ಬ್ರೆಕ್ಸಿಟ್ | ಮತ್ತೆ ಪ್ರಧಾನಿ ತೆರೀಸಾ ಮೇ ಸರ್ಕಾರ ಬಿಕ್ಕಟ್ಟಿನಲ್ಲಿ

ಬ್ರೆಕ್ಸಿಟ್ ಮತ್ತೆ ಪ್ರಧಾನಿ ತೆರೀಸಾ ಮೇ ಅವರ ಸರ್ಕಾರವನ್ನು ಬಿಕ್ಕಟ್ಟಿಗೆ ಸಿಕ್ಕಿಸಿದೆ. ಅವರ ಸಂಪುಟದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ ಆಡಳಿತ ಕನ್ಸರ್‍ವೇಟಿವ್ ಪಕ್ಷದ ಇಬ್ಬರು ಉಪಾಧ್ಯಕ್ಷರೂ ರಾಜೀನಾಮೆ ನೀಡಿದ್ದಾರೆ

ಡಿ ವಿ ರಾಜಶೇಖರ

ವಿದೇಶಾಂಗ ಸಚಿವ ಬೋರಿಸ್ ಜಾನ್ಸನ್ ಮತ್ತು ಬ್ರೆಕ್ಸಿಟ್ ಸಚಿವ ದೇವಿಡ್ ಡೇವಿಸ್ ರಾಜೀನಾಮೆಯಿಂದ ಬ್ರಿಟನ್‍ನ ಪ್ರಧಾನಿ ತೆರೀಸಾ ಮೇ ಅವರ ಸರ್ಕಾರ ಬಿಕ್ಕಟ್ಟಿನತ್ತ ಹೊರಳಿದೆ. ಬ್ರೆಕ್ಸಿಟ್ ಕುರಿತಂತೆ ಕಳೆದ ಶುಕ್ರವಾರ ಸಚಿವ ಸಂಪುಟ ಒಪ್ಪಿಗೆ ನೀಡಿದ ಪ್ರಸ್ತಾವನೆಗಳನ್ನು ವಿರೋಧಿಸಿ ಈ ಇಬ್ಬರು ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ ಆಡಳಿತ ಕನ್ಸರ್‍ವೇಟಿವ್ ಪಕ್ಷದ ಉಪಾಧ್ಯಕ್ಷರಾದ ಕಾಲ್‍ಫೀಲ್ಡ್ಸ್ ಮತ್ತು ಬೆನ್ ಬ್ರಾಡ್ಲಿ ಕೂಡಾ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸರ್ಕಾರ ಅಲ್ಲ ಆಡಳಿತ ಪಕ್ಷವೂ ಬಿಕ್ಕಟ್ಟಿಗೆ ಒಳಗಾಗಿದೆ. ಬ್ರೆಕ್ಸಿಟ್ ಕನಸು ನುಚ್ಚುನೂರಾಗುತ್ತದೆ ಎಂದು ಅದರ ಪ್ರಬಲ ಪ್ರತಿಪಾದಕ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಮತ್ತೆ ಬ್ರಿಟನ್ ಯೂರೋಪಿನ ಅಡಿಯಾಳಾಗುವಂತೆ ಮಾಡಲಾಗುತ್ತಿದೆ ಎಂದು ಅವರು ಮೇ ವಿರುದ್ಧ ಆರೋಪ ಮಾಡಿದ್ದಾರೆ. ಜನಬಯಸಿದಂತೆ ಪ್ರಧಾನಿ ಮೇ ಅವರು ನಡೆದುಕೊಳ್ಳುತ್ತಿಲ್ಲ ಎಂದು ಬ್ರೆಕ್ಸಿಟ್ ಖಾತೆ ಸಚಿವ ಡೇವಿಸ್ ಆರೋಪಿಸಿದ್ದಾರೆ. ಯೂರೋಪ್ ಒಕ್ಕೂಟದಿಂದ ಸಂಪೂರ್ಣವಾಗಿ ಹೊರಬರಬೇಕೆಂಬ ಕಟುವಾದ ನಿಲುವನ್ನು ಈ ಇಬ್ಬರೂ ಹೊಂದಿದ್ದಾರೆ.

