ಗಂಡಸರಿಗೆ ಮಾತ್ರ; ಇದು ಸುಖ ಸಂಸಾರಕ್ಕಾಗಿ ಬೆಂಗಳೂರಿನ ಕಾಲೇಜೊಂದರ ಸೂತ್ರ!
ವಿಡಿಯೋ | ಯಾರ ಕೈಗೂ ಸಿಗದ ತನ್ನದೇ ದಿಕ್ಕನ್ನು ಹಿಡಿಯುತ್ತಿರುವ ಗ್ರಾಮೀಣ ಬದುಕು
ಪಾತರಗಿತ್ತಿಗಳ ‘ಕತೆ’ ಹೇಳಲೇಬೇಕೆಂದು ಸಮ್ಮಿಲನ್ ಶೆಟ್ಟಿ ಹೊರಟಿರುವುದೇಕೆ?

ಗ್ರಾಮ ವಾಸ್ತವ್ಯ | ಸಂಕದ ಮೇಲೆ ಓಡಾಡುವ ಸಿದ್ದಿ ಜನರ ಡೋಲಾಯಮಾನ ಬದುಕು

ಯಲ್ಲಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸಿಗುವ ತಾಳಿಕುಂಬ್ರಿ ಗ್ರಾಮದ ಗುರುತೇ ಚಿಕ್ಕ ಗೂಡಂಗಡಿಯಂತಿರುವ ಬಸ್ ನಿಲ್ದಾಣ. ಒಂದು ಬೈಕ್ ಓಡಾಡುವಷ್ಟು ಜಾಗ ಇದ್ದರೂ ಇದೇ ಆ ಊರಿನ ಹೆದ್ದಾರಿ. ಈ ಊರಿನ ಬೇರುಗಳನ್ನು ಹಿಡಿದು ಪ್ರಯಾಣ ಬೆಳೆಸಿದ ಅನುಭವ ಇಲ್ಲಿದೆ

ಸುಷ್ಮಾ ಉಪ್ಪಿನ್ ಇಸಳೂರ

ಪ್ರಕೃತಿ ಸೊಬಗು ಕಾಣಲು ಸಾಲದ ಕಣ್ಣುಗಳು, ಕಮಾನಿನಂತೆ ಹಬ್ಬಿ ತಲೆದೂಗುವ ಮರಗಳು, ಧಣಿವಾರಿಸಿಕೊಳ್ಳಿ ಎನ್ನುವ ಝರಿಗಳು... ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಇಂಥದ್ದೊಂದು ಲಕ್ಷಣವಿರುವ ಸುಂದರ ಗ್ರಾಮವೊಂದು ಬದುಕುತ್ತಿದೆ. ಯಲ್ಲಾಪುರದಿಂದ ೧೫ ಕಿಮೀ ದೂರದಲ್ಲಿರುವ ಈ ಗ್ರಾಮಕ್ಕೆ ತಾಳೆಕುಂಬ್ರಿ ಎಂದು ಹೆಸರು ಬಂದಿರುವುದೇ ವಿಶೇಷ.

ಯಲ್ಲಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸಿಗುವ ಈ ಗ್ರಾಮಕ್ಕೆ ಚಿಕ್ಕ ಗೂಡಂಗಡಿ ರೀತಿಯ ಬಸ್ ನಿಲ್ದಾಣವೇ ಗುರುತು. ಅಲ್ಲಿಂದ ನಾಲ್ಕು ಹೆಜ್ಜೆ ಮುಂದಾದರೆ ದಾರಿಗೆ ಅಡ್ಡಲಾಗಿ ಸರಗೋಲೊಂದು ಸಿಗುತ್ತದೆ. ಅದನ್ನು ದಾಟಿ ಒಳಹೊಕ್ಕರೆ ದಟ್ಟ ಕಾಡನ್ನು ಸೀಳಿಕೊಂಡು ಮಲಗಿದ ಕಾಲುದಾರಿ ಎದುರಾಗುತ್ತದೆ. ಒಂದು ಬೈಕ್ ಓಡಾಡುವಷ್ಟು ಜಾಗ ಇದ್ದರೂ ಮಳೆಗಾಲದಲ್ಲಿ ಓಡಾಡುವುದು ಆಗದ ಮಾತು ಬಿಡಿ.

ಈ ಗ್ರಾಮದಲ್ಲಿರುವುದು ಕೇವಲ ಐದು ಮನೆಗಳು. ಅರಣ್ಯ ಅತಿಕ್ರಮಣ ಮಾಡಿಕೊಂಡು ೨೫ಕ್ಕೂ ಅಧಿಕ ವರ್ಷಗಳ ಹಿಂದೆ ಇಲ್ಲಿಗೆ ಬಂದ ಈ ಸಿದ್ದಿ ಜನರು, ಕಳೆದ ಎರಡು-ಮೂರು ವರ್ಷಗಳಿಂದ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ.

