ಟ್ರಂಪ್ ಸೂಚಿಸಿದ ಸುಪ್ರೀಂ ನ್ಯಾಯಮೂರ್ತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ; ಭಾರತ ವಿರೋಧಿ, ಚೀನಾ ಬೆಂಬಲಿಗ ಯಮೀನ್‍ಗೆ ಸೋಲು
ತಾರಕಕ್ಕೇರಿದ ಅಮೆರಿಕ-ಚೀನಾ ಶೀತಲ ಸಮರ; ಪರಸ್ಪರ ಎಚ್ಚರಿಕೆ ರವಾನೆ

ನೊಬೆಲ್‌ ಶಾಂತಿ ಪುರಸ್ಕೃತೆ ಸೂಕಿಗೆ ಕಳಂಕ ತರುವುದೇ ರೋಹಿಂಗ್ಯಾ ವಿವಾದ?

ದಕ್ಷಿಣ ಆಫ್ರಿಕಾದ ಬಿಷಪ್, ನೊಬೆಲ್ ಶಾಂತಿ ಪುರಸ್ಕೃತ ಡೆಸ್ಮೆಂಟ್ ಟುಟು ಆಂಗ್‌ ಸಾನ್‌ ಸೂಕಿಗೆ ಪತ್ರ ಬರೆದು ‘ನಿಮ್ಮ ಮೌನಕ್ಕೆ ಬೆಲೆ ತರಬೇಕಾದೀತು’ ಎಂದು ಎಚ್ಚರಿಸಿದ್ದಾರೆ. ಅವರ ಮೇಲೆ ಮಾರಣಹೋಮದ ಆರೋಪ ಬರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯೂ ಹೇಳಿದೆ. ಹಾಗಾದರೆ ಏಕೆ?

ಸುಷ್ಮಾ ಉಪ್ಪಿನ್ ಇಸಳೂರ

ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಮ್ಯಾನ್ಮಾರ್ ದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಅವರ ವರ್ಚಸ್ಸು ಕ್ರಮೇಣ ಕುಸಿಯುತ್ತಿದೆ. ಜನರ ಪ್ರಜಾತಂತ್ರ ಹಕ್ಕುಗಳಿಗಾಗಿ ಹಲವು ದಶಕಗಳ ಕಾಲ ಹೋರಾಡಿದ ಸೂಕಿ ತಮ್ಮದೇ ದೇಶದ ಮಿಲಿಟರಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಮೌನ ತಾಳಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.

ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಅವರ ಮೇಲೆ ರೋಹಿಂಗ್ಯಾ ನಿರಾಶ್ರಿತರ ಮಾರಣಹೋಮದ ಆರೋಪ ಹೊರಿಸುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಂಘಟನೆ ಕೂಡ ಹೇಳಿದೆ. ಈ ಸೂಚನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಸಂಘಟನೆಯ ಹೈ ಕಮಿಷನರ್ ಝೈದ್ ಅಲ್ ಹುಸೇನ್ ನೀಡಿದ್ದಾರೆ. ರೋಹಿಂಗ್ಯಾ ಹತ್ಯೆ ಕುರಿತಂತೆ ಈಗಾಗಲೇ ದಕ್ಷಿಣ ಆಫ್ರಿಕಾದ ಬಿಷಪ್ ನೊಬೆಲ್ ಶಾಂತಿ ಪುರಸ್ಕೃತ ಡೆಸ್ಮೆಂಟ್ ಟುಟು ಅವರು ಕೂಡ ಪತ್ರ ಬರೆದಿದ್ದಾರೆ. ಪತ್ರದಲ್ಲಿ "ನಿಮ್ಮ ಮೌನಕ್ಕೆ ಬೆಲೆ ತರಬೇಕಾದೀತು" ಎಂದು ಸೂಕಿಯನ್ನು ಎಚ್ಚರಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕಿಯ ವಿರುದ್ಧ ಪ್ರಗತಿಪರ ಮನಸ್ಸುಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಿಗೇ ಅವರು ಪದವಿ ಶಿಕ್ಷಣ ಪಡೆದಿದ್ದ ಲಂಡನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಹಾಕಲಾಗಿದ್ದ ಆಕೆಯ ಭಾವಚಿತ್ರವನ್ನು ವಿದ್ಯಾರ್ಥಿಗಳು ತೆರವುಗೊಳಿಸಿದ್ದಾರೆ. ಸೂಕಿ ರೋಹಿಂಗ್ಯಾಗಳ ವಿಚಾರದಲ್ಲಿ ಯಾವುದೇ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳದೆ ಇರುವುದು ಇದಕ್ಕೆ ಕಾರಣ. ಕೆಲ ದಿನಗಳ ಹಿಂದೆ ರೋಹಿಂಗ್ಯಾ ಜನರ ಸಮಸ್ಯೆಗಳನ್ನು ಕಂಡು ಫ್ರಾನ್ಸಿನ ಪೋಪ್ ಕೂಡ ಮ್ಯಾನ್ಮಾರ್‌ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಸಲಹೆಗಳನ್ನು ನೀಡಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮ್ಯಾನ್ಮಾರ್ ಸಮಸ್ಯೆಗೆ ಸೂಕಿಯನ್ನೇ ಗುರಿ ಪಡುಸುತ್ತಿರುವುದೇಕೆ? ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಅಧ್ಯಕ್ಷೆ ಆಗಿರುವ ಸೂಕಿ ನಾಮಮಾತ್ರಕ್ಕೆ ಮ್ಯಾನ್ಮಾರ್ ದೇಶದ ಅಧ್ಯಕ್ಷೆಯಾಗಿದ್ದಾರೆಯೇ ಹೊರತು ಅಧಿಕಾರ ಅಲ್ಲಿನ ಸೇನೆಯ ಕೈಯಲ್ಲಿದೆ. ಅಷ್ಟಕ್ಕೂ ಸೂಕಿ ಅಧ್ಯಕ್ಷೆಯಾಗಿ ಸಂಪೂರ್ಣ ಅಧಿಕಾರ ಹೊಂದಲು ತೊಡಕಾದದ್ದು, ಮ್ಯಾನ್ಮಾರ್ ಸಂವಿಧಾನ. ಸಂವಿಧಾನದ ಪ್ರಕಾರ ಅಲ್ಲಿನ ಅಧ್ಯಕ್ಷರಾಗುವ ವ್ಯಕ್ತಿಯ ಪತಿ ಅಥವಾ ಪತ್ನಿ ಹಾಗೂ ಮಕ್ಕಳು ವಿದೇಶಿ ಪೌರತ್ವ ಹೊಂದಿರಬಾರದು. ಹೀಗಿದ್ದೂ ಅಂತಾರಾಷ್ಟ್ರೀಯ ಟೀಕೆಗೆ ಸೂಕಿಯಲ್ಲದೇ ಮ್ಯಾನ್ಮಾರ್ ಸೇನೆಯೂ ಒಳಪಡುತ್ತದೆ. ಹಾಗೆ ನೋಡಿದರೆ ಅಲ್ಲಿನ ಹಿಂಸಾಚಾರಕ್ಕೆ ಮುಖ್ಯವಾಗಿ ಸೇನೆಯೇ ಕಾರಣ.

ಅರ್ಧ ಶತಮಾನದಿಂದ ಸ್ಥಳಾಂತರಗೊಳ್ಳುತ್ತಲೇ ಇರುವ ರೋಹಿಂಗ್ಯಾ ಜನರ ಸಮಸ್ಯೆ ಈಗ ತೀರ ಉಲ್ಬಣವಾಗಿದೆ. 50 ವರ್ಷಗಳಿಂದ ಸೇನಾ ಸರ್ವಾಧಿಕಾರದಲ್ಲಿದ್ದ ಮ್ಯಾನ್ಮಾರ್ (ಬರ್ಮಾ)ನಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದದ್ದು ಆಂಗ್‌ ಸಾನ್ ಸೂಕಿ ಎಂಬ ಮಹಿಳೆ. 2015ರ ನವೆಂಬರ್‌ನಲ್ಲಿ ಸೂಕಿ ಮ್ಯಾನ್ಮಾರ್‌ನ ಪ್ರಜಾತಾಂತ್ರಿಕ ನಾಯಕಿ ಆಗಿ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ರೋಹಿಂಗ್ಯಾ ಜನರ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿತು. ಹಿಂಸಾಚಾರ ನಡೆದು ಈವರೆಗೆ 6700 (730ಮಕ್ಕಳು) ಜನರು ಸಾವನ್ನಪ್ಪಿದ್ದರೂ ಸೂಕಿ ಮೌನವಾಗಿದ್ದು, ಯಾವುದೇ ನಿರ್ಣಾಯಕ ಹೆಜ್ಜೆಗಳನ್ನು ತೆಗೆದುಕೊಂಡಿಲ್ಲ.

