ಸ್ವೀಡನ್‍ನಲ್ಲೂ ಬೀಸಿತು ಬಲಪಂಥದ ಗಾಳಿ; ಉದಾರವಾದಿ ಪಕ್ಷಗಳಿಗಿಲ್ಲ ಬಹುಮತ

ಸ್ವೀಡನ್‍ನಲ್ಲಿ ಕಳೆದ ಭಾನುವಾರ ನಡೆದ ಸಂಸತ್ ಚುನಾವಣೆಯಲ್ಲಿ ಆಡಳಿತಾರೂಢ ಸೋಷಿಯಲ್ ಡೆಮಾಕ್ರೆಟ್ ನೇತೃತ್ವದ ಮೈತ್ರಿಕೂಟವು ಹೆಚ್ಚು ಸ್ಥಾನ ಪಡೆದರೂ ಸ್ಪಷ್ಟ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ, ಕಟ್ಟಾ ಬಲಪಂಥೀಯ ಗಾಳಿಯು, ಸ್ವೀಡನ್‍ ದೇಶವನ್ನೂ ಅಪ್ಪಳಿಸಿದೆ

ಡಿ ವಿ ರಾಜಶೇಖರ

ಸ್ವೀಡನ್‍ನಲ್ಲಿ ಕಳೆದ ಭಾನುವಾರ ನಡೆದ ಸಂಸತ್ ಚುನಾವಣೆಗಳಲ್ಲಿ ಆಡಳಿತಾರೂಢ ಸೋಷಿಯಲ್ ಡೆಮಾಕ್ರೆಟ್ ನೇತೃತ್ವದ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಪಡೆದರೂ ಸ್ಪಷ್ಟ ಬಹುಮತ ಪಡೆಯುವಲ್ಲಿ ಸಫಲವಾಗಿಲ್ಲ. ಈ ಬೆಳವಣಿಗೆಗೆ ಮುಖ್ಯ ಕಾರಣ, ವಲಸೆ ವಿರೋಧಿ ಕಟ್ಟಾ ಬಲಪಂಥೀಯ ಪಕ್ಷವಾದ ಸ್ವೀಡನ್ ಡೆಮಾಕ್ರೆಟ್ಸ್ ಪಕ್ಷ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ಗಳಿಸಿರುವುದೇ ಆಗಿದೆ. ಯೂರೋಪಿನ ಇತರ ದೇಶಗಳಲ್ಲಿ ಇತ್ತೀಚಿಗೆ ಕಂಡುಬಂದಿರುವ ವಲಸೆ ವಿರೋಧಿ ನೀತಿಗಳನ್ನು ಪ್ರಚುರಪಡಿಸುವ, ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಪಕ್ಷಗಳ ಪ್ರವರ್ಧಮಾನದ ಅಲೆ ಇದೀಗ ಸ್ವೀಡನ್‍ನಲ್ಲಿಯೂ ಕಂಡುಬಂದಿದೆ.

ಜಗತ್ತಿನಲ್ಲಿ ಅತ್ಯಂತ ಜನಪರವಾದ ರಾಜಕೀಯ ವ್ಯವಸ್ಥೆ ಮತ್ತು ಸರ್ಕಾರ ಇರುವ ದೇಶಗಳಲ್ಲಿ ಸ್ವೀಡನ್ ಕೂಡ ಒಂದು. ಇಂಥ ವ್ಯವಸ್ಥೆಯನ್ನು ಕಟ್ಟಿ ಬೆಳೆಸಿದ ಖ್ಯಾತಿ ಸೋಷಿಯಲ್ ಡೆಮಾಕ್ರೆಟ್, ಲೇಬರ್ ಪಕ್ಷಕ್ಕೆ ಸಲ್ಲುತ್ತದೆ. ಸಂಪ್ರದಾಯವಾದಿ ಪಕ್ಷಗಳು ಕ್ರಮೇಣ ನೆಲೆಯೂರಿದಂತೆ ಆ ಪಕ್ಷದ ಪ್ರಭಾವವೂ ಕಡಿಮೆಯಾಗುತ್ತ ಬಂದು ಕಳೆದ ದಶಕದಿಂದೀಚೆಗೆ ಸಮಾನಮನಸ್ಕ ಎಡ ಮತ್ತು ಗ್ರೀನ್ಸ್ ಪಕ್ಷಗಳ ಜೊತೆ ಮೈತ್ರಿ ಸಾಧಿಸುತ್ತ ಬಂದಿದೆ. ಈ ಮಧ್ಯೆ, ಸಂಪ್ರದಾಯವಾದಿ ಪಕ್ಷವಾದ ನೈಮಾಡರೇಟ್ಸ್ ಪಕ್ಷವೂ ಲಿಬರಲ್ಸ್ ಮತ್ತು ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ ನಿದರ್ಶನವೂ ಇದೆ. ಇದೇ ಭಾನುವಾರ ನಡೆದ ಚುನಾವಣೆಗಳಲ್ಲಿ ಸೋಷಿಯಲ್ ಡೆಮಾಕ್ರೆಟ್ ಪಕ್ಷದ ಪ್ರಭಾವ ಮತ್ತಷ್ಟು ತಗ್ಗಿದೆ. ಸ್ಟೀಫನ್ ಲಾಫ್ವನ್ ನೇತೃತ್ವದ ಸೋಷಿಯಲ್ ಡೆಮಾಕ್ರೆಟ್, ಗ್ರೀನ್ಸ್ ಮತ್ತು ಎಡಪಕ್ಷಗಳ ಮೈತ್ರಿಕೂಟಕ್ಕೆ 144 ಸ್ಥಾನ ದೊರೆತಿದ್ದರೆ; ವಿರೋಧಿ ಸಂಪ್ರದಾಯವಾದಿ ಬಲಪಂಥೀಯ ಮಧ್ಯಮ ಮೈತ್ರಿಕೂಟಕ್ಕೆ 143 ಸ್ಥಾನ ದೊರೆತಿವೆ. ಕಟ್ಟಾ ಬಲಪಂಥೀಯ ಪಕ್ಷವಾದ ಸ್ವೀಡನ್ ಡೆಮಾಕ್ರಟ್ಸ್ 62 ಸ್ಥಾನ ಗಳಿಸಿ ಮೂರನೇ ಸ್ಥಾನಕ್ಕೇರಿದೆ. ಅಂತಿಮ ಫಲಿತಾಂಶಗಳು ಇನ್ನೂ ಬರಬೇಕಿದ್ದರೂ, ಒಟ್ಟಾರೆ ರಾಜಕೀಯ ಬಲಾಬಲ ಬದಲಾಗುವ ಸಾಧ್ಯತೆ ಕಂಡುಬರುತ್ತಿಲ್ಲ.

ಇದನ್ನೂ ಓದಿ : ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಕಾನೂನು ಬದಲಿಸಿದ ಇಂಗ್ಲೆಂಡ್‌

349 ಸ್ಥಾನಗಳ ಸಂಸತ್ತಿನಲ್ಲಿ ಸರ್ಕಾರ ರಚಿಸಲು ಕನಿಷ್ಠ 175 ಸ್ಥಾನ ಬೇಕಿದೆ. ಸೋಷಿಯಲ್ ಡೆಮಾಕ್ರೆಟ್ ನೇತೃತ್ವದ ಮೈತ್ರಿಕೂಟ ಸದ್ಯಕ್ಕೆ ಒಂದು ಸ್ಥಾನ ಹೆಚ್ಚು ಗಳಿಸಿದ್ದರು ಕೂಡ, ಇತರ ಪಕ್ಷಗಳ ಬೆಂಬಲ ಪಡೆಯದೆ ಸರ್ಕಾರ ರಚಿಸಲು ಸಾಧ್ಯವೇ ಇಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಎರಡನೆಯ ಸ್ಥಾನದಲ್ಲಿರುವ ಮಧ್ಯಮ ಬಲಪಂಥೀಯರು ಕಟ್ಟಾ ಬಲಪಂಥೀಯ ಸ್ವೀಡನ್ ಡೆಮಾಕ್ರಟ್ಸ್ ಜೊತೆ ಸೇರಿ ಸರ್ಕಾರ ರಚಿಸಬಹುದಾದ ಸಾಧ್ಯತೆಯೂ ಕಂಡುಬಂದಿದೆ. ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಪಕ್ಷಗಳು ಒಡೆದುಹೋಗುವ ಭೀತಿಯೂ ಸೃಷ್ಟಿಯಾಗಿದೆ. ಇದೇನೇ ಇದ್ದರೂ, ತಾವು ಕಿಂಗ್ ಮೇಕರ್ ಎಂದು ಸ್ವೀಡನ್ ಡೆಮಾಕ್ರಟ್ ಪಕ್ಷದ ನಾಯಕ ಜಿಮ್ಮಿ ಅಕೆಸ್ಸನ್ ಹೇಳುತ್ತಿರುವುದು ಕುತೂಹಲ ಹೆಚ್ಚಲು ಕಾರಣವಾಗಿದೆ.

ಸಿರಿಯಾ, ಲಿಬಿಯಾ, ಆಫ್ರಿಕಾದ ವಿವಿಧ ದೇಶಗಳಲ್ಲಿನ ಆತಂರಿಕ ಕಲಹದಿಂದಾಗಿ ಅಲ್ಲಿನ ಜನರು ವಲಸೆ ಬಂದಾಗ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ದೇಶಗಳ ಪೈಕಿ ಸ್ವೀಡನ್ ಕೂಡ ಒಂದು. ಸುಮಾರು ಒಂದು ಕೋಟಿ ಜನಸಂಖ್ಯೆಯ ಆ ದೇಶವು, ಅಂದಾಜು ಒಂದೂವರೆ ಲಕ್ಷ ವಲಸಿಗರಿಗೆ ನೆಲೆ ಕಲ್ಪಿಸಿ ಜಗತ್ತಿನ ಮೆಚ್ಚುಗೆ ಗಳಿಸಿತ್ತು. ಆದರೆ, ಜರ್ಮನಿಯ ಆಡಳಿತಗಾರರಿಗೆ ಆದ ಅನುಭವವೇ ಸ್ವೀಡನ್ ಆಡಳಿತಗಾರರಿಗೂ ಇದೀಗ ಆಗಿದೆ. ಸ್ವೀಡನ್ ರಾಷ್ಟ್ರೀಯತೆ, ವಲಸೆ ವಿರೋಧಿ ಮತ್ತು ಯೂರೋಪ್ ಒಕ್ಕೂಟದಿಂದ ಹೊರಬರಬೇಕೆಂದು ಆಗ್ರಹಿಸುತ್ತಿರುವ ಕಿಮ್ಮಿ ಅಕೆಸ್ಸನ್ ನೇತೃತ್ವದ ಸ್ವೀಡನ್ ಡೆಮಾಕ್ರೆಟ್ಸ್, ಇದೀಗ ಚುನಾವಣೆಗಳಲ್ಲಿ ಮೂರನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ದೇಶದ ರಾಜಕೀಯ ಹೊರಳು ದಾರಿಯಲ್ಲಿ ಇರುವಂತೆ ಕಾಣುತ್ತಿದೆ.

ಚಿತ್ರ: ಸ್ವೀಡನ್ ಡೆಮಾಕ್ರಟ್ ಪಕ್ಷದ ನಾಯಕ ಜಿಮ್ಮಿ ಅಕೆಸ್ಸನ್

Sweden European Union ಬಲಪಂಥೀಯ ರಾಜಕೀಯ ಉದಾರವಾದಿ Jimmie Åkesson ಸ್ವೀಡನ್‍ Sweden General Elections 2018 Social Democrats Moderates ಸ್ವೀಡನ್ ಡೆಮಾಕ್ರೆಟ್ಸ್ Stefan Löfven
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
ಟ್ರಂಪ್ ಅಧಿಕಾರಕ್ಕೇ ಕುತ್ತು ತಂದಿದೆ ‘ನ್ಯೂಯಾರ್ಕ್ ಟೈಮ್ಸ್‌’ನ ಅನಾಮಿಕ ಲೇಖನ!
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?