ಗ್ರಾಮಕ್ಕೆ ಕಾಲಿಟ್ಟಾಗ ಇಬ್ಬರು ಹೆಂಗಸರು ಎದುರಾದರು. “ಶಾಲೆ ಹೋಗುವ ಮಕ್ಕಳ ಸಮಸ್ಯೆ ಹೇಳತೀರದು. ರಸ್ತೆ ಸೌಲಭ್ಯ ಇಲ್ಲದೆ ನೆಲ ಹಿಡಿದ ಅಜ್ಜಿ ಪೇಟೆ ಕಾಣದೆ ಕೂತಿದ್ದಾಳೆ. ಅಲ್ಲಿನ ಮಕ್ಕಳೆಲ್ಲ ಶಾಲೆ ಓದಲು ಹತ್ತಾರು ಮೈಲಿ ನಡೆಯಬೇಕು, ಶಾಲೆಗೆ ಕಡೆ ಹೋಗುವ ರಸ್ತೆಯಲ್ಲಿ ಬಸ್ ಇದ್ದರೂ ದಿನಕ್ಕೆ ಮೂರು ಬಾರಿ ಮಾತ್ರ. ನೆಂಟರ ಮನೆಯಲ್ಲಿಯೋ ಅಥವಾ ಪೇಟೆಯಲ್ಲೇ ಇದ್ದು ಓದಬೇಕಾಗಿದೆ,” ಎಂದು ಅಲವತ್ತುಕೊಂಡರು. ಚೂರುಪಾರು ಅಡಿಕೆ ತೋಟ ಮಾಡಿಕೊಂಡು ಬದುಕುತ್ತಿರುವ ಇವರಿಗೆ ಸೀಸನ್‌ನಲ್ಲಿ ಮಾತ್ರ ಈ ಕೆಲಸ. ಉಳಿದಂತೆ ದೂರದ ತೋಟಗಳಲ್ಲಿ ಕೂಲಿ ಕೆಲಸ. ಅದೂ ಇಲ್ಲವಾದರೆ ಕೆಲ ಉಪಕಸುಬುಗಳಿವೆ. ಜೇನು, ತಾಳೆ ಎಲೆಗಳು, ರಾಮಪತ್ರೆ, ಉಪ್ಪಂಗೆ, ಜಾಯಿಕಾಯಿ, ಲವಂಗ, ದಾಲ್ಚಿನ್ನಿಯಂತಹ ಪದಾರ್ಥಗಳನ್ನು ಮಾರಿ ಹೊಟ್ಟೆಹೊರೆಯುತ್ತಿದ್ದಾರೆ.

ದಾರಿಯಲ್ಲಿ ಸಿಕ್ಕ ಯಶೋದಾ ಸಿದ್ದಿ ಮನೆಗೆ ಹೋದಾಗ ವಯಸ್ಸಾದ ಪುಟ್ಟಿ ಒಲೆ ಮುಂದೆ ಕೊಳವೆ ಊದುತ್ತ ಕೂತಿದ್ದಳು. ಮುಖ ನೆರಿಗೆ ಎಣಿಸುವಷ್ಟು ಹಣ್ಣುಹಣ್ಣು ಮುದುಕಿ ದನಿ ಕಾಡಿನ ಜಿರುಂಡೆಗಳ ನಾದದ ನಡುವೆ ಅಸ್ಪಷ್ಟವಾಗಿ ಕೇಳಿಸುತ್ತಿತ್ತು.

ಅಲ್ಲಿನ ಕೆಲ ಮನೆಗಳಿಗೆ ಸೂರಾಗಿ ತಾಳೆ ಎಲೆಗಳನ್ನೇ ಬಳಸುತ್ತಾರೆ. ವರ್ಷಕ್ಕೆ ಒಮ್ಮೆ ಹೊದಿಸಿದರೂ ಸಾಕು; ಚಳಿಗಾಲ, ಮಳೆಗಾಲ, ಬೇಸಿಗೆಗಾಲಕ್ಕೂ ಗಟ್ಟಿಮುಟ್ಟಾಗಿರುತ್ತದೆ. ಆದರೆ, ಬೇಸಿಗೆಗಾಲಕ್ಕೆ ನೆಚ್ಚಿಕೊಂಡು ಕೂರುವಂತಿಲ್ಲ. ಅತಿಯಾದ ಬಿಸಿಲಿನಲ್ಲಿ ತಾಳೆ ಎಲೆಗಳ ಕಾರಣಕ್ಕೆ ಮನೆ ಸುಟ್ಟುಕೊಂಡದ್ದೂ ಇದೆ. ದೂರದೂರುಗಳಿಂದಲೂ ತಾಳೆಎಲೆಗಳನ್ನು ತೆಗೆದುಕೊಂಡು ಹೋಗಲು ಇಲ್ಲಿಗೆ ಜನ ಬರುವುದುಂಟು.