ಜನಾಭಿಪ್ರಾಯ ಸಂಗ್ರಹದ ಸಂದರ್ಭದಲ್ಲಿ ಮೇ ಅವರು ಬ್ರೆಕ್ಸಿಟ್ ವಿರೋಧಿಸುತ್ತಿದ್ದರು. ಆದರೆ ಅವರೇ ಪ್ರಧಾನಿಯಾದ ಮೇಲೆ ಅವರು ಅನಿವಾರ್ಯವಾಗಿ ಜನಮತದ ಅನುಗುಣವಾಗಿ ಬ್ರೆಕ್ಸಿಟ್‍ಗೆ ಬೆಂಬಲವಾಗಿ ನಿಲ್ಲುವಂತಾಯಿತು. ಆದರೆ ಬ್ರೆಕ್ಸಿಟ್‍ನಿಂದ ಅಂದರೆ ಯೂರೋಪ್ ಒಕ್ಕೂಟದಿಂದ ಹೊರಬರುವುದರಿಂದ ಬ್ರಿಟನ್‍ಗೇ ನಷ್ಟ ಹೆಚ್ಚು ಎನ್ನುವ ಅಭಿಪ್ರಾಯ ಹೋಂದಿರುವ ಮೇ ಅವರು ಒಂದು ರಾಜಿ ಸೂತ್ರ ರೂಪಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಯೂರೋಪ್ ಒಕ್ಕೂಟ, ಆಡಳಿತ ಕನ್ಸರ್‍ವೇಟಿವ್ ಪಕ್ಷ ಮತ್ತು ಸಂಪುಟ ಸದಸ್ಯರ ಜೊತೆ ಮಾತುಕತೆ ನಡೆಸುತ್ತ ಬಂದಿದ್ದಾರೆ. ಕಳೆದ ಶುಕ್ರವಾರ ನಡೆದ ಸಂಫುಟ ಸಭೆಯಲ್ಲಿ ಇಂಥ ಒಂದು ರಾಜಿ ಸೂತ್ರಕ್ಕೆ ಅವರು ಒಪ್ಪಿಗೆ ಪಡೆದಿದ್ದರು. ಯೂರೋಪ್ ಒಕ್ಕೂಟದ ಜೊತೆ ವಾಣಿಜ್ಯ ಬಾಂಧವ್ಯ ಉಳಿಸಿಕೊಳ್ಳಲು ಮತ್ತು ಗಡಿ ನಿಯಂತ್ರಣ ವಿಚಾರದಲ್ಲಿ ಉದಾರವಾದ ನಿಲುವು ತಳೆಯುವ ಪ್ರಸ್ತಾವಗಳಿಗೆ ಸಂಪುಟ ಒಪ್ಪಿಗೆ ನೀಡಿತ್ತು.

ಈಗ ಯೂರೋಪಿನ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ಮುಕ್ತ ಅವಕಾಶವಿದೆ. ಬ್ರೆಕ್ಸಿಟ್ ಇದನ್ನು ವಿರೋಧಿಸುತ್ತದೆ. ಆದರೆ ಮೇ ಅವರು ಒಪ್ಪಿಗೆ ಪಡೆದ ಪಸ್ತಾವನೆಗಳಲ್ಲಿ ಸ್ವಲ್ಪ ಉದಾರ ನಿಲುವು ತಳೆಯಲಾಗಿತ್ತು. ಯಾವುದೇ ವಿಚಾರದಲ್ಲಿ ವಿವಾದ ಎದ್ದ ಸಂದರ್ಭದಲ್ಲಿ ಯೂರೋಪ್ ಒಕ್ಕೂಟದ ಕಾನೂನಿನ ಅನ್ವಯ ಅದನ್ನು ಇತ್ಯರ್ಥ ಮಾಡಿಕೊಳ್ಳಬಹುದೆಂಬ ತಿಳಿಸಲಾಗಿತ್ತು. ಈ ಸೂತ್ರ ಯೂರೋಪ್‍ಗೆ ಶರಣಾದಂತಿದೆ ಎಂದು ಮೇ ವಿರೋಧಿಗಳು ರಂಪ ಮಾಡುತ್ತಿದ್ದಾರೆ. ಮತ್ತೆ ಬ್ರೆಕ್ಸಿಟ್ ವಿಚಾರವನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಬ್ರೆಕ್ಸಿಟ್‌ ಪರವಾದಿಗಳು ಯತ್ನಿಸುತ್ತಿದ್ದಾರೆ.

