ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?

ಸೈಕಲ್, ಹೆಲ್ಮೆಟ್ ಕೊಡುಗೆ ಹೆಸರಿನಲ್ಲಿ ಗ್ರಾಹಕರನ್ನು ಮರಳು ಮಾಡುತ್ತಿರುವ ನಕಲಿ ವೆಬ್ ಸೈಟ್ ಗಳು

ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಯೋಜನೆ. ಕೇಂದ್ರ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಯ ಲಾಭ ಪಡೆಯಲು ಇಂದೇ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ.ಇಂತಹ ಜಾಹಿರಾತು ಒಳಗೊಂಡ ವೆಬ್ ತಾಣದ ಬೆನ್ನುಹತ್ತಿದ ಆಲ್ಟ್ ನ್ಯೂಸ್, ಈ ನಕಲಿ ವೆಬ್ ಸೈಟ್ ಗಳ ಉದ್ದೇಶವನ್ನು ಬಹಿರಂಗಪಡಿಸಿದೆ

ಸಂಧ್ಯಾ ಜೈನ್

ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಯೋಜನೆ. ಕೇಂದ್ರ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಯ ಲಾಭ ಪಡೆಯಲು, ಇಂದೇ http://Bharat-Sarkar.co/cycle. ನಲ್ಲಿ ನಿಮ್ಮ ಹೆಸರು, ವಿಳಾಸ ಹಾಗೂ ವಿವರವನ್ನು ನೊಂದಾಯಿಸಿ. ನೊಂದಾಯಿತರಿಗೆ ಆಗಸ್ಟ್ 15ರಂದು ಉಚಿತವಾಗಿ ಸೈಕಲ್ ಹಂಚುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇತರ ಆಸಕ್ತರಿಗೂ ಈ ಸಂದೇಶವನ್ನು ರವಾನಿಸಿ.

ಇಂತಹದ್ದೊಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, http://Bharat-Sarkar.co/cycle ವೆಬ್ ಸೈಟ್ ಗೆ ಭೇಟಿ ನೀಡಿದರೆ, ತಂದೆಯ ಹೆಸರು, ನಿಮ್ಮ ಹೆಸರು, ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಸಲ್ಲಿಸುವಂತೆ ಕೋರಲಾಗುತ್ತದೆ.

ವೆಬ್ ಸೈಟ್ ಪ್ರಕಟಿಸಿರುವ ಸುದ್ದಿಯ ಬೆನ್ನುಹತ್ತಿದ ಆಲ್ಟ್ ನ್ಯೂಸ್ ತಂಡಕ್ಕೆ, ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಚಲಾವಣೆಯಲ್ಲಿರುವ ಇನ್ನೂ ಇತರ ಎರಡು ವೆಬ್ ಸೈಟ್ ಗಳು ಪತ್ತೆಯಾಗಿದೆ. , pm-yojna.in ಮತ್ತು helmet.pm-yojna.in ವೆಬ್ ಸೈಟ್ ಗಳು ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸಡಕ್ ಸುರಕ್ಷಾ ಯೋಜನೆಯಡಿ ಉಚಿತವಾಗಿ ಹೆಲ್ಮೆಟ್ ಹಂಚುತ್ತಿದೆ . ಈ ಎರಡು ವೆಬ್ ಸೈಟ್ ಗಳಲ್ಲೂ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಫೋಟೋವನ್ನು ಬಳಸಲಾಗಿದೆ. ನೀವು ವೆಬ್ ಸೈಟ್ ಓಪನ್ ಮಾಡುತ್ತಿದ್ದಂತೆ, ನಿಮ್ಮ ಹೆಸರು, ದ್ವಿಚಕ್ರವಾಹನದ ನೊಂದಣಿ ಸಂಖ್ಯೆ ಮತ್ತು ರಾಜ್ಯದ ವಿವರವನ್ನು ಕೇಳಲಾಗುತ್ತದೆ.

ಈ ವೆಬ್ ಸೈಟ್ ಗಳ ವಿನ್ಯಾಸವನ್ನೂ ಕೂಡ ಮೊಬೈಲ್ ಫೋನ್ ಬಳಕೆದಾರರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಫೋಟೋ ಮತ್ತು ಭಾರತದ ಲಾಂಛನವನ್ನೂ ಕೂಡ ವೆಬ್ ಡಿಸೈನ್ ನಲ್ಲಿ ಅಳವಡಿಸಲಾಗಿದ್ದು, ವೆಬ್ ಸೈಟ್ ನೋಡುತ್ತಿದ್ದಂತೆ , ಈ ವೆಬ್ ಸೈಟ್ ಅಧಿಕೃತ ಎಂಬ ವಿಶ್ವಾಸ ನಿಮ್ಮಲ್ಲಿ ಮೂಡುವುದು ಖಚಿತ.