ಇದನ್ನೂ ಓದಿ : ಟ್ರಂಪ್ ವಿರುದ್ಧ ಹೊರಬಿತ್ತು ಲೈಂಗಿಕ ಕಿರುಕುಳ ಆರೋಪದ ದೊಡ್ಡ ಪಟ್ಟಿ

ಬೌದ್ಧ ಧರ್ಮ ಶಾಂತಿಯನ್ನು ಪರಿಪಾಲಿಸುತ್ತ ಬಂದಿರುವ ಧರ್ಮ. ಹೀಗಿದ್ದೂ ರೋಹಿಂಗ್ಯಾ ಜನರ ಮಾರಣಹೋಮಕ್ಕೆ ಬೌದ್ಧ ಮತಾವಲಂಬಿಗಳೂ ಕಾರಣರಾಗಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯವಾಗಿ ಬೌದ್ಧ ಧರ್ಮ ಪಾಲಿಸುತ್ತಿರುವ ದೇಶಗಳು ಈ ಹಿಂಸಾಚಾರವನ್ನು ಏಕೆ ಟೀಕಿಸುತ್ತಿಲ್ಲ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಅದೇ ರೀತಿ ಮತ್ತೊಂದೆಡೆ ರೋಹಿಂಗ್ಯಾಗಳಿಗೆ ಆಶ್ರಯ ಕಲ್ಪಿಸುವ ವಿಚಾರವಾಗಿ ಜಗತ್ತಿನ ಯಾವುದೇ ಮುಸ್ಲಿಂ ರಾ‍ಷ್ಟ್ರಗಳು ಏಕೆ ಕಿವಿ ಕೊಡುತ್ತಿಲ್ಲ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಮ್ಯಾನ್ಮಾರ್ ಸಮಸ್ಯೆ ಈ ಎಲ್ಲ ಕಾರಣಗಳಿಂದಾಗಿ ಜಟಿಲತೆ ಪಡೆದಿದೆ.

ಇನ್ನು ಸಮಸ್ಯೆಯ ಕುರಿತಾಗಿ ಆಂತರಿಕವಾಗಿ ಗ್ರಹಿಸುವುದಾದರೆ ರೋಹಿಂಗ್ಯಾಗಳ ಮೇಲಿನ ದೌರ್ಜನ್ಯಗಳ ಹಿಂದೆ ಅಡಗಿರುವ ಆಂತರಿಕ ರಾಜಕೀಯ ಕಾರಣಗಳನ್ನು ಬೇಧಿಸಲು ಸೂಕಿ ಹಿಂದೇಟು ಹಾಕಿರುವುದು ಸ್ಪಷ್ಟವಾಗುತ್ತದೆ. ಹಾಗಿದ್ದರೆ, ಸೂಕಿಯು ರೋಹಿಂಗ್ಯಾ ಜನರ ವಿಷಯದಲ್ಲಿ ಸುಮ್ಮನಿರುವಂತೆ ಮಾಡುತ್ತಿರುವ ಶಕ್ತಿಗಳಾವವು? ರೋಹಿಂಗ್ಯಾ ಜನರ ಸ್ಥಿತಿಯನ್ನು ಕಂಡು ಹಲವು ದೇಶಗಳು ಸೂಕಿ ಬೆಂಬಲಕ್ಕೆ ನಿಂತರೂ ಆಕೆ ದಿಟ್ಟ ನಿರ್ಧಾ ರವನ್ನು ತೆಗೆದುಕೊಳ್ಳುತ್ತಿಲ್ಲ.

ರೋಹಿಂಗ್ಯಾ ಜನರ ಸಮಸ್ಯೆಗಾಗಿ ಸೂಕಿ ಮಾಡಿದ್ದೇನು?

ದೇಶದ ಭದ್ರತೆಯ ದೃಷ್ಟಿಯಿಂದ ಹಾಗೂ ಅರ್ಕಾನ್‌ ರೋಹಿಂಗ್ಯಾ ಸಾಲ್ವೇಷನ್‌ ಆರ್ಮಿ (ಅರ್ಸಾ)ಸಂಘಟನೆಯು ಉಗ್ರ ಸಂಘಟನೆ ಎಂದು ಕಾರಣ ನೀಡಿ ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್ ಸೇನೆ ಹೊರದೂಡುತ್ತಿದೆ. ಸತತ ಸಂಘರ್ಷ, ಹಿಂಸಾಚಾರ, ಸರ್ಕಾರದಿಂದ ಅಪೌರರೆನಿಸಿದ ರೋಹಿಂಗ್ಯಾ ಜನರು ಸ್ವಯಂ ಪ್ರೇರಿತರಾಗಿ ವಲಸೆ ಕೈಗೊಳ್ಳುತ್ತಿದ್ದಾರೆ 'ಅರ್ಸಾ' ಜನಾಂಗೀಯ ಅಲ್ಪ ಸಂಖ್ಯಾತರ ರಕ್ಷಣೆಗಾಗಿ ಹುಟ್ಟಿಕೊಂಡ ಸಂಘಟನೆ ಎಂದು ಹೇಳಿಕೊಂಡು ದೇಸಿ ಬಂದೂಕು ಹಾಗೂ ಬಾಂಬ್‌ ಸಶಸ್ತ್ರಗಳನ್ನು ಹೊಂದಿ ಸಂಘರ್ಷ ನಡೆಸುತ್ತಿದ್ದಾರೆ. ಸೂಕಿ ಈ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಿ ನಿರಾಶ್ರಿತರ ರಕ್ಷಣೆಗಾಗಿ ಸಮಿತಿಯೊಂದನ್ನು ರಚಿಸಿದ್ದಾರೆ.

