ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?

ಆರೋಪ ಮಾಡುವ ಭರದಲ್ಲಿ ಯಡವಟ್ಟು ಮಾಡಿಕೊಂಡು, ಟೀಕೆಗೆ ಗುರಿಯಾದ ಬಿಜೆಪಿ

ಬೆಂಗಳೂರಿನ ರಸ್ತೆಗಳು, ಸ್ಪಚ್ಛತೆ ವಿಚಾರವಾಗಿ ಕಾಂಗ್ರೆಸ್ ದೂರುವ ಭರದಲ್ಲಿ, ರಾಜ್ಯ ಬಿಜೆಪಿ ನಾಯಕರು ಯಡವಟ್ಟು ಮಾಡಿಕೊಂಡಿದ್ದಾರೆ. ಮಿಜೋರಾಂ, ಕಠ್ಮಂಡುವಿನ ಗುಂಡಿ ಬಿದ್ದ ರಸ್ತೆಗಳ ಚಿತ್ರಗಳನ್ನು ಬಳಸಿಕೊಂಡು ಬೆಂಗಳೂರಿನ ರಸ್ತೆಗಳು ಎಂದು ಬಿಂಬಿಸಲು ಹೋಗಿ, ತಾವೇ ಆ ಹಳ್ಳದಲ್ಲಿ ಬಿದ್ದಿದ್ದಾರೆ

ಸಂಧ್ಯಾ ಜೈನ್

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜ್ಯ ರಾಜಕಾರಣದಲ್ಲಿ ಆರೋಪ- ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ. ವಿಪರ್ಯಾಸವೆಂದರೆ ಪರಸ್ಪರ ಆರೋಪ ಮಾಡುವ ಭರದಲ್ಲಿ, ಬಿಜೆಪಿ ನಾಯಕರು ಪದೇಪದೇ ತಾವೇ ಮುಜುಗರಕ್ಕೀಡಾಗುತ್ತಿದ್ದಾರೆ. ‘ಬೆಂಗಳೂರು ರಕ್ಷಿಸಿ’ ಯಾತ್ರೆಗಾಗಿ ಬಿಜೆಪಿ ಸಿದ್ದಪಡಿಸಿರುವ ಕೈಪಿಡಿಯಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದ್ದಾರೆ. ಬೆಂಗಳೂರಿನ ಹದಗೆಟ್ಟೆ ರಸ್ತೆ, ಸ್ಪಚ್ಛತೆ ಹಾಗೂ ಬಿಬಿಎಂಪಿ ಆಡಳಿತ ಕುರಿತು ಕಾಂಗ್ರೆಸ್ ದೂರುವ ಭರದಲ್ಲಿ, ಯಡವಟ್ಟು ಮಾಡಿಕೊಂಡು, ಬಿಜೆಪಿ ವರಿಷ್ಠರಿಂದಲೂ ಛೀಮಾರಿ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಯದ ಆಡಳಿತ ವೈಖರಿಯನ್ನು ದೂರುವ ಭರದಲ್ಲಿ ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆ ಇದೆ ಎಂದು ಆರೋಪಿಸಿ, ಮಿಜೋರಾಂ ಮತ್ತು ಕಠ್ಮಂಡುವಿನ ಚಿತ್ರವನ್ನು ಬಿಜೆಪಿ ತನ್ನ ಬುಕ್ ಲೆಟ್ ನಲ್ಲಿ ಬಳಸಿಕೊಂಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಬಿಡುಗಡೆ ಮಾಡಿರುವ ಚಿತ್ರಗಳನ್ನು ಲೇವಡಿ ಮಾಡಿದ ಟ್ವಿಟರ್‌ಗಳು ಹರಿದಾಡುತ್ತಿವೆ. ಇದನ್ನು ಕರ್ನಾಟಕ ಕಾಂಗ್ರೆಸ್ ರಿಟ್ವೀಟ್ ಮಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

“ಆರೋಪ ಮಾಡಲು ನಿಮಗೆ ಯಾವುದೇ ವಿಚಾರ ಇಲ್ಲವೆಂದರೆ ಬಾಯಿ ಮುಚ್ಚಿಕೊಂಡಿರಿ,” ಎಂದು ಕೆಲವರು ಕಿವಿಮಾತು ಹೇಳಿದರೆ, ಮತ್ತೆ ಕೆಲವರು “ಬಿಜೆಪಿ ಆರೋಪಗಳು ಸಂಪೂರ್ಣ ಸುಳ್ಳಿನಿಂದ ಕೂಡಿದ್ದು, ಇದಕ್ಕೆ ಅವರ ಬಳಸಿಕೊಂಡಿರುವ ಫೋಟೋಗಳೇ ಸಾಕ್ಷಿ. ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ,” ಎಂದು ಟ್ವಿಟ್ಟಿಗರು ಟೀಕಾ ಪ್ರಹಾರ ಮುಂದುವರೆಸಿದ್ದಾರೆ.

