ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?

ಪೋಸ್ಟ್‌ ಕಾರ್ಡ್‌ ಪ್ರಕಟಿಸಿದ ಮೋದಿ-ಸಿಂಗ್‌ ಫೋಟೋಗಳ ಹಿಂದಿನ ಗುಟ್ಟೇನು?

‘ವ್ಯತ್ಯಾಸವನ್ನು ಗಮನಿಸಿ’ ಎಂಬ ತಲೆಬರಹದಡಿಯಲ್ಲಿ, ಪೋಸ್ಟ್ ಕಾರ್ಡ್ ನ್ಯೂಸ್ ತನ್ನ ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ಡಾ.ಮನಮೋಹನ್ ಸಿಂಗ್ ಹಾಗೂ ಪ್ರಧಾನ ಮಂತ್ರಿ ನರೇಂದ್ರಮೋದಿ ಇರುವ ಫೋಟೋದ ಹಿಂದಿನ ಸತ್ಯಾಸತ್ಯತೆಯನ್ನು ಆಲ್ಟ್ ನ್ಯೂಸ್ ಬಹಿರಂಗಪಡಿಸಿದೆ

ಸಂಧ್ಯಾ ಜೈನ್

'ವ್ಯತ್ಯಾಸವನ್ನು ಗಮನಿಸಿ' ಎಂಬ ತಲೆಬರಹದಡಿಯಲ್ಲಿ, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಅಥ್ಲೀಟ್ ಗಳೊಂದಿಗೆ ಡಾ.ಮನಮೋಹನ್ ಸಿಂಗ್ ಹಾಗೂ ಪ್ರಧಾನ ಮಂತ್ರಿ ನರೇಂದ್ರಮೋದಿ ಇರುವ ಫೋಟೋವನ್ನು ಪೋಸ್ಟ್ ಕಾರ್ಡ್ ನ್ಯೂಸ್, ತನ್ನ ಫೇಸ್ ಬುಕ್ ನಲ್ಲಿ ಪ್ರಕಟಿಸಿದೆ. ಜುಲೈ 27ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಫೋಟೋವನ್ನು 4200 ಮಂದಿ ಶೇರ್ ಮಾಡಿದ್ದಾರೆ.

ಪೋಸ್ಟ್ ಕಾರ್ಡ್ ನ್ಯೂಸ್ ಫೇಸ್ ಬುಕ್ ನಲ್ಲಿ ಪ್ರಕಟವಾಗಿರುವ ಫೋಟೋದಲ್ಲಿ, ಮಾಜಿ ಪ್ರದಾನಿ ಡಾ.ಮನಮೋಹನ್ ಸಿಂಗ್ , ಅಥ್ಲೀಟ್ ಗಳೊಂದಿಗೆ ಕುಳಿತುಕೊಂಡು ಫೋಟೋಗೆ ಫೋಸ್ ಕೊಟ್ಟಿದ್ದರೆ, ಪ್ರಧಾನಿ ನರೇಂದ್ರಮೋದಿ, ನಿಂತು ಸಂಭಾಷಣೆ ನಡೆಸುತ್ತಿದ್ದಾರೆ. ಬೇರೇ ಬೇರೆ ಅವಧಿಯಲ್ಲಿ ತೆಗೆದ ಈ ಎರಡು ಫೋಟೋಗಳನ್ನು ಜೋಡಿಸಿರುವ ಪೋಸ್ಟ್ ಕಾರ್ಡ್ ನ್ಯೂಸ್, ಇಬ್ಬರು ಪ್ರಧಾನಿಗಳ ವರ್ತನೆಯಲ್ಲಿನ ವ್ಯತ್ಯಾಸವನ್ನು ಗಮನಿಸಿ ಎಂದು ಹೇಳುವ ಮೂಲಕ ಓದುಗರನ್ನು ದಿಕ್ಕು ತಪ್ಪಿಸುವ ಯತ್ನ ಮಾಡಿದೆ.

