ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?

ಸಾವಿರಾರು ಕೋಟಿ ವಂಚಿಸಿ, ಪರಾರಿ ಆಗಿರುವ ನೀರವ್ ಮೋದಿ ಬಂಧನ ಸುದ್ದಿ ನಿಜವೇ?

“ಹಾಂಕಾಂಗ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದೆ. ಈ ಸುದ್ದಿಯನ್ನು ನಾವೇ ಮೊದಲಿಗೆ ಬ್ರೇಕ್ ಮಾಡುತ್ತಿದ್ದೇವೆ,” ಎಂಬ ಸುದ್ದಿಯನ್ನು ‘ಟೈಮ್ಸ್ ನೌ’ ಸುದ್ದಿವಾಹಿನಿ ಪ್ರಕಟಮಾಡಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ‘ಆಲ್ಟ್ ನ್ಯೂಸ್’ ವೆಬ್‌ಪೋರ್ಟಲ್ ಬಹಿರಂಗಪಡಿಸಿದೆ

ಸಂಧ್ಯಾ ಜೈನ್

“ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ವಂಚಿಸಿದ ನೀರವ್ ಮೋದಿಯನ್ನು ಹಾಂಕಾಂಗ್ ನಲ್ಲಿ ಬಂಧಿಸಲಾಗಿದೆ,”

“ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಗೆ 11,500 ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಬೇಕಾಗಿದ್ದ ನೀರವ್ ಮೋದಿ ಅರೆಸ್ಟ್,”

“ಪೊಲೀಸರಿಗೆ ಸವಾಲಾಗಿದ್ದ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಇದೀಗ ಪೊಲೀಸರ ವಶದಲ್ಲಿದ್ದಾರೆ,”

ಹೀಗೊಂದು ಬ್ರೇಕಿಂಗ್ ನ್ಯೂಸ್, ಪುಂಖಾನುಪುಂಖವಾಗಿ ಪ್ರತಿಷ್ಠಿತ ಸುದ್ದಿ ವಾಹಿನಿ ‘ಟೈಮ್ಸ್ ನೌ’ ನಲ್ಲಿ ಪ್ರಸಾರವಾಯಿತು. ರಾಷ್ಟ್ರೀಯ ಸುದ್ದಿವಾಹಿನಿ ‘ಟೈಮ್ಸ್ ನೌ’ ನಲ್ಲಿ ಪ್ರಕಟವಾದ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತು.

“ನೀರವ್ ಮೋದಿಯನ್ನು ಹಾಂಕಾಂಗ್‌ನಲ್ಲಿ ಬಂಧಿಸಲಾಗಿದೆ. ಭಾರತ ಬಿಟ್ಟು ಹಾಂಕಾಂಗ್‌ನಲ್ಲಿ ನೆಲೆಸಿರುವ ನೀರವ್ ಮೋದಿಯನ್ನು ಇದೀಗ ಬಂಧಿಸಲಾಗಿದೆ. ಈ ಸುದ್ದಿ  ನಮ್ಮ ವಾಹಿನಿಯಲ್ಲೇ ಮೊದಲ ಬಾರಿಗೆ ಬ್ರೇಕಿಂಗ್ ಆಗುತ್ತಿದೆ,” ಎಂಬಿತ್ಯಾದಿ ವಿಚಾರಗಳನ್ನು ಸುದ್ದಿನಿರೂಪಕರು ತಿಳಿಸುತ್ತಲೇ ಇದ್ದರು. ರಾಷ್ಟ್ರೀಯ ವಾಹಿನಿ ಪ್ರಸಾರ ಮಾಡುವ ಸುದ್ದಿ ಸತ್ಯಕ್ಕೆ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಎಷ್ಟೋ ಬಾರಿ ಸ್ಥಳೀಯ ಸುದ್ದಿ ವಾಹಿನಿಗಳು ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಯನ್ನು ಅನುಸರಿಸುವುದಿದೆ. ಅದೇ ರೀತಿ ‘ಟೈಮ್ಸ್ ನೌ’ ನಲ್ಲಿ ಪ್ರಸಾರವಾದ ನೀರವ್ ಮೋದಿ ಬಂಧನ ವಿಚಾರ, ವಿಟಿವಿ ಗುಜರಾತ್ ಹಾಗೂ ಟಿವಿ 9 ತೆಲುಗು ವಾಹಿನಿಯಲ್ಲೂ ಪ್ರಸಾರವಾಯಿತು.