ಮೇ ಸರ್ಕಾರ ಬಿಕ್ಕಟ್ಟಿಗೆ ಒಳಗಾಗಿರುವುದು ನಿಜ. ಆದರೆ ಇಬ್ಬರು ಸಚಿವರ ರಾಜೀನಾಮೆ ನಂತರ ಪ್ರಧಾನಿ ಮೇ ಅವರ ವಿರುದ್ಧ ಅವಿಶ್ವಾಸ ಸೂಚನೆ ಮಂಡಿಸಲು ಯಾರೂ ಪ್ರಯತ್ನಿಸಿದಂತೆ ಕಾಣುತ್ತಿಲ್ಲ. ಅಂದರೆ ಆಡಳಿತ ಪಕ್ಷ ಅವರ ಬೆಂಬಲಕ್ಕೆ ನಿಂತಿದೆ ಎಂದೇ ಅರ್ಥ. ಬಹುಶಃ ಈ ಕಾರಣದಿಂದಲೇ ಮೇ ಅವರು ವಿಚಲಿತರಾಗದೆ ತೆರವಾದ ಸಚಿವ ಸಂಪುಟಕ್ಕೆ ಸ್ಥಾನಕ್ಕೆ ಬೇರೆಯವರನ್ನು ನೇಮಕಮಾಡಿದ್ದಾರೆ. ವಿಚಿತ್ರ ಎಂದರೆ ಈಗ ಪ್ರಧಾನಿ, ಗೃಹ, ವಿದೇಶಾಂಗ ಹಾಗೂ ಬ್ರೆಕ್ಸಿಟ್ ಸಚಿವರೆಲ್ಲರೂ ಈ ಹಿಂದೆ ಬ್ರೆಕ್ಸಿಟ್ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದವರು.

ಬ್ರೆಕ್ಸಿಟ್ ಜಾರಿಗೊಂಡರೆ ಯೂರೋಪ್ ಒಕ್ಕೂಟದ ಜೊತೆ ಬ್ರಿಟನ್ ಸಂಬಂಧ 29 ಮಾರ್ಚ್ 2019 ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೇ ವರ್ಷದ ಅಕ್ಟೋಬರ್ ವೇಳೆಗೆ ಯೂರೋಪ್ ಜೊತೆ ಒಪ್ಪಂದ ಆಗಲೇ ಬೇಕಿದೆ. ಗಡುವು ಹತ್ತಿರ ಬರುತ್ತಿದ್ದರೂ ಬ್ರೆಕ್ಸಿಟ್ ಸ್ವರೂಪ ನಿಗದಿಯಾಗುತ್ತಿಲ್ಲ. ಬೇಗ ಒಮ್ಮತದೀಮದ ಒಂದು ಒಪ್ಪಂದ ರೂಪಿಸದಿದ್ದರೆ ವಿರೋಧಿ ಲೇಬರ್ ಪಕ್ಷದ ನಾಯಕ ಜರ್ಮಿ ಕಾರ್ಬೈನ್ ಅಧಿಕಾರ ಕಬಳಿಸುತ್ತರೆ ಎಂದು ಪ್ರಧಾನಿ ಮೇ ಈಗಾಗಲೇ ಆಡಳಿತ ಕನ್ಸರ್‍ವೇಟಿವ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಆಡಳಿತ ಪಕ್ಷಕ್ಕೆ ಕಳೆದ ಚುನಾವಣೆಗಳಲ್ಲಿ ಬಹುಮತ ಸಿಕ್ಕಲಿಲ್ಲ. ನಾರ್ತರನ್ ಐರ್‍ಲ್ಯಾಂಡಿನ ಡೆಮಾಕ್ರಟಿಕ್ ಯೂನಿಯನ್ ಪಾರ್ಟಿ ನೆರವಿನೊಂದಿಗೆ ಮೇ ಸರ್ಕಾರ ರಚಿಸಿದ್ದಾರೆ. ಬ್ರೆಕ್ಸಿಟ್ ವಿಚಾರದಲ್ಲಿ ಬೇಗ ಒಂದು ತೀರ್ಮಾನಕ್ಕೆ ಬರದಿದ್ದರೆ ಆ ಬೆಂಬಲವೂ ನಷ್ಟವಾಗಬಹುದು. ಏಕೆಂದೆರೆ ನಾರ್ತರನ್ ಐರ್ಲಾಂಡ್ ಬ್ರೆಕ್ಸಿಟ್‍ಗೆ ವಿರೋಧವಾಗಿದೆ. ಯೂರೋಪಿಯನ್ ಒಕ್ಕೂಟದ ಜೊತೆ ಸಂಬಂಧ ಮುಂದುವರಿಸಲು ನಿರ್ಧರಿಸಿದೆ.