ಫೋಟೋದ ಅಸಲಿಯತ್ತು

ಪೋಸ್ಟ್ ಕಾರ್ಡ್ ನ್ಯೂಸ್ ತನ್ನ ಪೇಸ್ ಬುಕ್ ನಲ್ಲಿ ಪ್ರಕಟಿಸಿರುವ ಫೋಟೋದ ಹಿಂದಿನ ಸತ್ಯವನ್ನು ಆಲ್ಟ್ ನ್ಯೂಸ್ ತಂಡ ಇದೀಗ ಬಹಿರಂಗಪಡಿಸಿದೆ, 2012ರಲ್ಲಿ ಲಂಡನ್ ನಲ್ಲಿ ನಡೆದ ಒಲಂಪಿಂಕ್ ಕ್ರೀಡಾಕೂಟದ ವಿಜೇತರೊಂದಿಗೆ, ಡಾ.ಮನಮೋಹನ್ ಸಿಂಗ್ ಇರುವ ಫೋಟೋ ಇದಾಗಿದ್ದು, ಫಸ್ಟ್ ಪೋಸ್ಟ್ ಇದೇ ಫೋಟೋವನ್ನು 2012ರ ಆಗಸ್ಟ್ 17ರಲ್ಲಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು.

ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರು ಸಂವಹನ ನಡೆಸುತ್ತಿರುವ ಫೋಟೋ ಕಳೆದ ಏಪ್ರಿಲ್ 2018ರಲ್ಲಿ ಕ್ಲಿಕ್ಕಿಸಿದ್ದಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳನ್ನು ಕಳೆದ ಏಪ್ರಿಲ್ ತಿಂಗಳಲ್ಲಿ ಭೇಟಿ ಮಾಡಿದ ಪ್ರಧಾನಿ ನರೇಂದ್ರಮೋದಿ, ಕೆಲಕಾಲ ಸಂವಹನ ನಡೆಸಿದ್ದರು.

ಆದರೆ ಪೋಸ್ಟ್ ಕಾರ್ಡ್ ನ್ಯೂಸ್, ಈ ಎರಡು ಫೋಟೋಗಳ ಹೋಲಿಕೆ ಮಾಡಿ ನೋಡುಗರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡಿದೆ. 2014ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರಮೋದಿ, ಕ್ರೀಡಾಪಟುಗಳೊಂದಿಗೆ ಕುಳಿತುಕೊಂಡೆ ಫೋಸ್ ಕೊಟ್ಟಿದ್ದರು.

ರಿಯೋ ಡಿ ಜನೈರೊದಲ್ಲಿ 2016ರಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ ಆಥ್ಲೇಟ್ಸ್ ಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲೂ ಪ್ರಧಾನಿ ನರೇಂದ್ರನೋದಿ, ಕುಳಿತುಕೊಂಡೇ ಫೋಟೋ ತೆಗೆಸಿಕೊಂಡಿದ್ದರು.

2012ರಲ್ಲಿ , ಡಾ. ಡಾ.ಮನಮೋಹನ್ ಸಿಂಗ್ , ನಿಂತುಕೊಂಡೆ ಆಥ್ಲೀಟ್ ಗಳೊಂದಿಗೆ ಸಂವಹನ ನಡೆಸಿದ್ದರು.

ಆದರೆ ಓದುಗರಿಗೆ ತಪ್ಪು ಮಾಹಿತಿ ನೀಡುವ ಸಲುವಾಗಿಯೇ ಪೋಸ್ಟ್ ಕಾರ್ಡ್ ನ್ಯೂಸ್ , ಪ್ರಧಾನಿ ನರೇಂದ್ರಮೋದಿ ಅವರು ಸಂವಹನ ನಡೆಸುವ ಹಾಗೂ ಮಾಜಿ ಪ್ರದಾನಿ ಡಾ.ಮನಮೋಹನ್ ಸಿಂಗ್ ಸಿಂಗ್ ಅವರ ಫೋಟೋ ಸೆಷನ್ ನಲ್ಲಿ ಆಥ್ಲೀಟ್ ಗಳೊಂದಿಗೆ ಕುಳಿತಿರುವ ಫೋಟೋವನ್ನು ಜೋಡಿಸಿದೆ ಎಂದು ಆಲ್ಟ್ ನ್ಯೂಸ್ ವಿಶ್ಲೇಷಿಸಿದೆ.

PM Modi
ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?