ಆದರೆ ‘ಟೈಮ್ಸ್ ನೌ’ ಪ್ರಕಟಿಸಿದ ಸುದ್ದಿ ಸುಳ್ಳುಸುದ್ದಿಯಾಗಿದೆ ಎಂಬುದನ್ನು ‘ಆಲ್ಟ್ ನ್ಯೂಸ್’ ಬಹಿರಂಗಪಡಿಸಿದೆ. ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಇದೊಂದು ಸುಳ್ಳು ಸುದ್ದಿ ಎಂಬುದನ್ನು ‘ಆಲ್ಟ್ ನ್ಯೂಸ್’ ಪ್ರಕಟಿಸಿದ್ದು, ಈ ಸುದ್ದಿ ಟ್ವಿಟ್ಟರ್‌ನಲ್ಲಿ 920 ಬಾರಿ ರೀ ಟ್ವೀಟ್ ಆಗಿದ್ದು, ಪ್ರತಿಷ್ಠಿತ ಸುದ್ದಿ ವಾಹಿನಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.  ಆದರೆ ಈ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟ ‘ಟೈಮ್ಸ್ ನೌ’ ವಾಹಿನಿ ಈ ಬಗ್ಗೆ ಯಾವುದೇ ಸುದ್ದಿ ಪ್ರಕಟಿಸಿಲ್ಲ. ಇನ್ನೂ ನೀರವ್ ಮೋದಿ ಬಂಧನದ ವಿಚಾರದ ಕುರಿತಂತೆ ಚೀನಾ ಸರ್ಕಾರ ಸ್ಪಷ್ಟನೆ ನೀಡಿದ್ದು, ನೀರವ್ ಮೋದಿಯನ್ನು ಬಂಧಿಸಿಲ್ಲ ಎಂದಿದೆ.

ಇದನ್ನೂ ಓದಿ : ಮಮತಾ ಬ್ಯಾನರ್ಜಿ ಎದುರು ಟಿಎಂಸಿ ಪಕ್ಷದ ಕಾರ್ಯಕರ್ತರು ಗಲಭೆ ಎಬ್ಬಿಸಿದರೇ?

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಕೂಡ ಆರೋಪಿ. ಹೀಗಾಗಿ ನೀರವ್ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ದೂರು ನೀಡಿತ್ತು. ಇದರ ಮರುದಿನವೇ ನಾಪತ್ತೆಯಾಗಿದ್ದ ನೀರವ್, ಹಾಂಕಾಂಗ್‌ನಲ್ಲಿ ನೆಲೆಸಿದ್ದಾರೆ ಎಂದು ಸ್ವತಃ ಕೇಂದ್ರ  ವಿದೇಶಾಂಗ ಸಹಾಯಕ ಸಚಿವ ವಿಕೆ ಸಿಂಗ್ ಹೇಳಿದ್ದರು. ನೀರವ್ ಬಂಧನಕ್ಕಾಗಿ ಅಲ್ಲಿನ ಸರ್ಕಾರಕ್ಕೆ ಈಗಾಗಲೇ ಅಧಿಕೃತ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದರು.

ಸುದ್ದಿವಾಹಿನಿಗಳಲ್ಲಿ ಧಾವಂತ ಇರಬೇಕು ನಿಜ. ಆದರೆ ಎಲ್ಲದಕ್ಕಿಂತ ಮೊದಲು ನಾವೇ ಸುದ್ದಿಯನ್ನು ಬ್ರೇಕ್ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ನಿಜ ವಿಚಾರವನ್ನು ಪರಾಮರ್ಶೆ ಮಾಡದೆ , ಗಾಳಿ ಸುದ್ದಿಗಳನ್ನು ನಿಜ ಎಂಬಂತೆ ಬಿಂಬಿಸಿ ಪ್ರಕಟಿಸುವುದು ಎಷ್ಟರ ಮಟ್ಟಿಗೆ ಸರಿ. ಸುದ್ದಿವಾಹಿನಿಗಳು ಪದೇಪದೇ ಇಂತಜ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರ ಅಪನಂಬಿಕೆ ಪಾತ್ರವಾಗುತ್ತಲೇ ಇದೆ.

Fake News Hong Kong ಸುಳ್ಳು ಸುದ್ದಿ Scam Arrest ಬಂಧನ ವಂಚನೆ Times Now ಟೈಮ್ಸ್ ನೌ ಹಾಂಕಾಂಗ್ Nirav Modi ಪಿಎನ್‌ಬಿ ಹಗರಣ ನೀರವ್ ಮೋದಿ‌ PNB Scam
ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?