ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?

ಯಶ್ ಕೊಲೆಗೆ ಸಂಚು ನಡೆದದ್ದು ನಿಜವೇ? ಸಿಸಿಬಿ ನೀಡಿರುವ ಸ್ಪಷ್ಟನೆ ಏನು?

ಎರಡೂವರೆ ವರ್ಷದ ಹಿಂದೆ ನಟ ಯಶ್‌ ಕೊಲೆಗೆ, ಸ್ಟಾರ್‌ ನಟರೊಬ್ಬರ ಜೊತೆ ಭೂಗತ ಜಗತ್ತಿನ ಕೆಲವರು ಚರ್ಚೆ ನಡೆಸಿದ್ದರು. ಸ್ಟಾರ್ ವಾರ್‌ನಿಂದಾಗಿ ಯಶ್ ಅವರನ್ನು ಮುಗಿಸಲು ಸಂಚು ರೂಪಿಸಲಾಗಿತ್ತು ಎಂದು ವಿವರಿಸಿ ಕನ್ನಡದ ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿರುವ ಸುದ್ದಿ ನಿಜವೇ?

ಸಂಧ್ಯಾ ಜೈನ್

'ನಟ ಯಶ್‌ ಕೊಲೆಗೆ ಸ್ಕೆಚ್‌: ಸೈಕಲ್‌ ಬಂಧನದಿಂದ ಗುಟ್ಟು ರಟ್ಟು' -ಹೀಗೊಂದು ತಲೆಬರಹವಿರುವ ಸುದ್ದಿಯೊಂದು ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದೇ ತಡ, ಯಶ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಯಿತು. 2018ರ ಜು.12ರಂದು ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಲ್ಲಿ, “ಎರಡೂವರೆ ವರ್ಷಗಳ ಹಿಂದೆ ನಟ ಯಶ್‌ ಕೊಲೆಗೆ, ಸ್ಟಾರ್‌ ನಟನ ಜೊತೆ ಭೂಗತ ಜಗತ್ತಿನ ಕೆಲವರು ಚರ್ಚೆ ನಡೆಸಿದ್ದರು. ಸ್ಟಾರ್ ವಾರ್‌ನಿಂದಾಗಿ ಪಾರ್ಟಿಯೊಂದರಲ್ಲಿ ಯಶ್ ಅವರನ್ನು ಮುಗಿಸಲು ಸಂಚು ರೂಪಿಸಲಾಗಿತ್ತು,” ಎಂದು ವಿವರಿಸಲಾಗಿತ್ತು.

ಅಲ್ಲದೆ, “ಪಾರ್ಟಿಯೊಂದರಲ್ಲಿ ತನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಯಶ್ ಅವರು ನಿರ್ಮಾಪಕ ಜಯಣ್ಣ ಜೊತೆ ಕಮಿಷನರ್‌ ಕಚೇರಿಗೆ ದೌಡಾಯಿಸಿ ಮೌಖಿಕ ದೂರು ಸಲ್ಲಿಸಿದ್ದರು. ಆ ದೂರನ್ನೇ ಗಂಭೀರವಾಗಿ ಪರಿಗಣಿಸಿದ್ದ ಇಲಾಖೆಯು ಪ್ರಕರಣದ ತನಿಖೆ ನಡೆಸಿತ್ತು. ಮೈಸೂರು ಭಾಗದಲ್ಲಿ ಬೇರು ಬಿಟ್ಟಿದ್ದ ಬೆಂಗಳೂರಿನ ಹಲವು ರೌಡಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಕೆಲವರನ್ನು ಬಂಧಿಸಿ ಐಪಿಸಿ 120 (ಮುನ್ನೆಚ್ಚರಿಕೆ ಕ್ರಮ) ಅಡಿಯಲ್ಲಿ ಜೈಲಿಗೂ ಕಳುಹಿಸಿದ್ದರು. ಈ ನಡುವೆ, ಕಳೆದ ಜೂ.27ರಂದು ಬಂಧನಕ್ಕೊಳಗಾದ ಸೈಕಲ್ ರವಿಯ ವಿಚಾರಣೆ ವೇಳೆ ಯಶ್ ಕೊಲೆಯ ಸಂಚಿನ ವಿಚಾರ ಬಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ,” ಎಂಬುದನ್ನು ‘ವಿಜಯ ಕರ್ನಾಟಕ’ದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ವರದಿಯನ್ನು ಆಧರಿಸಿ ಕನ್ನಡದ ಇತರ ಪ್ರಮುಖ ದಿನಪತ್ರಿಕೆಗಳು. ಸುದ್ದಿವಾಹಿನಿಗಳು ಸುದ್ದಿ ಮಾಡಿದ್ದವು.

ಇದನ್ನೂ ಓದಿ : ಬಲಪಂಥ ಪ್ರಚಾರಕ್ಕೆಂದು ಇರುವ ಫೇಸ್‌ಬುಕ್ ಪುಟಗಳಲ್ಲಿ ನಿಜಕ್ಕೂ ಏನಿದೆ ಗೊತ್ತೇ?

ಯಶ್ ಕೊಲೆ ಸಂಚಿನ ವಿಚಾರ ಚರ್ಚೆಯಾಗುತ್ತಿದ್ದಂತೆ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಸಿಸಿಬಿ ಪೊಲೀಸರು, ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. “ಯಾವುದೇ ಖಚಿತ ಆಧಾರವಿಲ್ಲದೆ ಇಂತಹ ಸುದ್ದಿಗಳನ್ನು ಪ್ರಕಟಿಸಿ ಬಳಿಕ, ಸಿಸಿಬಿ ಮೂಲಗಳು ತಿಳಿಸಿವೆ ಎಂದು ಹೇಳುವ ಮೂಲಕ ಸುಖಾಸುಮ್ಮನೆ ನಮ್ಮ ಹೆಸರನ್ನು ತರಬೇಡಿ,” ಎಂದು ಸಿಸಿಬಿ ಜಂಟಿ ಆಯುಕ್ತ ಸತೀಶ್ ಕುಮಾರ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

“ಯಶ್ ಕೊಲೆಗೆ ಸಂಚು ರೂಪಿಸಿರುವ ಕುರಿತಂತೆ ಯಾವುದೇ ರೀತಿಯ ವಿಚಾರವನ್ನು ಸೈಕಲ್ ರವಿ ಬಾಯ್ಬಿಟ್ಟಿಲ್ಲ. ಸ್ಟಾರ್ ನಟರೊಬ್ಬರು ಕೊಲೆ ಸಂಚು ರೂಪಿಸಿದ್ದಾರೆ ಎಂಬ ವಿಚಾರ ಕೂಡ ಸತ್ಯಕ್ಕೆ ದೂರವಾಗಿದ್ದು, ಇಂತಹ ಸುದ್ದಿಗಳನ್ನು ಹರಡುವ ಮುಂಚೆ ನನ್ನೊಂದಿಗೆ ಅಥವಾ ಇನ್ಸ್‌ಪೆಕ್ಟರ್ ಪ್ರಕಾಶ್ ಜೊತೆಗೆ ಸ್ಪಷ್ಟಪಡಿಸಿಕೊಳ್ಳಿ,” ಎಂದು ಸತೀಶ್ ಕುಮಾರ್ ಅವರು ಮಾಧ್ಯಮ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ನಟ ಯಶ್ ಕೂಡ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

sandalwood ಸ್ಯಾಂಡಲ್‌ವುಡ್ Murder CCB Yash ಯಶ್‌ ಕೊಲೆ ವಿಜಯ ಕರ್ನಾಟಕ Media ಮಾಧ್ಯಮಗಳು ಸಿಸಿಬಿ ಜಂಟಿ ಆಯುಕ್ತ ಸತೀಶ್ ಕುಮಾರ್ ಸೈಕಲ್ ರವಿ CCB Joint Commissioner Satish Kumar Cycle Ravi Vijay Karnataka
ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?