ಬ್ರೆಕ್ಸಿಟ್‍ಗೆ ಜನಾಭಿಪ್ರಾಯ ದ್ದಾರೆ. ಹೀಗಾಗಿ ಬ್ರೆಕ್ಸಿಟ್ ಜಾರಿಗೊಳಿಸದೆ ಇರುವುದು ಕಷ್ಟವಾಗಿದೆ. ಹಾಗೆ ನೋಡಿದರೆ ಬ್ರಿಟನ್ ಹಲವು ರೀತಿಯಿಂದ ಯೂರೋಪಿನ ಭಾಗವಾಗಿದೆ. ಬ್ರಿಟನ್‍ನಲ್ಲಿ ಯೂರೋಪಿನ ಹಲವು ದೇಶಗಳ ಬಹುಮುಖ್ಯ ವಾಣಿಜ್ಯ ಸಂಸ್ಥೆಗಳು ನೆಲೆ ಸ್ಥಾಪಿಸಿವೆ. ಬ್ರಿಟನ್ ಅಂತರಾಷ್ಟ್ರೀಯ ವಾಣಿಜ್ಯ ಕೇಂದ್ರವಾಗಿರುವುದರಿಂದ ಯೂರೋಪಿನ ಬಹುಪಾಲು ವಾಣಿಜ್ಯವಹಿವಾಟುಗಳು ಅಲ್ಲಿಂದಲೇ ನಡೆಯುತ್ತವೆ. ಯೂರೋಪಿನ ಸಾವಿರಾರು ಮಂದಿ ಬ್ರಿಟನ್‍ನಲ್ಲಿ, ಬ್ರಿಟನ್‍ನ ಸಾವಿರಾರು ಮಂದಿ ಯೂರೋಪಿನಲ್ಲಿ ಕೆಲಸಮಾಡುತ್ತಿದ್ದಾರೆ. ಬ್ರೆಕ್ಸಿಟ್ ಜಾರಿಗೊಳಿಸಿದರೆ ಈ ಎಲ್ಲ ವಿಚಾರಗಳಲ್ಲಿ ಭಿನ್ನ ಕಾನೂನುಗಳು ಬ್ರಿಟನ್‍ನಲ್ಲಿ ಜಾರಿಗೆ ಬರುತ್ತವೆ. ವಾಣಿಜ್ಯ ವಹಿವಾಟು ಕಡಿತವಾಗುತ್ತದೆ.

ಇದನ್ನೂ ಓದಿ : ಭಾಗ ೩| ಅವಸಾನಕ್ಕೆ ಕಾರಣವಾದ ರಾಷ್ಟ್ರೀಯವಾದವನ್ನು ಮತ್ತೆ ಅಪ್ಪಿದ ಬ್ರಿಟನ್

ಬ್ರಿಟನ್ ಪ್ರತ್ಯೇಕ ವಾಣಿಜ್ಯ ತೆರಿಗೆ ವಸೂಲು ಮಾಡಬೇಕಾಗುತ್ತದೆ. ಹಾಗೆಯೇ ಯೂರೆಸಂಗ್ರಹದಲ್ಲಿ ಒಲವು ವ್ಯಕ್ತವಾಗಿದ್ದರೂ ಬಹುಮಂದಿ ಅದರಲ್ಲಿಯೂ ವಾಣಿಜ್ಯೋದ್ಯಮಿಗಳು, ಮಧ್ಯಮ ವರ್ಗದ ಜನರು, ಸೇವಾ ವಲಯದಲ್ಲಿ ಕೆಲಸಮಾಡುತ್ತಿರುವವರು, ನೌಕರ ವರ್ಗ ಬ್ರೆಕ್ಸಿಟ್ ಅನ್ನು ವಿರೋಧಿಸುತ್ತಿದೆ. ಆದರೆ ಕನ್ಸರ್‍ವೇಟಿವ್ ಪಕ್ಷದ ಕಟ್ಟಾ ಬಲಪಂಥೀಯರು ಬ್ರಿಟನ್ ಯೂರೋಪ್ ಒಕ್ಕೂಟದಿಂದ ಹೊರ ಬರಲೇ ಬೇಕು ಎಂದು ಹಠ ಹಿಡಿದಿದ್ದಾರೆ. ಬ್ರಿಟನ್ ನಮ್ಮದು, ನಾವು ಅದನ್ನು ಉಳಿಸಿಕೊಳ್ಳಬೇಕು, ನಮ್ಮ ಶೋಷಣೆ ನಿಲ್ಲಬೇಕು ಮುಂತಾದ ಅಂಶಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪನೆಗೊಳಿಸಿೂೀಪ್ ಜತೆ ವಾಣಿಜ್ಯ ಬಾಂಧವ್ಯ ಕ್ಕೆ ಕೂಡಾ ಅಲ್ಲಿ ಚಾಲ್ತಿಯಲ್ಲಿರುವ ತೆರಿಗೆ ನೀಡಬೇಕಾಗುತ್ತದೆ. ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರವಾಗಬೇಕಾಗುತ್ತದೆ. ಹೊಸ ವಿಸಾ ಪದ್ಧತಿ ಜಾರಿಗೆ ಬರುತ್ತದೆ.

ಯೂರೋಪ್‍ನಿಂದ ಹೊರ ಬರಲು ಒಕ್ಕೂಟಕ್ಕೆ ವಿವಿಧ ಬಾಬ್ತುಗಳಿಗೆ ಸಂಬಂಧಿಸಿದಂತೆ ಪರಿಹಾರ ಕೊಡಬೇಕಾಗುತ್ತದೆ. ಬ್ರೆಕ್ಸಿಟ್ ಪ್ರಕಟವಾದ ನಂತರ ಅನೇಕ ವಾಣಿಜ್ಯ ಸಂಸ್ಥೆಗಳು ವಹಿವಾಟನ್ನು ಬೇರೆ ಕಡೆ ಈಗಾಗಲೇ ಸ್ಥಳಾಂತರಿಸಿವೆ. ಬ್ರಿಟನ್ ಆರ್ಥಿಕ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಈಗಾಗಲೇ ಬ್ರಿಟನ್ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು ಬ್ರೆಕ್ಸಿಟ್ ಯಥಾವತ್ ಜಾರಿಗೆ ಬಂದರೆ ದೊಡ್ಡ ಕೋಲಾಹಲವೇ ಆಗಲಿದೆ. ಇದು ಸದ್ಯದ ಲೆಕ್ಕಾಚಾರ. ಆದರೆ ಜಾರಿಯಾಗುವ ಮೊದಲೇ ಸರ್ಕಾರ ಬಿಕ್ಕಟಿಗೆ ಒಳಗಾಗಬಹುದು. ಹೊಸ ಸರ್ಕಾರ ಬರಬಹುದು. ಅಂಥ ಸಂದರ್ಭದಲ್ಲಿ ಬ್ರೆಕ್ಸಿಟ್ ಗತಿ ಏನಾಗುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ. ಬ್ರೆಕ್ಸಿಟ್ ವಿಚಾರದಲ್ಲಿ ಒಂದು ರಾಜಿ ಸೂತ್ರ ರೂಪಿಸುವಲ್ಲಿ ಪ್ರಧಾನಿ ಮೇ ಯಶಸ್ವಿಯಾದರೆ ಬಹುಶಃ ಗೊಂದಲ ದೊಡ್ಡ ಪ್ರಮಾಣದಲ್ಲಿ ತೆರೀಸಾ ಇರುವುದಿಲ್ಲ.

ರಾಜೀನಾಮೆ ಬ್ರಿಟನ್ Theresa May Britain ತೆರೆಸಾ ಮೇ ಆರ್ಥಿಕ ಬಿಕ್ಕಟ್ಟು Brexit ಬೋರಿಸ್‌ ಜಾನ್ಸನ್‌ Boris Jhonson
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?