ಪೋರ್ನ್ ತಾರೆಯರ ಬಾಯಿಮುಚ್ಚಿಸಲು ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್‌ಗೆ ಆಘಾತ

ಲೈಂಗಿಕ ಸಂಬಂಧವಿರುವುದನ್ನು ಬಹಿರಂಗ ಪಡಿಸದಿರಲು ಇಬ್ಬರು ಸೆಕ್ಸ್ ತಾರೆಯರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಕೀಲರು ಹಣ ನೀಡಿದ್ದು ಇದೀಗ ಖಚಿತವಾಗಿದೆ.  ಇದರಿಂದ ಟ್ರಂಪ್‌ ರಾಜಕೀಯ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಗಿದೆ

ಡಿ ವಿ ರಾಜಶೇಖರ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಕ್ಕಟ್ಟಿಗೆ ಮತ್ತು ಬಿಕ್ಕಟ್ಟಿಗೆ ಒಳಗಾಗುವಂಥ ಎರಡು ಬೆಳವಣಿಗೆಗಳು ಮಂಗಳವಾರ ನಡೆದಿವೆ. ಈ ಬೆಳವಣಿಗೆಗಳು ಶ್ವೇತಭವನದಲ್ಲಿ ಕೋಲಾಹಲ ಸೃಷ್ಟಿಸಿವೆ. ಪೋರ್ನ್(ನೀಲಿಚಿತ್ರ) ತಾರೆ ಸ್ಟಾರ್ಮಿ ಡೇನಿಯಲ್ಸ್ ಪ್ರಕರಣದಲ್ಲಿ ಟ್ರಂಪ್ ಅವರ ವಕೀಲ ಮೈಕೆಲ್ ಕೊಹೆನ್ ತಪ್ಪು ಒಪ್ಪಿಕೊಂಡಿದ್ದಾರೆ. ಟ್ರಂಪ್ ಮತ್ತು ಡೇನಿಯಲ್ಸ್ ನಡುವೆ ದೈಹಿಕ ಸಂಬಂಧವಿತ್ತು. ಈ ವಿಚಾರ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗದಿರಲಿ ಎಂದು ಅವರಿಗೆ ಲಂಚ ನೀಡಿದ್ದು ನಿಜ ಎಂದು ಕೊಹೆನ್ ಆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯೂಯಾರ್ಕ್‌ನ ಕೋರ್ಟ್‌ನಲ್ಲಿ ಮಂಗಳವಾರ ಒಪ್ಪಿಕೊಂಡು ಟ್ರಂಪ್ ಅವರ ರಾಜಕೀಯ ಭವಿಷ್ಯಕ್ಕೆ ಮೊದಲ ಆಘಾತ ನೀಡಿದ್ದಾರೆ.

ಕೊಹೆನ್ ಅವರು ನೇರವಾಗಿ ಟ್ರಂಪ್ ಅವರ ಹೆಸರು ಹೇಳದಿದ್ದರೂ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಸೂಚನೆಯ ಮೇರೆಗೆ ತಾವು ಈ ವ್ಯವಹಾರ ಮಾಡಿದ್ದಾಗಿ ಹೇಳಿದ್ದಾರೆ. ಡೇನಿಯಲ್ಸ್ ಪ್ರಕರಣವೂ ಸೇರಿದಂತೆ ಹತ್ತು ಆರೋಪಗಳ ಪೈಕಿ ಎಂಟರಲ್ಲಿ ತಪ್ಪು ಮಾಡಿರುವುದು ಕೋರ್ಟ್ ವಿಚಾರಣೆಯಿಂದ ಸಾಬೀತಾಗಿದೆ. ಡೇನಿಯಲ್ಸ್‌ಗೆ ೧ ಲಕ್ಷ ೩೦ ಸಾವಿರ ಡಾಲರ್ ಹಣವನ್ನು ತಾವು ಮೊದಲು ಕೈಯ್ಯಿಂದ ಕೊಟ್ಟಿದ್ದಾಗಿ, ನಂತರ ಅದನ್ನು ಟ್ರಂಪ್ ಅವರು ಆ ಹಣವನ್ನು ವಾಪಸ್ ಕೊಟ್ಟರೆಂದೂ ಕೋರ್ಟ್‌ಗೆ ಕೊಹೆನ್ ತಿಳಿಸಿದರು. ಈ ಅಂಶವನ್ನು ಕೊಹೆನ್ ಈ ಹಿಂದೆ ಬಹಿರಂಗ ಮಾಡಿದಾಗ ಟ್ರಂಪ್ ಆ ವಿಚಾರ ತಮಗೇನೂ ತಿಳಿದಿಲ್ಲ ಎಂದು ಹೇಳಿದ್ದರು. ಕೊಹೆನ್ ಅವರ ಈ ಸಾಕ್ಷ್ಯದಿಂದಾಗಿ ಟ್ರಂಪ್ ಅವರು ಈಗ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬಂದಿದೆ. ಡೇನಿಯಲ್ಸ್ ಪ್ರಕರಣವಲ್ಲದ ಟ್ರಂಪ್ ಅವರು ಲೈಂಗಿಕ ಸಂಬಂಧ ಇರಿಸಿಕೊಂಡಿದ್ದ ಪ್ಲೇಬಾಯ್ ಮಾಡಲ್ ಕರೇನ್ ಮೆಕ್‌ಡಗಲ್ ಬಾಯಿ ಮುಚ್ಚಿಸಲು ನಡೆದ ಚರ್ಚೆಯನ್ನೂ ಬಹಿರಂಗಮಾಡಿದರು. ಕರೆನ್ ಯಾವುದೇ ಕಾರಣಕ್ಕೆ ಟ್ರಂಪ್ ಅವರ ಜೊತೆಗಿನ ಸಂಬಂಧ ಬಹಿರಂಗ ಮಾಡದಂತೆ ಅವಳಿಗೆ ಒಂದಷ್ಟು ಹಣ ಕೊಡುವ ಬಗ್ಗೆ ಟ್ರಂಪ್ ಜೊತೆ ತಾವು ಚರ್ಚಿಸಿದ್ದಾಗಿ ಅವರು ಹೇಳಿದರು. ಆ ಮಾತುಕತೆ ಧ್ವನಿಮುದ್ರಿಸಿಕೊಂಡಿರುವುದಾಗಿ ಕೊಹೆನ್ ಈ ಮೊದಲೇ ಬಹಿರಂಗ ಮಾಡಿದ್ದಾರೆ. ಹೀಗಾಗಿ ಟ್ರಂಪ್ ಈ ಪ್ರಕರಣದಿಂದಲೂ ಹೊರಬರುವುದು ಕಷ್ಟ.

ಕೊಹೆನ್ ಅವರು ನೇರವಾಗಿ ಟ್ರಂಪ್ ಅವರ ಹೆಸರು ಹೇಳದಿದ್ದರೂ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಸೂಚನೆಯ ಮೇರೆಗೆ ತಾವು ಈ ವ್ಯವಹಾರ ಮಾಡಿದ್ದಾಗಿ ಹೇಳಿದ್ದಾರೆ. ಡೇನಿಯಲ್ಸ್ ಪ್ರಕರಣವೂ ಸೇರಿದಂತೆ ಹತ್ತು ಆರೋಪಗಳ ಪೈಕಿ ಎಂಟರಲ್ಲಿ ತಪ್ಪು ಮಾಡಿರುವುದು ಕೋರ್ಟ್ ವಿಚಾರಣೆಯಿಂದ ಸಾಬೀತಾಗಿದೆ. ಡೇನಿಯಲ್ಸ್‌ಗೆ ೧ಲಕ್ಷ ೩೦ ಸಾವಿರ ಡಾಲರ್ ಹಣವನ್ನು ತಾವು ಮೊದಲು ಕೈಯ್ಯಿಂದ ಕೊಟ್ಟಿದ್ದಾಗಿ, ನಂತರ ಅದನ್ನು ಟ್ರಂಪ್ ಅವರು ಆ ಹಣವನ್ನು ವಾಪಸ್ ಕೊಟ್ಟರೆಂದೂ ಕೋರ್ಟ್‌ಗೆ ಕೊಹೆನ್ ತಿಳಿಸಿದರು. ಈ ಅಂಶವನ್ನು ಕೊಹೆನ್ ಈ ಹಿಂದೆ ಬಹಿರಂಗ ಮಾಡಿದಾಗ ಟ್ರಂಪ್ ಆ ವಿಚಾರ ತಮಗೇನೂ ತಿಳಿದಿಲ್ಲ ಎಂದು ಹೇಳಿದ್ದರು. ಕೊಹೆನ್ ಅವರ ಈ ಸಾಕ್ಷ್ಯದಿಂದಾಗಿ ಟ್ರಂಪ್ ಅವರು ಈಗ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬಂದಿದೆ. ಡೇನಿಯಲ್ಸ್ ಪ್ರಕರಣವಲ್ಲದ ಟ್ರಂಪ್ ಅವರು ಲೈಂಗಿಕ ಸಂಬಂಧ ಇರಿಸಿಕೊಂಡಿದ್ದ ಪ್ಲೇಬಾಯ್ ಮಾಡಲ್ ಕರೇನ್ ಮೆಕ್‌ಡಗಲ್ ಬಾಯಿ ಮುಚ್ಚಿಸಲು ನಡೆದ ಚರ್ಚೆಯನ್ನೂ ಬಹಿರಂಗಮಾಡಿದರು. ಕರೆನ್ ಯಾವುದೇ ಕಾರಣಕ್ಕೆ ಟ್ರಂಪ್ ಅವರ ಜೊತೆಗಿನ ಸಂಬಂಧ ಬಹಿರಂಗ ಮಾಡದಂತೆ ಅವಳಿಗೆ ಒಂದಷ್ಟು ಹಣ ಕೊಡುವ ಬಗ್ಗೆ ಟ್ರಂಪ್ ಜೊತೆ ತಾವು ಚರ್ಚಿಸಿದ್ದಾಗಿ ಅವರು ಹೇಳಿದರು. ಆ ಮಾತುಕತೆ ಧ್ವನಿಮುದ್ರಿಸಿಕೊಂಡಿರುವುದಾಗಿ ಕೊಹೆನ್ ಈ ಮೊದಲೇ ಬಹಿರಂಗ ಮಾಡಿದ್ದಾರೆ. ಹೀಗಾಗಿ ಟ್ರಂಪ್ ಈ ಪ್ರಕರಣದಿಂದಲೂ ಹೊರಬರುವುದು ಕಷ್ಟ.

ಚುನಾವಣೆಗಳಲ್ಲಿ ಸ್ಪರ್ಧಿಸಿರುವವರ ಪರವಾಗಿ ಯಾವುದೇ ರೀತಿಯ ಹಣಕಾಸು ವ್ಯವಹಾರ ಮಾಡುವುದು ಅಮೆರಿಕದ ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಲು ಅವಕಾಶವಿದೆ. ಕೊಹೆನ್ ಅವರು ಟ್ರಂಪ್ ಅವರ ಕಂಪನಿಯಲ್ಲಿ ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದರು. ಅವರ ಚುನಾವಣೆ ಪ್ರಚಾರದ ಜವಾಬ್ದಾರಿಯ ಭಾಗವಾಗಿದ್ದರು. ಚುನಾವಣೆ ನಂತರ ಅವರು ಅಧ್ಯಕ್ಷ ಟ್ರಂಪ್ ಅವರ ವೈಯುಕ್ತಿಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಅಧ್ಯಕ್ಷ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಕುರಿತಂತೆ ತನಿಖೆ ನಡೆಸುತ್ತಿರುವ ಮುಲ್ಲರ್ ನೇತೃತ್ವದ ಸಮಿತಿ ನೀಡಿದ ಸೂಚನೆಯ ಮೇರೆಗೆ ಎಫ್‌ಬಿಐ ಅಧಿಕಾರಿಗಳು ಕೊಹೆನ್ ಅವರ ಕಚೇರಿ ಮತ್ತು ಮನೆಯ ಮೇಲೆ ದಾಳಿ ಮಾಡಿ ಅವರ ಹಣಕಾಸು ವ್ಯವಹಾರ ಕುರಿತ ಫೈಲ್‌ಗಳು ವಶಕ್ಕೆ ಪಡೆದಿದ್ದರು. ಇದರ ಪರಿಣಾಮವಾಗಿ ಅವರ ಮೇಲಿನ ಇತರ ಹಣಕಾಸು ಮೋಸದ ಪ್ರಕರಣಗಳೂ ಸಾಬೀತಾಗಿವೆ.

ಟ್ರಂಪ್ ಅವರಿಗೆ ಆಘಾತ ಉಂಟುಮಾಡಿರುವ ಎರಡನೆಯ ಪ್ರಕರಣ ೨೦೧೬ರ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಪ್ರಚಾರದ ವಿಭಾಗದ ಮ್ಯಾನೇಜರ್ ಪಾಲ್ ಮನಾಫೋರ್ಟ್‌ಗೆ ಸಂಬಂಧಿಸಿದ್ದು. ತೆರಿಗೆ ಕಳ್ಳತನ, ಹಣಕಾಸು ಕಂಪನಿಯೊಂದರ ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸಲ್ಲಿಕೆ, ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ ಹಣ ಪಡೆದಿರುವುದೂ ಸೇರಿದಂತೆ ೧೮ ಆರೋಪಗಳ ಪೈಕಿ ಹತ್ತು ಆರೋಪಗಳು ವರ್ಜೀನಿಯಾದ ಫೆಡರಲ್ ಕೋರ್ಟ್ ನಡೆಸಿದ ವಿಚಾರಣೆಯಲ್ಲಿ ಸಾಬೀತಾಗಿವೆ. ಈ ಪೈಕಿ ಚುನಾವಣೆ ಪ್ರಚಾರಕ್ಕೆಂದು ಹಣ ಪಡೆದು ಅದನ್ನು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವುದು ಮತ್ತು ಆ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ಕೊಡದಿರುವ ಆರೋಪ ಸಾಬೀತಾಗಿದೆ. ಅವರು ಸ್ಪಷ್ಟವಾಗಿ ಚುನಾವಣೆ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ : ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಜತೆಗಿನ ಡೊನಾಲ್ಡ್‌ ಟ್ರಂಪ್ ಸಖ್ಯ ಸತ್ಯವೇನಾ?

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ಕೋರ್ಟುಗಳಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶ ಇದೆಯಾದರೂ ಸದ್ಯಕ್ಕೆ ಟ್ರಂಪ್ ಅವರು ರಾಜಕೀಯ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರಬಹುದು. ತೆರವಾಗಲಿರುವ ಕಾಂಗ್ರೆಸ್ ಸ್ಥಾನಗಳಿಗೆ ಚುನಾವಣೆ ನಡೆಯಲು ಇನ್ನು ನೂರು ದಿನ ಬಾಕಿ ಇರುವಾಗ ಇಂಥ ತೀರ್ಪುಗಳು ಬಂದಿರುವುದು ಆಡಳಿತರೂಢ ರಿಪಬ್ಲಿಕನ್ ಪಕ್ಷಕ್ಕೆ ಸಮಸ್ಯೆಯಾಗಬಹುದು. ಎಲ್ಲಕ್ಕಿಂತಾ ಹೆಚ್ಚಾಗಿ ಟ್ರಂಪ್ ವಿರೋಧಿಗಳ ಸಂಖ್ಯೆ ರಿಪಬ್ಲಿಕನ್ ಪಕ್ಷದಲ್ಲಿ ಹೆಚ್ಚಬಹುದು. ಅವರ ವಿರುದ್ಧ ಕಾಂಗ್ರೆಸ್‌ನಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರೇ ಛೀಮಾರಿ ಹಾಕುವ ನಿರ್ಣಯ ಮಂಡಿಸುವ ಸಾಧ್ಯತೆ ಹೆಚ್ಚಾದಂತಾಗಿದೆ. ಮುಲ್ಲರ್ ತನಿಖೆಯಲ್ಲಿ ಟ್ರಂಪ್ ಚುನಾವಣಾ ಪ್ರಚಾರ ಮತ್ತು ರಷ್ಯಾದ ಸಂಬಂಧ ಖಚಿತವಾದರೆ ನಿಜವಾದ ಸಮಸ್ಯೆ ಉದ್ಭವವಾಗಲಿದೆ.

Donald Trump ಡೊನಾಲ್ಡ್‌ ಟ್ರಂಪ್‌ Michael Cohen Stormy Daniels ಮೈಕೆಲ್ ಕೋಹೆನ್ ಸ್ಟಾರ್ಮಿ ಡೇನಿಯಲ್ಸ್ ಅಮೆರಿಕ ಅಧ್ಯಕ್ಷ ಅಪರಾಧಿ Guilty American President Ex Lawyer Hush Money ಮಾಜಿ ವಕೀಲ
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?