ರೋಹಿಂಗ್ಯಾ ಜನರ ಮೂಲ ಬಾಂಗ್ಲಾದೇಶವಾದರೂ ಮ್ಯಾನ್ಮಾರ್‌ನಲ್ಲಿ ಹಲವು ವರ್ಷಗಳಿಂದ ಬೀಡು ಬಿಟ್ಟಿದ್ದಾರೆ. ಆದರೆ ಹಿಂಸಾಚಾರದಿಂದ ಬೇಸತ್ತು, ಸೇನೆಯ ಒತ್ತಡದಿಂದ ನೆರೆಯ ದೇಶಗಳಿಗೆ ವಲಸೆ ಹೊರಟಿದ್ದಾರೆ. ಹೀಗೆ ವಲಸೆ ಹೊರಟಿರುವವರನ್ನು ವಾಪಾಸ್ ಮ್ಯಾನ್ಮಾರ್‌ಗೆ ಕರೆಸಿಕೊಳ್ಳುತ್ತೇನೆ ಎಂದು ಸೂಕಿ ಹೇಳಿಕೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸೂಕಿ ಮೌನವನ್ನು ಮುರಿದು ಇನ್ನಾದರೂ ಆಲೋಚಿಸಿ ಎರಡು ಧರ್ಮಗಳ ನಡುವೆ ಸಂಧಾನಕ್ಕೆ ಮುಂದಾಗಬೇಕು ಹಾಗೂ ರೋಹಿಂಗ್ಯಾ ಜನರಿಗೆ ನೆಲೆ ಕಲ್ಪಿಸಲು ಹಾಗೂ ಅವರನ್ನು ಮ್ಯಾನ್ಮಾರ್‌ ಪ್ರಜೆಗಳಾಗಿ ಸ್ವೀಕರಿಸುವಂತೆ ಕಾನೂನು ರಚಿಸುವ ಕಡೆಗೆ ಗಮನಹರಿಸಬೇಕು.

ಮಿಲಿಟರಿ ಸರ್ವಾಧಿಕಾರದಿಂದ ಹೊರ ಬಂದು ಮ್ಯಾನ್ಮಾರ್‌ನಲ್ಲಿ ಶಾಂತಿ ನೆಲೆಸಲು ಕಾರಣ ಪ್ರಜಾತಂತ್ರ ವ್ಯವಸ್ಥೆಯೊಂದಿಗೆ ಬಂದ ಸೂಕಿ. ಪ್ರಜಾತಂತ್ರ ವ್ಯವಸ್ಥೆಯನ್ನು ಮರೆತು ರೋಹಿಂಗ್ಯಾ ಜನರ ವಿಚಾರದಲ್ಲಿ ಅವರು ನಿರ್ದಿಷ್ಟ ಹೆಜ್ಜೆ ಇಡದಿರುವುದು ಆಶ್ಚರ್ಯ.

ವಿವಾದ Myanmar ರೋಹಿಂಗ್ಯಾ ಆಂಗ್‌ ಸಾನ್‌ ಸೂಕಿ Aung San Suu Kyi Rohingya Crises ಮ್ಯಾನ್ಮಾರ್‌
ಟ್ರಂಪ್ ಸೂಚಿಸಿದ ಸುಪ್ರೀಂ ನ್ಯಾಯಮೂರ್ತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ; ಭಾರತ ವಿರೋಧಿ, ಚೀನಾ ಬೆಂಬಲಿಗ ಯಮೀನ್‍ಗೆ ಸೋಲು
ತಾರಕಕ್ಕೇರಿದ ಅಮೆರಿಕ-ಚೀನಾ ಶೀತಲ ಸಮರ; ಪರಸ್ಪರ ಎಚ್ಚರಿಕೆ ರವಾನೆ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?