ಸರ್ಕಾರಿ ವೆಬ್ ಸೈಟ್ ಅಲ್ಲ

ಉಚಿತ ಉಡುಗೊರೆಗಳ ಕುರಿತಂತೆ ಚಾಲ್ತಿಯಲ್ಲಿರುವ ಈ ವೆಬ್ ಸೈಟ್ ಗಳು ಸರ್ಕಾರಿ ವೆಬ್ ಸೈಟ್ ಗಳಲ್ಲ ಎಂಬುದಕ್ಕೆ ಹಲವು ಕುರುಹುಗಳು ಸಿಕ್ಕಿವೆ. bharat-sarkar.co”ಲಿಂಕ್ ಕ್ಲಿಕ್ ಮಾಡಿದಾಗ, ತೆರೆದುಕೊಳ್ಳುವ ಪೇಜ್ ನ, ಕೆಳಭಾಗದಲ್ಲಿರುವ ಟರ್ಮ್ಸ್ ಮತ್ತು ಕಂಡೀಷನ್ ನಲ್ಲಿ, ಈ ವೆಬ್ ಸೈಟ್ ಭಾರತ ಸರ್ಕಾರ ಅಥವ ಇನ್ನಿತರ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಎಲ್ಲಾ ಸರ್ಕಾರಿ ವೆಬ್ ಸೈಟ್ ಗಳು “gov.in” or “nic.in” ಎಂದು ಕೊನೆಯಾಗುತ್ತವೆ. ಸರ್ಕಾರಿ ಸಚಿವಾಲಯ ಅಥವ ಸರ್ಕಾರಿ ಇಲಾಖೆಯ ಅಧಿಕೃತ ವೆಬ್ ಸೈಟ್ ಗಳು ಯಾವಾಗಲೂ gov.in ಡೊಮೈನ್ ನಲ್ಲಿ ಅಂತ್ಯವಾಗುತ್ತದೆ. ಉದಾಹರಣೆಗೆ, ವಿದೇಶಾಂಗ ಸಚಿವಾಲಯ (mea.gov.in), ಉತ್ತರಾಖಂಡ್ ಸರ್ಕಾರ (uk.gov.in), ಸ್ವಚ್ ಭಾರತ್ (swachhbharatmission.gov.in), ಪ್ರಸಾರ ಭಾರತಿ (prasarbharati.gov.in).

ಭಾರತ ಸರ್ಕಾರದ ಸಂಯೋಜನೆಯಲ್ಲಿರುವ ವೆಬ್ ಸೈಟ್ ಗಳು nic.in”ನಲ್ಲಿ ಕೊನೆಗೊಳ್ಳುತ್ತದೆ. nic.in”ಡೊಮೈನ್, ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (NIC) ಹಿಡಿತದಲ್ಲಿದೆ.

NIC ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಬರುವ ವಿಜ್ಞಾನ ಮತ್ತ ತಂತ್ರಜ್ಞಾನ ಸಂಸ್ಥೆಯಾಗಿದ್ದು, Nic.in ಡೊಮೈನ್ ಅನ್ನು ಕೇವಲ ಸರ್ಕಾರಿ ಘಟಕಗಳಿಗೆ ಮಾತ್ರ ಹಂಚಲಾಗುತ್ತದೆ. ಉದಾಹರಣೆಗೆ cbse.nic.in,

ಐಪಿ ವಿಳಾಸವನ್ನು ಪತ್ತೆ ಹಚ್ಚಿದ ಆಲ್ಟ್ ನ್ಯೂಸ್

ಸರ್ಕಾರಿ ಉಡುಗೊರೆಗಳ ಹೆಸರಿನಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಭಾರತ್-ಸರ್ಕಾರ್ .ಕೋ (bharat-sarkar.co) ವೆಬ್ ಸೈಟ್ ನ ಐಪಿ ವಿಳಾಸ ಸಿಂಗಾಪುರದಲ್ಲಿರುವುದು ಪತ್ತೆಯಾಗಿದೆ. ಹಣಮಾಡುವ ಉದ್ದೇಶದಿಂದಲೇ ಇಂತಹ ವೆಬ್ ಸೈಟ್ ಗಳು ಚಾಲ್ತಿಗೆ ಬರುತ್ತವೆ. ಕುತೂಹಲಕ್ಕಾಗಿಯಾದರೂ ಗ್ರಾಹಕರು, ವೆಬ್ ಸೈಟ್ ಗೆ ಭೇಟಿ ನೀಡಿದರೆ, ಒಂದು ಕ್ಲಿಕ್ ಗೆ ಇಷ್ಟು ರೂಪಾಯಿ ಎಂಬ ವೆಬ್ ಜಾಹಿರಾತು ನಿಯಮದಂತೆ , ಖಾತೆದಾರರಿಗೆ ಹಣ ಹಂಚಿಕೆಯಾಗುತ್ತದೆ. ಇದರ ಲಾಭ ಪಡೆಯುವ ಸಲುವಾಗಿ ಇಂತಹ ಸುಳ್ಳು ಜಾಹಿರಾತುಗಳನ್ನು ಪ್ರಕಟಿಸಲಾಗುತ್ತದೆ. ಈ ಹಿಂದೆಯೂ ಆಲ್ಟ್ ನ್ಯೂಸ್ ತಂಡ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇಂಥ ಸುಳ್ಳುಸುದ್ದಿಗಳು ಹಾಗೂ ಸುಳ್ಳು ವೆಬ್ ತಾಣಗಳ ಬಗ್ಗೆ ಸುದ್ದಿ ಪ್ರಕಟಿಸಿತ್ತು.

ಸುಳ್ಳುಸುದ್ದಿ Central Government ಕೇಂದ್ರ ಸರ್ಕಾರ ಸುಳ್ಳು ಸುದ್ದಿ Bicycle FakeNews Website ವೆಬ್‌ತಾಣ PM Modi ವೆಬ್‌ಸೈಟ್‌
ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?