಿನ್ನೋಟ

ಸಂಧ್ಯಾ ಜೈನ್

ಬಾಲಿವುಡ್‌ನ ಸ್ಟೈಲಿಶ್ ಹೀರೋ ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ವೃತ್ತಿ ಆರಂಭಿಸಿ ಬರೋಬ್ಬರಿ 30 ವರ್ಷಗಳು ಆಗಿವೆ. ಭಾರತದ ಸಿನಿಮಾ ಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಸಲ್ಮಾನ್ ಖಾನ್ ಅವರ ಸಿನಿಮಾಗಳೂ ಕೋಟಿಗಟ್ಟಲೆ ಗಳಿಕೆ ಮಾಡುತ್ತವೆ.

1988ರ ‘ಬೀವಿ ಹೊ ತೊ ಐಸಿ’ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ತಮ್ಮ ಸಿನಿಮಾರಂಗದ ಪಯಣ ಆರಂಭಿಸಿದ ಸಲ್ಮಾನ್ ಖಾನ್ ಆರಂಭದಲ್ಲಿ ನಟನೆ ಬಾರದೆ ಇರುವ ನಟರೆಂದು ಕುಖ್ಯಾತಿ ಪಡೆದಿದ್ದರು. ಆದರೆ, ತಮ್ಮ ಸುಂದರ ಮುಖ ಮತ್ತು ಮುಗ್ಧ ನಗುವಿನಿಂದಲೇ ಯುವಜನರನ್ನು ಮರಳು ಮಾಡಿದ ಸಲ್ಮಾನ್ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿದವು. ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಕಂಡಿದ್ದ ಅವರ ವೃತ್ತಿಬದುಕಿಗೆ ಕೈಹಿಡಿದಿದ್ದು 1989ರಲ್ಲಿ ಬಿಡುಗಡೆಯಾದ ‘ಮೈನೆ ಪ್ಯಾರ್ ಕಿಯಾ’ ಸಿನಿಮಾ. ಈ ಚಿತ್ರದ ಅಭಿನಯಕ್ಕಾಗಿ ಸಲ್ಮಾನ್ ಖಾನ್‌ಗೆ ಮೊದಲ ಫಿಲಂಫೇರ್ ಪ್ರಶಸ್ತಿಯೂ ದೊರೆಯಿತು.

೯೦ರ ದಶಕದಲ್ಲಿ ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಜೊತೆಗೆ ಸಲ್ಮಾನ್ ಖಾನ್ ಅವರ ಸಿನಿಮಾಗಳೂ ಭಾರತೀಯರ ಮನಸೂರೆಗೊಂಡವು. 1991ರಲ್ಲಿ ಬಿಡುಗಡೆಯಾದ ‘ಸಾಜನ್’, 1994ರ ‘ಹಮ್ ಆಪ್ಕೆ ಹೈ ಕೌನ್’, 1999ರ ‘ಬೀವಿ ನಂ.1’ ಅವರ ಕೆಲವು ಸೂಪರ್ ಹಿಟ್‌ ಸಿನಿಮಾಗಳು. 1998ರ ‘ಕುಚ್‌ ಕುಚ್‌ ಹೋತಾ ಹೈ’ ಸಿನಿಮಾದಲ್ಲಿ ಅವರು ಪೋಷಕ ಪಾತ್ರ ನಿರ್ವಹಿಸಿದರೂ, ಅವರ ನಟನೆ ಬಹಳ ಪ್ರಶಂಸೆಗೆ ಪಾತ್ರವಾಯಿತು. ನಂತರ 1999ರ ‘ಹಮ್‌ ದಿಲ್‌ ದೆ ಚುಕೆ ಸನಮ್‌’, 2003ರ ‘ತೇರೆ ನಾಮ್’, 2005ರ ‘ನೋ ಎಂಟ್ರಿ’ ಗಳಿಕೆಯಲ್ಲಿ ಸೂಪರ್ ಹಿಟ್ ಆಗುವ ಜೊತೆಗೆ ಸಲ್ಮಾನ್ ಖಾನ್ ಅವರ ನಟನೆಯ ಬಗ್ಗೆಯೂ ಸಾಕಷ್ಟು ಸಕಾರಾತ್ಮಕ ಸುದ್ದಿಗಳು ಕೇಳಿಬಂದವು.

ಆದರೆ, ನಂತರದ ಒಂದು ದಶಕ ಸಲ್ಮಾನ್ ಖಾನ್ ಅವರ ಬದುಕಿನ ಕುಸಿತದ ದಿನಗಳಾಗಿದ್ದವು. ವೈಯಕ್ತಿಕ ಬದುಕಿನಲ್ಲಿ ಅವರು ಮಾಡಿದ ಕೆಲವು ತಪ್ಪುಗಳಿಂದಾಗಿ ಜೈಲು ಕಂಬಿ ಎಣಿಸಿದ್ದಲ್ಲದೆ, ಸಿನಿಮಾ ರಂಗದಲ್ಲೂ ಅವರು ಹೆಚ್ಚು ಯಶಸ್ಸು ಕಾಣಲಿಲ್ಲ. ಅವರು ನಟಿಸಿದ ಹಲವು ಸಿನಿಮಾಗಳು ವೈಫಲ್ಯ ಕಂಡಾಗ ಸಲ್ಮಾನ್ ಖಾನ್ ವೃತ್ತಿಜೀವನ ಮುಗಿದೇಹೋಯಿತು ಎಂದು ಹಲವರು ವಿಶ್ಲೇಷಿಸಿದ್ದರು. ಆದರೆ, ಸಲ್ಮಾನ್ ಸೋಲೊಪ್ಪಿಕೊಳ್ಳುವ ನಟರಲ್ಲ. ಅವರ ಜೀವನವನ್ನು ತಹಬದಿಗೆ ತರಲು ಅವರ ತಂದೆ ಮತ್ತು ಕುಟುಂಬ ಸದಾ ಆಸರೆಯಾಗಿ ನಿಂತಿತ್ತು.

೨೦೦೯ರಲ್ಲಿ ಬಿಡುಗಡೆಯಾದ ‘ವಾಂಟೆಡ್‌’ ಸಿನಿಮಾ ಸಲ್ಮಾನ್ ಅವರಿಗೆ ಮತ್ತೆ ಯಶಸ್ಸಿನ ರುಚಿ ಹತ್ತಿಸಿತು. ನಂತರ ಅವರು ಹಲವು ರಿಮೇಕ್ ಸಿನಿಮಾಗಳಲ್ಲಿ ನಟಿಸಿ ಯಶಸ್ವಿಯಾದರು. ೨೦೧೦ರಲ್ಲಿ ಬಿಡುಗಡೆಯಾದ ‘ದಬಾಂಗ್’, ‘ಬಾಡಿಗಾರ್ಡ್’, ‘ಬಜರಂಗಿ ಬಾಯಿಜಾನ್’, ‘ಸುಲ್ತಾನ್’, ‘ಟೈಗರ್ ‘ಜಿಂದಾ ಹೈ’ ಚಿತ್ರಗಳೂ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಸಾಲಿಗೆ ಸೇರಿದವು.

ಇಂದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಸಲ್ಮಾನ್ ಖಾನ್ ಅವರ ಮೊದಲ ಸಂಭಾವನೆ ಕೇವಲ 75 ರುಪಾಯಿ ಎನ್ನುವುದು ನಿಮಗೆ ಗೊತ್ತೇ? ಈ ಕುರಿತಂತೆ ನಟ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರ ನೀಡಿದ್ದರು. ತಾನು ಸುಮ್ಮನೆ ಗೆಳೆಯರೊಂದಿಗೆ ಸೇರಿ ತಾಜ್ ಹೋಟೆಲ್‌ನಲ್ಲಿ ನಡೆದ ನೃತ್ಯ ಸಮಾರಂಭವೊಂದಲ್ಲಿ ಪಾಲ್ಗೊಂಡಿದ್ದಕ್ಕಾಗಿ 75 ರೂಪಾಯಿ ಸಂಭಾವನೆ ನೀಡಲಾಗಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು.

ಕೋಲಾ ಪಾನೀಯ ಬ್ರಾಂಡ್‌ಗೆ ಜಾಹೀರಾತು ರಾಯಭಾರಿಯಾಗಿ ಆಯ್ಕೆಯಾದಾಗ ಸಲ್ಮಾನ್ ಅವರಿಗೆ 750 ರುಪಾಯಿ ಸಂಭಾವನೆ ಸಿಕ್ಕಿತ್ತು! ಕಾಲಾನಂತರ ಇದು 1,500 ರುಪಾಯಿಗಳಾಯಿತು. ‘ಮೈ ನೆ ಪ್ಯಾರ್ ಕಿಯಾ’ ಚಿತ್ರದ ಅಭಿನಯಕ್ಕಾಗಿ ಅವರಿಗೆ 31 ಸಾವಿರ ರೂಪಾಯಿ ಸಂಭಾವನೆ ನೀಡಿದ್ದರು. ಬಳಿಕ ಅವರು ನಟಿಸಿದ ಸಿನಿಮಾಗಳಲ್ಲಿ ಸಂಭಾವನೆ 75 ಸಾವಿರ ರುಪಾಯಿಗೆ ಏರಿಕೆಯಾಯಿತು. ಆದಾದ ಬಳಿಕ ಆಗಿದ್ದೆಲ್ಲವೂ ಇತಿಹಾಸ ಎಂದು ಇತ್ತೀಚೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು ಸಲ್ಮಾನ್ ಖಾನ್.

ವೃತ್ತಿಜೀವನದ ಜೊತೆಜೊತೆಗೆ ಕೆಲವೊಂದು ವೈಯಕ್ತಿಕ ಕಾರಣಗಳಿಗಾಗಿಯೂ ಸಲ್ಮಾನ್ ಖಾನ್ ಸುದ್ದಿಯಾದವರು. ಹಿಟ್ ಆಂಡ್ ರನ್ ಪ್ರಕರಣ, ಕೃಷ್ಣಮೃಗ ಬೇಟೆ ಪ್ರಕರಣಗಳು ಅವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿವೆ. ಹಾಗೆಯೇ, ನಟಿಯರೊಂದಿಗಿನ ಪ್ರೇಮ ಪ್ರಸಂಗಗಳು ಅವರಿಗೆ ‘ಬ್ಯಾಡ್ ಬಾಯ್’ ಇಮೇಜ್ ಸೃಷ್ಟಿಸಿತು. ಸೋನುವಾಲಿಯ, ಸಂಗೀತಾ ಬಿಜಲಾನಿ, ಐಶ್ವರ್ಯಾ ರೈ, ಕತ್ರೀನಾ ಕೈಫ್ ಜೊತೆಗಿನ ಸ್ನೇಹ ಹಾಗೂ ಮುರಿದುಬಿದ್ದ ಸಂಬಂಧಗಳು ಬಾಲಿವುಡ್‌ನಲ್ಲಿ ಅವರ ಬಗ್ಗೆ ಅತಿ ಹೆಚ್ಚು ಗಾಸಿಪ್‌ಗಳು ಹರಡುವಂತೆ ಮಾಡಿವೆ.

Bollywood Actor ನಟ Salman Khan ಸಲ್ಮಾನ್ ಖಾನ್ ಬಾಲಿವುಡ್ ನಟ Race 3 ರೇಸ್ 3
ವಿಡಿಯೋ | ಉಪೇಂದ್ರರ ಫಸ್ಟ್‌ ಲುಕ್‌ನಲ್ಲೇ ‘ಐ ಲವ್‌ ಯೂ’ ಒನ್‌ಲೈನ್ ಸ್ಟೋರಿ
‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಪೋಸ್ಟರ್‌ ರಿಲೀಸ್‌, ಸೆ.27ಕ್ಕೆ ಟ್ರೈಲರ್
ಸರ್ಕಾರದ ದೇಣಿಗೆ ಇಲ್ಲದೆ ಸರಳವಾಗಿ ಕೇರಳ ಚಿತ್ರೋತ್ಸವ ಆಯೋಜಿಸಲು ನಿರ್ಧಾರ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?