ಇನ್ನೂ ಕೆಲವರು “ಬಿಜೆಪಿಗೆ ಚುನಾವಣೆ ಹೊಸಿಲ ಬಳಿ ಇರುವಾಗಲೇ ಈ ಎಲ್ಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿತೆ? ಬೆಂಗಳೂರನ್ನು ರಕ್ಷಿಸುವ ಅಗತ್ಯ ಈಗ ಎದ್ದು ಕಾಣುತ್ತಿದೆಯೇ,” ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರಿಗೆ ತಾವು ಮಾಡಿರುವ ಯಡವಟ್ಟಿನ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ, ಎಚ್ಚೆತ್ತು ಖಾಸಗಿ ನ್ಯೂಸ್ ವೆಬ್ ಸೈಟ್ ನಿಂದ ಕೈಪಿಡಿಯನ್ನು ತೆಗೆದುಹಾಕಿದ್ದಾರೆ.

ಇದನ್ನೂ ಓದಿ : ತಮ್ಮ ವಿದ್ಯಾರ್ಹತೆ ಬಗ್ಗೆ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ಹೇಳಿದ್ದೇನು? 

“ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ಏನೂ ಮಾಡಿಲ್ಲ. ಇಲ್ಲಿ ಮೂಲಸೌಕರ್ಯವೇ ಇಲ್ಲ, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ,” ಎಂದು ಆರೋಪಿಸಿ ಬಿಜೆಪಿ ನಾಯಕರು, ಕೈಪಿಡಿಯೊಂದನ್ನು ಬಿಡುಗಡೆ ಮಾಡಿದ್ದರು. ಆದರೆ, ಈ ಕೈಪಿಡಿಯಲ್ಲಿ ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳು ಎಂದು ಕೆಲ ಚಿತ್ರಗಳನ್ನು ಪ್ರಕಟಿಸಲಾಗಿತ್ತು. ಆದರೆ, ಈ ಚಿತ್ರಗಳು ಮಿಜೊರಾಂ ಮತ್ತು ಕಠ್ಮಂಡು ನಗರದ ಫೋಟೋಗಳು. ತಪ್ಪು ಚಿತ್ರಗಳನ್ನು ಪ್ರಕಟಿಸಿದ್ದು ಬಿಜೆಪಿ ವರಿಷ್ಠರ ಗಮನಕ್ಕೆ ಬರುತ್ತಿದ್ದಂತೆ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಷ್ಟೇ ಹೇಳಿ ನುಣುಚಿಕೊಂಡರು.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮೂರು ದಿನ ‘ಬೆಂಗಳೂರು ರಕ್ಷಿಸಿ’ ಯಾತ್ರೆಗೆ , ಶುಕ್ರವಾರ ಚಾಲನೆ ನೀಡಿದೆ. ಬೆಂಗಳೂರಿನ ಪ್ರಮುಖ 10 ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇವನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂಬುದನ್ನು ಜನರಿಗೆ ತಿಳಿಸುವುದೇ ಯಾತ್ರೆಯ ಉದ್ದೇಶವಾಗಿದೆ.

ಬಿಜೆಪಿ twitter ಕಾಂಗ್ರೆಸ್‌ congress BJP Bengaluru ಬಿಡುಗಡೆ ಸುಳ್ಳು ಸುದ್ದಿ ಬೆಂಗಳೂರು ಕೈಪಿಡಿ Infrastructure Released Booklet ಮೂಲಸೌಕರ್ಯ ಟ್ಟಿಟರ್‌ ಬೆಂಗಳೂರು ಉಳಿಸಿ
ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More

ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು

ಕೇಂದ್ರ ಸರ್ಕಾರ ಅವಮಾನಿಸಿದ ಎಚ್‌ಎಎಲ್‌ಗೆ ಉಂಟು 7 ದಶಕಗಳ ಅಮೋಘ ಇತಿಹಾಸ

ಟ್ವಿಟರ್ ಸ್ಟೇಟ್| ಋತುಸ್ರಾವದ ಮಾನಸಿಕ ತಲ್ಲಣದತ್ತ ಗಮನ ಸೆಳೆದ ಶೆಹ್ಲಾ ರಶೀದ್

ಅಧ್ಯಾತ್ಮದ ಬೇಡಿಕೆಯ ಬ್ರ್ಯಾಂಡ್‌ ‘ಗಾಸಿಪ್‌’ ಗುರು ಜಗ್ಗಿ ವಾಸುದೇವ್‌

ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು

ದೇಶದ ಆರ್ಥಿಕ ಬಿಕ್ಕಟ್ಟಿನ ಹೊತ್ತಿನಲ್ಲಿ ಮನಮೋಹನ್ ಸಿಂಗ್ ನೆನಪಾಗುತ್ತಾರೇಕೆ?

ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಕೆಂಬಸ್‌ ಕಲ್ಯಾ | ರಸ್ತೆ ಗುಂಡಿಗಳಲ್ಲಿ ಉಪ್ಪಿ ಪಾರ್ಟಿಯ ಎಂಪಿ ಸೀಟು ಕೂತದ!