ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?
ಕರ್ನಾಟಕ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ರಾಜ್ಯಕ್ಕಾದ ಲಾಭವೇನು?
ಕೆಸಿಆರ್‌ಗೆ ತಿರುಗುಬಾಣ ಆಗಲಿದಿಯೇ ವಿಧಾನಸಭೆ ವಿಸರ್ಜನೆಯ ನಿರ್ಧಾರ?

ಎಚ್ ಸಿ ಮಹದೇವಪ್ಪ ಮನದ ಮಾತು | ಸಿದ್ದರಾಮಯ್ಯಗೆ ನನ್ನ ಮೇಲೆ ಮುನಿಸಿಲ್ಲ

ಚುನಾವಣಾ ಪರಾಜಯದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ, ಅನೇಕ ಉಹಾಪೋಹಗಳಿಗೆ ಕಾರಣರಾಗಿದ್ದವರು ಮಾಜಿ ಸಚಿವ ಎಚ್ ಸಿ ಮಹದೇವಪ್ಪ. ಇದೀಗ ‘ದಿ ಸ್ಟೇಟ್’ ಜೊತೆಗಿನ ಮಾತುಕತೆಯಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ

ಓಂಕಾರ್ ಪಿ
 • ಚುನಾವಣಾ ಸೋಲಿನ ವಿಷಯದಲ್ಲಿ ಹಿಂದೆ ಯಾವತ್ತೂ ಇಷ್ಟೊಂದು ಕಂಗೆಟ್ಟಿರಲಿಲ್ಲ. ಐದು ವರ್ಷ ಕ್ಷೇತ್ರದಲ್ಲಿ ವ್ಯಾಪಕ ಅಭಿವೃದ್ಧಿ ಮಾಡಿದ್ದೆ. ಯಾರೂ ದ್ವೇಷಿಗಳು, ವಿರೋಧಿಗಳು ಇರಲಿಲ್ಲ. ರಾಜ್ಯದಲ್ಲಿಯೂ ಐದು ವರ್ಷ ಸ್ಥಿರ ಸರ್ಕಾರದ ಮೂಲಕ ನೀಡಿದ ಕಾರ್ಯಕ್ರಮಗಳು ಎಲ್ಲ ಜನರನ್ನು ತಲುಪಿದ್ದವು. ಆದಾಗ್ಯೂ, ೨೮ ಸಾವಿರ ಮತಗಳಿಂದ ಸೋತದ್ದು ನನ್ನ ಕಂಗೆಡಿಸಿತು.
 • ನನ್ನ ಜೀವನದಲ್ಲೇ ಯಾವತ್ತೂ,ಯಾರ ಜೊತೆಗೂ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ಕೀಳು ಮಟ್ಟಕ್ಕೆ ಇಳಿದವನಲ್ಲ. ಗೆಲುವಿಗಾಗಿ ಯಾರ ಆಶ್ರಯವನ್ನೂ ಬಯಸಲಿಲ್ಲ. ದೇವೇಗೌಡರೇನು ನನ್ನ ಮೇಲೆ ಕರುಣೆ ತೋರಿರಲಿಲ್ಲ. ಅವರೇ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದರು. ಕುಮಾರಸ್ವಾಮಿ ಎರಡು ಬಾರಿ ಬಂದು ಕಣ್ಣೀರು ಹಾಕಿದ್ದರು. ಹೊಂದಾಣಿಕೆ ಮಾಡಿಕೊಂಡಿದ್ದರೆ ನಾನು ಸೋಲುವ ಪ್ರಮೇಯವೇ ಇರುತ್ತಿರಲಿಲ್ಲ.
 • ಬಿಜೆಪಿಯು ತಾನು ಗೆಲ್ಲಲಾಗದ ಕ್ಷೇತ್ರಗಳಲ್ಲಿ ತನ್ನ ಮತಗಳನ್ನು ಜೆಡಿಎಸ್‌ಗೆ ವರ್ಗಾವಣೆ ಮಾಡಿತು. ಅಭ್ಯರ್ಥಿ ಯಾರೆನ್ನುವುದು ಮುಖ್ಯ ಇರಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು; ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದನ್ನು ತಡೆಯಬೇಕು ಎನ್ನುವುದಷ್ಟೆ ಈ ಎರಡು ಪಕ್ಷಗಳ ಉದ್ದೇಶವಾಗಿತ್ತು. ಕೊಳ್ಳೇಗಾಲದಲ್ಲಿ ಬಿಎಸ್ಪಿಯ ಮಹೇಶ್ ಅವರಿಗೆ ಬಿಜೆಪಿ ಮತ ಹೋಗುತ್ತೆ ಅಂದರೆ ಲೆಕ್ಕಹಾಕಿ. ಅಂತಿಮವಾಗಿ, ಗೆಲುವಾಗಿದ್ದು ಜೆಡಿಎಸ್‌ಗೆ. ಫೂಲ್ ಆಗಿದ್ದು ಬಿಜೆಪಿ. ಕಾಂಗ್ರೆಸ್ ಅನ್ನು ಕಳೆದುಕೊಂಡು ನಷ್ಟವಾಗಿದ್ದು ರಾಜ್ಯದ ಜನಕ್ಕೆ.
 • ನನ್ನ ರಾಜಕೀಯ ನಿಲುವು ಯಾವತ್ತೂ ಪಾರದರ್ಶಕವಾಗಿದೆ. ಸಿದ್ಧಾಂತ ಮತ್ತು ಮೌಲ್ಯಗಳ ವಿಷಯದಲ್ಲಿ ರಾಜೀ ಮಾಡಿಕೊಂಡವನಲ್ಲ.ಅಧಿಕಾರಕ್ಕಾಗಿ ನಾನು ಯಾರ ಮನೆ ಮುಂದೆ ಕೈ ಕಟ್ಟಿ ನಿಂತವನಲ್ಲ. ಮುಂದೆ ನಿಲ್ಲುವುದೂ ಇಲ್ಲ.
 • ಸಿದ್ದರಾಮಯ್ಯ ಮತ್ತು ನನ್ನದು ಸ್ವಾರ್ಥ ರಹಿತ ಸ್ನೇಹ. ರಾಜಕೀಯ ಅಧಿಕಾರಕ್ಕಾಗಿ ಆದ ಸ್ನೇಹವಲ್ಲ. ನನ್ನ ಅವರ ಮಾತು ನಿಲ್ಲುವುದು ನನ್ನ ಉಸಿರು ನಿಂತ ನಂತರವಷ್ಟೆ ಎಂದು ಹಿಂದೆಯೇ ಹೇಳಿದ್ದೆ. ಅದನ್ನೇ ಈಗಲೂ ಹೇಳುತ್ತೇನೆ. ನಾನೀಗ ಶಾಸಕನಲ್ಲ. ಆದ್ದರಿಂದ ಅವರ ಬಳಿ ಹೋಗುವುದನ್ನು ಕಡಿಮೆ ಮಾಡಿದ್ದೇನಷ್ಟೆ. ಮಾತು ನಿಲ್ಲುವ ಪ್ರಶ್ನೆಯೇ ಇಲ್ಲ.
 • ಫಲಿತಾಂಶದ ಬಳಿಕ ಎರಡ್ಮೂರು ಬಾರಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಫೋನ್ ನಲ್ಲಿ ಮಾತನಾಡಿದ್ದೇನೆ. ಸಂಬಂಧ ಹಳಿಸಿದೆ ಎನ್ನುವುದು ಊಹಾಪೋಹವಷ್ಟೆ. ಬಿಜೆಪಿಯಿಂದ ಬಂದಿರುವ ಕೆಲವರು ನನ್ನ ಹೆಸರು ಕೆಡಿಸಿ,ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ತಮ್ಮ ಅಸ್ತಿತ್ವವನ್ನು ಗಟ್ಟಿಮಾಡಿಕೊಳ್ಳಲು ಮಾಡುತ್ತಿರುವ ವ್ಯವಸ್ಥಿತ ಪಿತೂರಿ ಇದು. ಅದೆಲ್ಲ ಹೆಚ್ಚು ಕಾಲ ನಡೆಯುವುದಿಲ್ಲ.
 • ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, “ಹೊಸಪೇಟೆಯಲ್ಲಿ ಬಿಜೆಪಿ ಶಾಸಕರನ್ನು ಭೇಟಿ ಮಾಡಿದರು. ಬಿಜೆಪಿ ಸೇರುತ್ತಾರಂತೆ,’’ ಎನ್ನುವ ವದಂತಿಗಳನ್ನು ಕೆಲವು ವಾಹಿನಿಗಳ ಮೂಲಕ ಹಬ್ಬಿಸಲಾಯಿತು. ಗೊಳೋ ಅಂತ ಅತ್ತರು ಎಂದು ವರದಿ ಮಾಡಿದರು. ನಾನ್ಯಾಕೆ ಅಳಲಿ? ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿಲ್ಲ; ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿಲ್ಲ ಎಂದು ಬೇಸರಾಗಿದ್ದು ನಿಜ. ಅದು ಬಿಟ್ಟು ಬೇರೆ ಕಾರಣಗಳಿರಲಿಲ್ಲ.
 • ನನ್ನ ಡೆಡ್ ಬಾಡಿಯೂ ಬಿಜೆಪಿಗೆ ಹೋಗುವುದಿಲ್ಲ ಎಂದು ಹಿಂದೆಯೇ ಹೇಳಿದ್ದೆ. ಬುದ್ಧ ಬಸವ ಅಂಬೇಡ್ಕರ್ ತತ್ವ ಹೇಳುವ. ಸಂವಿಧಾನ,ಪ್ರಜಾಪ್ರಭುತ್ವ, ಜಾತ್ಯತೀತೆ ಬಗ್ಗೆ ಮಾತನಾಡುವ ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಮನಸ್ಸಿನಲ್ಲಿ ಇಲ್ಲದ ವಿಷಯಗಳೂ ವರದಿ ಮತ್ತು ಸೃಷ್ಟಿತ ಸ್ಟೋರಿಗಳಾಗಿ ಪ್ರಕಟವಾಗುತ್ತಿವೆ. ನೈತಿಕತೆ ಇಲ್ಲದ ರಾಜಕಾರಣಿಗಳು, ನೈತಿಕತೆ ಇಲ್ಲದ ಕೆಲವು ಮಾಧ್ಯಮಗಳು ಸೇರಿ ಮಾಡುತ್ತಿರುವ ಪಿತೂರಿ ಇದು.
 • ನಾನೇನು ಹೇಡಿಯೇನು ಹೆದರಿಕೊಂಡು ಹಿಂದೆ ಹೋಗಲು? ಅಥವಾ ನನ್ನದೊಂದೇ ಕುಟುಂಬವೇ ಕರ್ನಾಟಕದಲ್ಲಿರುವುದು? ನನ್ನ ಹಿಂದೆ ರಾಜ್ಯದ ಉದ್ದಗಲಕ್ಕೂ ಜನ ಇದ್ದಾರೆ. ಬೇರೆಯವರು ಬೋಗಳೆ ಹೊಡಿತಾರೆ. ನನಗೆ ನನ್ನದೇ ಹಿಂಬಾಲಕರ ಶಕ್ತಿ ಇದ್ದರೂ ನಾನು ಈ ರೀತಿ ಮಾತುಗಳನ್ನು ಯಾವತ್ತೂ ಆಡಿದವನಲ್ಲ. ಸಿದ್ದರಾಮಯ್ಯ ಅವರೇ ನಮ್ಮ ನಾಯಕ ಎಂದುಕೊಂಡಿದ್ದರಿಂದ, ಅವರನ್ನು ಮೀರಿ ಎಂದೂ ಮಾತನಾಡಿದವನಲ್ಲ.
 • ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ನಾನು ಕಾರಣ ಅಲ್ಲ. ಕೆಲವು ಜಾತಿಗಳ ಧ್ರುವೀಕರಣ ಮತ್ತು ನಾವು ನಂಬಿದ್ದ ಸಮುದಾಯಗಳು ಒಗ್ಗಟ್ಟಾಗದೆ ಹೋದದ್ದು ನಮ್ಮ ಹಿನ್ನಡೆಗೆ ಕಾರಣ. ಸಂಪನ್ಮೂಲ ಹಂಚಿಕೆ ವಿಷಯ ನನ್ನ ವ್ಯಾಪ್ತಿಗೆ ಬರುವಂತದ್ದಲ್ಲ. ಅದು ಪಕ್ಷಕ್ಕೆ ಬಿಟ್ಟ ವಿಷಯ. ಪಕ್ಷ ವಹಿಸಿದ ಜವಾಬ್ದಾರಿಗಳನ್ನು ನಿಷ್ಠಯಿಂದ ನಿರ್ವಹಿಸಿದ್ದೇವೆ. ಚುನಾವಣಾ ಹಣ ನಿರ್ವಹಣೆ ನನಗೆ ಸೇರಿದ್ದಲ್ಲ.
 • ನಂಜನಗೂಡಿನ ವಿಷಯದಲ್ಲಿ, ಬೇರೆ ಪಕ್ಷದಿಂದ ಬಂದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಪದೇಪದೇ ಹೇಳಿದ್ದೆ. ಅದನ್ನು ಮಾಡಲಿಲ್ಲ. ಬಂದವರೆಲ್ಲ ಆಚೆ ಹೋದರು.ಅದರಿಂದಾದ ಸೋಲನ್ನು ನನ್ನ ಮೇಲೆ ಹಾಕುತ್ತಿದ್ದಾರೆ.ಶ್ರೀನಿವಾಸ ಪ್ರಸಾದ್, ಎಚ್.ವಿಶ್ವನಾಥ್, ದೇವೇಗೌಡರ ಜೊತೆ ನಾನು ಮಾತನಾಡಿದವನೇ ಅಲ್ಲ.ಆದರೂ ಸೋತವರೆಲ್ಲ ನನ್ನ ಮೇಲೆ ಕಳಂಕ ಹೊರಿಸುತ್ತಿದ್ದಾರೆ. ಸೋತವರು ಮನಸ್ಸಿಗೆ ಬಂದಂತೆ ವಿಶ್ಲೇಷಣೆ ಮಾಡಲು ಸ್ವತಂತ್ರರು. ಆದರೆ ಹಣವೊಂದೇ ಗೆಲುವಿಗೆ ಕಾರಣವಾಗುವುದಿಲ್ಲ.
 • ಐದು ವರ್ಷ ನನ್ನ ಆರೋಗ್ಯದ ಕಡೆ ಗಮನ ಹರಿಸಿರಲಿಲ್ಲ.ಚಿಕಿತ್ಸೆ ಪಡೆಯುತ್ತಿದ್ದುದರಿಂದ ಪಕ್ಷದ ಕೆಲವು ಸಭೆಗಳಿಗೆ ಹೋಗಲಾಗಲಿಲ್ಲ. ಹೊಸ ಪಕ್ಷಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದೇನೆ. ಪಕ್ಷ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ. ರಾಜಕೀಯದಲ್ಲಿರುವವರಿಗೆ ಅಧಿಕಾರವೇ ಅಂತಿಮವಲ್ಲ. ಜನಪರ ಹೋರಾಟಗಳಲ್ಲಿಯೂ ತೊಡಗಿಸಿಕೊಳ್ಳುತ್ತೇನೆ.
ಬಿಜೆಪಿ congress ಸಿದ್ದರಾಮಯ್ಯ BJP ಕಾಂಗ್ರೆಸ್ Manada Maatu ನಿತಿನ್ ಗಡ್ಕರಿ Nitin Gadkari Former CM Siddaramaiah H C Mahadevappa Congress-JDS Coalition ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ
ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?
ಕರ್ನಾಟಕ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ರಾಜ್ಯಕ್ಕಾದ ಲಾಭವೇನು?
ಕೆಸಿಆರ್‌ಗೆ ತಿರುಗುಬಾಣ ಆಗಲಿದಿಯೇ ವಿಧಾನಸಭೆ ವಿಸರ್ಜನೆಯ ನಿರ್ಧಾರ?
Editor’s Pick More

ಎಚ್‌ಡಿಕೆ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶ್‌ಗೆ ತಲುಪಲಿಲ್ಲ

ರೂಪಾಂತರ | ಕಂತು 4 | 216 ಮಂದಿ ಗನ್‌ಮ್ಯಾನ್‌ಗಳನ್ನು ವಾಪಸು ಕರೆಸಿದ ಪ್ರಸಂಗ

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ

ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?