ಇದನ್ನೂ ಓದಿ : ಗ್ರಾಮ ವಾಸ್ತವ್ಯ | ವಿಡಿಯೋ | ಮುಳುಗಿದ ನಂತರವೂ ಬದುಕಿದ ಶೆಟ್ಟಿಹಳ್ಳಿ

ಶಿರಲೆ, ತಾಳಕುಂಬ್ರಿ, ಮಲೇಪಾಲ್ ಗ್ರಾಮಗಳನ್ನು ಸೇರಿಸಿ ಅರಣ್ಯ ಸಮಿತಿ ಮಾಡಲಾಗಿದೆ. ಅಲ್ಲಿನ ಜನರ ಕಷ್ಟನಷ್ಟಗಳನ್ನು ನೋಡಿಕೊಳ್ಳಲು ಜನರ ಮುಖ್ಯಸ್ಥನಾಗಿ ಸುಬ್ಬಾ ತಮ್ಮಿ ಸಿದ್ದಿ ಆಯ್ಕೆ ಆಗಿದ್ದಾರೆ. ಆರ್ಥಿಕ ಹೊರೆ ನಿಭಾಯಿಸಲು ಚಾಮುಂಡೇಶ್ವರಿ ಸ್ವಸಹಾಯ ಸಂಘ ಕಟ್ಟಿಕೊಂಡಿದ್ದಾರೆ.

ಅತಿಯಾದ ಮಳೆಯಿಂದ ಒಂದು ಬದಿ ಉಂಬಳ ಕಾಟ. ಕಿತ್ತು ಕಿತ್ತು ತೆಗೆಯುತ್ತ ಇನ್ನೊಂದು ಮನೆಗೆ ಸಂಕ ದಾಟಲು ಮುಂದಾದರೆ ಕೆಳಗೆ ರಭಸದಲ್ಲಿ ಹರಿಯುವ ಕೆಂಪುನೀರು. ಸಂಕದ ಆಚೆ ಇನ್ನೊಂದು ಸಿದ್ದಿ ಮನೆ. ತಾಡಪಲ್ ಹೊದಿಸಿ ಮೇಲೆ ತಾಳೆಎಲೆ ಹೊದಿಸಿ ರಪರಪ ಮಳೆಯ ನಡುವೆಯೂ ಮಣ್ಣಿನ ಗೋಡೆ ಗಟ್ಟಿಯಾಗಿ ನಿಂತಿದೆ. ಈ ಸೌಲಭ್ಯವಂಚಿತರು ಈಗ ಕತ್ತಲ ಬದುಕಿನಿಂದ ಹೊರಬಂದಿದ್ದಾರೆ. ಆದರೆ ಸಂಕಷ್ಟಗಳ ಸರಪಳಿ ಮಾತ್ರ ಅವರ ಬದುಕನ್ನು ಬಿಗಿದೇ ಇದೆ. ಆದರೂ ನೆಮ್ಮದಿಯಿಂದ ಇದ್ದೇವೆ ಎಂಬುದು ಅವರ ಜೀವನಪ್ರೀತಿಯ ಮಾತು.

Western Ghats ಪಶ್ಚಿಮಘಟ್ಟ Yellapura ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆ Uttara Kannada District ಬುಡಕಟ್ಟು ಸಮುದಾಯ Grama Vastavya Rural India ಕಾಡು Forest ಗ್ರಾಮೀಣ ಭಾರತ Tribe ಗ್ರಾಮ ವಾಸ್ತವ್ಯ
ಗಂಡಸರಿಗೆ ಮಾತ್ರ; ಇದು ಸುಖ ಸಂಸಾರಕ್ಕಾಗಿ ಬೆಂಗಳೂರಿನ ಕಾಲೇಜೊಂದರ ಸೂತ್ರ!
ವಿಡಿಯೋ | ಯಾರ ಕೈಗೂ ಸಿಗದ ತನ್ನದೇ ದಿಕ್ಕನ್ನು ಹಿಡಿಯುತ್ತಿರುವ ಗ್ರಾಮೀಣ ಬದುಕು
ಪಾತರಗಿತ್ತಿಗಳ ‘ಕತೆ’ ಹೇಳಲೇಬೇಕೆಂದು ಸಮ್ಮಿಲನ್ ಶೆಟ್ಟಿ ಹೊರಟಿರುವುದೇಕೆ?
Editor’s Pick More

ವಿಡಿಯೋ | ನಮ್ಮ ಮನೆಯ ಮಂದಿಯೇ ನಮ್ಮ ಮೊದಲ ವಿರೋಧಿಗಳು!

ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ಸ್ಟೇಟ್‌ಮೆಂಟ್‌ | ಹೋರಾಟ ನಡೆದದ್ದು ಸಲಿಂಗ ಕಾಮಕ್ಕಲ್ಲ, ಸಲಿಂಗ ಪ್ರೇಮಕ್ಕಾಗಿ

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು