ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?

ಪ್ರಧಾನಿ ಮೋದಿಯ ಅಭಿವೃದ್ಧಿ ನೀತಿಗಳನ್ನು ಟ್ರಂಪ್‌ ಅನುಸರಿಸುತ್ತಾರಂತೆ; ಹೌದೇ?

“ಒಂದು ದೇಶದ ಅಭಿವೃದ್ಧಿಗೆ ಯಾವ ರೀತಿ ಕೆಲಸ ಮಾಡಬೇಕು ಎಂಬುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರೀತಿ ಕೆಲಸ ಮಾಡಬೇಕೆಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ,” ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆದರೆ, ಟ್ರಂಪ್‌ ಯಾವಾಗ ಹೀಗೆ ಹೇಳಿದ್ದರು ಎಂಬುದು ಸದ್ಯದ ಪ್ರಶ್ನೆಯಾಗಿದೆ

“ದೇಶದ ಪ್ರಗತಿಗಾಗಿ ಪ್ರಧಾನಿ ಮೋದಿ ಅವರು ಜಾರಿ ಮಾಡುವ ಅಭಿವೃದ್ಧಿ ಯೋಜನೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅನುಸರಿಸುತ್ತಾರೆ. ಒಮ್ಮೆ ಟ್ರಂಪ್‌ ಅವರು ಒಂದು ದೇಶದ ಅಭಿವೃದ್ಧಿಗೆ ಯಾವ ರೀತಿ ಕೆಲಸ ಮಾಡಬೇಕು ಎಂಬುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರೀತಿ ಕೆಲಸ ಮಾಡಬೇಕು ಎಂದು ಉತ್ತರಿಸಿದ್ದರು. ಇದು ಕೇವಲ ಮೋದಿ ಅವರ ಹೆಗ್ಗಳಿಕೆ ಮಾತ್ರವಲ್ಲ, ದೇಶದ ೧೨೫ ಕೋಟಿ ಜನರ ಹೆಗ್ಗಳಿಕೆ,” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿಕೆ ನೀಡಿದ್ದರು.

ಜನವರಿ ೧೯ರಂದು ಅಲಹಾಬಾದ್‌ನಲ್ಲಿ ನಡೆದ ಮಹಾ ಸಂತ ಮೇಳದಲ್ಲಿ ಪಾಲ್ಗೊಂಡಿದ್ದ ಯೋಗಿ ಆದಿತ್ಯನಾಥ ಅವರು ಸಮಾವೇಶದಲ್ಲಿ ಈ ಹೇಳಿಕೆ ನೀಡಿದ್ದರು. ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿ ಪಡೆದಿರುವ ಅಮೆರಿಕ, ಭಾರತದ ಅಭಿವೃದ್ಧಿ ಯೋಜನೆಗಳನ್ನು ಅನುಸರಿಸುತ್ತಿದೆ ಎಂಬುದು ನಿಜಕ್ಕೂ ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಷಯವೇ. ಆದರೆ, ಡೊನಾಲ್ಡ್‌ ಟ್ರಂಪ್‌ ಅವರು ಯಾವಾಗ ಹೀಗೆ ಹೇಳಿದ್ದರು ಎಂಬುದೇ ಹೆಮ್ಮೆಪಡುವವರ ಪ್ರಶ್ನೆಯಾಗಿದೆ.

ಯೋಗಿ ಆದಿತ್ಯನಾಥ ಅವರ ಈ ಹೇಳಿಕೆಯನ್ನು ಕೋಟ್‌ ಮಾಡಿ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು “ಡೊನಾಲ್ಡ್‌ ಟ್ರಂಪ್‌ ಅವರು ಹೀಗೆ ಹೇಳಿರುವುದಕ್ಕೆ ಯಾವುದಾದರೂ ವಿಡಿಯೋ ಅಥವಾ ಲಿಖಿತ ದಾಖಲೆ ಇದೆಯೇ ಅಥವಾ ಟ್ರಂಪ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಏನಾದರೂ ಹೀಗೆ ಹೇಳಿದ್ದಾರೆಯೇ,” ಎಂದು ಪ್ರಶ್ನಿಸಿ ಟ್ವಿಟ್‌ ಮಾಡಿದ್ದಾರೆ.

ಇದನ್ನೂ ಓದಿ : ಡೊನಾಲ್ಡ್ ಟ್ರಂಪ್‌ ‘ಫೇಕ್‌ ನ್ಯೂಸ್‌’ ಅವಾರ್ಡ್‌ ನೀಡಿದ್ದಾದರೂ ಏಕೆ ಗೊತ್ತೇ?

‘ಎಎನ್‌ಐ ಯುಪಿ’ ಸುದ್ದಿಸಂಸ್ಥೆ ತನ್ನ ಟ್ವಿಟರ್‌ ಖಾತೆಯಲ್ಲಿ ಯೋಗಿ ಆದಿತ್ಯನಾಥ ಅವರ ಹೇಳಿಕೆಯನ್ನು ಪ್ರಕಟಿಸುತ್ತಿದ್ದಂತೆ ಅದಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದು, “ಆದಿತ್ಯನಾಥ ಅವರೇ ಸುಳ್ಳು ಹೇಳುವುದನ್ನು ನಿಲ್ಲಿಸಿ,” ಎಂದು ಹರಿಹಾಯ್ದಿದ್ದಾರೆ. “ದ್ವೇಷ ರಾಜಕಾರಣ, ಬ್ಯಾಂಕಿಂಗ್‌ ಕ್ಷೇತ್ರದ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ, ಕೃಷಿ ಉತ್ಪಾದನೆ ಕುಸಿತ ಹಾಗೂ ಮುಗ್ಗರಿಸಿದ ಆರ್ಥಿಕತೆ... ಇವು ಮೋದಿ ಅವರ ಅಭಿವೃದ್ಧಿ ಕಾರ್ಯ,” ಎಂದು ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ.

ಪಕ್ಷದಿಂದ ಶಹಬ್ಬಾಸ್‌ಗಿರಿ ಪಡೆಯುವ ಸಲುವಾಗಿಯೋ ಅಥವಾ ಪಕ್ಷದಲ್ಲಿ ಉಳಿದುಕೊಳ್ಳುವ ಕಾರಣಕ್ಕೆ ಏನೋ ಬಿಜೆಪಿಯ ಹಲವು ಮುಖಂಡರು ಜನರ ದಾರಿ ತಪ್ಪಿಸುವ ಹೇಳಿಕೆಗಳನ್ನು ಆಗಾಗ್ಗೆ ನೀಡುತ್ತಿರುತ್ತಾರೆ. ಈಗ ಯೋಗಿ ಆದಿತ್ಯನಾಥ ಅವರು ಅಂತಹದ್ದೇ ಸುಳ್ಳು ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಿದ್ದಾರೆ.

ಯೋಗಿ ಆದಿತ್ಯನಾಥ Yogi Adityanath Fake News Donald Trump ಅಮೆರಿಕ ಸುಳ್ಳು ಸುದ್ದಿ ಪ್ರಧಾನಿ ನರೇಂದ್ರ ಮೋದಿ America ಡೊನಾಲ್ಡ್‌ ಟ್ರಂಪ್‌ PM Narendra Modi ಉತ್ತರಪ್ರದೇಶ ಮುಖ್ಯಮಂತ್ರಿ Uttar Pradesh Chief Minister
ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More

ಕೇರಳದಲ್ಲಿ ನಡೆದದ್ದು ಲವ್ ಜಿಹಾದ್ ಅಲ್ಲ, ಪ್ರೇಮ ಪ್ರಕರಣಗಳಷ್ಟೆ ಎಂದ ಎನ್‌ಐಎ

ನಿಷೇಧಿತ ಪೊಲಿಯೋ ಲಸಿಕೆ ಬೆಂಗಳೂರಿನಲ್ಲಿ ಬಳಕೆ? ಕಾಡಲಿದೆಯೇ ಪೊಲಿಯೋ ವೈರಸ್‌

ತಮ್ಮ ರಾಜ್ಯದವರ ಮೇಲಿನ ದಾಳಿ ಬಗ್ಗೆ ಬಿಹಾರ ರಾಜಕಾರಣಿಗಳೇಕೆ ಮಾತನಾಡಿಲ್ಲ?

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪಸರಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?

ರೆಹಾನಾ ಫಾತಿಮಾ ಎಂಬ ನುಂಗಲಾಗದ, ಉಗುಳಲೂ ಆಗದ ಬಿಸಿತುಪ್ಪ!

ಸ್ಟೇಟ್‌ಮೆಂಟ್‌ | ಮೋದಿಯವರ ಆರ್ಥಿಕ ನೀತಿಯಿಂದ ಜನಸಾಮಾನ್ಯನಿಗೆ ದಕ್ಕಿದ್ದೇನು?

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು